ಸಾಮಾನ್ಯವಾಗಿ ಹುಡುಗರಿಗೆ ಗಡ್ಡದ (Beard) ಮೇಲೆ ಎಲ್ಲಿಲ್ಲದ ಪ್ರೀತಿ ಇರುವುದು ಸಾಮಾನ್ಯ. ಆದರೆ ಕೆಲವರಲ್ಲಿ ಗಡ್ಡದಲ್ಲಾಗುವ ಹೊಟ್ಟಿನಿಂದ ಗಡ್ಡವೇ ಬೇಡ ಎಂಬ ತೀರ್ಮಾನಕ್ಕೆ ಬಂದಿರುತ್ತಾರೆ. ಗಡ್ಡದ ಹೊಟ್ಟು ಎಷ್ಟೇ ಚೆಂದವಿದ್ದ ಮುಖವನ್ನಾದರೂ ಕುರೂಪವಾಗಿಸುತ್ತದೆ. ಹಾಗಾಗಿ ನಿಮ್ಮ ಗಡ್ಡಕ್ಕೆ ಸರಿಯಾದ ಆರೈಕೆಯ ಅಗತ್ಯವಿದೆ ಇಲ್ಲವಾದಲ್ಲಿ ಹಾಗೇ ಬಿಟ್ಟರೆ ಒಣಗಬಹುದು ಇದರಿಂದ ಕೆರೆತ ಉಂಟಾಗಿ ಮುಟ್ಟಿದರೆ ಹೊಟ್ಟು ಉದುರುವುದರ ಜೊತೆಗೆ ಚರ್ಮದ ಮೇಲೆ ಬಿಳಿ ಬಿಳಿಯ ಪ್ಯಾಚ್ ಉಂಟಾಗುತ್ತದೆ. ಹಾಗಾಗಿ ಗಡ್ಡದ ಹೊಟ್ಟನ್ನು ದೂರವಿರಿಸಲು ನಿಮಗೆ ಬೇಕಾಗಿರುವುದು ಮೂರು ಹಂತದ ದೈನಂದಿನ ಗ್ರೂಮಿಂಗ್ ದಿನಚರಿ, ಇದನ್ನು ನೀವು ಪಾಲಿಸಬೇಕಾಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. ಗಡ್ಡದ ಹೊಟ್ಟು ಎಂದರೇನು? ಅದು ಹೇಗೆ ಉಂಟಾಗುತ್ತದೆ? ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಅದನ್ನು ಹೇಗೆ ತೊಡೆದು ಹಾಕಬೇಕು ಎಂಬ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
HT ಲೈಫ್ ಸ್ಟೈಲ್ಗೆ ನೀಡಿದ ಸಂದರ್ಶನದಲ್ಲಿ, ಫರಿದಾಬಾದ್ನ ರೆವೈವ್ ಸ್ಕಿನ್, ಹೇರ್ ಮತ್ತು ನೇಲ್ ಕ್ಲಿನಿಕ್ನ ವೈದ್ಯಕೀಯ ನಿರ್ದೇಶಕ ಮತ್ತು ಚರ್ಮರೋಗ ತಜ್ಞ ಡಾ. ಸಂದೀಪ್ ಬಬ್ಬರ್ ಹೇಳುವ ಪ್ರಕಾರ “ತಲೆಹೊಟ್ಟು ನಿಮ್ಮ ನೆತ್ತಿ ಅಥವಾ ಗಡ್ಡದ ಮೇಲೆ ಪರಿಣಾಮ ಬೀರುತ್ತದೆ. ಸೆಬೋರ್ಹೆಕ್ ಡರ್ಮಟೈಟಿಸ್ ಈ ಸ್ಥಿತಿಯ ವೈದ್ಯಕೀಯ ಪದವಾಗಿದೆ. ನಿಮ್ಮ ಗಡ್ಡದ ಒಳಗೆ ಮತ್ತು ಸುತ್ತಲೂ ತುರಿಕೆಯಾಗುವುದು, ಚರ್ಮದ ಚೂರುಗಳಂತೆ ಗಡ್ಡದ ಮೇಲೆ ಬಿದ್ದಿರುವುದು ಇವೆಲ್ಲವೂ ಯಾರಿಗಾದರೂ ಮುಜುಗರ ಉಂಟುಮಾಡುತ್ತದೆ ಎಂಬುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ.
