AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kitchen Tips: ಟೊಮೆಟೊವನ್ನು ಹೆಚ್ಚು ದಿನಗಳವರೆಗೆ ಫ್ರೆಶ್ ಆಗಿ ಇರಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

ಪ್ರತಿಯೊಬ್ಬರ ಅಡುಗೆ ಮನೆಯಲ್ಲೂ ಲಭ್ಯವಿರುವ ಟೊಮೆಟೊ ಭಕ್ಷ್ಯಗಳ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ಆರೋಗ್ಯ ಹಾಗೂ ಚರ್ಮಕ್ಕೂ ಅಷ್ಟೇ ಪ್ರಯೋಜನಕಾರಿಯಾಗಿದೆ. ಮಾರುಕಟ್ಟೆಯಿಂದ ತಂದ ಟೊಮೆಟೊಯನ್ನು ಹೆಚ್ಚು ದಿನಗಳವರೆಗೆ ಇಟ್ಟರೆ ಹಾಳಾಗುತ್ತದೆ. ಹೀಗಾಗಿ ಖಾದ್ಯಗಳ ರುಚಿ ಹೆಚ್ಚಿಸುವ ಟೊಮೆಟೊ ಹೆಚ್ಚು ದಿನಗಳ ಕಾಲ ತಾಜಾವಾಗಿ ಸಂಗ್ರಹಿಸಿಡುವುದು ಹೇಗೆ? ಈ ಕೆಲವು ಸಲಹೆಗಳನ್ನು ತಪ್ಪದೇ ಪಾಲಿಸಿ.

Kitchen Tips: ಟೊಮೆಟೊವನ್ನು ಹೆಚ್ಚು ದಿನಗಳವರೆಗೆ ಫ್ರೆಶ್ ಆಗಿ ಇರಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಸಾಂದರ್ಭಿಕ ಚಿತ್ರ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Dec 10, 2024 | 4:04 PM

Share

ಭಾರತೀಯ ಅಡುಗೆಯಲ್ಲಿ ಟೊಮೆಟೊಗೆ ಅತ್ಯಗತ್ಯ ತರಕಾರಿಗಳಲ್ಲಿ ಒಂದಾಗಿದೆ. ಯಾವುದೇ ಖಾದ್ಯಗಳನ್ನು ಮಾಡಲಿ, ಟೊಮೆಟೊ ಹಾಕಿದರೆ ರುಚಿಯೇ ಹೆಚ್ಚು. ಅದಲ್ಲದೇ ಅಡುಗೆಯಲ್ಲಿ ಮಾತ್ರವಲ್ಲದೆ ಸಲಾಡ್‌ಗಳು, ಸ್ಯಾಂಡ್‌ವಿಚ್‌ಗಳು, ಬರ್ಗರ್‌ಗಳು, ಪಿಜ್ಜಾಗಳ ತಯಾರಿಕೆಯಲ್ಲಿ ಈ ಟೊಮೆಟೊವನ್ನು ಹೇರಳವಾಗಿ ಬಳಸಲಾಗುತ್ತದೆ. ಆದರೆ ತರಕಾರಿಯನ್ನು ಸಂಗ್ರಹಿಸಿಡುವುದು ಕಷ್ಟದ ಕೆಲಸ. ಶೇಖರಿಸಿಡುವಾಗ ಸ್ವಲ್ಪ ವ್ಯತ್ಯಾಸವಾದರೂ ಕೂಡ ಟೊಮೊಟೊ ಬೇಗನೆ ಹಾಳಾಗುತ್ತದೆ. ಹಾಗಾದ್ರೆ ಈ ತರಕಾರಿಯನ್ನು ಬಹಳ ದಿನಗಳವರೆಗೆ ಕೆಡದಂತೆ ಕಾಪಾಡಲು ಈ ಕೆಲವು ವಿಧಾನಗಳನ್ನು ಅನುಸರಿಸುವುದು ಉತ್ತಮ.

