ಸಂವಹನದ ವೇಳೆ ವ್ಯಕ್ತಿಯ ಮನಸ್ಸಿನಲ್ಲಿ ಏನಿದೆ ಎಂದು ತಿಳಿಯುವುದು ಹೇಗೆ? ಈ ವಿಧಾನ ಅನುಸರಿಸಿ

ಒಬ್ಬ ವ್ಯಕ್ತಿಯೂ ಸಂವಹನ ನಡೆಸುವಾಗ ತಮ್ಮ ಭಾವನೆಗಳನ್ನು ಪದಗಳ ಮೂಲಕ ವ್ಯಕ್ತಪಡಿಸುವುದಕ್ಕಿಂತ ಸೂಕ್ಷ್ಮ ಸನ್ನೆಗಳು ಹಾಗೂ ದೇಹಭಾಷೆಗಳಿಂದ ವ್ಯಕ್ತಪಡಿಸುವುದೇ ಹೆಚ್ಚು. ಇದು ಕೆಲವು ವಿಚಾರಗಳು ಒಬ್ಬ ವ್ಯಕ್ತಿಯ ನೈಜ ಭಾವನೆಯನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಹೀಗಾಗಿ ಒಬ್ಬ ವ್ಯಕ್ತಿಯ ಭಾವನೆಯೂ ನೈಜವಾಗಿದೆಯೇ ಎಂದು ತಿಳಿಯಲು ಮಾತನಾಡುವ ವೇಳೆ ಈ ಕೆಲವು ಸೂಕ್ಷ್ಮ ವಿಚಾರಗಳಿಗೆ ಗಮನ ಕೊಡುವುದು ಬಹಳ ಮುಖ್ಯ, ಆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಂವಹನದ ವೇಳೆ ವ್ಯಕ್ತಿಯ ಮನಸ್ಸಿನಲ್ಲಿ ಏನಿದೆ ಎಂದು ತಿಳಿಯುವುದು ಹೇಗೆ? ಈ ವಿಧಾನ ಅನುಸರಿಸಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 22, 2025 | 12:19 PM

ಒಬ್ಬ ವ್ಯಕ್ತಿಯನ್ನು ನೋಡಿದ ಕೂಡಲೇ ಆ ವ್ಯಕ್ತಿಯ ಮನಸ್ಸಿನಲ್ಲಿ ಏನಿದೆ ಎಂದು ತಿಳಿದುಕೊಳ್ಳುವುದು ಕಷ್ಟ. ಆದರೆ ಕೆಲವೊಮ್ಮೆ ಆತ್ಮೀಯ ವ್ಯಕ್ತಿಗಳು ನಿಮ್ಮೊಂದಿಗೆ ತಮ್ಮ ಭಾವನೆಯನ್ನು ಹಂಚಿ ಕೊಳ್ಳಬಹುದು. ಆದರೆ ತೀರಾ ಆತ್ಮೀಯರಲ್ಲದ ವ್ಯಕ್ತಿಯ ಮನಸ್ಸಿನ ಭಾವನೆ ಅರ್ಥ ಮಾಡಿಕೊಳ್ಳಲು ಕೆಲವು ಸೂಕ್ಷ್ಮ ವಿಚಾರಗಳನ್ನು ಗಮನಿಸಬೇಕು. ಅವರ ದೇಹ ಭಾಷೆ ಹಾಗೂ ಸನ್ನೆಗಳು ವ್ಯಕ್ತಿಯ ಮನಸ್ಸಿನ ಭಾವನೆಯನ್ನು ತೆರೆದಿಡುತ್ತದೆ. ಎದುರಿಗಿರುವ ವ್ಯಕ್ತಿಯೂ ನಿಜವಾಗಿಯೂ ಏನನ್ನು ಅನುಭವಿಸುತ್ತಿದ್ದಾರೆ ಎಂದು ತಿಳಿಯಲು ಇಲ್ಲಿದೆ ಸಿಂಪಲ್ ಟಿಪ್ಸ್.