ಇದನ್ನೂ ಓದಿ:
ಡಾ. ಸಂದೀಪ್ ಬಬ್ಬರ್ ಹೇಳುವ ಪ್ರಕಾರ “ಅನುಚಿತ ನೈರ್ಮಲ್ಯವು ತಲೆಹೊಟ್ಟಿಗೆ ಕಾರಣವಲ್ಲ ಎಂದು ಮೊದಲು ತಿಳಿಯುವುದು ಉತ್ತಮ. ಬದಲಾಗಿ, ಮಲಸ್ಸೆಜಿಯಾ ಎಂದು ಕರೆಯಲ್ಪಡುವ ನಿಮ್ಮ ಚರ್ಮದ ಮೇಲೆ ಯೀಸ್ಟ್ ಬೆಳವಣಿಗೆಯು ಆಗಾಗ ತಲೆಹೊಟ್ಟಿಗೆ ಕಾರಣವಾಗುತ್ತದೆ. ಹೆಚ್ಚಿನ ಆರೋಗ್ಯವಂತ ವಯಸ್ಕರಲ್ಲಿ ಈ ಶಿಲೀಂಧ್ರ ಯಾವುದೇ ದುಷ್ಪರಿಣಾಮಗಳಿಲ್ಲದೆ ನೆತ್ತಿಯ ಮೇಲೆ ವಾಸಿಸುತ್ತವೆ. ಗಡ್ಡವು ನೈಸರ್ಗಿಕ ಎಸ್ಪಿಎಫ್ ಆಗಿ ಕೆಲಸ ಮಾಡುವುದು ಮಾತ್ರವಲ್ಲದೆ, ಚರ್ಮದಿಂದ ತೇವಾಂಶವನ್ನು ಮೇಲ್ಮೈಯಿಂದ ಮೇಲಕ್ಕೆ ಎಳೆಯುವ ಮೂಲಕ ‘ಬಕ್ಸ್’ ಉಂಟು ಮಾಡುತ್ತದೆ, ಆದರೆ ಇಲ್ಲಿ ಅದು ವೇಗವಾಗಿ ಆವಿಯಾಗುತ್ತದೆ ಎಂಬ ಅಂಶವು ಸವಾಲಾಗಿ ಪರಿಣಮಿಸುತ್ತದೆ ಎಂದು ಡಾ. ಸಂದೀಪ್ ಬಬ್ಬರ್ ವಿವರಿಸಿದರು. ಪರಿಣಾಮವಾಗಿ, ಕೂದಲಿನ ಕೆಳಗಿರುವ ಚರ್ಮವು ವಿಶೇಷವಾಗಿ ಶುಷ್ಕ ಮತ್ತು ಚಪ್ಪಟೆಯಾಗಬಹುದು, ಇದು ಹೊಟ್ಟಿಗೆ ಕಾರಣವಾಗಬಹುದು.
ಇದನ್ನೂ ಓದಿ: Beard Grooming: ನಿಮ್ಮ ಗಡ್ಡವನ್ನು ಅಂದಚೆಂದಗೊಳಿಸಲು ಸಲಹೆಗಳು: ಗಡ್ಡವನ್ನು ಪೋಷಿಸಲು ನವ ಮಾರ್ಗಗಳು ಇಲ್ಲಿವೆ!
ಡಾ. ಸಂದೀಪ್ ಬಬ್ಬರ್ ಅವರ ಪ್ರಕಾರ, ಕ್ಲಿಪ್ಪರ್ಗಳನ್ನು ಹೊರ ತೆಗೆಯುವ ಮೊದಲು ಮತ್ತು ನಿಮ್ಮ ಪ್ರೀತಿಯ ಗಡ್ಡವನ್ನು ತ್ಯಜಿಸುವ ಮೊದಲು ಪ್ರಯತ್ನಿಸಬೇಕಾದ ಕೆಲವು ಸುಲಭ ಪರಿಹಾರಗಳ ಬಗ್ಗೆ ಇಲ್ಲಿದೆ ಮಾಹಿತಿ!
ಗಡ್ಡಕ್ಕೆ ಬ್ರಷ್ ಬಳಸಿ, ಸತ್ತ ಜೀವಕೋಶಗಳನ್ನು ತೊಡೆದು ಹಾಕಿ: ನಿಮ್ಮ ಕೂದಲನ್ನು ಪಳಗಿಸಲು, ಗಂಟುಗಳನ್ನು ತೆಗೆಯಲು ಮತ್ತು ಗಡ್ಡದ ಕೆಳಗೆ ಒಣ ಚರ್ಮವು ಸಿಪ್ಪೆ ಸುಲಿಯುತ್ತಿದ್ದರೆ ಅದನ್ನು ತೆಗೆದು ಹಾಕಲು ಪ್ರತಿದಿನ ಗಡ್ಡ ಸ್ವಚ್ಛ ಮಾಡಿಕೊಳ್ಳಲು ಇರುವ ಬ್ರಷ್ ಬಳಸಿ. ಒಮ್ಮೆ ಸರಿಯಾಗಿ ಕ್ಲೀನ್ ಮಾಡಿಕೊಂಡ ಮೇಲೆ ಗಡ್ಡವನ್ನು ಸರಿಯಾಗಿ ತೊಳೆಯಲು ಮರೆಯಬೇಡಿ.
