Lunar Eclipse 2024: ಹೋಳಿಯಂದೇ ಈ ವರ್ಷದ ಮೊದಲ ಚಂದ್ರಗ್ರಹಣ; ಸೂತಕ ಸಮಯ ಯಾವಾಗ?
Chandra Grahan: ಪ್ರಪಂಚವು 2024ರಲ್ಲಿ ಮೊದಲ ಚಂದ್ರಗ್ರಹಣವನ್ನು ವೀಕ್ಷಿಸಲು ಸಿದ್ಧವಾಗಿದೆ. ಮಾರ್ಚ್ 25ರಂದು ಹೋಳಿ ಹಬ್ಬದಂದೇ ಚಂದ್ರ ಗ್ರಹಣ ಉಂಟಾದರೂ ಇದು ಭಾರತದಲ್ಲಿ ಗೋಚರವಾಗುವುದಿಲ್ಲ. ಬೇರೆಡೆ ಚಂದ್ರಗ್ರಹಣ ಸಮಯ, ಅದನ್ನು ವೀಕ್ಷಿಸುವುದು ಹೇಗೆಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಈ ವರ್ಷದುದ್ದಕ್ಕೂ 4 ಗ್ರಹಣಗಳು ಆಕಾಶವನ್ನು ಅಲಂಕರಿಸುತ್ತವೆ. ಈ ಬಾರಿ ಎರಡು ಚಂದ್ರ ಗ್ರಹಣಗಳು (Lunar Eclipse) ಉಂಟಾಗಲಿವೆ. ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ತನ್ನ ಸ್ಥಾನವನ್ನು ಹೊಂದಿದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಚಂದ್ರನ ಮೇಲ್ಮೈ ಮೇಲೆ ನೆರಳು ಬೀಳುತ್ತದೆ. ಈ ವರ್ಷದ ಮೊದಲ ಚಂದ್ರಗ್ರಹಣ ಮಾರ್ಚ್ 25ರಂದು ಸಂಭವಿಸಲಿದೆ. ವರದಿಗಳ ಪ್ರಕಾರ, ಚಂದ್ರ ಗ್ರಹಣ ಭಾರತದಲ್ಲಿ ಮಾರ್ಚ್ 25ರ ಸೋಮವಾರ ಬೆಳಗ್ಗೆ 10.23ಕ್ಕೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಈ ಗ್ರಹಣದ ಸಮಯದಲ್ಲಿ ಚಂದ್ರನು ದಿಗಂತದ ಕೆಳಗೆ ಇರುವುದರಿಂದ ಇದು ಭಾರತದಲ್ಲಿ ಗೋಚರಿಸುವುದಿಲ್ಲ. ಆದರೂ ಈ ಗ್ರಹಣ ಪ್ರಪಂಚದಾದ್ಯಂತದ ಹಲವಾರು ನಗರಗಳಲ್ಲಿ ಗೋಚರಿಸುತ್ತದೆ.
ಪೆನಂಬ್ರಾಲ್ ಚಂದ್ರಗ್ರಹಣವು ಐರ್ಲೆಂಡ್, ಬೆಲ್ಜಿಯಂ, ಸ್ಪೇನ್, ಇಂಗ್ಲೆಂಡ್, ರಷ್ಯಾ, ಜರ್ಮನಿ, ಯುನೈಟೆಡ್ ಸ್ಟೇಟ್ಸ್, ಇಟಲಿ, ಪೋರ್ಚುಗಲ್, ನೆದರ್ಲ್ಯಾಂಡ್ಸ್, ಜಪಾನ್, ಸ್ವಿಟ್ಜರ್ಲೆಂಡ್, ದಕ್ಷಿಣ ನಾರ್ವೆ ಮತ್ತು ಫ್ರಾನ್ಸ್‌ನ ಕೆಲವು ಭಾಗಗಳಲ್ಲಿ ಗೋಚರಿಸುತ್ತದೆ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿಯು ಹಾದುಹೋದಾಗ ಪೆನಂಬ್ರಲ್ ಚಂದ್ರಗ್ರಹಣ ಸಂಭವಿಸುತ್ತದೆ. ಆದರೆ ಈ 3 ಗ್ರಹಗಳು ಸಂಪೂರ್ಣವಾಗಿ ಜೋಡಣೆಯಾಗುವುದಿಲ್ಲ. ಭೂಮಿಯು ಸೂರ್ಯನ ಬೆಳಕನ್ನು ಚಂದ್ರನನ್ನು ತಲುಪದಂತೆ ಭಾಗಶಃ ನಿರ್ಬಂಧಿಸುತ್ತದೆ. ಚಂದ್ರನ ಮೇಲ್ಮೈಯಲ್ಲಿ ಮಸುಕಾದ ನೆರಳು ಬೀಳುತ್ತದೆ. ಇದು ಚಂದ್ರನ ಸೂಕ್ಷ್ಮ ಕಪ್ಪಾಗುವಿಕೆಗೆ ಕಾರಣವಾಗುತ್ತದೆ.