  • ಮುಖ ಭಾವವನ್ನು ಗಮನಿಸಿ : ಸಂಭಾಷಣೆಯ ವೇಳೆ ವ್ಯಕ್ತಿಯ ಮುಖ ಭಾವವು ಆ ವ್ಯಕ್ತಿಯ ನೈಜ ಭಾವನೆಯನ್ನು ಓದಲು ಸಹಾಯ ಮಾಡುತ್ತದೆ. ಕೆಲವರು ಮಾತಿನ ನಡುವೆ ವಿಭಿನ್ನವಾದ ಮುಖಭಾವವನ್ನು ವ್ಯಕ್ತಪಡಿಸಬಹುದು. ಈ ರೀತಿಯ ಭಾವಗಳು ಆ ವ್ಯಕ್ತಿಗೆ ನಿಮ್ಮೊಂದಿಗೆ ಮಾತನಾಡಲು ಆಸಕ್ತಿಯಿದೆಯೇ ಇಲ್ಲವೇ ಎನ್ನುವುದು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಾತಿನ ನಡುವೆ ಮುಖ ಗಂಟಿಕ್ಕುವಿಕೆ ಅಥವಾ ಹುಬ್ಬುಗಳ ಚಲನೆಗಳು ಕೂಡ ಅವರು ಭಾವನಾತ್ಮಕವಾಗಿ ಏನ್ನನ್ನು ಅನುಭವಿಸುತ್ತಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
  • ವ್ಯಕ್ತಿಯ ಮಾತಿನ ವೇಗವನ್ನು ಗಮನಿಸಿ : ಸಂವಹನದ ವೇಳೆ ವ್ಯಕ್ತಿಯೂ ಮಾತನಾಡುವ ರೀತಿಯೂ ಕೂಡ ಭಾವನಾತ್ಮಕ ಸ್ಥಿತಿಯನ್ನು ಹೇಳುತ್ತದೆ. ಹೀಗಾಗಿ ಒಂದೇ ಉಸಿರಿನಲ್ಲಿ ಮಾತನಾಡುತ್ತಿದ್ದರೆ, ಅವರು ಸಂಭಾಷಣೆಯಲ್ಲಿ ಉತ್ಸುಕರಾಗಬಹುದು. ಇಲ್ಲದಿದ್ದರೆ ಆತಂಕಕ್ಕೆ ಒಳಗಾಗಿರಬಹುದು. ನಿಧಾನವಾಗಿ ಮಾತನಾಡುತ್ತಿದ್ದರೆ, ಅನಿಶ್ಚಿತತೆ, ದುಃಖ ಅಥವಾ ಇನ್ಯಾವುದೋ ಆಲೋಚನೆಯಲ್ಲಿ ಮುಳುಗಿರಬಹುದು. ನಿಮ್ಮ ಎದುರಿಗಿರುವ ವ್ಯಕ್ತಿಯ ಮಾತುಗಳು ಎಷ್ಟು ವೇಗವಾಗಿ ಅಥವಾ ನಿಧಾನವಾಗಿ ಬರುತ್ತದೆ ಎಂಬುದನ್ನು ಗಮನಿಸಿದರೆ ಆ ವ್ಯಕ್ತಿಯ ನೈಜ ಭಾವನೆಗಳು ತಿಳಿಯುತ್ತದೆ.