ಪ್ರತಿದಿನ ಸ್ವಚ್ಛಗೊಳಿಸಿ: ನೀವು ಪ್ರತಿದಿನ ಬ್ರಷ್ ಮಾಡುತ್ತೀರಿ! ಆದರೆ ನಿಮ್ಮ ದೈನಂದಿನ ಗ್ರೂಮಿಂಗ್ ದಿನಚರಿಯಲ್ಲಿ ನೀವು ಶುದ್ಧೀಕರಣ ಮಾಡಿಕೊಳ್ಳುವುದನ್ನು ಸಹ ಸೇರಿಸಬೇಕು. ಸ್ನಾನ ಮಾಡಿಕೊಳ್ಳುವಾಗ ನಿಮ್ಮ ಗಡ್ಡ ಮತ್ತು ಇಡೀ ಮುಖಕ್ಕೆ ಉತ್ತಮ ಕ್ಲೆನ್ಸರ್ ಹಚ್ಚಿ ತೊಳೆದುಕೊಳ್ಳಬೇಕು.
ಗಡ್ಡಕ್ಕೆ ಮಾಯಿಶ್ಚರೈಸರ್ ಹಚ್ಚಿರಿ: ನಿಮ್ಮ ಗಡ್ಡವನ್ನು ಹೈಡ್ರೇಟ್ ಮಾಡಲು ಮಾಯಿಶ್ಚರೈಸರ್ ಅನ್ನು ಬಳಸುವುದು ಅಥವಾ ಫಿನಿಶರ್ ಆಗಿ ಉತ್ತಮ ಕಾರ್ಯ ನಿರ್ವಹಿಸುವ ಉತ್ತಮ ಗುಣಮಟ್ಟದ ಎಣ್ಣೆಗೆ ಹಣವನ್ನು ಖರ್ಚು ಮಾಡುವುದರ ನಡುವೆ ಯಾವುದನ್ನಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಸಣ್ಣ ಗಡ್ಡ ಇರುವವರಿಗೆ ಸ್ವಲ್ಪ ಮಾಯಿಶ್ಚರೈಸರ್ ಹಚ್ಚಿದರೆ ಸಾಕಾಗುತ್ತದೆ ಆದರೆ ದೊಡ್ಡ ಗಡ್ಡ ಇರುವವರು ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಒಮ್ಮೆ ನೀವು ಈ ದಿನಚರಿಯನ್ನು ನಿರಂತರವಾಗಿ ಅನುಸರಿಸಿದರೆ, ಗಡ್ಡದ ಹೊಟ್ಟು ಕಣ್ಮರೆಯಾಗುವುದರಲ್ಲಿ ಸಂಶಯವಿಲ್ಲ.
ನಿಮ್ಮ ಗಡ್ಡದ ತಲೆಹೊಟ್ಟು ಮತ್ತೆ ಕಾಣಿಸಿಕೊಳ್ಳದಿರಲು ಮೇಲೆ ಹೇಳಿದ ಮೂರು ಹಂತದ ಪ್ರಕ್ರಿಯೆಯನ್ನು ಅನುಸರಿಸುವುದು ಬಹಳ ಮುಖ್ಯ. ಜೊತೆಗೆ ನಿಮ್ಮ ಪ್ರವೃತ್ತಿಗಳನ್ನು ಎಂದಿಗೂ ಮರೆಯಬಾರದು. ನೀವು ಬಿಗಿಯಾದ ಅಥವಾ ತುರಿಕೆ ಚರ್ಮವನ್ನು ಹೊಂದಿದ್ದೀರಾ? ಹಾಗಾದಲ್ಲಿ ದಿನವೂ ಮಾಯಿಶ್ಚರೈಸರ್ ಹಚ್ಚಿಕೊಳ್ಳುವುದನ್ನು ಮರೆಯಬಾರದು. ಹೊಟ್ಟು ಸ್ವಲ್ಪ ಸಮಯದ ನಂತರ ಕಡಿಮೆ ಆದಲ್ಲಿ ನಿಮ್ಮ ದಿನಚರಿಯನ್ನು ಮರೆಯದೇ ಪ್ರತಿದಿನ ಪಾಲನೆ ಮಾಡಬೇಕು.
ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:19 pm, Thu, 29 June 23