Event Calendar August 2023: ಆಗಸ್ಟ್ ತಿಂಗಳಿನಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ, ಅಂತರಾಷ್ಟ್ರೀಯ ದಿನಾಚರಣೆಗಳ ಪಟ್ಟಿ ಇಲ್ಲಿದೆ
ಆಗಸ್ಟ್ ತಿಂಗಳಿನಲ್ಲಿ ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಶೇಷ ದಿನಗಳನ್ನು ಆಚರಿಸಲಾಗುತ್ತದೆ. ಅವುಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.
ಪ್ರತಿ ತಿಂಗಳಲ್ಲೂ ಯಾವುದಾದರೂ ಐತಿಹಾಸಿಕವಾಗಿ ನಡೆದ ಘಟನೆ ಮತ್ತು ವಿಶೇಷಗಳ ನೆನಪಿಗಾಗಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದಿನಗಳನ್ನು ಆಚರಿಸಲಾಗುತ್ತದೆ. ಅದರಂತೆ ವರ್ಷದ ಎಂಟನೇ ತಿಂಗಳಾದ ಆಗಸ್ಟ್ ತಿಂಗಳಲ್ಲೂ ಹಲವಾರು ವಿಶೇಷ ದಿನಗಳನ್ನು ಆಚರಿಸಲಾಗುತ್ತದೆ. ಆಗಸ್ಟ್ ತಿಂಗಳೆಂದಾಗ ಭಾರತೀಯರಿಗೆ ಮೊದಲಿಗೆ ನೆನಪಿಗೆ ಬರುವಂತಹದ್ದು, ಸ್ವಾತಂತ್ರ್ಯ ದಿನ. ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಹೋರಾಟದ ಫಲವಾಗಿ ಆಗಸ್ಟ್ 15, 1947 ರಲ್ಲಿ ಭಾರತವು ಸ್ವಾತಂತ್ರ್ಯವನ್ನು ಪಡೆಯಿತು. ಅಂದಿನಿಂದ ಭಾರತವು ಪ್ರತಿವರ್ಷ ಸ್ವಾತಂತ್ರ್ಯದಿನವನ್ನು ಆಚರಿಸುತ್ತಾ ಬರುತ್ತಿದೆ. ಇದು ಮಾತ್ರವಲ್ಲದೆ ಈ ಆಗಸ್ಟ್ ತಿಂಗಳಲ್ಲಿ ಇನ್ನೂ ಅನೇಕ ವಿಶೇಷ ದಿನಗಳನ್ನು ಆಚರಿಸಲಾಗುತ್ತದೆ. ಅವುಗಳು ಯಾವುವು ಎಂಬುದನ್ನು ನೋಡೋಣ.
ಆಗಸ್ಟ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಶೇಷ ದಿನಗಳು:
ಆಗಸ್ಟ್ 1 ರಿಂದ 7, ವಿಶ್ವ ಸ್ತನ್ಯಪಾನ ವಾರ:
ಇದು ಜಾಗತಿಕ ಅಭಿಯಾನವಾಗಿದ್ದು, ಇದನ್ನು ಪ್ರತಿವರ್ಷ ಆಗಸ್ಟ್ ಮೊದಲ ವಾರದಲ್ಲಿ ಪ್ರಪಂಚದಾದ್ಯಂತ ಹಲವು ದೇಶಗಳಲ್ಲಿ ಆಚರಿಸಲಾಗುತ್ತದ. ವಿಶ್ವ ಸ್ತನ್ಯಪಪಾನ ಸಪ್ತಾಹವನ್ನು ಮೊದಲ ಬಾರಿಗೆ 1992 ರಲ್ಲಿ ಆಚರಿಸಲಾಯಿತು.
ಆಗಸ್ಟ್ 6, ಹಿರೋಷಿಮಾ ದಿನ:
ಪ್ರತಿ ವರ್ಷ ಆಗಸ್ಟ್ 6 ರಂದು ಹಿರೋಷಿಮ ದಿನವನ್ನು ಆಚರಿಸಲಾಗುತ್ತದೆ. ಜಪಾನಿನ ಹಿರೋಷಿಮಾ ನಗರದ ಮೇಲೆ ಅಣುಬಾಂಬ್ ದಾಳಿ ನಡೆದ ದಿನವಿದು.
