ಜೀವನದಲ್ಲಿ ಅತೃಪ್ತಳಾಗಿರುವ ಮಹಿಳೆಯರ ನಡವಳಿಕೆಗಳು ಹೀಗಿರುತ್ತದೆಯಂತೆ

ಹೆಣ್ಣಿನ ಮನಸ್ಸು ತುಂಬಾ ಚಂಚಲ, ಹೀಗಾಗಿ ಹೆಣ್ಣನ್ನು ಅರ್ಥ ಮಾಡಿಕೊಳ್ಳುವುದು ತುಂಬಾನೇ ಕಷ್ಟ. ಈ ಹೆಣ್ಣು ಮಕ್ಕಳಿಗೆ ತಮ್ಮ ಭಾವನೆಗಳನ್ನು ಹೇಗೆ ವ್ಯಕ್ತಪಡಿಸಬೇಕು, ಹೇಗೆ ಹಿಡಿದಿಟ್ಟುಕೊಳ್ಳಬೇಕು ಎನ್ನುವುದು ಚೆನ್ನಾಗಿಯೇ ತಿಳಿದಿದೆ. ಕೆಲವೊಮ್ಮೆ ಹೆಣ್ಣು ತನ್ನ ಬದುಕಿನಲ್ಲಿ ಅತೃಪ್ತಳಾಗಿದ್ದು, ಒಂಟಿತನವನ್ನು ಅನುಭವಿಸಿರುತ್ತಾಳೆ, ಆದರೆ ಈ ಬಗ್ಗೆ ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಲವ್ ಕನೆಕ್ಷನ್ ಬ್ಲಾಗ್‌ನ ಸಂಸ್ಥಾಪಕಿ ಮತ್ತು ಸಂಬಂಧಗಳ ತಜ್ಞೆಯಾಗಿರುವ ಟೀನಾ ಫೇ ಒಂಟಿತನ ಹಾಗೂ ಅತೃಪ್ತಳಾಗಿರುವ ಮಹಿಳೆಯರ ನಡವಳಿಕೆಗಳ ಹೇಗಿರುತ್ತದೆ ಎನ್ನುವುದನ್ನು ವಿವರಿಸಿದ್ದಾರೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಜೀವನದಲ್ಲಿ ಅತೃಪ್ತಳಾಗಿರುವ ಮಹಿಳೆಯರ ನಡವಳಿಕೆಗಳು ಹೀಗಿರುತ್ತದೆಯಂತೆ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 18, 2024 | 5:22 PM

ಎಷ್ಟೋ ಹೆಣ್ಣು ಮಕ್ಕಳು ಜೀವನದಲ್ಲಿ ನೊಂದು ಸೋತು ಹೋಗಿರುತ್ತಾರೆ. ಬದುಕಿನಲ್ಲಿ ಯಾವುದೇ ಆಸೆ ಆಕಾಂಕ್ಷೆಗಳೇ ಇರುವುದಿಲ್ಲ. ಆದರೆ ಅದೇಗೋ ಜೀವನವನ್ನು ಸಾಗಿಸಿಕೊಂಡು ಹೋಗುತ್ತಿರುತ್ತಾರೆ. ಜೀವನದಲ್ಲಿ ತಾನು ಖುಷಿಯಾಗಿಲ್ಲ, ತೃಪ್ತಳಾಗಿಲ್ಲ ಎಂದು ಹೇಳದೇ ಹೋದರೂ ಆಕೆಯ ಕೆಲವು ನಡವಳಿಕೆಗಳು ಎಲ್ಲವನ್ನು ತೆರೆದಿಡುತ್ತದೆ. ನಿಮ್ಮ ಸುತ್ತಮುತ್ತಲಿನ ಮಹಿಳೆಯೂ ಜೀವನದಲ್ಲಿ ಸಂತೋಷವಾಗಿಲ್ಲ, ಅತೃಪ್ತಳಾಗಿದ್ದಾಳೆ ಎಂದರೆ ಆಕೆಯ ನಡವಳಿಕೆಯಲ್ಲಿ ಕೆಲವು ಬದಲಾವಣೆಗಳು ಆಗಿದೆಯೇ ಎಂದು ಗಮನಿಸಿ. ಈ ಕೆಲವು ಚಿಹ್ನೆಗಳು ಆಕೆಯ ನಡವಳಿಕೆಯಲ್ಲಿ ಕಂಡು ಬಂದರೆ ಆಕೆಗೆ ಭಾವನಾತ್ಮಕ ಬೆಂಬಲವನ್ನು ನೀಡುವುದು ಅತ್ಯಗತ್ಯ.

