ಸೆಲೆಬ್ರಿಟಿಯಾದರೂ ಕೈಗೆಟುಕುವ ಬೆಲೆಯ ವಾಚ್ ಧರಿಸಿ ಸರಳತೆ ಮೆರೆದ ನೀರಜ್ ಚೋಪ್ರಾ
ನೀರಜ್ ಚೋಪ್ರಾ ಸದ್ದಿಲ್ಲದೆ ವಿವಾಹವಾಗಿದ್ದು ನಿಮಗೆ ತಿಳಿದೇ ಇದೆ. ಸಾಮಾಜಿಕ ಜಾಲತಾಣದ ಮೂಲಕ ನೀರಜ್ ಚೋಪ್ರಾ ತಮ್ಮ ಮದುವೆ ಫೋಟೋಗಳನ್ನು ಹಂಚಿಕೊಂಡಿದ್ದರು. ಆದರೆ ಇದೀಗ ಮದುವೆಯಲ್ಲಿ ಅವರು ತೊಟ್ಟಿರುವಂತಹ ವಾಚ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರೆಲ್ ಆಗುತ್ತಿದೆ. ಸೆಲೆಬ್ರಿಟಿ ಆದರೂ ಕೋಟಿಬೆಲೆ ಬಾಳುವ ವಾಚ್ ಧರಿಸುವ ಬದಲು ಕೈಗೆಟುಕುವ ಬೆಲೆಯ ಕೈ ಗಡಿಯಾರವನ್ನು ಕಟ್ಟಿಕೊಂಡಿರುವುದು ಜನರಿಗೆ ಆಶ್ಚರ್ಯ ಹುಟ್ಟಿಸಿರುವುದಲ್ಲದೆ ಅವರ ಸರಳತೆ ಬಹಳ ಮೆಚ್ಚುಗೆಯಾಗಿದೆ. ಹಾಗಾದರೆ ಭಾರತದ ಚಿನ್ನದ ಹುಡುಗ ಕಟ್ಟಿಕೊಂಡಿರುವ ಆ ವಾಚ್ ಬೆಲೆ ಎಷ್ಟು? ಅದು ಹೇಗಿತ್ತು? ಅದರ ವೈಶಿಷ್ಟ್ಯವೇನು? ಇಲ್ಲಿದೆ ಮಾಹಿತಿ.
ಭಾರತದ ಚಿನ್ನದ ಹುಡುಗ ಎಂದೇ ಪ್ರಸಿದ್ಧಿಯಾಗಿದ್ದ ನೀರಜ್ ಚೋಪ್ರಾ, ಟೆನಿಸ್ ಆಟಗಾರ್ತಿಯಾದ ಹಿಮಾನಿ ಮೋರ್ ಅವರನ್ನು ಸದ್ದಿಲ್ಲದೆ ವಿವಾಹವಾಗಿದ್ದು ನಿಮಗೆ ತಿಳಿದೇ ಇದೆ. ಸಾಮಾಜಿಕ ಜಾಲತಾಣದ ಮೂಲಕ ನೀರಜ್ ಚೋಪ್ರಾ ತಮ್ಮ ಮದುವೆ ಫೋಟೋಗಳನ್ನು ಹಂಚಿಕೊಂಡಿದ್ದರು. ಆದರೆ ಇದೀಗ ಮದುವೆಯಲ್ಲಿ ಅವರು ತೊಟ್ಟಿರುವಂತಹ ವಾಚ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರೆಲ್ ಆಗುತ್ತಿದೆ. ಸೆಲೆಬ್ರಿಟಿ ಆದರೂ ಕೋಟಿಬೆಲೆ ಬಾಳುವ ವಾಚ್ ಧರಿಸುವ ಬದಲು ಕೈಗೆಟುಕುವ ಬೆಲೆಯ ಕೈ ಗಡಿಯಾರವನ್ನು ಕಟ್ಟಿಕೊಂಡಿರುವುದು ಜನರಿಗೆ ಆಶ್ಚರ್ಯ ಹುಟ್ಟಿಸಿರುವುದಲ್ಲದೆ ಅವರ ಸರಳತೆ ಬಹಳ ಮೆಚ್ಚುಗೆಯಾಗಿದೆ. ಹಾಗಾದರೆ ಭಾರತದ ಚಿನ್ನದ ಹುಡುಗ ಕಟ್ಟಿಕೊಂಡಿರುವ ಆ ವಾಚ್ ಬೆಲೆ ಎಷ್ಟು? ಅದು ಹೇಗಿತ್ತು? ಅದರ ವೈಶಿಷ್ಟ್ಯವೇನು? ಇಲ್ಲಿದೆ ಮಾಹಿತಿ.