ಆಗಸ್ಟ್ 6, ಅಂತರಾಷ್ಟ್ರೀಯ ಬಿಯರ್ ದಿನ:
ಅಂತರಾಷ್ಟ್ರೀಯ ಬಿಯರ್ ದಿನವನ್ನು ಆಗಸ್ಟ್ ತಿಂಗಳ ಮೊದಲನೇ ವಾರದದಲ್ಲಿ ಆಚರಿಸಲಾಗುತ್ತದೆ. ಇದನ್ನು ಮೂಲತಃ 2007 ರಲ್ಲಿ ಕ್ಯಾಲಿಫೋರ್ನಿಯಾದ ಸಾಂಟಾ ಕ್ರೂಜ್ ನಲ್ಲಿ ಪ್ರಾರಂಭಿಸಲಾಯಿತು.
ಆಗಸ್ಟ್ 6, ಸ್ನೇಹಿತರ ದಿನ:
ಸ್ನೇಹಿತರ ದಿನವನ್ನು ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ಆಚರಿಸಲಾಗುತ್ತದೆ. 1935 ರಲ್ಲಿ ಸ್ನೇಹಿತರ ಗೌರವಾರ್ಥವಾಗಿ ಈ ದಿನವನ್ನು ಆಚರಿಸುವ ಸಂಪ್ರದಾಯವು ಅಮೇರಿಕಾ ದಲ್ಲಿ ಪ್ರಾರಂಭವಾಯಿತು. ಕ್ರಮೇಣ ಫ್ರೆಂಡ್ ಶಿಪ್ ಡೇ ಜನಪ್ರಿಯತೆಯನ್ನು ಗಳಿಸಿತು. ಮತ್ತು ಭಾರತ ಸೇರಿದಂತರ ವಿವಿಧ ದೇಶಗಳಲ್ಲಿ ಈ ದಿನವನ್ನು ಆರಿಸಲಾಗುತ್ತದೆ.
ಆಗಸ್ಟ್ 7, ರಾಷ್ಟ್ರೀಯ ಕೈಮಗ್ಗ ದಿನ:
ದೇಶದ ಕೈಮಗ್ಗ ನೇಕಾರರನ್ನು ಗೌರವಿಸಲು ಪ್ರತಿವರ್ಷ ಆಗಸ್ಟ್ 7 ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತದೆ.
ಆಗಸ್ಟ್ 8, ಭಾರತ ಬಿಟ್ಟು ತೊಲಗಿ ಚಳುವಳಿ ದಿನ:
ಆಗಸ್ಟ್ 8, 1942ರಲ್ಲಿ ಬಾಂಬೆಯ ಅಖಿಲ ಭಾರತ ಕಾಂಗ್ರೇಸ್ ಸಮಿತಿಯ ಅಧಿವೇಶನದಲ್ಲಿ ಗಾಂಧೀಜಿ ಕ್ವಿಟ್ ಇಂಡಿಯಾ ಚಳುವಳಿಯನ್ನು ಪ್ರಾರಂಭಿಸಿದರು. ಇದನ್ನು ಆಗಸ್ಟ್ ಚಳುವಳಿ ಅಥವಾ ಆಗಸ್ಟ್ ಕಾಂತ್ರಿ ಎಂದೂ ಕರೆಯುತ್ತಾರೆ.
ಇದನ್ನೂ ಓದಿ: ಜುಲೈ ತಿಂಗಳಿನಲ್ಲಿ ಬರುವ ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಮುಖ ದಿನಗಳ ಯಾವುವು? ಇಲ್ಲಿದೆ ಮಾಹಿತಿ
ಆಗಸ್ಟ್ 9, ನಾಗಸಾಕಿ ದಿನ:
ಅಮೇರಿಕಾ 1945 ರ ಆಗಸ್ಟ್ 9 ರಂದು ಜಪಾನ್ನ ನಾಗಸಾಕಿಯ ಮೇಲೆ ಪರಮಾಣು ಬಾಂಬ್ ದಾಳಿ ಮಾಡಿತು. ಈ ಕರಾಳ ದಿನದ ನೆನಪಿಗಾಗಿ ನಾಗಾಕಿ ದಿನವನ್ನು ಆಚರಿಸಲಾಗುತ್ತದೆ.
ಆಗಸ್ಟ್ 10, ವಿಶ್ವ ಸಿಂಹ ದಿನ:
ಇದನ್ನು ವಾರ್ಷಿಕವಾಗಿ ಆಗಸ್ಟ್ 10 ರಂದು ಆಚರಿಸಲಾಗುತ್ತದೆ. ಸಿಂಹಗಳು ಮತ್ತು ಅವುಗಳ ಸಂರಕ್ಷಣೆಯ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಈ ದಿನದ ಉದ್ದೇಶವಾಗಿದೆ.