  • ವ್ಯಕ್ತಿಯ ನಗುವಿನ ರೀತಿ ತಿಳಿಯಿರಿ : ನಿಮ್ಮ ಒಂದು ನಗು ನಿಮ್ಮ ಮನಸ್ಸಿನ ಭಾವನೆಗಳನ್ನು ಬಹಿರಂಗಪಡಿಸುತ್ತದೆ. ಹೀಗಾಗಿ ಒಬ್ಬ ವ್ಯಕ್ತಿಯ ನೈಜ ಭಾವನೆಯನ್ನು ಅರ್ಥ ಮಾಡಿಕೊಳ್ಳಲು ಆ ವ್ಯಕ್ತಿಯ ನಗುವಿನ ಬಗ್ಗೆ ಹೆಚ್ಚು ಗಮನ ಕೊಡಬೇಕು. ಒಂದು ನಗು ಎಲ್ಲವನ್ನು ಹೇಳುತ್ತದೆ. ಕೆಲವರು ಮನಸ್ಸಿನಿಂದ ನಕ್ಕರೆ ಹಲ್ಲುಗಳು ಮಾತ್ರವಲ್ಲದೇ ಕಣ್ಣುಗಳು ಪ್ರಕಾಶಮಾನವಾಗಿ ಕಾಣುತ್ತದೆ. ಕೆಲವರು ನಗು ಬಲವಂತವಾಗಿ ಅಥವಾ ಬಿಗಿಯಾಗಿದ್ದರೆ ಅಹಿತಕರ ಭಾವನೆ ಅಥವಾ ಒತ್ತಡಕ್ಕೊಳಗಾಗಿದ್ದಾರೆ ಎನ್ನುವುದನ್ನು ಬಿಂಬಿಸುತ್ತದೆ. ಇನ್ನು ಕೆಲವರ ನಗುವಿನಲ್ಲಿ ಹತಾಶೆ ಅಥವಾ ಕಿರಿಕಿರಿಯನ್ನು ಪ್ರತಿನಿಧಿಸುತ್ತದೆ. ನಗು ಎಷ್ಟು ನೈಸರ್ಗಿಕವಾಗಿ ಕಾಣುತ್ತದೆ ಎನ್ನುವ ಬಗ್ಗೆ ಗಮನ ಕೊಡಿ.
  • ವ್ಯಕ್ತಿಯ ಚಲನೆಯ ಮೇಲೆ ಗಮನವಿರಲಿ : ಒಬ್ಬ ವ್ಯಕ್ತಿಯ ಚಲನೆಯೂ ಭಾವನಾತ್ಮಕ ಸ್ಥಿತಿಯನ್ನು ವ್ಯಕ್ತಪಡಿಸುತ್ತದೆ. ಕೆಲವರ ತ್ವರಿತ, ತೀಕ್ಷ್ಣವಾದ ಚಲನೆಗಳು ಅಸಹನೆ ಅಥವಾ ಹತಾಶೆಯನ್ನು ಸೂಚಿಸಬಹುದು, ಆದರೆ ನಿಧಾನವಾಗಿ ನಡೆಯುತ್ತಿದ್ದರೆ ಶಾಂತತೆ ಅಥವಾ ತೃಪ್ತಿಯನ್ನು ಸೂಚಿಸುತ್ತವೆ. ಬೆರಳನ್ನು ಮಡಚುವುದು ಅಥವಾ ಪದೇ ಪದೇ ಕುಳಿತಲ್ಲಿ ಎದ್ದು ಹೋಗುವುದು ಈ ನಡವಳಿಕೆಗಳು ಹೆದರಿಕೆ, ರಕ್ಷಣಾತ್ಮಕತೆ, ಚಡಪಡಿಕೆಯ ಭಾವನೆಗಳನ್ನು ಸೂಚಿಸುತ್ತದೆ.
