AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

50 ದಾಟಿದ್ರೂ ಯುವಕರಂತೆ ಯಂಗ್‌ ಆಗಿ ಕಾಣಿಸಲು ದೈನಂದಿನ ಜೀವನದಲ್ಲಿ ಈ ಸರಳ ಸಲಹೆಗಳನ್ನು ಅನುಸರಿಸಿ

ಎಷ್ಟೇ ವಯಸ್ಸಾದ್ರೂ ಯಂಗ್‌ ಆಗಿ ಕಾಣ್ಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತೇವೆ. ವಯಸ್ಸಾದರೂ ಕೂಡ ಯುವಕರಂತೆ ಕಾಣಿಸಿಕೊಳ್ಳಲು ಹೆಚ್ಚು ಹಣವನ್ನು ಖರ್ಚು ಮಾಡಬೇಕೆಂದಿಲ್ಲ. ಜೀವನಶೈಲಿಯಲ್ಲಿ ಕೆಲವೊಂದು ಸಕಾರಾತ್ಮಕ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ 50 ದಾಟಿದ್ರೂ 26 ರ ಯುವಕರಂತೆ ಕಾಣಿಸಿಕೊಳ್ಳಬಹುದು. ವಯಸ್ಸಾದ್ರೂ ಯಂಗ್‌ ಆಗಿ ಕಾಣಿಸಿಕೊಳ್ಳಲು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

50 ದಾಟಿದ್ರೂ ಯುವಕರಂತೆ ಯಂಗ್‌ ಆಗಿ ಕಾಣಿಸಲು ದೈನಂದಿನ ಜೀವನದಲ್ಲಿ ಈ ಸರಳ ಸಲಹೆಗಳನ್ನು ಅನುಸರಿಸಿ
ಸಾಂದರ್ಭಿಕ ಚಿತ್ರImage Credit source: Getty Images
ಮಾಲಾಶ್ರೀ ಅಂಚನ್​
|

Updated on:Oct 19, 2026 | 7:26 PM

Share

ವಯಸ್ಸಾಗುವಿಕೆಯ (Aging) ಪ್ರಕ್ರಿಯೆಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ವಯಸ್ಸಾದಂತೆ, ಮುಖದ ಹೊಳಪು ಮತ್ತು ದೈಹಿಕ ಚುರುಕುತನ ಕ್ರಮೇಣ ಕಡಿಮೆಯಾಗುತ್ತದೆ. ಇದರಿಂದಾಗಿ ಮುಖದ ಅಂದವೂ ಕಳೆದುಹೋಗುತ್ತದೆ. ಇದೇ ಕಾರಣಕ್ಕೆ ಪ್ರತಿಯೊಬ್ಬರೂ ಎಷ್ಟೇ ವಯಸ್ಸಾದ್ರೂ ಯಂಗ್‌ ಆಗಿ ಕಾಣಿಸಿಕೊಳ್ಳಬೇಕೆಂದು ಬಯಸುತ್ತಾರೆ. ಇದೇ ರೀತಿ ನಿಮಗೂ ಸಹ 50 ವರ್ಷ ದಾಟಿದ್ರೂ ಫಿಟ್‌ ಆಗಿ, ಯಂಗ್‌ ಆಗಿ ಕಾಣಿಸಿಕೊಳ್ಳುವ ಆಸೆ ಇದ್ಯಾ? ಇದಕ್ಕಾಗಿ ಹೆಚ್ಚೇನು ದುಡ್ಡು ಖರ್ಚು ಮಾಡ್ಬೇಕೆಂದಿಲ್ಲ ಸರಿಯಾದ ಆಹಾರ ಕ್ರಮ, ವ್ಯಾಯಾಮ ಸೇರಿದಂತೆ ಆರೋಗ್ಯಕರ ಜೀವನಶೈಲಿಯನ್ನು, ಕೆಲವೊಂದು ಅಭ್ಯಾಸಗಳನ್ನು ಅನುಸರಿಸಿದರೆ ಸಾಕು. 50 ವರ್ಷ ದಾಟಿದ್ರೂ ಚಿರ ಯುವಕರಂತೆ ಕಾಣಿಸಿಕೊಳ್ಳಲು ದೈನಂದಿನ ಜೀವನದಲ್ಲಿ ಯಾವೆಲ್ಲಾ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು ಎಂಬುದರ ಪೂರ್ಣ ವಿವರ ಇಲ್ಲಿದೆ.

