ಸಂಬಳ(Salary) ವಾದ ಮರು ದಿನವೇ ದುಡ್ಡೆಲ್ಲಾ ಖಾಲಿ. ದುಡ್ಡು ಕೈಯಲ್ಲಿ ಉಳಿಯಲ್ಲ ಎನ್ನುವವರೇ ಜಾಸ್ತಿ. ನೀವೂ ಕೂಡ ಇದೇ ರೀತಿಯ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ ಈ ಕೆಳಗಿನ ಸಿಂಪಲ್ ಟ್ರಿಕ್ಸ್ ಪ್ರಯತ್ನಿಸಿ. ಇದರಿಂದಾಗಿ ಸಣ್ಣ ಮಟ್ಟದಲ್ಲಿ ದುಡ್ಡು ಉಳಿಸಬಹುದು. ಇಂದು ನೀವು ಸಣ್ಣ ಮಟ್ಟದಲ್ಲಿ ಮಾಡಿದ ಉಳಿತಾಯ ಮುಂದೆ ಪ್ರಯೋಜನವಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಈ ಕೆಳಗಿನ 5 ಸಲಹೆಗಳನ್ನು ಪಾಲಿಸಿ. ನಿಮ್ಮ ಆರ್ಥಿಕ ಪ್ರಯಾಣದಲ್ಲಿ ನೀವು ಪ್ರಗತಿ ಸಾಧಿಸಲು ಬಯಸಿದರೆ, ಮಿತವ್ಯಯದ ಜೀವನವು ಖಂಡಿತವಾಗಿಯೂ ಯೋಗ್ಯವಾಗಿರುತ್ತದೆ.
ಅಡುಗೆ ಪ್ರಮಾಣ:
ಇಂದಿನ ಬದಲಾದ ಜೀವನಶೈಲಿಯಿಂದಾಗಿ ಒತ್ತಡದ ಜೀವನದ ನಡುವೆ ಮನೆಯಲ್ಲಿಯೇ ಅಡುಗೆ ಮಾಡುವುದು ತೀರಾ ಕಡಿಮೆ. ಹೊರಗಡೆಯಿಂದಾನೇ ಆರ್ಡರ್ ಮಾಡಿ ಸೇವಿಸುವವರೇ ಅಧಿಕ. ಜೊತೆಗೆ ಒಂದು ಹೊತ್ತಿಗೆ ಆಗುವಷ್ಟು ಮಾಡಿ ಮತ್ತೇ ಎರಡು ಹೊತ್ತು ಹೊರಗಡೆ ತಿನ್ನುವುದು. ಇಂತಹ ಅಭ್ಯಾಸವನ್ನು ಆದಷ್ಟು ಬಿಟ್ಟು ಬಿಡಿ. ಬದಲಾಗಿ ನಿಮ್ಮ ಮನೆಯಲ್ಲಿ ಇಬ್ಬರು ಅಥವಾ ಒಬ್ಬರೇ ಇದ್ದರೆ ಎರಡು ಹೊತ್ತಿಗಾಗುವಷ್ಟು ಅಡುಗೆ ತಯಾರಿಸಿ. ಇದರಿಂದಾಗಿ ನೀವು ಪ್ರತಿ ದಿನ ಒಂದಷ್ಟು ಹಣ ಉಳಿಸಬಹುದು. ಜೊತೆಗೆ ಒಂದೇ ಸಲ ಎರಡು ಹೊತ್ತಿಗಾಗುವಷ್ಟು ಆಹಾರ ತಯಾರಿಸುವುದರಿಂದ ಅಡುಗೆಗೆ ಬಳಸುವ ಅನಿಲವನ್ನು ಉಳಿಸಬಹುದು.
ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಿ:
ನಿಮಗೆ ಒಂದು ಸಲ ಏನಾಪ್ಪ ಇದು ಅಂತಾ ಅನಿಸಬಹುದು. ಹೌದು ಹಣ ಉಳಿಸಿ ಎಂದು ಹೇಳಿ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಿ ಎಂದು ಹೇಳಿದಾಕ್ಷಣ ಗೊಂದಲಕೊಳಗಾಗಬೇಡಿ. ನೀವು ನಿಜವಾಗಿ ಮಿತವಾಗಿ ಹಣವನ್ನು ವ್ಯಯ ಮಾಡಲು ಯೋಜಿಸಿದರೆ ಆದಷ್ಟು ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಿ. ಇದು ಹೇಗೆ ಅಂತಾ ಯೋಚಿಸುತ್ತೀದ್ದೀರಾ? ಇಲ್ಲಿದೆ ಮಾಹಿತಿ. ನೀವು ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಿದಾಗ, ವೈಯಕ್ತಿಕವಾಗಿ ಶಾಪಿಂಗ್ ಮಾಡುವುದಕ್ಕೆ ಹೋಲಿಸಿದರೆ ನೀವು ಉತ್ತಮ ಚೌಕಾಶಿಯನ್ನು ಪಡೆಯುತ್ತೀರಿ, ಏಕೆಂದರೆ ಇ-ಕಾಮರ್ಸ್ ಮಧ್ಯವರ್ತಿಗಳನ್ನು ನಿವಾರಿಸುತ್ತದೆ. ಅಲ್ಲದೆ, ನೀವು ಶಾಪಿಂಗ್‌ಗೆ ಹೋಗದೆ ಮತ್ತು ಮನೆಯಲ್ಲಿ ಕುಳಿತುಕೊಳ್ಳುವ ಮೂಲಕ ಪೆಟ್ರೋಲ್ ವೆಚ್ಚವನ್ನು ಉಳಿಸುತ್ತೀರಿ. ಬಿಗ್ ಬಿಲಿಯನ್ ಡೇಸ್ ಮುಂತಾದ ಆಫರ್ ಗಳು ಇರುವಂತಹ ಸಮಯದಲ್ಲಿ ಹಾಗೂ ರಿಯಾಯಿತಿಗಳು ಇರುವಂತಹ ಸಮಯದಲ್ಲಿ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಿ.
