ನೀವು ಮೊದಲ ಬಾರಿಗೆ ಸೀರೆ ಉಡ್ತಾ ಇದ್ದೀರಾ? ಹಾಗಾದ್ರೆ ಅಂದವಾಗಿ ಕಾಣಲು ಇಲ್ಲಿದೆ ಸಿಂಪಲ್ ಟಿಪ್ಸ್
ಹೆಣ್ಣು ಮಕ್ಕಳನ್ನು ಸೀರೆಯಲ್ಲಿ ನೋಡುವುದೇ ಕಣ್ಣಿಗೆ ಹಬ್ಬ. ಆದರೆ ಈಗಿನ ಕಾಲದಲ್ಲಿ ಸೀರೆ ಉಡುವುದು ಇಷ್ಟವಾದರೂ ಕೂಡ ಅದನ್ನು ಮೇಂಟೈನ್ ಮಾಡುವುದು ಕೂಡ ಅಷ್ಟೇ ಕಷ್ಟ. ಹೀಗಾಗಿ ಹೆಂಗಳೆಯರ ಕೆಲಸವನ್ನು ಸುಲಭ ಮಾಡಲೆಂದೇ ರೆಡಿಮೇಡ್ ಸೀರೆಗಳು ಬಂದಿವೆ. ಆದರೆ ನೀವೇನಾದ್ರು ಮೊದಲ ಬಾರಿಗೆ ಸೀರೆ ಉಡುತ್ತೀರಿ ಎಂದಾದರೆ ಈ ಕೆಲವು ಸಲಹೆಗಳನ್ನು ಅನುಸರಿಸುವುದು ಉತ್ತಮ. ಈ ಟಿಪ್ಸ್ ನೊಂದಿಗೆ ಪರ್ಫೆಕ್ಟ್ ಆಗಿ ಸೀರೆ ಉಟ್ಟು ಅಂದವಾಗಿ ಕಾಣಿಸಿಕೊಳ್ಳಬಹುದು. ಹಾಗಾದ್ರೆ ಈ ಕುರಿತಾದ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ
ಮನೆಯಲ್ಲಿ ಮದುವೆ ಸಮಾರಂಭ, ಕಾಲೇಜ್ ಡೇ ಅಥವಾ ಇನ್ನಿತ್ತರ ಸಮಾರಂಭಗಳಿದ್ದರೆ ಸೀರೆ ಉಟ್ಟು ಚಂದವಾಗಿ ರೆಡಿಯಾಗಬೇಕು ಎನ್ನುವುದಿರುತ್ತದೆ. ಆದರೆ ಪರ್ಫೆಕ್ಟ್ ಸೀರೆ ಉಡಲು ಬರುವುದಿಲ್ಲ ಎನ್ನುವುದು ಒಂದೆಡೆಯಾದರೆ ಹೇಗಪ್ಪಾ ಮೇಂಟೈನ್ ಮಾಡೋದು ಎನ್ನುವುದಿರುತ್ತದೆ. ಅದಲ್ಲದೇ ಸೀರೆ ಉಡಲು ಚೆನ್ನಾಗಿ ರೆಡಿ ಆಗಲು ಬ್ಯೂಟಿ ಪಾರ್ಲರ್ ಮೊರೆ ಹೋಗುವುದೇ ಹೆಚ್ಚು. ಆದರೆ ಈ ಟಿಪ್ಸ್ ನೊಂದಿಗೆ ಪರ್ಫೆಕ್ಟ್ ಆಗಿ ಸೀರೆ ಉಟ್ಟು ಅಂದವಾಗಿ ಕಾಣಿಸಿಕೊಳ್ಳಬಹುದು.
- ಲೈಟ್ ವೈಟ್ ಸೀರೆ ಆಯ್ಕೆ ಇರಲಿ : ಮೊದಲ ಬಾರಿಗೆ ಸೀರೆ ಉಡಲು ಪ್ಲ್ಯಾನ್ ಮಾಡಿಕೊಂಡಿದ್ದರೆ ಸೀರೆ ಖರೀದಿಸುವಾಗ ಲೈಟ್ ವೈಟ್ ಸೀರೆಗಳತ್ತ ಗಮನ ಕೊಡಿ. ಹಗುರವಾಗಿ ಸೀರೆ ಧರಿಸಿದರೆ ಸುಲಭವಾಗಿ ನಿಭಾಯಿಸಬಹುದು. ಭಾರವಾದ ಸೀರೆ ಧರಿಸಿದರೆ ಇನ್ನು ಈ ಸೀರೆ ಸಹವಾಸವೇ ಬೇಡಪ್ಪ ಎಂದೆನಿಸಬಹುದು.
- ಪೆಟ್ಟಿಕೋಟ್ ಆಯ್ಕೆ ಸರಿಯಾಗಿರಲಿ : ಸೀರೆ ಮ್ಯಾಚ್ ಆಗುವಂತಹ ಹಾಗೂ ಫಿಟ್ ಆಗಿರುವಂತಹ ಪೆಟ್ಟಿ ಕೋಟ್ ಧರಿಸುವುದು ಬಹಳ ಮುಖ್ಯ. ಆದರೆ ಮೊದಲ ಬಾರಿಗೆ ಸೀರೆ ಉಡುತ್ತಿದ್ದರೆ ಅಮ್ಮನ ಪೆಟ್ಟಿಕೋಟ್ ನನ್ನೇ ಧರಿಸುತ್ತಾರೆ. ಆದರೆ ಈ ಪೆಟ್ಟಿಕೋಟ್ ಗಳು ದೇಹಕ್ಕೆ ಫಿಟ್ ಆಗದೇ ಇರಬಹುದು. ದೇಹಕಾರಕ್ಕೆ ಹೊಂದುವ ಪೆಟ್ಟಿಕೋಟ್ ಗಳನ್ನೆ ಖರೀದಿ ಮಾಡಿ.