ಯಂಗ್‌ ಮತ್ತು ಫಿಟ್‌ ಆಗಿ ಕಾಣಿಸಲು ನಿತ್ಯ  ಯೋಗಾಭ್ಯಾಸ ಮಾಡಬೇಕು:

ಸದಾ ಯಂಗ್‌ ಮತ್ತು ಫಿಟ್‌ ಆಗಿ ಕಾಣಿಸಿಕೊಳ್ಳಬೇಕು ಎಂದು ಬಯಸುವವರು ನಿತ್ಯ ಯೋಗಾಭ್ಯಾಸ ಮಾಡಬೇಕು. ಯೋಗವು ದೇಹದ ನಮ್ಯತೆಯನ್ನು ಹೆಚ್ಚಿಸುವುದು ಮಾತ್ರವಲ್ಲ ದೇಹವನ್ನು ಹಗುರ ಮತ್ತು ಶಕ್ತಿಯುತವಾಗಿಸುತ್ತದೆ. ಜೊತೆಗೆ ಮಾನಸಿಕ ಶಾಂತಿಯನ್ನು ಸಹ ನೀಡುತ್ತದೆ. ಸಂಶೋಧನೆಯ ಪ್ರಕಾರ, ದೈನಂದಿನ ಯೋಗಾಭ್ಯಾಸವು ಒತ್ತಡದ ಹಾರ್ಮೋನ್ ‘ಕಾರ್ಟಿಸೋಲ್’ ಮಟ್ಟವನ್ನು ಕಡಿಮೆ ಮಾಡುತ್ತದೆ, ಇದು ಚರ್ಮದ ಮೇಲಿನ ಸುಕ್ಕುಗಳು ಮತ್ತು ಆಯಾಸವನ್ನು ಕಡಿಮೆ ಮಾಡುತ್ತದೆ.

ವ್ಯಾಯಾಮ ವಯಸ್ಸಾಗುವಿಕೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ:

ಪ್ರತಿದಿನ ಸುಮಾರು 30 ನಿಮಿಷಗಳ ಕಾಲ ನಡೆಯುವುದು ಅಥವಾ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ಇದು ಚಯಾಪಚಯ ಕ್ರಿಯೆಯನ್ನು ಮುಂದುವರಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಇದು ವಯಸ್ಸಾಗುವಿಕೆಯ ಪ್ರಕ್ರೆಯನ್ನು ಸಹ ನಿಧಾನಗೊಳಿಸುತ್ತದೆ. ಹೌದು ಪ್ರತಿದಿನ ನಡೆಯುವುದು ಅಥವಾ ಲಘು ವ್ಯಾಯಾಮ ಮಾಡುವುದರಿಂದ ರಕ್ತದ ಹರಿವು ಹೆಚ್ಚಾಗುತ್ತದೆ, ಇದು ಚರ್ಮಕ್ಕೆ ಆಮ್ಲಜನಕವನ್ನು ಪೂರೈಸುತ್ತದೆ ಮತ್ತು ಅದರ ನೈಸರ್ಗಿಕ ಹೊಳಪನ್ನು ಕಾಪಾಡಿಕೊಳ್ಳುತ್ತದೆ. ಇದು ಮೂಳೆಗಳು ಮತ್ತು ಸ್ನಾಯುಗಳನ್ನು ಬಲವಾಗಿಡುತ್ತದೆ. ಇದರಿಂದಾಗಿ ನೀವು ವಯಸ್ಸಾದರೂ ಫಿಟ್‌ ಆಗಿ ಕಾಣಿಸಿಕೊಳ್ಳಬಹುದು.

ಯಂಗ್‌ ಆಗಿ ಕಾಣಿಸಿಕೊಳ್ಳಲು ಧ್ಯಾನ ಸಹಕಾರಿ:

ಪ್ರತಿದಿನ 10 ನಿಮಿಷಗಳ ಕಾಲ ಧ್ಯಾನ ಮಾಡಿ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ, ಹಾರ್ಮೋನುಗಳನ್ನು ಸಮತೋಲನಗೊಳಿಸುತ್ತದೆ ಮತ್ತು ನಿಮ್ಮನ್ನು ಹೆಚ್ಚು ಸಕಾರಾತ್ಮಕ ಮತ್ತು ಚೈತನ್ಯಶೀಲರನ್ನಾಗಿ ಮಾಡುತ್ತದೆ. ಧ್ಯಾನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ನಿದ್ರೆಯ ಗುಣಮಟ್ಟ, ಗಮನ ಮತ್ತು ಭಾವನಾತ್ಮಕ ಆರೋಗ್ಯವನ್ನು ಸುಧಾರಿಸುತ್ತದೆ. ಅನೇಕ ಅಧ್ಯಯನಗಳ ಪ್ರಕಾರ, ಪ್ರತಿದಿನ ಧ್ಯಾನ ಮಾಡುವ ಜನರ ವಯಸ್ಸಾದ ಪ್ರಕ್ರಿಯೆಯು ನಿಧಾನವಾಗಿರುತ್ತದೆ ಮತ್ತು ದೇಹದ ಜೀವಕೋಶಗಳು ಹೆಚ್ಚು ಕಾಲ ಸಕ್ರಿಯವಾಗಿರುತ್ತವೆ.