  • ತನ್ನನ್ನು ತಾನು ಅತಿಯಾಗಿ ಟೀಕಿಸಿಕೊಳ್ಳುವುದು : ಜೀವನದಲ್ಲಿ ಅತೃಪ್ತಿ ಹಾಗೂ ಒಂಟಿತನವನ್ನು ಹೊಂದಿರುವ ಮಹಿಳೆಯರು ತಮ್ಮನ್ನು ತಾವೇ ಟೀಕಿಸಿಕೊಳ್ಳುತ್ತಿರುತ್ತಾರೆ. ಇತರರಿಗೆ ಇದು ಗೋಚರಿಸದಿದ್ದರೂ ಕೂಡ ನಿರಂತರವಾಗಿ ತನ್ನನ್ನು ತಾನೇ ಕುಗ್ಗಿಸಿಕೊಳ್ಳುತ್ತಿರುತ್ತಾಳೆ. ತನ್ನ ಸ್ವಂತ ಕೆಲಸ ಕಾರ್ಯಗಳು ಅಥವಾ ನಿರ್ಧಾರಗಳಲ್ಲಿ ದೋಷಗಳನ್ನು ಕಂಡುಕೊಳ್ಳುವುದನ್ನು ಟೀಕಿಸಿಕೊಂಡು ಒಳಗೊಳಗೆ ಕೊರಗುತ್ತಾರೆ.
  • ಸಂತೋಷವಾಗಿರುವಂತೆ ನಟಿಸುತ್ತಿರುತ್ತಾರೆ : ಹೆಣ್ಣು ಮಕ್ಕಳಿಗೆ ಸಂತೋಷವಾಗಿದ್ದೇನೆ ಎಂದು ಮುಖವಾಡ ಹಾಕಿಕೊಂಡು ಬದುಕುವುದು ಕಷ್ಟವೇನಲ್ಲ. ಎಷ್ಟೇ ಹೆಣ್ಣು ತಮ್ಮ ಜೀವನದಲ್ಲಿ ಅತೃಪ್ತಿಯನ್ನು ಹೊಂದಿದ್ದರೆ, ಒಂಟಿತನವನ್ನು ಎದುರಿಸುತ್ತಿದ್ದರೆ ತಮ್ಮ ನಿಜವಾದ ಭಾವನೆಗಳನ್ನು ಮರೆಮಾಚಲು ಪ್ರಯತ್ನಿಸುತ್ತಾರೆ. ತಮಾಷೆಯಲ್ಲದ ಜೋಕ್‌ಗಳಿಗೂ ವಿಪರೀತವಾಗಿ ನಗುವಂತಹ ನಡವಳಿಕೆಗಳು ಕಾಣಿಸಿಕೊಳ್ಳುತ್ತದೆ. ಎಲ್ಲರ ಮುಂದೆ ನಾನು ಸಂತೋಷವಾಗಿದ್ದೇನೆ ಎಂದು ತೋರಿಸುವ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಇದು ಅತೃಪ್ತಿಯ ಸಂಕೇತಗಳಲ್ಲಿ ಒಂದು ಎನ್ನಬಹುದು.
  • ನಕಾರಾತ್ಮಕ ಮಾತುಗಳನ್ನು ಆಡುವುದು : ಒಂಟಿತನ, ಅತೃಪ್ತಿ ಅನುಭವಿಸುತ್ತಿರುವ ಮಹಿಳೆಯರು ಸಾಮಾನ್ಯವಾಗಿ ತಮ್ಮ ಬಗ್ಗೆಯೇ ಕೆಟ್ಟ ವಿಮರ್ಶಕರಾಗುತ್ತಾರೆ. ಎಲ್ಲರ ಮುಂದೆ ಆತ್ಮವಿಶ್ವಾಸದಿಂದ ಇದ್ದರೂ ಕೂಡ ತಾನು ಉತ್ತಮವಾಗಿಲ್ಲ, ನನ್ನಿಂದ ಏನನ್ನೂ ಮಾಡಲು ಸಾಧ್ಯವಿಲ್ಲ, ತಾನು ಯೋಗ್ಯವಾಗಿಲ್ಲ ಹೀಗೆ ನಾನಾ ರೀತಿಯ ನಕರಾತ್ಮಕ ಭಾವನೆಗಳು ಅವರ ಮನಸ್ಸಿನಲ್ಲಿ ಪ್ರಕಟವಾಗುತ್ತದೆ. ಇದು ಮಾನಸಿಕವಾಗಿ ನೆಮ್ಮದಿ ಹಾಳು ಮಾಡುವುದಲ್ಲದೆ, ಖಿನ್ನತೆಗೂ ದಾರಿ ಮಾಡಿಕೊಡುತ್ತದೆ.
