Important Days In October 2025: ಅಕ್ಟೋಬರ್ ತಿಂಗಳಲ್ಲಿ ಆಚರಿಸಲಾಗುವ ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಾಚರಣೆಗಳ ಪಟ್ಟಿ ಇಲ್ಲಿದೆ
ವರ್ಷದ 10 ನೇ ತಿಂಗಳಾದ ಅಕ್ಟೋಬರ್ ತಿಂಗಳಿನಲ್ಲಿ ಹತ್ತು ಹಲವು ವಿಶೇಷ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಈ ಪ್ರತಿಯೊಂದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಒಂದೊಂದು ಉದ್ದೇಶ ಇಟ್ಟುಕೊಂಡು ಆಚರಿಸಲಾಗುತ್ತಿದ್ದು, ವಿಶ್ವ ಅಂಚೆ ದಿನದಿಂದ ಹಿಡಿದು ವಿಶ್ವ ಶಿಕ್ಷಕರ ದಿನದ ವರೆಗೆ ಈ ತಿಂಗಳಿನಲ್ಲಿ ಯಾವೆಲ್ಲಾ ದಿನಗಳನ್ನು ಆಚರಿಸಲಾಗುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಸಾಂದರ್ಭಿಕ ಚಿತ್ರ Image Credit source: Getty Images
ಪ್ರತಿ ತಿಂಗಳಲ್ಲೂ ಕೂಡಾ ಒಂದಷ್ಟು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಗಳನ್ನು ಆಚರಿಸಲಾಗುತ್ತವೆ. ಆರೋಗ್ಯ ಸಮಸ್ಯೆಗಳು, ಪರಿಸರ ಸಮಸ್ಯೆಗಳು, ಒಂದಷ್ಟು ವಿಷಯಗಳ ಬಗೆಗಿನ ಜಾಗತಿಕ ಮಹತ್ವಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎನ್ನುವ ಉದ್ದೇಶದಿಂದ ಈ ಎಲ್ಲಾ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಅದರಂತೆ ವರ್ಷದ 10 ನೇ ತಿಂಗಳಾದ ಅಕ್ಟೋಬರ್‌ನಲ್ಲೂ ಒಂದಷ್ಟು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ (Important Days In October) ದಿನಾಚರಣೆಗಳನ್ನು ಆಚರಿಸಲಾಗುತ್ತಿದ್ದು, ಗಾಂಧಿ ಜಯಂತಿ, ಕಾಫಿ ದಿನದಿಂದ ಹಿಡಿದು ವಿಶ್ವ ಸಸ್ಯಹಾರಿ ದಿನದ ವರೆಗೆ ಯಾವೆಲ್ಲಾ ಪ್ರಮುಖ ದಿನಾಚರಣೆಗಳನ್ನು ಆಚರಿಸಲಾಗುತ್ತದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಅಕ್ಟೋಬರ್ ತಿಂಗಳಲ್ಲಿ ಆಚರಿಸಲಾಗುವ ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಾಚರಣೆಗಳ ಪಟ್ಟಿ:
- ಅಕ್ಟೋಬರ್, 1 2025: ಅಂತಾರಾಷ್ಟ್ರೀಯ ವೃದ್ಧರ ದಿನ
- ಅಕ್ಟೋಬರ್, 1 2025: ಅಂತಾರಾಷ್ಟ್ರೀಯ ಕಾಫಿ ದಿನ
- ಅಕ್ಟೋಬರ್, 1 2025: ವಿಶ್ವ ಸಸ್ಯಹಾರಿ ದಿನ
- ಅಕ್ಟೋಬರ್, 2 2025: ಗಾಂಧಿ ಜಯಂತಿ
- ಅಕ್ಟೋಬರ್, 2 2025: ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ
- ಅಕ್ಟೋಬರ್, 2 2025: ಅಂತಾರಾಷ್ಟ್ರೀಯ ಅಹಿಂಸಾ ದಿನ
- ಅಕ್ಟೋಬರ್, 4 2025: ವಿಶ್ವ ಪ್ರಾಣಿ ಕಲ್ಯಾಣ ದಿನ
- ಅಕ್ಟೋಬರ್, 5 2025: ವಿಶ್ವ ಶಿಕ್ಷಕರ ದಿನ
- ಅಕ್ಟೋಬರ್, 7 2025: ವಿಶ್ವ ಹತ್ತಿ ದಿನ
- ಅಕ್ಟೋಬರ್, 8 2025: ಭಾರತೀಯ ವಾಯುಪಡೆ ದಿನ
- ಅಕ್ಟೋಬರ್, 9 2025: ವಿಶ್ವ ಅಂಚೆ ದಿನ
- ಅಕ್ಟೋಬರ್, 9 2025: ವಿಶ್ವ ದೃಷ್ಟಿ ದಿನ
- ಅಕ್ಟೋಬರ್, 10 2025: ರಾಷ್ಟ್ರೀಯ ಅಂಚೆ ದಿನ
- ಅಕ್ಟೋಬರ್, 10 2025: ವಿಶ್ವ ಮಾನಸಿಕ ಆರೋಗ್ಯ ದಿನ
- ಅಕ್ಟೋಬರ್, 11 2025: ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನ
- ಅಕ್ಟೋಬರ್, 1 2025: ಸ್ತನ ಕ್ಯಾನ್ಸರ್ ಜಾಗೃತಿ ದಿನ
- ಅಕ್ಟೋಬರ್, 15 2025: ಜಾಗತಿಕ ಕೈ ತೊಳೆಯುವ ದಿನ
- ಅಕ್ಟೋಬರ್, 15 2025: ವಿಶ್ವ ವಿದ್ಯಾರ್ಥಿ ದಿನ
- ಅಕ್ಟೋಬರ್, 16 2025: ವಿಶ್ವ ಆಹಾರ ದಿನ
- ಅಕ್ಟೋಬರ್, 16 2025: ವಿಶ್ವ ಬೆನ್ನುಮೂಳೆ ದಿನ
- ಅಕ್ಟೋಬರ್, 16 2025: ವಿಶ್ವ ಅರವಳಿಕೆ ದಿನ
- ಅಕ್ಟೋಬರ್, 17 2025: ಅಂತಾರಾಷ್ಟ್ರೀಯ ಬಡತನ ನಿರ್ಮೂಲನೆ ದಿನ
- ಅಕ್ಟೋಬರ್, 20 2025: ವಿಶ್ವ ಅಂಕಿಅಂಶ ದಿನ
- ಅಕ್ಟೋಬರ್, 21 2025: ಪೊಲೀಸ್ ಸ್ಮರಣಾರ್ಥ ದಿನ
- ಅಕ್ಟೋಬರ್, 24 2025: ವಿಶ್ವಸಂಸ್ಥೆಯ ದಿನ
- ಅಕ್ಟೋಬರ್, 30 2025: ವಿಶ್ವ ಮಿತವ್ಯಯ ದಿನ
- ಅಕ್ಟೋಬರ್, 31 2025: ರಾಷ್ಟ್ರೀಯ ಏಕತಾ ದಿನ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