ಯಂಗ್‌ ಆಗಿ ಕಾಣಿಸಿಕೊಳ್ಳಲು ಬಯಸಿದರೆ ಒತ್ತಡದಿಂದ ಮುಕ್ತರಾಗಿರಿ:

ಅತಿಯಾದ ಒತ್ತಡವು ನಿಮ್ಮನ್ನು ಅನಾರೋಗ್ಯಕ್ಕೆ ಒಳಪಡಿಸುವುದಲ್ಲದೆ, ವಯಸ್ಸಾದ ಆರಂಭಿಕ ಚಿಹ್ನೆಗಳಿಗೆ ಕಾರಣವಾಗಬಹುದು. ಧ್ಯಾನ, ಸಂಗೀತ ಕೇಳುವುದು, ಓದುವುದು ಅಥವಾ ಹವ್ಯಾಸವನ್ನು ಅನುಸರಿಸುವುದು ಇವೆಲ್ಲವೂ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮನ್ನು ಸಂತೋಷವಾಗಿಡಿ.

ಯಂಗ್‌ ಆಗಿ ಕಾಣಿಸಲು ಉತ್ತಮ ನಿದ್ರೆ ಪಡೆಯುವುದು ಅವಶ್ಯಕ:

ಒಳ್ಳೆಯ ನಿದ್ರೆ ದೇಹವನ್ನು ರಿಪೇರಿ ಮಾಡುತ್ತದೆ ಮತ್ತು ಚರ್ಮವನ್ನು ರಿಫ್ರೆಶ್ ಮಾಡುತ್ತದೆ. ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ಆಳವಾದ ನಿದ್ರೆಯನ್ನು ಮಾಡಿ.  ಒಳ್ಳೆಯ ನಿದ್ರೆ ದೇಹವನ್ನು ವಿಶ್ರಾಂತಿ ಮಾಡುತ್ತದೆ ಮತ್ತು ಜೀವಕೋಶಗಳನ್ನು ಸರಿಪಡಿಸುತ್ತದೆ, ನಿಮ್ಮ ಮುಖವನ್ನು ತಾಜಾವಾಗಿ ಮತ್ತು ಕಪ್ಪು ವರ್ತುಲಗಳಿಂದ ಮುಕ್ತಗೊಳಿಸುತ್ತದೆ.  ಮಲಗುವ ಮೊದಲು, ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ ಮತ್ತು ಹಗುರವಾದ ಮಾಯಿಶ್ಚರೈಸರ್ ಅನ್ನು ಹಚ್ಚಿ.

ಇದನ್ನೂ ಓದಿ: ತಪ್ಪಿಯೂ ಈ ಆಹಾರ ಪದಾರ್ಥಗಳನ್ನು ಅಲ್ಯೂಮಿನಿಯಂ ಪಾತ್ರೆಯಲ್ಲಿ ಬೇಯಿಸಬೇಡಿ; ಯಾಕೆ ಗೊತ್ತಾ?

ಯಂಗ್‌ ಆಗಿ ಕಾಣಿಸಲು ಆರೋಗ್ಯಕರ ಆಹಾರವನ್ನು ಸೇವನೆ ಮಾಡಬೇಕು:

ನಿಮ್ಮ ದೈನಂದಿನ ಆಹಾರದಲ್ಲಿ ವಿಟಮಿನ್ ಸಿ, ಆಂಟಿಆಕ್ಸಿಡೆಂಟ್‌ಗಳು ಮತ್ತು ಫೈಬರ್‌ನಿಂದ ಸಮೃದ್ಧವಾಗಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿ. ಇವು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುವುದಲ್ಲದೆ, ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ಕಿತ್ತಳೆ, ನಿಂಬೆಹಣ್ಣು, ನೆಲ್ಲಿಕಾಯಿ, ಪಪ್ಪಾಯಿ, ಬ್ರೊಕೊಲಿ ಮತ್ತು ಪಾಲಕ್‌ನಂತಹ, ಡ್ರೈ ಫ್ರೂಟ್ಸ್‌ ಮತ್ತು ಸೀಡ್ಸ್‌ನಂತಹ ಆರೋಗ್ಯಕರ ಆಹಾರಗಳನ್ನು ಸೇವಿಸಿ, ಇವು ಚರ್ಮವನ್ನು ಪೋಷಿಸುತ್ತವೆ ಮತ್ತು ವಯಸ್ಸಾಗುವಿಕೆಯ ಪ್ರಕ್ರಿಯೆಯನ್ನು ಕಡಿಮೆ ಮಾಡುತ್ತವೆ. 

