ಬಯೋಟಿನ್ ಭರಿತ ಈ ಆಹಾರ ನಿತ್ಯ ಸೇವಿಸಿದ್ರೆ ಕೂದಲು ಸೊಂಪಾಗಿ ಬೆಳೆಯುತ್ತೆ
ಹೆಣ್ಣು ಮಕ್ಕಳು ಕೂದಲು ಹಾಗೂ ತ್ವಚೆಯ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಆದರೆ ಕೂದಲು, ಚರ್ಮ ಹಾಗೂ ಉಗುರುಗಳನ್ನು ಆರೋಗ್ಯಕರವಾಗಿಡಲು ಬಯೋಟಿನ್ ಅಥವಾ ವಿಟಮಿನ್ ಬಿ7 ಅತ್ಯವಶ್ಯಕವಾಗಿ ಬೇಕು. ನೀವು ಸೇವಿಸುವ ಆಹಾರದಲ್ಲಿರುವ ಬಯೋಟಿನ್ ಅಂಶವು ನಿಮ್ಮ ದೇಹವು ನೀವು ಸೇವಿಸುವ ಪ್ರೋಟೀನ್, ಕೊಬ್ಬು ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಗ್ಲೂಕೋಸ್ ಆಗಿ ಪರಿವರ್ತಿಸಬಹುದು, ಇದು ನಿಮಗೆ ಶಕ್ತಿಯನ್ನು ಒದಗಿಸುತ್ತದೆ. ಅದಲ್ಲದೇ, ಕೂದಲು ಸೊಂಪಾಗಿ ಬೆಳೆಯಬೇಕೆಂದರೆ ಬಯೋಟಿನ್ ಹೇರಳವಾಗಿರುವ ಆಹಾರ ಸೇವಿಸುವುದು ಅಗತ್ಯವಾಗಿದ್ದು, ಆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಿಹಿ ಗೆಣಸು
ಇತ್ತೀಚೆಗಿನ ದಿನಗಳಲ್ಲಿ ಕೂದಲು ಉದುರುವುದು ಸಮಸ್ಯೆ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಅತಿಯಾಗಿ ಕೂದಲು ಉದುರಿ ಬೋಳು ತಲೆ ಸಮಸ್ಯೆಗೆ ಕಾರಣವಾಗುತ್ತದೆ. ಆದರೆ ಸ್ವಲ್ಪ ಕೂದಲು ಉದುರುತ್ತಿದೆ ಎಂದರೆ ಮಾರುಕಟ್ಟೆಯಲ್ಲಿ ಸಿಗುವ ಶ್ಯಾಂಪೂ ಸೇರಿದಂತೆ ಇನ್ನಿತ್ತರ ಉತ್ಪನ್ನಗಳನ್ನು ಬಳಸಿ ಈ ಸಮಸ್ಯೆಯಿಂದ ದೂರಾಗಲು ಪ್ರಯತ್ನಿಸುತ್ತಾರೆ. ಆದರೆ ಕೂದಲು ಉದುರುವಿಕೆಯಂತಹ ಸಮಸ್ಯೆ ನಿವಾರಣೆ ಈ ಆಹಾರಗಳ ಸೇವನೆಯೂ ಬಹಳ ಮುಖ್ಯ. ಬಯೋಟಿನ್ ಅಥವಾ ವಿಟಮಿನ್ ಬಿ7 ನಿಯಮಿತ ಸೇವನೆಯೂ ಕೂದಲಿನ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ. ಇದು ಕೂದಲು ಸೊಂಪಾಗಿ ಬೆಳೆಯಲು ಹಾಗೂ ಉಗುರುಗಳು ಬಲಗೊಳ್ಳಲು ಸಹಕಾರಿಯಾಗಿದೆ. ಹಾಗಾದ್ರೆ ಯಾವೆಲ್ಲಾ ಆಹಾರಗಳನ್ನು ನಿಯಮಿತವಾಗಿ ಸೇವಿಸಬೇಕು ಎನ್ನುವ ಮಾಹಿತಿ ಇಲ್ಲಿದೆ.
- ಸಿಹಿ ಗೆಣಸು : ಸಿಹಿ ಗೆಣಸಿನಲ್ಲಿ ಬಯೋಟಿನ್ ಮತ್ತು ಬೀಟಾ-ಕ್ಯಾರೋಟಿನ್ ಅನ್ನು ಒಳಗೊಂಡಿದೆ. ಇದು ದೇಹಕ್ಕೆ ವಿಟಮಿನ್ ಎ ಒದಗಿಸುತ್ತದೆ. ಅದಲ್ಲದೇ, ಆರೋಗ್ಯಕರ ಚರ್ಮ ಮತ್ತು ಜೀವಕೋಶಗಳ ಉತ್ಪಾದನೆಗೆ ವಿಟಮಿನ್ ಎ ಮುಖ್ಯವಾಗಿದ್ದು, ಕೂದಲಿನ ಆರೋಗ್ಯಕರ ಬೆಳವಣಿಗೆಗೂ ಸಹಕಾರಿಯಾಗಿದೆ. ಇದರ ನಿಯಮಿತ ಸೇವನೆಯೂ ಕೂದಲು ಉದುರುವಿಕೆ ತಡೆದು ಕೂದಲನ್ನು ಬಲಪಡಿಸುತ್ತದೆ.