ಆಗಸ್ಟ್ 10, ವಿಶ್ವ ಜೈವಿಕ ಇಂಧನ ದಿನ:
ಪಳಿಯುಳಿಕೆ ಇಂಧನಗಳಿಗೆ ಪರ್ಯಾಯವಾಗಿ ಕೆಲಸ ಮಾಡಬಹುದಾದ ಇಂಧನಳ ಮೂಲಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.
ಆಗಸ್ಟ್ 12, ಅಂತರಾಷ್ಟ್ರೀಯ ಯುವ ದಿನ:
ಸಮಾಜದಲ್ಲಿ ಯುವಕರ ಪ್ರಾಮುಖ್ಯತೆಯನ್ನು ಸಾರಲು ಜಗತ್ತಿನಾದ್ಯಂತ ಅಂತರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ.
ಆಗಸ್ಟ್ 12, ವಿಶ್ವ ಆನೆ ದಿನ:
ಆನೆಗಳ ರಕ್ಷಣೆಗಾಗಿ ವಾರ್ಷಿಕವಾಗಿ ಆಗಸ್ಟ್ 12 ರಂದು ವಿಶ್ವ ಆನೆಯ ದಿನವನ್ನು ಆಚರಿಸಲಾಗುತ್ತದೆ.
ಆಗಸ್ಟ್ 13, ಲೆಫ್ಟ್ ಹ್ಯಾಂಡರ್ಸ್ ಡೇ:
ಎಡಗೈ ವ್ಯಕ್ತಿಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಆಗಸ್ಟ್ 13 ರಂದು ಎಡಗೈದಾರರ ದಿನವನ್ನು ಆಚರಿಸಲಾಗುತ್ತದೆ
ಆಗಸ್ಟ್ 13, ವಿಶ್ವ ಅಂಗದಾನ ದಿನ:
ಅಂಗಾಂಗ ದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.
ಆಗಸ್ಟ್ 14, ಯೂಮ್-ಎ-ಆಜಾದಿ ( ಪಾಕಿಸ್ತಾನ ಸ್ವಾತಂತ್ರ್ಯ ದಿನ):
ಪ್ರತಿವರ್ಷ ಆಗಸ್ಟ್ 14 ರಂದು ಪಾಕಿಸ್ತಾನವು ತನ್ನ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತದೆ.
ಆಗಸ್ಟ್ 15, ಸ್ವಾತಂತ್ರ್ಯ ದಿವಸ:
ಭಾರತವು ಪ್ರತಿ ವರ್ಷ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತದೆ.
ಆಗಸ್ಟ್ 15, ರಾಷ್ಟ್ರೀಯ ಶೋಕ ದಿನ (ಬಾಂಗ್ಲಾದೇಶ):
ಆಗಸ್ಟ್ 15 ರಂದು ಬಾಂಗ್ಲಾದೇಶವು ರಾಷ್ಟ್ರೀಯ ಶೋಕ ದಿನವನ್ನು ಆಚರಿಸುತ್ತದೆ ಏಕೆಂದರೆ ಈ ದಿನದಂದು ಈ ದೇಶದ ಮೊದಲ ಅಧ್ಯಕ್ಷರಾದ ಶೇಖ್ ಮುಜಿಬುರ್ ರೆಹಮಾನ್ ಮತ್ತು ಅವರ ಕುಟುಂಬದವರನ್ನು ಹತ್ಯೆ ಮಾಡಲಾಗಿತ್ತು.
ಆಗಸ್ಟ್ 19, ವಿಶ್ವ ಛಾಯಾಗ್ರಹಣ ದಿನ:
ಛಾಯಾಗ್ರಹಣದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ವಾರ್ಷಿಕವಾಗಿ ಆಗಸ್ಟ್ 19ರಂದು ವಿಶ್ವ ಛಾಯಾಗ್ರಹಣ ದಿನವನ್ನು ಆಚರಿಸಲಾಗುತ್ತದೆ.
ಆಗಸ್ಟ್ 19, ವಿಶ್ವ ಮಾನವೀಯ ದಿನ:
ಮಾನವೀಯ ಸೇವೆಯಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಜನರಿಗೆ ಸಹಾಯ ಮಾಡುವ ಕಾರ್ಯಕರ್ತರಿಗೆ ಗೌರವ ಸಲ್ಲಿಸಲು ಆಗಸ್ಟ್ 19 ರಂದು ಪ್ರಪಂಚದಾದ್ಯಂತ ವಿಶ್ವ ಮಾನವೀಯ ದಿನವನ್ನು ಆಚರಿಸಲಾಗುತ್ತದೆ.
