Lal Bahadur Shastri Jayanti 2024: ಶಾಸ್ತ್ರಿಜೀ ಅವರ ಜನ್ಮದಿನವನ್ನು ಏಕೆ ಆಚರಿಸಲಾಗುತ್ತದೆ? ಈ ದಿನದ ಇತಿಹಾಸ, ಮಹತ್ವವೇನು?

ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಈ ದೇಶ ಕಂಡ ಅಪ್ರತಿಮ ನಾಯಕ ಜೊತೆಗೆ ಸಜ್ಜನ ನೇತಾರ. ಭಾರತದ ಎರಡನೇ ಪ್ರಧಾನ ಮಂತ್ರಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಪ್ರೀತಿಯಿಂದ ನೆನಪಿಸಿಕೊಳ್ಳುವುದಕ್ಕಾಗಿ ಪ್ರತಿವರ್ಷ ಅಕ್ಟೋಬರ್ 2 ರಂದು ಅವರ ಜನ್ಮ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತಕ್ಕೆ ಇವರ ಕೊಡುಗೆ, ಅಪಾರ ವಿಶೇಷವಾಗಿ 1965 ರ ಇಂಡೋ- ಪಾಕ್ ಯುದ್ಧದಂತಹ ನಿರ್ಣಾಯಕ ಸಮಯದಲ್ಲಿ, ಮತ್ತು ಅವರ ಪ್ರಸಿದ್ಧ ಘೋಷಣೆಯಾದ "ಜೈ ಜವಾನ್, ಜೈ ಕಿಸಾನ್" ಇನ್ನೂ ಲಕ್ಷಾಂತರ ಜನರ ಹೃದಯದಲ್ಲಿ ಅನುರಣಿಸುತ್ತದೆ. ಹಾಗಾಗಿ ಅವರ ಪರಂಪರೆ ಮತ್ತು ನಾಯಕತ್ವವನ್ನು ಗೌರವಿಸಲು ಪ್ರತಿವರ್ಷ ಅವರ ಜನ್ಮದಿನವನ್ನು ದೇಶಾದ್ಯಂತ ಆಚರಿಸಲಾಗುತ್ತದೆ.

Lal Bahadur Shastri Jayanti 2024: ಶಾಸ್ತ್ರಿಜೀ ಅವರ ಜನ್ಮದಿನವನ್ನು ಏಕೆ ಆಚರಿಸಲಾಗುತ್ತದೆ? ಈ ದಿನದ ಇತಿಹಾಸ, ಮಹತ್ವವೇನು?
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 02, 2024 | 9:37 AM

ಶ್ರೇಷ್ಠ ಮುತ್ಸದ್ಧಿ ಲಾಲ್ ಬಹದ್ದೂರ್ ಶಾಸ್ತ್ರಿ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಅವರು ಈ ದೇಶ ಕಂಡ ಅಪ್ರತಿಮ ನಾಯಕ ಜೊತೆಗೆ ಸಜ್ಜನ ನೇತಾರ. ಭಾರತದ ಎರಡನೇ ಪ್ರಧಾನ ಮಂತ್ರಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಪ್ರೀತಿಯಿಂದ ನೆನಪಿಸಿಕೊಳ್ಳುವುದಕ್ಕಾಗಿ ಪ್ರತಿವರ್ಷ ಅಕ್ಟೋಬರ್ 2 ರಂದು ಅವರ ಜನ್ಮ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತಕ್ಕೆ ಇವರ ಕೊಡುಗೆ, ಅಪಾರ ವಿಶೇಷವಾಗಿ 1965 ರ ಇಂಡೋ- ಪಾಕ್ ಯುದ್ಧದಂತಹ ನಿರ್ಣಾಯಕ ಸಮಯದಲ್ಲಿ, ಮತ್ತು ಅವರ ಪ್ರಸಿದ್ಧ ಘೋಷಣೆಯಾದ “ಜೈ ಜವಾನ್, ಜೈ ಕಿಸಾನ್” ಇನ್ನೂ ಲಕ್ಷಾಂತರ ಜನರ ಹೃದಯದಲ್ಲಿ ಅನುರಣಿಸುತ್ತದೆ. ಹಾಗಾಗಿ ಅವರ ಪರಂಪರೆ ಮತ್ತು ನಾಯಕತ್ವವನ್ನು ಗೌರವಿಸಲು ಪ್ರತಿವರ್ಷ ಅವರ ಜನ್ಮದಿನವನ್ನು ದೇಶಾದ್ಯಂತ ಆಚರಿಸಲಾಗುತ್ತದೆ.

ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಇತಿಹಾಸ

ಶಾಸ್ತ್ರಿ ಅವರು ಅಕ್ಟೋಬರ್ 2, 1904 ರಂದು ಉತ್ತರ ಪ್ರದೇಶದ ಮುಘಲ್ ಸರಾಯ್ ನಲ್ಲಿ ಜನಿಸಿದರು. ಸಾಮಾನ್ಯ ಜನರ ಹಿತಾಸಕ್ತಿಗಳನ್ನು ಎತ್ತಿಹಿಡಿದ ನಾಯಕರಾಗಿದ್ದ ಶಾಸ್ತ್ರಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದರು. ಗಾಂಧಿ ಹುಟ್ಟಿ 35 ವರ್ಷಗಳ ಬಳಿಕ ಜನಿಸಿದ ಶಾಸ್ತ್ರಿ, ನಂತರದ ದಿನಗಳಲ್ಲಿ ಗಾಂಧೀಜಿ ಅವರ ಕಟ್ಟಾ ಅನುಯಾಯಿ ಆದರು. ಜವಾಹರಲಾಲ್ ನೆಹರು ನಂತರ ಭಾರತದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು.

ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಮಹತ್ವ

ಶಾಸ್ತ್ರಿ ಅವರು ಪ್ರತಿಪಾದಿಸಿದ ಸರಳತೆ, ಪ್ರಾಮಾಣಿಕತೆ ಮತ್ತು ದೇಶಭಕ್ತಿಯ ಮೌಲ್ಯಗಳನ್ನು ನೆನಪಿಸಿಕೊಳ್ಳುವುದು ಮತ್ತು ಆಚರಿಸುವುದು ಈ ದಿನದ ಮಹತ್ವವಾಗಿದೆ. ಅವರು ಭ್ರಷ್ಟಾಚಾರರಹಿತ ನಾಯಕತ್ವಕ್ಕೆ ಹೆಸರುವಾಸಿಯಾಗಿದ್ದರು. ಅಲ್ಲದೆ ಶಾಸ್ತ್ರಿಜೀ ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು, ವಿಶೇಷವಾಗಿ ಯುದ್ಧದ ಸಮಯದಲ್ಲಿ, ಭಾರತದ ಸಾರ್ವಭೌಮತ್ವ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳುವ ಅವರ ಸಂಕಲ್ಪವನ್ನು ಎತ್ತಿ ಹಿಡಿಯುತ್ತಿದ್ದವು.

ಇದನ್ನೂ ಓದಿ: ಮಹಾತ್ಮ ಗಾಂಧೀಜಿಯವರ ಸ್ಫೂರ್ತಿದಾಯಕ ನುಡಿಮುತ್ತುಗಳಿವು

ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪ್ರಧಾನಿ ಆಗಿ ಆಡಳಿತ ನಡೆಸಿದ್ದು ಕೇವಲ 18 ತಿಂಗಳು ಮಾತ್ರ. ಆ ಸಣ್ಣ ಅವಧಿಯಲ್ಲೇ ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ದೇಶವನ್ನು ಮುನ್ನಡೆಸಿ, ದೇಶದಲ್ಲಿನ ಆಹಾರ ಕೊರತೆಯಯನ್ನು ನೀಗಿಸಿದರು. ಹಿಂದಿ, ಇಂಗ್ಲಿಷ್ ಭಾಷಾ ಗೊಂದಲವನ್ನು ಬಗೆಹರಿಸಿದರು. ಕಾಶ್ಮೀರದ ಹಜರತ್‌ಬಾಲ್‌ನಂತಹ ಸಮಸ್ಯೆಯನ್ನು ಹೂವೆತ್ತಿದಂತೆ ಪರಿಹರಿಸಿದ್ದರು. ಕೊನೆಗೆ ಶಾಂತಿ ಮಂತ್ರ ಜಪಿಸುತ್ತಲೇ ತಾಷ್ಕೆಂಟಿಗೆ ಹೋಗಿ ಅಲ್ಲಿ ತಮ್ಮ ಜೀವವನ್ನೇ ಬಲಿಕೊಟ್ಟರು. ಬಡತನದಲ್ಲೇ ಹುಟ್ಟಿ, ಬೆಳೆದು, ಬಡತನದಲ್ಲೇ ನಿಧನರಾದ ಭಾರತದ ಏಕೈಕ ಪ್ರಧಾನಿ ಲಾಲ್ ಬಹದ್ಧೂರ್ ಶಾಸ್ತ್ರಿ ಅವರು. ಬಡತನ ಅವರಿಗೆ ಎಲ್ಲವನ್ನೂ ಕಲಿಸಿತ್ತು. ಸಹನೆ, ತಾಳ್ಮೆ ಮತ್ತು ವಿನಯವೇ ಅವರ ಹಿರಿಮೆಯಾಗಿತ್ತು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