- ಪಾಲಕ್ ಸೊಪ್ಪು : ಹಸಿರು ತರಕಾರಿಗಳಲ್ಲಿ ಒಂದಾದ ಪಾಲಕ್ ಸೊಪ್ಪು ಬಯೋಟಿನ್, ಕಬ್ಬಿಣ ಮತ್ತು ಫೋಲೇಟ್ ನಿಂದ ಸಮೃದ್ಧವಾಗಿದೆ. ಇದರ ನಿಯಮಿತ ಸೇವನೆಯೂ ಕೂದಲು ಬೆಳವಣಿಗೆಗೆ ಸಹಕಾರಿಯಾಗಿದೆ. ಇದು ಆರೋಗ್ಯಕರ ಕೂದಲನ್ನು ಕಾಪಾಡಿಕೊಳ್ಳಲು ಅಗತ್ಯವಿರುವ ಪೋಷಕಾಂಶಗಳನ್ನು ನೀಡುತ್ತದೆ. ಕೂದಲಿನ ತುದಿಯನ್ನು ಬಲಪಡಿಸಿ ನೀಳವಾಗಿ ಕೂದಲು ಬೆಳೆಯುವಂತೆ ನೋಡಿಕೊಳ್ಳುತ್ತದೆ. ಹೀಗಾಗಿ ದಿನನಿತ್ಯದ ಆಹಾರದಲ್ಲಿ ಪಾಲಕ್ ಅನ್ನು ಸೈಡ್ ಡಿಶ್ ಆಗಿ ಸಲಾಡ್ ಹಾಗೂ ಇನ್ನಿತ್ತರ ವಿಧಗಳಲ್ಲಿ ಸೇವಿಸಬಹುದು.
- ಮಾಂಸ ಮತ್ತು ಸಮುದ್ರಾಹಾರ : ಪ್ರೋಟೀನ್ ಮತ್ತು ಬಯೋಟಿನ್ ನ ಅತ್ಯುತ್ತಮ ಮೂಲಗಳಲ್ಲಿ ಮಾಂಸ ಮತ್ತು ಸಮುದ್ರಾಹಾರ ಕೂಡ ಒಂದು. ಇವುಗಳು ಅಧಿಕ ಮಟ್ಟದ ಬಯೋಟಿನ್ ಹೊಂದಿರುತ್ತದೆ ಮಾಂಸ ಹಾಗೂ ಸಮುದ್ರ ಆಹಾರಗಳ ಸೇವನೆಯೂ ಕೂದಲಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
- ಮೊಟ್ಟೆಗಳು : ಮೊಟ್ಟೆಗಳು ಬಯೋಟಿನ್‌ನಿಂದ ಸಮೃದ್ಧವಾಗಿದೆ. ಆದ್ದರಿಂದ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಇದು ಉತ್ತಮ ಆಹಾರವಾಗಿದೆ. ಒಂದು ಮೊಟ್ಟೆಯಲ್ಲಿ ಸುಮಾರು 10 ಮೈಕ್ರೋಗ್ರಾಂಗಳಷ್ಟು ಬಯೋಟಿನ್ ಇರುತ್ತದೆ. ಮೊಟ್ಟೆಯಲ್ಲಿ ಪ್ರೋಟೀನ್, ಸತು ಮತ್ತು ಕಬ್ಬಿಣಾಂಶವಿದೆ, ಇದು ಆರೋಗ್ಯಕರ ಕೂದಲಿಗೆ ಮುಖ್ಯವಾಗಿದೆ.
- ಬೀಜಗಳು ಮತ್ತು ಒಣಹಣ್ಣುಗಳು: ಇವುಗಳು ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್ ಮತ್ತು ಉತ್ಕರ್ಷಣ ನಿರೋಧಕಗಳು ಹಾಗೂ ಬಯೋಟಿನ್ ನಿಂದ ಸಮೃದ್ಧವಾಗಿವೆ. ಇದನ್ನು ಆಹಾರದ ಭಾಗವಾಗಿಸುವುದು ಕೂದಲಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ನಿಯಮಿತವಾಗಿ ಈ ಬೀಜಗಳು ಹಾಗೂ ಒಣಹಣ್ಣುಗಳನ್ನು ಸೇವಿಸುವುದರಿಂದ ಕೂದಲು ಉದುರುವಿಕೆಯನ್ನು ತಡೆದು ಕೂದಲು ಸೊಂಪಾಗಿ ಬೆಳೆಯುವಂತೆ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