ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ಜ್ಯೂಸ್ ನಲ್ಲಿದೆ ಪರಿಹಾರ, ನಿದ್ರಾ ತಜ್ಞರು ಈ ಬಗ್ಗೆ ಹೇಳುವುದೇನು?
ಇತ್ತೀಚೆಗಿನ ದಿನಗಳಲ್ಲಿ ನಿದ್ರಾ ಸಮಸ್ಯೆಯಿಂದ ಬಳಲುತ್ತಿರುವ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಹಿರಿಯರಿಂದ ಹಿಡಿದು ಮಕ್ಕಳಲ್ಲಿಯೂ ನಿದ್ರಾಹೀನತೆ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಆದರೆ ಇದೀಗ ವೈನಿಟ್ ಕ್ಲಿನಿಕ್‌ನ ಮನೋವೈದ್ಯ ಹಾಗೂ ನಿದ್ರಾ ತಜ್ಞರಾದ ಡಾ ಶಾಮ್ ಸಿಂಗ್, ಚೆರ್ರಿ ಜ್ಯೂಸ್ ನಲ್ಲಿರುವ ಮೆಲಟೋನಿನ್ ಅಂಶವು ಆರೋಗ್ಯಕರ ನಿದ್ರೆಯ ಮಾದರಿಗಳನ್ನು ಉತ್ತೇಜಿಸುತ್ತದೆ ಹಾಗೂ ನಿದ್ರಾ ಸಮಸ್ಯೆಗಳಿಗ ಚೆರ್ರಿ ಜ್ಯೂಸ್ ಸೇವನೆಯೂ ನೈಸರ್ಗಿಕ ಪರಿಹಾರವಾಗಿದೆ ಎಂದು ವಿವರಿಸಿದ್ದಾರೆ.
ಇತ್ತೀಚೆಗಿನ ದಿನಗಳಲ್ಲಿ ಒತ್ತಡ ತುಂಬಿದ ಜೀವನ ಶೈಲಿಯಿಂದ ಕಣ್ಣ ತುಂಬಾ ನಿದ್ದೆ ಮಾಡುವುದು ಕನಸಾಗಿದೆ. ಆಧುನಿಕ ಜೀವನ ಶೈಲಿಯೂ ನಿದ್ದೆಯನ್ನು ಸಂಪೂರ್ಣವಾಗಿ ಕಸಿದುಕೊಂಡಿದೆ. ಹೀಗಾಗಿ ಬಹುತೇಕರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಪ್ರತಿಯೊಬ್ಬ ವ್ಯಕ್ತಿಯೂ ದಿನಕ್ಕೆ ಇಂತಿಷ್ಟು ಗಂಟೆಗಳ ಕಾಲ ನಿದ್ರಿಸುವ ಮೂಲಕ ವಿಶ್ರಾಂತಿ ಪಡೆಯಲೇಬೇಕು. ಇದೀಗ ವೈನಿಟ್ ಕ್ಲಿನಿಕ್‌ನ ಮನೋವೈದ್ಯ ಹಾಗೂ ನಿದ್ರಾ ತಜ್ಞರಾದ ಡಾ ಶಾಮ್ ಸಿಂಗ್ ಜಿಪಿ ನ್ಯೂಸ್ ನೊಂದಿಗೆ ಮಾತನಾಡಿ, ಚೆರ್ರಿ ಜ್ಯೂಸ್ ಸೇವನೆಯೂ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ನಿಯಮಿತ ಪ್ರಮಾಣದಲ್ಲಿ ಚೆರ್ರಿ ಜ್ಯೂಸ್ ಸೇವಿಸುವುದರಿಂದ ಹೆಚ್ಚು ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.
ಚೆರ್ರಿ ರಸದಲ್ಲಿರುವ ಮೆಲಟೋನಿನ್ ಅಂಶದಿಂದಾಗಿ ಉತ್ತಮ ನಿದ್ರೆಯ ಮಾದರಿಯನ್ನು ಉತ್ತೇಜಿಸುತ್ತದೆ ಎಂದು ಹೇಳುವುದಕ್ಕೆ ಹೆಚ್ಚಿನ ಪುರಾವೆಗಳಿವೆ. ಮೆಲಟೋನಿನನ್ನು ಸಾಮಾನ್ಯವಾಗಿ “ಸ್ಲೀಪ್ ಹಾರ್ಮೋನ್” ಎಂದು ಕರೆಯಲಾಗುತ್ತದೆ. ದೇಹವು ಯಾವಾಗ ನಿದ್ರಿಸಬೇಕು ಅಥವಾ ಯಾವಾಗ ಎಚ್ಚರಗೊಳ್ಳಬೇಕು ಎಂಬುದನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದ್ದಾರೆ.
ಟ್ರಿಪ್ಟೊಫಾನ್ ಮತ್ತು ಮೆಲಟೋನಿನ್ ಸಂಯುಕ್ತಗಳು ಚೆರ್ರಿ ರಸದಲ್ಲಿದೆ. ಇದು ನಿದ್ರೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಸಿರ್ಕಾಡಿಯನ್ ರಿದಮ್ ಅನ್ನು ನಿಯಂತ್ರಿಸುವ ಮೂಲಕ ದೇಹದ ನೈಸರ್ಗಿಕ ನಿದ್ರೆಯ ಪ್ರಕ್ರಿಯೆಗಳನ್ನು ಹೆಚ್ಚಿಸುತ್ತದೆ. ಹೀಗಾಗಿ ಮಲಗುವುದಕ್ಕಿಂತ ಒಂದರಿಂದ ಎರಡು ಗಂಟೆಗಳ ಮುಂಚಿತವಾಗಿ ಈ ಜ್ಯೂಸ್ ಸೇವನೆ ಮಾಡಲು ಸೂಕ್ತ ಸಮಯವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಸಭರಿತ ಸಿಹಿಯಾದ ಕಿತ್ತಳೆ ಹಣ್ಣನ್ನು ಖರೀದಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ರಾತ್ರಿಯ ಸಮಯದಲ್ಲಿ ಇದರ ನಿಯಮಿತ ಸೇವನೆಯಿಂದ “ಪರಿಣಾಮಕಾರಿ ಫಲಿತಾಂಶಗಳು ಕಾಣಬಹುದು. ಹೀಗಾಗಿ ನಿದ್ರೆಯನ್ನು ಬೆಂಬಲಿಸುವ ಆಹಾರಗಳ ಸೇವನೆಯ ಬಳಿಕ ಒಂದು ಲೋಟ ಚೆರ್ರಿ ಜ್ಯೂಸ್ ಕುಡಿಯುವುದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ಚೆರ್ರಿ ಜ್ಯೂಸ್ ಜೊತೆಗೆ ಮೆಲಟೋನಿನ್ ಅಂಶವಿರುವ ಆಹಾರವನ್ನು ಪೂರಕ ರೂಪದಲ್ಲಿ ಸೇವಿಸಬಹುದು ಎಂದು ಹೇಳಿದ್ದಾರೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