  • ವ್ಯಕ್ತಿಯ ಧ್ವನಿಯನ್ನು ಆಲಿಸಿ : ಒಬ್ಬ ವ್ಯಕ್ತಿಯೂ ಎಷ್ಟು ಆತ್ಮವಿಶ್ವಾಸದಿಂದ ಮಾತನಾಡುತ್ತಿದ್ದರೆ ಎಂಬುದನ್ನು ಧ್ವನಿಯೇ ತಿಳಿಸುತ್ತದೆ. ಧ್ವನಿಯಲ್ಲಿನ ಏರಿಳಿತ ಭಾವನೆಗಳ ಬಗ್ಗೆ ಸುಳಿವುಗಳನ್ನು ನೀಡುತ್ತದೆ. ಧ್ವನಿಯೂ ಹೈ ಪಿಚ್ ನಲ್ಲಿದ್ದರೆ ಆತಂಕಕ್ಕೆ ಒಳಗಾಗಿದ್ದಾರೆ ಎಂದರ್ಥ. ಕೆಲವರ ಧ್ವನಿಯಲ್ಲಿನ ಬದಲಾವಣೆಗಳು ಬೇಸರ ಅಥವಾ ನಿರಾಸಕ್ತಿಯ ಭಾವನೆಯನ್ನು ಸೂಚಿಸಬಹುದು. ಹೀಗಾಗಿ ವ್ಯಕ್ತಿಯೊಬ್ಬನ ಧ್ವನಿಯಲ್ಲಿನ ಏರಿಳಿತಗಳಂತಹ ಬದಲಾವಣೆಗಳಿಗೆ ಕಿವಿಗೊಡಿ ಇದು ಸಾಕಷ್ಟು ವಿಷಯಗಳನ್ನು ರಿವೀಲ್ ಮಾಡುತ್ತದೆ.
  • ಕಣ್ಣುಗಳ ಚಲನೆಯನ್ನು ಗಮನಿಸಿ : ನಮ್ಮ ಮನಸ್ಸಿನ ಭಾವನೆಗಳನ್ನು ಕಣ್ಣುಗಳು ವ್ಯಕ್ತಪಡಿಸುತ್ತದೆ. ವ್ಯಕ್ತಿಯ ಕಣ್ಣುಗಳು ಬಹಳಷ್ಟು ತೆರೆದಿದ್ದರೆ ಆಗಾಗ್ಗೆ ಆಶ್ಚರ್ಯ ಅಥವಾ ಉತ್ಸಾಹವನ್ನು ಸೂಚಿಸುತ್ತದೆ. ಕಣ್ಣಿನ ಸಂಪರ್ಕವನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದರೆ ಆ ವ್ಯಕ್ತಿಯಲ್ಲಿ ಆತಂಕ, ನಾಚಿಕೆ ಅಥವಾ ಏನನ್ನಾದರೂ ಮರೆಮಾಡಲು ಪ್ರಯತ್ನಿಸುತ್ತಿರಬಹುದು. ಹೀಗಾಗಿ ಕಣ್ಣಿನ ಚಲನೆಗಳು ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
  • ಕೈಗಳನ್ನಿರಿಸುವ ರೀತಿಯನ್ನೊಮ್ಮೆ ಗಮನಿಸಿ : ಸಂವಹನದ ವೇಳೆ ಕೈಗಳನ್ನು ಹೇಗೆ ಹಿಡಿದು ಕೊಳ್ಳುತ್ತೇವೆ ಎನ್ನುವುದು ಕೂಡ ನಮ್ಮ ಮನಸ್ಸಿನ ಭಾವನೆಗಳನ್ನು ಹೊರ ಹಾಕುತ್ತದೆ. ಬಿಗಿಯಾಗಿ ಮುಷ್ಟಿ ಹಿಡಿದುಕೊಂಡಿದ್ದರೆ ಕೋಪ, ಒತ್ತಡ ಅಥವಾ ಹತಾಶೆಯನ್ನು ಬಹಿರಂಗಪಡಿಸಬಹುದು. ಮತ್ತೊಂದೆಡೆ, ತೆರೆದ ಕೈಗಳು ಶಾಂತ ಮತ್ತು ಆರಾಮದಾಯಕ ಎಂದು ತೋರಿಸಬಹುದು. ಯಾರೊಬ್ಬರ ಕೈಗಳು ನಡುಗುತ್ತಿದ್ದರೆ ಆ ವ್ಯಕ್ತಿಗಳು ಭಯ ಹಾಗೂ ಆತಂಕಕ್ಕೊಳಗಾಗಿರಬಹುದು. ಹೀಗಾಗಿ ಕೈಗಳ ಚಲನೆಯೂ ವ್ಯಕ್ತಿಯ ಭಾವನಾತ್ಮಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