45 ಲಕ್ಷ ರೂ. ನೋಟುಗಳಿಂದ ದುರ್ಗಾದೇವಿಗೆ ಅಲಂಕಾರ! ಬೆರಗಾದ ಭಕ್ತರು
45 ಲಕ್ಷ ರೂ. ನೋಟುಗಳಿಂದ ದುರ್ಗಾದೇವಿಗೆ ಅಲಂಕಾರ! ಬೆರಗಾದ ಭಕ್ತರು
ನವರಾತ್ರಿ ಉತ್ಸವದಲ್ಲಿ ಕಣ್ಮನ ಸೆಳೆದ ಕಾಂತಾರ ಚಿತ್ರದ ಪಂಜುರ್ಲಿ ನೃತ್ಯ
ನವರಾತ್ರಿ ಉತ್ಸವದಲ್ಲಿ ಕಣ್ಮನ ಸೆಳೆದ ಕಾಂತಾರ ಚಿತ್ರದ ಪಂಜುರ್ಲಿ ನೃತ್ಯ
ಇದು ಮೌನವಾಗಿರುವ ಕಾಲ: ಜೈಲಿಂದ ಹೊರಬಂದ ಮುರುಘಾಶ್ರೀ ಮೊದಲ ಮಾತು
ಇದು ಮೌನವಾಗಿರುವ ಕಾಲ: ಜೈಲಿಂದ ಹೊರಬಂದ ಮುರುಘಾಶ್ರೀ ಮೊದಲ ಮಾತು
ನರಕದ ನೋವು ಹೆಚ್ಚಲು ಕಾರಣವಾದ ಚೈತ್ರಾ ಕುಂದಾಪುರ? ಎಲ್ಲ ಮುಗಿದ ಬಳಿಕ ಅಳು
ನರಕದ ನೋವು ಹೆಚ್ಚಲು ಕಾರಣವಾದ ಚೈತ್ರಾ ಕುಂದಾಪುರ? ಎಲ್ಲ ಮುಗಿದ ಬಳಿಕ ಅಳು
ಒಳ ಉಡುಪಿನ ವಿಷಯ ಪ್ರಸ್ತಾಪಿಸಿ ಮಹಿಳಾ ಸ್ಪರ್ಧಿಗಳಿಗೆ ಮುಜುಗರ ತಂದ ಜಗದೀಶ್
ಒಳ ಉಡುಪಿನ ವಿಷಯ ಪ್ರಸ್ತಾಪಿಸಿ ಮಹಿಳಾ ಸ್ಪರ್ಧಿಗಳಿಗೆ ಮುಜುಗರ ತಂದ ಜಗದೀಶ್
ಬೆಂಗಳೂರು: ನಿಂತಿದ್ದ ಮಹಿಳೆ ಮೇಲೆ ವಿದ್ಯುತ್ ಲೈನ್ ಬಿದ್ದು ಸಾವು
ಬೆಂಗಳೂರು: ನಿಂತಿದ್ದ ಮಹಿಳೆ ಮೇಲೆ ವಿದ್ಯುತ್ ಲೈನ್ ಬಿದ್ದು ಸಾವು
ರೋಹಿತ್ ಶರ್ಮಾ ಸ್ಟೈಲ್​ನಲ್ಲಿ ಟ್ರೋಫಿ ಎತ್ತಿ ಹಿಡಿದ ಫಾಫ್ ಡುಪ್ಲೆಸಿಸ್
ರೋಹಿತ್ ಶರ್ಮಾ ಸ್ಟೈಲ್​ನಲ್ಲಿ ಟ್ರೋಫಿ ಎತ್ತಿ ಹಿಡಿದ ಫಾಫ್ ಡುಪ್ಲೆಸಿಸ್
ದರ್ಶನ್​ಗೆ ಬೆನ್ನು ನೋವು; ಪತಿಯನ್ನು ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮೀ  
ದರ್ಶನ್​ಗೆ ಬೆನ್ನು ನೋವು; ಪತಿಯನ್ನು ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮೀ  
ಉಡುಪಿ ಹೆಬ್ರಿಯಲ್ಲಿ ಮೇಘ ಸ್ಫೋಟ: ಮನೆ, ಕೃಷಿ ಜಮೀನಿಗೆ ನೀರು ನುಗ್ಗಿ ಅವಾಂತರ
ಉಡುಪಿ ಹೆಬ್ರಿಯಲ್ಲಿ ಮೇಘ ಸ್ಫೋಟ: ಮನೆ, ಕೃಷಿ ಜಮೀನಿಗೆ ನೀರು ನುಗ್ಗಿ ಅವಾಂತರ
ಬಿಗ್ ಬಾಸ್​ನಲ್ಲಿ ಮಸಿ ಬಳಿಯೋ ಟಾಸ್ಕ್; ಮತ್ತದೇ ಕಿರುಚಾಟ, ಕಿತ್ತಾಟ
ಬಿಗ್ ಬಾಸ್​ನಲ್ಲಿ ಮಸಿ ಬಳಿಯೋ ಟಾಸ್ಕ್; ಮತ್ತದೇ ಕಿರುಚಾಟ, ಕಿತ್ತಾಟ