ಇದನ್ನೂ ಓದಿ: Solar Eclipse: ಸಂಪೂರ್ಣ ಸೂರ್ಯ ಗ್ರಹಣ; ಈ ಅವಕಾಶ ತಪ್ಪಿದರೆ 1000 ವರ್ಷ ಕಾಯಬೇಕು!
ಮುಂದಿನ ಚಂದ್ರಗ್ರಹಣವು ಸೆಪ್ಟೆಂಬರ್ 18ರಂದು ಸಂಭವಿಸುತ್ತದೆ ಎಂದು NASA ವರದಿ ಮಾಡಿದೆ. ಇದನ್ನು ಅಮೆರಿಕಾ, ಯುರೋಪ್ ಮತ್ತು ಆಫ್ರಿಕಾದಾದ್ಯಂತ ವೀಕ್ಷಿಸಬಹುದಾಗಿದೆ. ಪೆನಂಬ್ರಾಲ್ ಚಂದ್ರಗ್ರಹಣ ಎಂದು ಕರೆಯಲ್ಪಡುವ 2024ರ ಮೊದಲ ಚಂದ್ರಗ್ರಹಣವು ಭಾರತದಿಂದ ಗೋಚರಿಸುವುದಿಲ್ಲ. ಈ ಗ್ರಹಣವನ್ನು ಅಮೆರಿಕ, ಯುರೋಪ್, ಆಸ್ಟ್ರೇಲಿಯಾ, ಆಫ್ರಿಕಾ, ಉತ್ತರ ಮತ್ತು ಪೂರ್ವ ಏಷ್ಯಾ, ಪೆಸಿಫಿಕ್, ಅಟ್ಲಾಂಟಿಕ್, ಆರ್ಕ್ಟಿಕ್ ಮತ್ತು ಅಂಟಾರ್ಟಿಕಾದಾದ್ಯಂತ ವ್ಯಾಪಿಸಿರುವ ಪ್ರದೇಶಗಳಲ್ಲಿ ವೀಕ್ಷಿಸಬಹುದಾಗಿದೆ. ಐರ್ಲೆಂಡ್, ಬೆಲ್ಜಿಯಂ, ಸ್ಪೇನ್, ಇಂಗ್ಲೆಂಡ್, ದಕ್ಷಿಣ ನಾರ್ವೆ, ಇಟಲಿ, ಪೋರ್ಚುಗಲ್, ರಷ್ಯಾ, ಜರ್ಮನಿ, ಜಪಾನ್, ಸ್ವಿಟ್ಜರ್ಲ್ಯಾಂಡ್, ನೆದರ್ಲ್ಯಾಂಡ್ಸ್ ಮತ್ತು ಫ್ರಾನ್ಸ್ನಲ್ಲಿ ಇದು ಸ್ಪಷ್ಟವಾಗಿ ಗೋಚರವಾಗಲಿದೆ.
ಇದನ್ನೂ ಓದಿ: Solar Eclipse 2024: ಸಂಪೂರ್ಣ ಸೂರ್ಯ ಗ್ರಹಣ ಯಾವಾಗ ಸಂಭವಿಸುತ್ತದೆ? ಭಾರತದಲ್ಲೂ ಗೋಚರವಾಗುತ್ತಾ?
ಸೂತಕ ಅವಧಿಯು ಗ್ರಹಣಕ್ಕೆ 9 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಧಾರ್ಮಿಕ ಚಟುವಟಿಕೆಗಳಿಂದ ದೂರವಿರಲು ಅಥವಾ ಮಂಗಳಕರ ಪ್ರಯತ್ನಗಳನ್ನು ಪ್ರಾರಂಭಿಸಲು ಶಿಫಾರಸು ಮಾಡಲಾಗಿದೆ. ಆದರೆ, ಮಾರ್ಚ್ 25ರಂದು ಮುಂಬರುವ ಪೆನಂಬ್ರಾಲ್ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲವಾದ್ದರಿಂದ, ಸೂತಕದ ಅವಧಿಯನ್ನು ಗಮನಿಸಲಾಗುವುದಿಲ್ಲ. ಇದರ ಪರಿಣಾಮವಾಗಿ, ಧಾರ್ಮಿಕ ಆಚರಣೆಗಳ ಮೇಲೆ ಯಾವುದೇ ನಿರ್ಬಂಧಗಳಿರುವುದಿಲ್ಲ ಮತ್ತು ದೇವಾಲಯದ ಬಾಗಿಲುಗಳು ತೆರೆದಿರುತ್ತವೆ.
ಚಂದ್ರಗ್ರಹಣವು ರಾತ್ರಿ 12:53 EDTಕ್ಕೆ ಪ್ರಾರಂಭವಾಗುತ್ತದೆ ಮತ್ತು ಮುಂಜಾನೆ 3:12 EDTಕ್ಕೆ ಅದರ ಉತ್ತುಂಗವನ್ನು ತಲುಪುತ್ತದೆ. ಇದು 5:32 EDTಕ್ಕೆ ಮುಕ್ತಾಯಗೊಳ್ಳುತ್ತದೆ. ಇಡೀ ಗ್ರಹಣವು 4 ಗಂಟೆ 39 ನಿಮಿಷಗಳ ಕಾಲ ಇರುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