AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kitchen Tips : ಬೆಳ್ಳುಳ್ಳಿಯನ್ನು ಹೀಗೆ ಸಂಗ್ರಹಿಸಿಟ್ಟರೆ ತಿಂಗಳಾದ್ರೂ ತಾಜಾವಾಗಿರುತ್ತೆ

ಸಾಮಾನ್ಯವಾಗಿ ಎಲ್ಲರ ಮನೆಯ ಅಡುಗೆ ಮನೆಯಲ್ಲಿ ಇರುವ ಸಾಮಗ್ರಿಗಳಲ್ಲಿ ಈ ಬೆಳ್ಳುಳ್ಳಿ ಕೂಡ ಒಂದು. ಒಗ್ಗರಣೆಗೆ ಈ ಬೆಳ್ಳುಳ್ಳಿ ಇಲ್ಲದೇ ಹೋದರೆ ಅಡುಗೆಯು ರುಚಿಸುವುದೇ ಇಲ್ಲ. ಆಹಾರದ ಘಮ ಹಾಗೂ ರುಚಿಯನ್ನು ಹೆಚ್ಚಿಸುವ ಈ ಬೆಳ್ಳುಳ್ಳಿಯ ಸಿಪ್ಪೆಯನ್ನು ಎಸೆದು ಬಿಟ್ಟರೆ ಇದನ್ನು ವಾರದವರೆಗೂ ಸಂಗ್ರಹಿಸಿಡುವುದು ಕಷ್ಟಕರ. ಹೀಗಾಗಿ ಈ ಸಲಹೆಗಳನ್ನು ಪಾಲಿಸಿದರೆ ತಿಂಗಳುಗಟ್ಟಲೇ ಬೆಳ್ಳುಳ್ಳಿಯನ್ನು ತಾಜಾವಾಗಿಡಬಹುದು.

Kitchen Tips : ಬೆಳ್ಳುಳ್ಳಿಯನ್ನು ಹೀಗೆ ಸಂಗ್ರಹಿಸಿಟ್ಟರೆ ತಿಂಗಳಾದ್ರೂ ತಾಜಾವಾಗಿರುತ್ತೆ
ಬೆಳ್ಳುಳ್ಳಿ
ಸಾಯಿನಂದಾ
| Edited By: |

Updated on: Sep 17, 2024 | 3:13 PM

Share

ಕೆಲವರಿಗೆ ಬೆಳ್ಳುಳ್ಳಿಯೆಂದರೆ ಅಷ್ಟಕಷ್ಟೇ. ಹೀಗಾಗಿ ಬೆಳ್ಳುಳ್ಳಿಯನ್ನು ತಿನ್ನಲು ಇಷ್ಟ ಪಡುವುದೇ ಇಲ್ಲ. ಬೆಳ್ಳುಳ್ಳಿ ಅಡುಗೆಗೆ ಹೊಸ ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯವನ್ನೂ ಕಾಪಾಡುತ್ತದೆ. ಬೆಳ್ಳುಳ್ಳಿ ವಿಟಮಿನ್ ಸಿ, ಕೆ, ಫೋಲೇಟ್, ನಿಯಾಸಿನ್ ಮತ್ತು ಥಯಾಮಿನ್‌ನ ಉತ್ತಮ ಮೂಲವಾಗಿದ್ದು, ಬೆಳ್ಳುಳ್ಳಿ ವಿವಿಧ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹೀಗೆ ಮಾಡಿದ್ದಲ್ಲಿ ಈ ಬೆಳ್ಳುಳ್ಳಿಯನ್ನು ದೀರ್ಘಕಾಲದವರೆಗೆ ಸಂಗ್ರಹಿಸಿಡಬಹುದು.