ಯಂಗ್‌ ಆಗಿ ಕಾಣಿಸಿಲು ಬಯಸಿದರೆ ಕೆಟ್ಟ ಅಭ್ಯಾಸಗಳಿಂದ ದೂರವಿರಿ:

ಮದ್ಯ, ಸಿಗರೇಟ್, ಮಾದಕ ದ್ರವ್ಯಗಳ ಸೇವನೆ ಸೇರಿಂದರೆ ಕೆಟ್ಟ ಚಟಗಳಿಂದ ದೂರವಿರಿ. ಧೂಮಪಾನದಂತ ಚಟ ಆರೋಗ್ಯಕ್ಕೆ ಹಾನಿ ಮಾಡುವುದು ಮಾತ್ರವಲ್ಲದೆ, ವಯಸ್ಸಾಗುವಿಕೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಹಾಗಾಗಿ ಆರೋಗ್ಯಕರವಾಗಿ ಸದಾ ಫಿಟ್‌ ಮತ್ತು ಯಂಗ್‌ ಆಗಿ ಕಾಣಿಸಿಲು ಬಯಸಿದರೆ ಧೂಮಪಾನದಂತಹ ಚಟಗಳಿಂದ ದೂರವಿರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:25 pm, Mon, 19 October 26

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Horoscope Today: ಕುಜ ಗ್ರಹವು ಕರ್ಕಾಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶ
Horoscope Today: ಕುಜ ಗ್ರಹವು ಕರ್ಕಾಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶ
ಬಿಗ್ ಬಾಸ್ ಮನೆಯಲ್ಲಿ ಗಾನವಿಗೆ ಮೆಮೋರಿ ಲಾಸ್? ಟಾಸ್ಕ್ ಬಳಿಕ ಏನೂ ನೆನಪಿಲ್ಲ
ಬಿಗ್ ಬಾಸ್ ಮನೆಯಲ್ಲಿ ಗಾನವಿಗೆ ಮೆಮೋರಿ ಲಾಸ್? ಟಾಸ್ಕ್ ಬಳಿಕ ಏನೂ ನೆನಪಿಲ್ಲ
ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ದೂರ ಆಗಿಲ್ಲ: ಸ್ಪಷ್ಟನೆ ನೀಡಿದ ನಟ
ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ದೂರ ಆಗಿಲ್ಲ: ಸ್ಪಷ್ಟನೆ ನೀಡಿದ ನಟ
ಹಾವೇರಿಯಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್
ಹಾವೇರಿಯಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್
ಹಾಸನ ಡಿಸಿ ವಿರುದ್ಧ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಜೆಡಿಎಸ್ ದೂರು
ಹಾಸನ ಡಿಸಿ ವಿರುದ್ಧ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಜೆಡಿಎಸ್ ದೂರು
25 ಲಕ್ಷ ರೂ. ಲಂಚ ಪಡೆದು ತಹಸೀಲ್ದಾರ್ ವಂಚಿಸಿದ ಆರೋಪ
25 ಲಕ್ಷ ರೂ. ಲಂಚ ಪಡೆದು ತಹಸೀಲ್ದಾರ್ ವಂಚಿಸಿದ ಆರೋಪ
ರಸ್ತೆ ಗುಂಡಿ ಮುಚ್ಚಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದ ನಟ ವಿನೋದ್ ರಾಜ್
ರಸ್ತೆ ಗುಂಡಿ ಮುಚ್ಚಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದ ನಟ ವಿನೋದ್ ರಾಜ್
KPSC ಹಗರಣ: ಸಾಹುಕಾರ್, ಕನ್ನಾಳೆ ಜಾಮೀನು ಅರ್ಜಿ ವಜಾ; ಗೀತಾಗೆ ಜಾಮೀನು
KPSC ಹಗರಣ: ಸಾಹುಕಾರ್, ಕನ್ನಾಳೆ ಜಾಮೀನು ಅರ್ಜಿ ವಜಾ; ಗೀತಾಗೆ ಜಾಮೀನು
ಮಂಜ ಬಂದಿದ್ದೆ, ಮತ್ತೆ ರದ್ದಾಯ್ತು ಟಾಸ್ಕ್: ವಿಡಿಯೋ
ಮಂಜ ಬಂದಿದ್ದೆ, ಮತ್ತೆ ರದ್ದಾಯ್ತು ಟಾಸ್ಕ್: ವಿಡಿಯೋ
ಕರಡಿ ಬೆನ್ನಟ್ಟಿದ ಹುಲಿರಾಯ: ಅಪರೂಪದ ದೃಶ್ಯ ಕಣ್ತುಂಬಿಕೊಂಡ ಸಫಾರಿಗರು
ಕರಡಿ ಬೆನ್ನಟ್ಟಿದ ಹುಲಿರಾಯ: ಅಪರೂಪದ ದೃಶ್ಯ ಕಣ್ತುಂಬಿಕೊಂಡ ಸಫಾರಿಗರು