- ಮ್ಯಾಚಿಂಗ್ ಬ್ಲೌಸ್ ಇರಲಿ : ಸೀರೆ ಧರಿಸುವ ಮುನ್ನ ಬ್ಲೌಸ್ ಮ್ಯಾಚಿಂಗ್ ಇದೆಯೇ ಎಂದು ನೋಡುವುದು ಕೂಡ ಮುಖ್ಯ. ಮ್ಯಾಚಿಂಗ್ ಇಲ್ಲದ ಬ್ಲೌಸ್ ಧರಿಸಿದ್ರೆ ನಿಮ್ಮ ಅಂದವೇ ಹಾಳಾಗುತ್ತದೆ. ಇತ್ತೀಚೆಗಿನ ದಿನಗಳಲ್ಲಿ ಕಾಂಟ್ರಾಸ್ಟ್ ಬ್ಲೌಸ್ ಗಳು ಹೆಚ್ಚು ಟ್ರೆಂಡ್ ಆಗುತ್ತಿದೆ. ಹೀಗಾಗಿ ಮ್ಯಾಚಿಂಗ್ ಬ್ಲೌಸ್ ಅಥವಾ ಕಾಂಟ್ರಾಸ್ಟ್ ಬ್ಲೌಸ್ ಗಳತ್ತ ಗಮನ ಕೊಡಿ. ಇದು ನಿಮ್ಮ ಸೀರೆಗೆ ಲುಕ್ ತಂದುಕೊಡುವುದಲ್ಲದೆ ನಿಮ್ಮ ಅಂದವನ್ನು ಹೆಚ್ಚಿಸುತ್ತದೆ.
- ನೆರಿಗೆ ಸರಿಯಾಗಿರಲಿ : ನಿಮ್ಮ ಸೀರೆಯ ನೆರಿಗೆಗಳು ನೀವು ಎಷ್ಟು ಪರ್ಫೆಕ್ಟ್ ಆಗಿ ಸೀರೆ ಉಟ್ಟಿದ್ದೀರಾ ಎಂದು ಹೇಳುತ್ತದೆ. ಹೀಗಾಗಿ ನೆರಿಗೆಯನ್ನು ಸರಿಯಾಗಿ ಇಡಿಯಿರಿ. ದೊಡ್ಡದಾಗಿ, ಚಿಕ್ಕದಾಗಿ ಅಥವಾ ಮೀಡಿಯಮ್ ಸೈಜ್ ನಲ್ಲಿರಲಿ. ನೆರಿಗೆಗಳನ್ನು ಸರಿಯಾಗಿ ಸಿಕ್ಕಿಸಿಕೊಳ್ಳಿ ಹಾಗೂ ಒಂದೇ ನೇರಕ್ಕೆ ಇರಲಿ. ನೀವು ನೆರಿಗೆ ಸಿಕ್ಕಿಸಿಕೊಳ್ಳುವ ರೀತಿಯಿಂದಲೇ ಹೊಟ್ಟೆ ಉಬ್ಬಿದಂತೆ ಕಾಣುತ್ತದೆ.
- ಸೇಫ್ಟಿ ಪಿನ್ ಕಾಣಿಸದಿರಲಿ : ಸೀರೆ ಉಟ್ಟಾಗ ಸೇಫ್ಟಿ ಪಿನ್ ಹಾಕುತ್ತಾರೆ. ಆದರೆ ಈ ಪಿನ್ ಕಾಣಿಸದಿರಲಿ. ಒಂದು ವೇಳೆ ಪಿನ್ ಕಾಣಿಸಿದರೆ ಸೀರೆಯ ಅಂದವು ಹಾಳಾಗುತ್ತದೆ. ಅದಲ್ಲದೇ ಮುಜುಗರಕ್ಕೆ ಈಡಾಗಬೇಕಾಗುತ್ತದೆ. ಅತಿಯಾದ ಪಿನ್ ಬಳಕೆ ಮಾಡದೇ ಇರುವುದೇ ಒಳ್ಳೆಯದು.
- ಸೀರೆ ಉಡುವಾಗ ಪಾದರಕ್ಷೆ ಧರಿಸಿ : ಸೀರೆ ಉಡುವಾಗ ಪಾದರಕ್ಷೆ ಧರಿಸುವುದು ಬಹಳ ಮುಖ್ಯ. ಇದರಿಂದ ಸೀರೆಯೂ ಎಷ್ಟು ಉದ್ದ ಬೇಕು ಎನ್ನುವುದು ತಿಳಿಯುತ್ತದೆ. ಒಂದು ವೇಳೆ ಪಾದರಕ್ಷೆ ಧರಿಸಿದರೆ ಸೀರೆ ಉಟ್ಟರೆ ಸೀರೆ ಉದ್ದವು ಕಡಿಮೆಯಾಗಿ ನಿಮ್ಮ ಅಂದವು ಹಾಳಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