ಆಗಸ್ಟ್ 20, ವಿಶ್ವ ಸೊಳ್ಳೆ ದಿನ:
ಹೆಣ್ಣು ಸೊಳ್ಳೆಗಳು ಮನುಷ್ಯರಿಗೆ ಕಚ್ಚಿ ಅದು ಮಲೇರಿಯಾವನ್ನು ಹರಡುತ್ತವೆ ಎಂದು ಕಂಡುಹಿಡಿದ ಬ್ರಿಟೀಷ್ ವೈದ್ಯ ಸರ್ ರೊನಾಲ್ಡ್ ರಾಸ್ ಸ್ಮಾರಣಾರ್ಥವಾಗಿ ವಿಶ್ವ ಸೊಳ್ಳೆಯ ದಿನವನ್ನು ಆಚರಿಸಲಾಗುತ್ತದೆ.
ಆಗಸ್ಟ್ 20, ಸದ್ಭಾವನಾ ದಿವಸ:
ದಿವಂಗತ ರಾಜೀವ್ ಗಾಂಧಿಯವರ ಸ್ಮರಣೆಗಾಗಿ ಪ್ರತಿ ವರ್ಷ ಆಗಸ್ಟ್ 20 ರಂದು ಸದ್ಭಾವನಾ ದಿನವನ್ನು ಆರಿಸಲಾಗುತ್ತದೆ.
ಆಗಸ್ಟ್ 20 ಭಾರತೀಯ ಅಕ್ಷಯ ಉರ್ಜಾ ದಿನ:
ಭಾರತದಲ್ಲಿ ನವೀಕರಿಸಬಹುದಾದ ಶಕ್ತಿಯ ಅಭಿವೃದ್ಧಿಯ ಬಗ್ಗೆ ಜಾಗೃತಿ ಮೂಡಿಸಲು ಅಕ್ಷಯ ಉರ್ಜಾ ದಿನವನ್ನು ಆಚರಿಸಲಾಗುತ್ತದೆ.
ಆಗಸ್ಟ್ 23, ಗುಲಾಮ ವ್ಯಾಪರ ಮತ್ತು ಅದರ ನಿರ್ಮೂಲನೆಯ ನೆನಪಿನ ಅಂತರಾಷ್ಟ್ರೀಯ ದಿನ:
ಅಟ್ಲಾಂಟಿಕ್ ಸಾಗರದ ಗುಲಾಮರ ವ್ಯಾಪಾರದ ದುರಂತದ ಬಗ್ಗೆ ನೆನಪಿಸಲು ಈ ದಿನವನ್ನು ಆಚರಿಸಲಾಗುತ್ತದೆ.
ಆಗಸ್ಟ್ 26, ಅಂತರಾಷ್ಟ್ರೀಯ ನಾಯಿ ದಿನ:
ನಾಯಿಗಳ ರಕ್ಷಣೆಗಾಗಿ ಪ್ರತಿವರ್ಷ ಅಂತರಾಷ್ಟ್ರೀಯ ನಾಯಿ ದಿನವನ್ನು ಆಚರಿಸಲಾಗುತ್ತದೆ.
ಆಗಸ್ಟ್ 29, ರಾಷ್ಟ್ರೀಯ ಕ್ರೀಡಾ ದಿನ:
ಭಾರತೀಯ ಕ್ರೀಡಾಪಟು ಧ್ಯಾನ್ ಚಂದ್ ಅವರ ಜನ್ಮದಿನದ ನೆನಪಿಗಾಗಿ ಪ್ರತಿವರ್ಷ ಆಗಸ್ಟ್ 29 ರಂದು ರಾಷ್ಟ್ರೀಯ ಕ್ರೀಡಾ ದಿನವನ್ನು ಭಾರತದಲ್ಲಿ ಆಚರಿಸಲಾಗುತ್ತದೆ.
ಆಗಸ್ಟ್ 30, ಸಣ್ಣ ಕೈಗಾರಿಕ ದಿನ:
ಸಣ್ಣ ಕೈಗಾರಿಕೆಗಳನ್ನು ಬೆಂಬಲಿಸಲು ಮತ್ತು ಉತ್ತೇಜಿಸಲು ಸಣ್ಣ ಕೈಗಾರಿಕ ದಿನವನ್ನು ಆಚರಿಸಲಾಗುತ್ತದೆ.
ಆಗಸ್ಟ್ 31, ಸಂಸ್ಕೃತ ದಿವಸ:
ಆಗಸ್ಟ್ 31 ರಂದು ವಿಶ್ವ ಸಂಸ್ಕೃತ ದಿನವನ್ನು ಆಚರಿಸಲಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