ಇದನ್ನೂ ಓದಿ: ಸಾಕ್ಸ್ ಧರಿಸಿ ಮಲಗುವುದರಿಂದ ಸಾಕಷ್ಟು ಪ್ರಯೋಜನಗಳಿವೆ, ಈ 1 ತಪ್ಪು ದೊಡ್ಡ ನಷ್ಟವನ್ನು ಉಂಟುಮಾಡಬಹುದು
ಕೇಬಲ್ ಚಂದಾದಾರಿಕೆ(Subscription)ಯನ್ನು ಕಡಿಮೆ ಮಾಡಿ:
ಓಟಿಟಿ ಪ್ಲಾಟ್‌ಫಾರ್ಮ್‌ಗಳ ಚಂದಾದಾರಿಕೆಗಳನ್ನು ನೀವು ಹೊಂದಿದ್ದರೆ ಅದಕ್ಕೆ ವ್ಯಯ ಮಾಡುವ ದುಡ್ಡನ್ನು ಆದಷ್ಟು ಕಡಿಮೆ ಮಾಡಿ. ಇದಕ್ಕೆ ಉತ್ತಮ ಪರಿಹಾರವೆಂದರೆ ನೀವು OTT ಖಾತೆಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು. ಇದರಿಂದಾಗಿ ಚಂದಾದಾರಿಕೆ ಮೊತ್ತವನ್ನು ಸಮಾನಾಗಿ ಹಂಚಿಕೊಳ್ಳಬಹುದು.
ಆಫ್-ಸೀಸನ್ ಶಾಪಿಂಗ್ ಮಾಡಿ:
ಉದಾಹರಣೆಗೆ ಹಬ್ಬಗಳ ಸೀಸನ್ ಗಳಲ್ಲಿ ಬಟ್ಟೆಗಳ ತುಂಬಾ ದುಬಾರಿಯಾಗಿರುತ್ತದೆ. ಆದ್ದರಿಂದ ಆದಷ್ಟು ಹಬ್ಬಗಳ ಸೀಸನ್ ಮುಂಚಿತವಾಗಿಯೇ ಶಾಪಿಂಗ್ ಮಾಡಿ ಬಿಡಿ. ಇದರಿಂದಾಗಿ ಸಾಕಷ್ಟು ಮಟ್ಟದಲ್ಲಿ ದುಡ್ಡು ಉಳಿಸಬಹುದು.
ಇದನ್ನೂ ಓದಿ: ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗಿಡಲು ವಿವಿಧ ವಿನ್ಯಾಸದ ಉಡುಪುಗಳು ಇಲ್ಲಿವೆ
ಕಾಫಿ ನೀವೇ ತಯಾರಿಸಿ:
ಸಾಕಷ್ಟು ಜನರಿಗೆ ದಿನದಲ್ಲಿ ಎರಡು ಮೂರು ಬಾರಿ ಚಹಾ ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಆದ್ದರಿಂದ ಕಾಫಿ ಕೆಫೆಗಳಿಗೆ ಅನಿವಾರ್ಯವಾಗಿ ಹೋಗಲೇ ಬೇಕಾಗುತ್ತದೆ. ಆದ್ದರಿಂದ ಆದಷ್ಟು ದುಡ್ಡು ಉಳಿಸಲು ತ್ವರಿತ ಕಾಫಿ ಬ್ರಾಂಡ್‌ಗಳು ಮತ್ತು ಕಾಫಿ ಯಂತ್ರಗಳ ಹಲವು ಆಯ್ಕೆಗಳೊಂದಿಗೆ ನೀವು ಖಂಡಿತವಾಗಿಯೂ ಪ್ರತಿ ದಿನ ರುಚಿಕರವಾದ ಕಾಫಿಯನ್ನು ಸವಿಯಬಹುದಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 2:30 pm, Tue, 13 December 22