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಫ್ಯಾಷನ್ ಪ್ರೀಯರಾಗಿರುತ್ತಾರೆ. ಅವರು ತಮ್ಮ ಬಟ್ಟೆಗಳಿಂದ ಹಿಡಿದು ಚಪ್ಪಲಿಯ ವರೆಗೆ ಎಲ್ಲಾ ಬ್ರಾಂಡ್ ವಸ್ತುಗಳನ್ನು ಧರಿಸುತ್ತಾರೆ. ಅದರಲ್ಲಿಯೂ ತಮ್ಮ ಖಾಸಗಿ ಕಾರ್ಯಕ್ರಮಗಳಲ್ಲಿ ಮಿಂಚಲು ಕೋಟಿ ಮೌಲ್ಯದ ವಸ್ತುಗಳನ್ನು ಖರೀದಿಸಿ ಖುಷಿ ಪಡುತ್ತಾರೆ. ಆದರೆ ಜಾವೆಲಿನ್ ಸೂಪರ್ ಸ್ಟಾರ್, ಅದು ಸುಳ್ಳು ಎಂದು ಸಾಬೀತುಪಡಿಸಿದ್ದಾರೆ. ತಮ್ಮ ಬದುಕಿನ ದೊಡ್ಡ ದಿನದಂದು ಲಕ್ಷಾಂತರ ಮತ್ತು ಕೋಟಿ ಮೌಲ್ಯದ ಡಿಸೈನರ್ ವಾಚ್ ಧರಿಸುವ ಬದಲು, ಸ್ಟೈಲಿಶ್ ಮತ್ತು ಕೈಗೆಟುಕುವ ಟೈಮ್ಪೀಸ್ ಗಳಿಗೆ ಹೆಸರುವಾಸಿಯಾದ ಸ್ವಿಸ್ ಬ್ರಾಂಡ್ ಸ್ವಾಚ್ನ ಕೈ ಗಡಿಯಾರವನ್ನು ಧರಿಸಿ ಎಲ್ಲರೂ ಹುಬ್ಬೇರುಸುವಂತೆ ಮಾಡಿದ್ದಾರೆ.
ಇದನ್ನೂ ಓದಿ: ಸಂವಹನದ ವೇಳೆ ವ್ಯಕ್ತಿಯ ಮನಸ್ಸಿನಲ್ಲಿ ಏನಿದೆ ಎಂದು ತಿಳಿಯುವುದು ಹೇಗೆ? ಈ ವಿಧಾನ ಅನುಸರಿಸಿ
ಜಾವೆಲಿನ್ ಸೂಪರ್ ಸ್ಟಾರ್ ನೀರಜ್ ಕೈ ಗಡಿಯಾರದ ವೈಶಿಷ್ಟತೆ
View this post on Instagram
ನೀರಜ್ ಅವರ ವಾಚ್ ಸ್ವಾಚ್ ಒಮೆಗಾ ಮಿಷನ್ ಟು ಪ್ಲೂಟೊ ವಾಚ್ (Swatch Omega Mission to Pluto watch) ಇದೊಂದು ಅದ್ಭುತ ಟೈಮ್ ಪೀಸ್ ಆಗಿದ್ದು, ಇದು ಬ್ರಾಂಡ್ ನ ಬಯೋಸೆರಾಮಿಕ್ ಮೂನ್ ವಾಚ್ ಸಂಗ್ರಹದ ಭಾಗವಾಗಿದೆ. ಇದು ತಿಳಿ ಬೂದು ಬಣ್ಣವನ್ನು ಹೊಂದಿದ್ದು, ಗಾಢ ಬೂದು ಬಣ್ಣದ ವೆಲ್ಕ್ರೊ ಸ್ಟ್ರಾಪ್ ಅನ್ನು ಹೊಂದಿದೆ. ಐಷಾರಾಮಿ ಗಡಿಯಾರಗಳ ಟ್ರ್ಯಾಕರ್ ದಿ ಇಂಡಿಯನ್ ಹೊರಾಲಜಿ ಪ್ರಕಾರ, ಈ ಗಡಿಯಾರದ ಬೆಲೆ $ 260, ಅಂದರೆ ಅಂದಾಜು ₹ 22,500. ಅವರ ವಾಚ್ ಮಾತ್ರವಲ್ಲ ನೀರಜ್ ಅವರ ಮದುವೆಯ ಉಡುಗೆಯೂ ಎಲ್ಲರ ಕಣ್ಣು ತಂಪಾಗಿಸಿದ್ದು ಸುಳ್ಳಲ್ಲ. ಅವರ ಚೆಂದದ ಶೆರ್ವಾನಿ, ಅದರ ಜೊತೆಗೆ ಅವರು ಧರಿಸಿದ್ದ ಪೇಟ, ನೀರಜ್ ಅವರ ಅಂದಕ್ಕೆ ಹೇಳಿ ಮಾಡಿಸಿದಂತಿತ್ತು. ಇನ್ನು ಹಿಮಾನಿ ಮೋರ್ ಅವರ ಉಡುಗೆಗೂ ಇದು ಸಂಪೂರ್ಣವಾಗಿ ಒಪ್ಪುಗೆಯಾಗುತ್ತಿತ್ತು. ಜೊತೆಗೆ ನವದಂಪತಿ ಧರಿಸಿದ್ದ ಕುಂದನ್ ಆಭರಣ ಅವರಿಬ್ಬರ ಅಂದವನ್ನು ದುಪ್ಪಟ್ಟು ಮಾಡಿತ್ತು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