International Mountain Day 2024 : ಭಾರತದ ಅತೀ ಎತ್ತರದ ಐದು ಪರ್ವತಗಳು ಇವೆ ನೋಡಿ

ಜೀವಸಂಕುಲದ ಉಳಿವಿಗಾಗಿ ಪರ್ವತಗಳು ವಹಿಸುವ ಪಾತ್ರದ ಕುರಿತು ಹಾಗೂ ಪರ್ವತಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಅಂತಾರಾಷ್ಟ್ರೀಯ ಪರ್ವತ ದಿನವನ್ನು ಆಚರಿಸಲಾಗುತ್ತದೆ. ಪರ್ವತಗಳ ಅಭಿವೃದ್ಧಿಯ ಬಗ್ಗೆ ಗಮನ ಕೊಡಲು ಹಾಗೂ ಪರಿಸರದ ನಡುವೆ ಒಂದೊಳ್ಳೆ ಸಂಬಂಧವನ್ನು ಸೃಷ್ಟಿಸುವ ಉದ್ದೇಶವನ್ನು ಅಂತಾರಾಷ್ಟ್ರೀಯ ಪರ್ವತ ದಿನವು ಹೊಂದಿದೆ. ಹಾಗಾದ್ರೆ ಅಂತಾರಾಷ್ಟ್ರೀಯ ಪರ್ವತ ದಿನದ ಆಚರಣೆಯೂ ಶುರುವಾದದ್ದು ಯಾವಾಗ? ಏನಿದರ ಮಹತ್ವ ಸೇರಿದಂತೆ ಇನ್ನಿತ್ತರ ಮಾಹಿತಿ ಇಲ್ಲಿದೆ.

International Mountain Day 2024 : ಭಾರತದ ಅತೀ ಎತ್ತರದ ಐದು ಪರ್ವತಗಳು ಇವೆ ನೋಡಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 11, 2024 | 10:20 AM

ಈ ಸೃಷ್ಟಿಯ ಅದ್ಭುತಗಳಲ್ಲಿ ಒಂದಾದ ಪರ್ವತಗಳನ್ನು ನೋಡಿದಾಗ ಕಣ್ಣೇರಡು ತಂಪಾಗುತ್ತದೆ. ಈ ಜಗತ್ತಿನಲ್ಲಿ ಅತೀ ಎತ್ತರದ ಅದೆಷ್ಟೋ ಇವೆ. ಹಚ್ಚ ಹಸಿರಿನ ನಡುವೆ ತಲೆ ಎತ್ತಿ ನಿಂತ ಈ ಸೃಷ್ಟಿಯ ಅದ್ಭುತಕ್ಕೆ ಎಲ್ಲರೂ ಕೂಡ ಒಂದು ಕ್ಷಣ ತಲೆಬಾಗಲೇಬೇಕು. ಭೂಮಿಯ ಭೂ ಮೇಲ್ಮೈಯ ಸುಮಾರು 27 ಪ್ರತಿಶತವನ್ನು ಪರ್ವತ ಶ್ರೇಣಿಗಳು ಆವರಿಸಿದ್ದು, ಅದಲ್ಲದೇ, ವಿಶ್ವದ ಶೇ. 15 ಜನರು ಪರ್ವತಗಳ ತಪ್ಪಲಿನಲ್ಲಿ ವಾಸಿಸುತ್ತಿದ್ದಾರೆ. ಅದಲ್ಲದೇ ಈ ಪರ್ವತ ಶ್ರೇಣಿಗಳು ಕೃಷಿಗೂ ತಾಣವಾಗಿದ್ದು, ಇಲ್ಲಿ ಕಾಫಿ ಟೀ, ಕೋಕೋ, ಸಾಂಬಾರು ಪದಾರ್ಥ, ಗಿಡ ಮೂಲಿಕೆಗಳನ್ನು ಬೆಳೆಯಲಾಗುತ್ತದೆ. ಈ ಪರ್ವತಗಳ ಬಗ್ಗೆ ಜಾಗೃತಿ ಮೂಡಿಸಲೆಂದೇ ಒಂದು ದಿನವನ್ನು ಮೀಸಲಾಗಿಡಲಾಗಿದೆ. ಅದುವೇ ಅಂತಾರಾಷ್ಟ್ರೀಯ ಪರ್ವತ ದಿನ. ಪ್ರತಿ ವರ್ಷ ಡಿಸೆಂಬರ್ 11 ರಂದು ಅಂತಾರಾಷ್ಟ್ರೀಯ ಪರ್ವತ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಅಂತಾರಾಷ್ಟ್ರೀಯ ಪರ್ವತ ದಿನದ ಇತಿಹಾಸ