ಬೆಳ್ಳುಳ್ಳಿ ತಾಜಾವಾಗಿಡಲು ಇಲ್ಲಿದೆ ಟಿಪ್ಸ್

  • ಬೆಳ್ಳುಳ್ಳಿಯನ್ನು ಖರೀದಿಸುವಾಗ, ತಿಳಿ ಗುಲಾಬಿ ಬಣ್ಣದ ಬೆಳ್ಳುಳ್ಳಿ, ಮೊಳಕೆಯೊಡೆದ ಬೆಳ್ಳುಳ್ಳಿಯನ್ನು ಖರೀದಿಸಲೇಬೇಡಿ. ದೀರ್ಘಕಾಲದವರೆಗೆ ಶೇಖರಿಸಿಡಲು ಬೆಳ್ಳುಳ್ಳಿಯನ್ನು ಖರೀದಿಸುತ್ತಿದ್ದರೆ, ದೊಡ್ಡ ಉಂಡೆಗಳನ್ನೂ ಮತ್ತು ತೆಳುವಾದ ಸಿಪ್ಪೆಯೊಂದಿರುವ ಬೆಳ್ಳುಳ್ಳಿ ಖರೀದಿಸಿ. ಇದನ್ನು ತೇವಾಂಶ ಮತ್ತು ಸೂರ್ಯನ ಬೆಳಕಿನಿಂದ ದೂರವಿಡುವ ಮೂಲಕ ಇದು ಮೊಳಕೆಯೊಡೆಯುವುದನ್ನು ತಪ್ಪಿಸಿ.
  • ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಗಾಳಿಯಾಡದ ಜಾರ್ ನಲ್ಲಿ ಹಾಕಿ ಫ್ರಿಜ್‌ನಲ್ಲಿ ಶೇಖರಿಸಿಡುವ ಮೂಲಕ ಒಂದು ವಾರದವರೆಗೆ ಬಳಸಬಹುದು. ಆದರೆ ನೀವು ಬೆಳ್ಳುಳ್ಳಿ ಹಾಕುವ ಜಾರ್ ತೇವಾಂಶವಿದೆಯೇ ಎಂದು ಖಚಿತಪಡಿಸಿಕೊಳ್ಳಿ, ಇಲ್ಲದಿದ್ದರೆ ಈ ಬೆಳ್ಳುಳ್ಳಿ ಹಾಳಾಗಬಹುದು.
  • ಬೆಳ್ಳುಳ್ಳಿಯನ್ನು ಸಂಗ್ರಹಿಸಲು ಸೆಣಬಿನ ಚೀಲ ಅತ್ಯುತ್ತಮ ಆಯ್ಕೆ ಎನ್ನಬಹುದು. ಸೆಣಬಿನ ಚೀಲಗಳು ಗಾಳಿಯಾಡುವ ಕಾರಣ, ಇದು ಬೆಳ್ಳುಳ್ಳಿಯನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ಸಹಾಯ ಮಾಡುತ್ತದೆ. ಹೀಗಾಗಿ ಮನೆಯಲ್ಲಿ ಕಡಿಮೆ ಬೆಳಕು ಇರುವ ಮತ್ತು ತಂಪಾಗಿರುವ ಸ್ಥಳದಲ್ಲಿ ಈ ಸೆಣಬಿನ ಚೀಲವನ್ನು ಇರಿಸುವುದು ಮರೆಯಬೇಡಿ.
  • ಬೆಳ್ಳುಳ್ಳಿಯನ್ನು ಸಂಗ್ರಹಿಸಲು ಹತ್ತಿ ಬಟ್ಟೆಯನ್ನು ಅಥವಾ ಹತ್ತಿ ಬಟ್ಟೆಯ ಚೀಲವನ್ನು ಸಹ ಬಳಸಬಹುದು. ಈ ಹತ್ತಿ ಬಟ್ಟೆಯಲ್ಲಿ ಗಾಳಿಯಾಡುವ ಕಾರಣ ಫ್ರೆಶ್ ಆಗಿರುತ್ತದೆ. ಆದರೆ ಈ ಹತ್ತಿ ಬಟ್ಟೆಯನ್ನು ಎರಡು ಮೂರು ಬಾರಿ ಮಡಚಿ ಬೆಳ್ಳುಳ್ಳಿಯನ್ನು ಹಾಕಿ ಕಟ್ಟಿಟ್ಟರೆ ಬೇಗನೇ ಹಾಳಾಗುವುದಿಲ್ಲ.
  • ನೀವು ಸಿಪ್ಪೆ ಸುಲಿದ ಬೆಳ್ಳುಳ್ಳಿಯು ಬೇಗನೇ ಹಾಳಾಗುತ್ತದೆ. ಹೀಗಾಗಿ ಇದನ್ನು ಗಾಳಿಯಾಡದ ಜಾರ್ ಅಥವಾ ಚೀಲದಲ್ಲಿ ಸಂಗ್ರಹಿಸಿ ಫ್ರಿಡ್ಜ್‌ನಲ್ಲಿಡಿ. ಇಲ್ಲದಿದ್ದರೆ ಬೆಳ್ಳುಳ್ಳಿ ಪೇಸ್ಟ್ ಮಾಡಿ ಹಾಳಾಗದಂತೆ ತಾಜಾವಾಗಿ ಸಂಗ್ರಹಿಸಿಡುವುದು ಉತ್ತಮ ಮಾರ್ಗವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಸ್ಕತ್​​ನಲ್ಲಿ ಭಾರತೀಯರಿಂದ ಪ್ರಧಾನಿ ಮೋದಿಗೆ ಯಕ್ಷಗಾನ, ನೃತ್ಯದ ಸ್ವಾಗತ
ಮಸ್ಕತ್​​ನಲ್ಲಿ ಭಾರತೀಯರಿಂದ ಪ್ರಧಾನಿ ಮೋದಿಗೆ ಯಕ್ಷಗಾನ, ನೃತ್ಯದ ಸ್ವಾಗತ
3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ
3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