  • ಮಾರುಕಟ್ಟೆಯಿಂದ ಟೊಮೆಟೊ ತಂದ ನಂತರ ತೊಳೆದು ಫ್ರಿಡ್ಜ್ ನಲ್ಲಿ ಇಡುವುದನ್ನು ಆದಷ್ಟು ತಪ್ಪಿಸಿ. ಹೆಚ್ಚು ತೇವವಾಗಿದ್ದರೆ ಚೆನ್ನಾಗಿ ಒರೆಸಿ, ನಂತರ ಫ್ರಿಡ್ಜ್ ನಲ್ಲಿ ಇರಿಸುವುದು ಉತ್ತಮ.
  • ಉಳಿದ ತರಕಾರಿಗಳೊಂದಿಗೆ ಟೊಮೆಟೊ ಇಡಬೇಡಿ. ಉಳಿದ ತರಕಾರಿ ತೂಕದಿಂದ ಟೊಮೆಟೊ ಅಪ್ಪಚ್ಚಿ ಆಗುತ್ತದೆ. ಅದಲ್ಲದೇ ಉಳಿದ ಹಣ್ಣುಗಳು ಹಾಗೂ ತರಕಾರಿಗಳೊಂದಿಗೆ ಇಟ್ಟರೆ ಕೊಳೆತು ಹೋಗುವ ಸಾಧ್ಯತೆಯೂ ಹೆಚ್ಚಿರುತ್ತದೆ.
  • ಫ್ರಿಜ್ ನಲ್ಲಿ ಟೊಮೆಟೊಗಳನ್ನು ಸಂಗ್ರಹಿಸಿಡುವಾಗ ಪೇಪರ್ ನಲ್ಲಿ ಸುತ್ತಿಡುವುದನ್ನು ಮರೆಯಬೇಡಿ. ಈ ರೀತಿ ಇಟ್ಟರೆ ತೇವಾಂಶವು ಶುಷ್ಕವಾಗಿದ್ದು, ಹೆಚ್ಚು ದಿನಗಳವರೆಗೆ ಫ್ರೆಶ್ ಆಗಿರಲು ಸಾಧ್ಯ.
  • ಟೊಮೆಟೊಗಳನ್ನು ಅರಿಶಿನ ನೀರಿನಲ್ಲಿ ತೊಳೆಯುವ ಅಭ್ಯಾಸವಿರಲಿ. ಮಾರುಕಟ್ಟೆಯಿಂದ ತಂದ ಟೊಮೆಟೊವನ್ನು ಅರಿಶಿನ ನೀರಿನಲ್ಲಿ ತೊಳೆದು ಒಣಗಿಸಿ. ಹೀಗೆ ಮಾಡಿದ್ರೆ ಟೊಮೆಟೊ ತಾಜಾತನದಿಂದ ಕೂಡಿರುತ್ತದೆ.
  • ಟೊಮೆಟೊಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಸಂಗ್ರಹಿಸಿಡಬೇಡಿ. ಅವುಗಳು ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಕಾರಣ ಟೊಮಾಟೊವು ತ್ವರಿತವಾಗಿ ಕೊಳೆಯಬಹುದು. ಹೀಗಾಗಿ ಟೊಮಾಟೊಗಳನ್ನು ಪ್ಲಾಸ್ಟಿಕ್ ಚೀಲದ ಬದಲಿಗೆ ಗಾಳಿಯಾಡದ ಪಾತ್ರೆಗಳಲ್ಲಿ, ಬುಟ್ಟಿಯಲ್ಲಿ ಸಂಗ್ರಹಿಸಿಡುವುದು ಉತ್ತಮ.
  • ಅಡುಗೆಗೆ ಬಳಸುವಾಗ ಹೆಚ್ಚು ಹಣ್ಣಾಗಿರುವ ಟೊಮೆಟೋವನ್ನು ಮೊದಲು ಬಳಸಿ. ಮಾಗಿದ ಟೊಮೆಟೊಗಳಿದ್ದರೆ ಫ್ರಿಡ್ಜ್ ನಲ್ಲಿ ಸಂಗ್ರಹಿಸಿಡಿ.
  • ಟೊಮೆಟೊಗಳು ಹೆಚ್ಚು ದಿನಗಳವರೆಗೆ ತಾಜಾವಾಗಿರಿಸಲು ಕಾಂಡದ ಬದಿಯನ್ನು ಕೆಳಗೆ ಇರಿಸಿ. ಅದಲ್ಲದೇ, ಸೂರ್ಯನ ಬೆಳಕಿನಿಂದ ದೂರ ಇರಿಸುವುದು ಅಷ್ಟೇ ಮುಖ್ಯ.
  • ಟೊಮೆಟೊ ಖರೀದಿಸುವಾಗ ಹಸಿರು ಬಣ್ಣವಿರುವ, ಸರಿಯಾಗಿ ಹಣ್ಣಾಗಿರದ ಟೊಮೆಟ್ಯೋ ಖರೀದಿಸಿ, ಇದು ದೀರ್ಘಕಾಲದವರೆಗೆ ಫ್ರೆಶ್ ಆಗಿರಲು ಸಾಧ್ಯ.
  • ಹೆಚ್ಚು ಹಣ್ಣಾದ ಟೊಮೆಟೊಗಳನ್ನು ಖರೀದಿಸಿದ್ದರೆ ಅವುಗಳನ್ನು ಪ್ಯೂರಿ ತಯಾರಿಸಿ ಸಂಗ್ರಹಿಸಿಟ್ಟರೆ ಉತ್ತಮ. ಮಾರುಕಟ್ಟೆಯಿಂದ ತಂದ ಟೊಮೆಟೊಗಳನ್ನು ಸರಿಯಾಗಿ ಸ್ವಚ್ಛಗೊಳಿಸಿ. ಆ ಬಳಿಕ ತುಂಡುಗಳಾಗಿ ಕತ್ತರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ ಪ್ಯೂರಿ ತಯಾರಿಸಿಕೊಳ್ಳಿ. ಇದನ್ನು ಗಾಳಿಯಾಡದ ಕಂಟೇನರ್‌ನಲ್ಲಿ ಹಾಕಿ ಫ್ರಿಡ್ಜ್ ನಲ್ಲಿಟ್ಟು ಬಳಸಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್