ನ್ಯೂಯಾರ್ಕ್ ನಲ್ಲಿರುವ ಯುನೈಟೆಡ್ ನೇಷನ್ಸ್ ಪ್ರಧಾನ ಕಛೇರಿಯು ಡಿಸೆಂಬರ್ 11, 2001 ರಂದು ಅಂತಾರಾಷ್ಟ್ರೀಯ ಪರ್ವತಗಳ ವರ್ಷವನ್ನು ಆರಂಭಿಸಿತು. ಆದಾದ ಬಳಿಕ 2002ರಲ್ಲಿ, ಅಂತಾರಾಷ್ಟ್ರೀಯ ಪರ್ವತ ವರ್ಷವನ್ನು ಜಾಗೃತಿ ಮೂಡಿಸುವ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಗುರುತಿಸಲಾಯಿತು. ವಿಶ್ವಸಂಸ್ಥೆ ಡಿಸೆಂಬರ್ 11 ರಂದು ಅಂತಾರಾಷ್ಟ್ರೀಯ ಪರ್ವತ ದಿನ ಎಂದು ಗೊತ್ತುಪಡಿಸಿತು. ತದನಂತರದಲ್ಲಿ ಮೊದಲ ಅಂತಾರಾಷ್ಟ್ರೀಯ ಪರ್ವತ ದಿನವನ್ನು ಡಿಸೆಂಬರ್ 11, 2003 ರಂದು ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಅಂತಾರಾಷ್ಟ್ರೀಯ ಪರ್ವತ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಅಂತಾರಾಷ್ಟ್ರೀಯ ಪರ್ವತ ದಿನದ ಮಹತ್ವ ಹಾಗೂ ಆಚರಣೆ

ಪರ್ವತಗಳು ಪ್ರಪಂಚದ ಅರ್ಧದಷ್ಟು ಜೀವವೈವಿಧ್ಯತೆಗಳನ್ನು ಒಳಗೊಂಡಿದೆ. ಶುದ್ಧ ಗಾಳಿ, ನೀರು ಮತ್ತು ಗಿಡ ಮೂಲಿಕೆ ಸಸ್ಯಗಳನ್ನು ಪೂರೈಸುವುದರೊಂದಿಗೆ ಈ ಸ್ಥಳ ಗಳಲ್ಲಿ ಅದೆಷ್ಟೋ ಜನರು ಇಲ್ಲಿ ವಾಸಿಸುತ್ತಿದ್ದಾರೆ. ಆದರೆ ಈ ಪರ್ವತಗಳು ಹವಾಮಾನ ಬದಲಾವಣೆಯ ಪರಿಣಾಮಗಳಿಂದ ಅಪಾಯಕ್ಕೆ ಸಿಲುಕಿವೆ. ಪರ್ವತಗಳ ಕುರಿತು ಜನರಲ್ಲಿ ಅರಿವು, ಕಾಳಜಿ ಮೂಡಿಸುವುದು ಅತ್ಯಗತ್ಯವಾಗಿದೆ. ಅಗತ್ಯವಾದ ಈ ಸಂಪತ್ತನ್ನು ರಕ್ಷಿಸುವ ಹೊಣೆ ಎಲ್ಲರ ಮೇಲಿದ್ದು, ತಮ್ಮ ಜೀವವೈವಿಧ್ಯತೆಯನ್ನು ಕಾಪಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಈ ದಿನದ ಆಚರಣೆಯೂ ಮಹತ್ವದ್ದಾಗಿದೆ. ಈ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಪರ್ವತ ದಿನದಂದು ಜಾಗೃತಿ ಕಾರ್ಯಕ್ರಮಗಳು, ಸೆಮಿನಾರ್ ಹಾಗೂ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಇದನ್ನೂ ಓದಿ: ಟೊಮೆಟೊವನ್ನು ಹೆಚ್ಚು ದಿನಗಳವರೆಗೆ ಫ್ರೆಶ್ ಆಗಿ ಇರಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

