ಆಶಾಢ ಅಮವಾಸ್ಯೆ 2021: ಶುಭ ದಿನದ ಮುಹೂರ್ತ, ಪೂಜಾ ವಿಧಿ-ವಿಧಾನ ಮತ್ತು ವಿಶೇಷತೆ ತಿಳಿಯಲೇಬೇಕು

Ashadha Amavasya 2021: ಈ ದಿನದ ಆರಾಧನೆಯಿಂದ ಜೀವನದಲ್ಲಿ ಕಷ್ಟ-ದುಃಖಗಳೆಲ್ಲ ತೊರೆದು ಹೋಗಿ ಸುಖ- ಶಾಂತಿ, ನೆಮ್ಮದಿಯು ದೊರೆಯುತ್ತದೆ ಎಂಬ ನಂಬಿಕೆ ಜನರಲ್ಲಿದೆ.

ಆಶಾಢ ಅಮವಾಸ್ಯೆ 2021: ಶುಭ ದಿನದ ಮುಹೂರ್ತ, ಪೂಜಾ ವಿಧಿ-ವಿಧಾನ ಮತ್ತು ವಿಶೇಷತೆ ತಿಳಿಯಲೇಬೇಕು
ಸಾಂದರ್ಭಿಕ ಚಿತ್ರ
Edited By:

Updated on: Jul 09, 2021 | 10:45 AM

ಈ ಬಾರಿಯ ಅಶಾಢ ಅಮವಾಸ್ಯೆಯನ್ನು ಇಂದು ( ಜುಲೈ 9) ಆಚರಿಸಲಾಗುತ್ತದೆ. ಇಂದು ಶುಭ ಶುಕ್ರವಾರವೂ ಹೌದು. ಹಿಂದೂ ನಂಬಿಕೆಯ ಪ್ರಕಾರ ಈ ದಿನ ಬಹಳ ವಿಶೇಷವಾದದ್ದು. ಪೂರ್ವಜರು ಅಥವಾ ಹಿರಿಯರ ದಿನವನ್ನು ನೆನೆಯುತ್ತ ಇಂದು ಅರ್ಪಣೆಗಳನ್ನು ಬಿಡುತ್ತಾರೆ. ವಿಶೇಷ ಪೂಜೆ ಕೈಗೊಳ್ಳುವ ಮೂಲಕ ಅವರನ್ನು ನೆನೆಯುವ ದಿನ. ಇದಲ್ಲದೇ ಈ ದಿನದ ಆರಾಧನೆಯಿಂದ ಜೀವನದಲ್ಲಿ ಕಷ್ಟ-ದುಃಖಗಳೆಲ್ಲ ತೊರೆದು ಹೋಗಿ ಸುಖ- ಶಾಂತಿ, ನೆಮ್ಮದಿಯು ದೊರೆಯುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಜತೆಗೆ ಜಾತಕದ ಪ್ರಕಾರ ಪಿತೃ ದೋಷ, ಗ್ರಹ ದೋಷ ಮತ್ತು ಶನಿ ದೋಷಗಳಿಂದ ಮುಕ್ತರಾಗುವಂತೆ ಉಪವಾಸ ಕೈಗೊಂಡು ಆಚರಿಸುವ ಪದ್ಧತಿ ಮೊದಲಿನಿಂದಲೂ ಬಂದಿದೆ.

ಆಶಾಢ ಅಮವಾಸ್ಯೆ 2021: ದಿನಾಂಕ ಮತ್ತು ಶುಭ ಮುಹೂರ್ತ
ದಿನಾಂಕ: 2021 ಜುಲೈ 9, ಶುಕ್ರವಾರ
ಶುಭ ಮುಹೂರ್ತ ಪ್ರಾರಂಭ: ಜುಲೈ 9 ಬೆಳಿಗ್ಗೆ 05:16
ಶುಭ ಮುಹೂರ್ತ ಮುಕ್ತಾಯ: ಜುಲೈ 10 ಬೆಳಗ್ಗೆ 06:46

ಆಶಾಢ ಅಮವಾಸ್ಯೆಯ ಮಹತ್ವ
ಗರುಡ ಪುರಾಣದ ಪ್ರಕಾರ ಆಶಾಢ ಅಮವಾಸ್ಯೆಯಂದು ಉಪವಾಸ ಕೈಗೊಳ್ಳುತ್ತಾರೆ. ಜತೆಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಎಲ್ಲಾ ರೀತಿಯ ಪಾಪಗಳಿಂದ ಮತ್ತು ದೋಷಗಳಿಂದ ಮುಕ್ತರಾಗಲೆಂದು ದಾನ-ಧರ್ಮಗಳಲ್ಲಿ ತೊಡಗುತ್ತಾರೆ. ಈ ದಿನ ಉಪವಾಸ ಕೈಗೊಳ್ಳುವುದರಿಂದ ಪೂರ್ವಜರಿಗೆ ಮತ್ತು ಆತ್ಮಗಳಿಗೆ ಶಾಂತಿ ಸಿಗುತ್ತದೆ ಎಂಬ ನಂಬಿಕೆ ಮೊದಲಿನಿಂದಲೂ ಇದೆ.

ಪೂಜಾ ವಿಧಿ-ವಿಧಾನ
*ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಶುಭ್ರ ವಸ್ತ್ರವನ್ನು ಧರಿಸುವುದು
*ಆಶಾಢ ಅಮವಾಸ್ಯೆ ದಿನ ಪ್ರಯುಕ್ತ ಉಪವಾಸ ಕೈಗೊಳ್ಳುವುದು
*ಮಂತ್ರಗಳನ್ನು ಪಠಿಸುವುದು
*ಪೂರ್ವಜರಿಗೆ ಪೂಜೆ ಸಲ್ಲಿಸುವುದು ಮತ್ತು ಅಗತ್ಯವಿರುವವರಿಗೆ ನಿಮ್ಮ ಕೈಲಾದಷ್ಟು ದಾನ-ಧರ್ಮ ಮಾಡುವುದು
*ಮುಖ್ಯವಾಗಿ ಹನುಮ ಮತ್ತು ಶನಿ ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ
*ಹಿಂದೂ ನಂಬಿಕೆಯ ಪ್ರಕಾರ ಪಂಚ ಭೂತಗಳಿಗೆ (ಗಾಳಿ, ನೀರು, ಬೆಂಕಿ, ಆಕಾಶ ಮತ್ತು ಭೂಮಿ) ಪ್ರಾರ್ಥನೆ ಮಾಡುತ್ತಾರೆ. ಮತ್ತು ವಿಶೇಷ ಪೂಜೆ ಕೈಗೊಳ್ಳುತ್ತಾರೆ

ಇದನ್ನೂ ಓದಿ:

Strawberry Full Moon 2021: ಇಂದು ಸ್ಟ್ರಾಬೆರಿ ಮೂನ್​ ಗೋಚರಿಸುತ್ತಿದೆ! ಭಾರತದಲ್ಲಿ ಈ ವಿಸ್ಮಯವನ್ನು ನೋಡಬಹುದೇ?

Kara Hunnime: ಕಾರ ಹುಣ್ಣಿಮೆ ಆಚರಣೆ ವೇಳೆ ಅವಘಡ, ಎತ್ತು ಡಿಕ್ಕಿ ಹೊಡೆದು ವ್ಯಕ್ತಿಯ ಸಾವು