  • ಅತಿಯಾದ ಭಾವನೆಯನ್ನು ಅನುಭವಿಸುತ್ತಿರುವುದು : ಜೀವನದಲ್ಲಿ ಅತೃಪ್ತಿ ಹಾಗೂ ಸಂತೋಷವಾಗಿಲ್ಲ ಎನ್ನುವುದರ ಚಿಹ್ನೆಗಳಲ್ಲಿ ಅತಿಯಾದ ಭಾವನೆಯನ್ನು ಅನುಭವಿಸುವುದು ಕೂಡ ಒಂದು. ಇಂತಹ ಮಹಿಳೆಯರು ನಿತ್ಯವೂ ಭಾರವಾದ ಭಾವನೆಗಳನ್ನು ಹೊತ್ತುಕೊಂಡು ಓಡಾಡುತ್ತಿರುವಂತೆ ಕಾಣುತ್ತಾರೆ. ಈ ಮಹಿಳೆಯರ ಜೀವನದಲ್ಲಿ ಜವಾಬ್ದಾರಿಗಳು, ಸಂಬಂಧಗಳು ಸಂತೋಷ ನೀಡುವ ಬದಲು ಹೊರೆಯಾಗಿ ಕಾಣಿಸಬಹುದು.
  • ಹವ್ಯಾಸಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು : ಜೀವನದಲ್ಲಿ ಅತೃಪ್ತಿ ಅನುಭವಿಸುವ ಮಹಿಳೆಯು ಯಾವ ಕೆಲಸವನ್ನು ಮಾಡಲು ಇಷ್ಟವಿರುವುದಿಲ್ಲ. ತಮ್ಮ ಇಷ್ಟದ ಹವ್ಯಾಸಗಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಶ್ರದ್ಧೆ ಹಾಗೂ ಆಸಕ್ತಿಯಿದ್ದ ಮಾಡುತ್ತಿದ್ದ ಕೆಲಸದ ಮೇಲೆ ಆಸಕ್ತಿ ಕಳೆದುಕೊಂಡರೆ ಅತೃಪ್ತಿಯ ಸಂಕೇತವಾಗಿದ್ದು, ಈ ಬಗ್ಗೆ ಹೇಳಿಕೊಳ್ಳದೆ ಇದ್ದರೂ ಅವರ ಕೆಲಸ ಕಾರ್ಯಗಳಲ್ಲಿ ತಿಳಿಯುತ್ತದೆ.
  • ಆಹಾರ ಸೇವನೆಯಲ್ಲಿ ಬದಲಾವಣೆಗಳಾಗುತ್ತದೆ : ಆಹಾರ ಪದ್ಧತಿಯಲ್ಲಿ ಹಠಾತ್ ಬದಲಾವಣೆಯು ಭಾವನಾತ್ಮಕವಾಗಿ ಸರಿಯಿಲ್ಲ ಎನ್ನುವುದನ್ನು ಸೂಚಿಸುತ್ತದೆ. ದೈಹಿಕ ಹಸಿವಿನ ಬಗ್ಗೆ ಹೆಚ್ಚು ಗಮನ ಹರಿಸದೇ ಏನೇನೋ ಅಲೋಚಿಸುವುದು. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡದೇ ಇರುವಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
  • ಸ್ವಯಂ ಕಾಳಜಿಯಲ್ಲಿ ಕೊರತೆ ಎದ್ದು ಕಾಣುತ್ತದೆ : ಮಹಿಳೆಯರು ಅತೃಪ್ತಿ ಅನುಭವಿಸಿದಾಗ, ಅವರು ತಮ್ಮ ಯೋಗಕ್ಷೇಮದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ಊಟ ತಿಂಡಿ ಸರಿಯಾಗಿ ಮಾಡದೇ ಇರುವುದು, ವೈಯಕ್ತಿಕ ನೈರ್ಮಲ್ಯಕ್ಕೆ ಗಮನ ಹರಿಸದೇ ಇರುವುದು, ನಿದ್ದೆ ಮಾಡದಿರುವುದು ಹೀಗೆ ವಿವಿಧ ರೀತಿಯ ನಡವಳಿಕೆಗಳು ಕಾಣಿಸಿಕೊಳ್ಳುತ್ತದೆ.
  • ಪ್ರೀತಿಪಾತ್ರರನ್ನು ದೂರ ಮಾಡಿಕೊಳ್ಳುತ್ತಾರೆ : ಯಾವ ಹೆಣ್ಣು ತನ್ನ ಜೀವನದಲ್ಲಿ ಸಂತೋಷವಾಗಿಲ್ಲ, ಅತೃಪ್ತಳಾಗಿದ್ದಾಗ ಆಕೆಯು ತನ್ನ ಜೊತೆಯಲ್ಲಿರುವವರ ಒಡನಾಟದಿಂದ ದೂರ ಸರಿಯುತ್ತಾಳೆ. ಪ್ರೀತಿಸುವ ಜನರಿಂದ ದೂರವಿರಲು ಪ್ರಾರಂಭಿಸಬಹುದು. ತನ್ನನ್ನು ಅತೃಪ್ತಿಯ ಭಾವನೆಯನ್ನು ರಕ್ಷಿಸಿಕೊಳ್ಳಲು ಅಥವಾ ತನ್ನ ಸಮಸ್ಯೆಗಳಿಂದ ಇತರರಿಗೆ ಹೊರೆಯಾಗಬಾರದು ಎನ್ನುವ ಕಾರಣ ಈ ರೀತಿ ನಿರ್ಧಾರ ಮಾಡುತ್ತಾಳೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