ಭಾರತದ ಅತಿ ಎತ್ತರದ ಪರ್ವತ ಶಿಖರಗಳು

* ಕಾಂಚನಜುಂಗಾ: ಭಾರತದ ಅತ್ಯಂತ ಎತ್ತರದ ಪರ್ವತ ಶಿಖರ ಹಾಗೂ ಮೂರನೇ ಅತಿ ಎತ್ತರದ ಶಿಖರ ಎಂದು ಕರೆಯಲ್ಪಟ್ಟ ಶಿಖರ ಈ ಕಾಂಚನಜುಂಗಾವಾಗಿದೆ. ಸರಿಸಸುಮಾರು 8,586 ಮೀಟರ್ ನಷ್ಟು ಎತ್ತರದಲ್ಲಿದ್ದು, ಪೂರ್ವ ಹಿಮಾಲಯದಲ್ಲಿ ಸಿಕ್ಕಿಂ ರಾಜ್ಯ, ಈಶಾನ್ಯ ಭಾರತ ಮತ್ತು ಪೂರ್ವ ನೇಪಾಳದ ನಡುವೆ ಇರುವ ಗಡಿಯಲ್ಲಿ ಈ ಪರ್ವತ ಶ್ರೇಣಿಯನ್ನು ಕಾಣಬಹುದು.

* ಕಾಮೆಟ್ ಶಿಖರ : ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಗರ್ವಾಲ್ ಪ್ರದೇಶದ ಜಸ್ಕರ್ ಪರ್ವತ ಶ್ರೇಣಿಯಲ್ಲಿ ಅತಿ ಎತ್ತರದ ಶಿಖರ ಇದಾಗಿದೆ. ಭಾರತದ ಮೂರನೇ ಅತಿ ಎತ್ತರದ ಶಿಖರಗಳ ಸಾಲಿಗೆ ಕಾಮೆಟ್ ಶಿಖರವು ಸೇರಿದೆ. ಕಾಮೆಟ್ ಟಿಬೆಟ್ ಗಡಿಯ ಸಮೀಪದಲ್ಲಿದ್ದು, ಮೂರು ಇತರ ಎತ್ತರದ ಶಿಖರಗಳಿಂದ ಸುತ್ತುವರೆದಿದೆ.

* ಸಾಲ್ಟೊರೊ ಕಾಂಗ್ರಿ ಶಿಖರ: ಕಾರಕೋರಂನ ಉಪ-ಶ್ರೀಣಿಯಾಗಿರುವ ಸಾಲ್ಟೊರೊ ಜಮ್ಮು-ಕಾಶ್ಮೀರದಲ್ಲಿದೆ. ಭಾರತದ ನಾಲ್ಕನೇ ಅತಿ ಎತ್ತರದ ಪರ್ವತವು ಇದಾಗಿದ್ದು, ವಿಶ್ವದಲ್ಲಿ ಇದು 31ನೇ ಅತಿ ಎತ್ತರದ ಸ್ವತಂತ್ರ ಪರ್ವತ ಶಿಖರ ಎಂಬ ಹೆಸರು ಸಾಲ್ಟೊರೊ ಕಾಂಗ್ರಿ ಶಿಖರಕ್ಕಿದೆ.

* ಸಾಸರ್ ಕಾಂಗ್ರಿ ಶಿಖರ: ಇದು ಭಾರತದ ಐದನೇ ಅತಿ ಎತ್ತರದ ಶಿಖರವಾಗಿದ್ದು, ಜಮ್ಮು-ಕಾಶ್ಮೀರದ ಮುಖ್ಯ ಕಾರಕೋರಂನ ಶ್ರೇಣಿಯ ಆಗ್ನೇಯದಲ್ಲಿ ಈ ಶಿಖರವನ್ನು ಕಾಣಬಹುದು. ವಿಶ್ವದ 35ನೇ ಅತಿ ಎತ್ತರದ ಶಿಖರ ಎನ್ನುವ ಖ್ಯಾತಿಗೆ ಪಾತ್ರವಾಗಿದೆ.

* ನಂದಾದೇವಿ ಶಿಖರ : ನಂದಾ ದೇವಿ ಶಿಖರವು ಉತ್ತರಾಖಂಡದ ಚಮೋಲಿ ಗರ್ವಾಲ್ ಜಿಲ್ಲೆಯಲ್ಲಿದೆ. ಇದು ಭಾರತದ ಎರಡನೇ ಅತಿ ಎತ್ತರದ ಶಿಖರವಾಗಿದ್ದು 7,816 ಮೀಟರ್ ಎತ್ತರವನ್ನು ಹೊಂದಿದೆ. ನಂದಾ ದೇವಿ ಶಿಖರವು ವಿಶ್ವದ 23 ನೇ ಅತಿ ಎತ್ತರದ ಶಿಖರಗಳಲ್ಲಿ ಒಂದು ಹೆಗ್ಗಳಿಕೆಗೆ ಪಾತ್ರವಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