ಈ ಮಹಿಳೆಯಷ್ಟು ಪೊಸೆಸಿವ್‌ ಯಾರು ಇಲ್ವಂತೆ; ಗಂಡನ ಮೇಲೆ ಎಷ್ಟು ಅಸೂಯೆ ಅಭದ್ರತೆಯಿದೆ ಗೊತ್ತಾ ಈಕೆಗೆ

ಪ್ರೀತಿ, ದಾಂಪತ್ಯ ಸಂಬಂಧದಲ್ಲಿ ಸ್ವಲ್ಪ ಅಸೂಯೆ, ಪೊಸೆಸಿವ್‌ನೆಸ್‌ ಎಲ್ಲವೂ ಕಾಮನ್‌, ತಮ್ಮ ಸಂಗಾತಿ ತಮಗೆ ಮಾತ್ರ ಸೇರಿದ್ದು, ಅವರು ತಮಗೆ ಮಾತ್ರ ಸೀಮಿತ ಎಂಬ ಭಾವನೆಯನ್ನು ಹೊಂದಿರುತ್ತಾರೆ. ಆದ್ರೆ ಇಲ್ಲೊಬ್ಬಳು ಮಹಿಳೆಗೆ ಎಷ್ಟು ಪೊಸೆಸಿವ್‌ನೆಸ್‌ ಇದೆ ಅಂದ್ರೆ ಆಕೆ ತನ್ನ ಗಂಡ ಪ್ರತಿ ಬಾರಿ ಹೊರಗಡೆ ಹೋಗಿ ಮನೆಗೆ ಹಿಂದುರುಗಿದಾಗ ಆತನನ್ನು ಲೈ ಡಿಟೆಕ್ಟರ್‌ ಅಂದ್ರೆ ಸುಳ್ಳನ್ನು ಪತ್ತೆ ಹಚ್ಚುವ ಯಂತ್ರದಲ್ಲಿ ಟೆಸ್ಟ್‌ ಮಾಡುತ್ತಾಳಂತೆ. ಇದರಿಂದಾಗಿ ಈಕೆ ಜಗತ್ತಿನಲ್ಲಿ ಅತೀ ಹೆಚ್ಚು ಅಸೂಯೆ ಪಡುವ ಮಹಿಳೆಯೆಂದೇ ಗುರುತಿಸಿಕೊಂಡಿದ್ದಾಳೆ.

ಈ ಮಹಿಳೆಯಷ್ಟು ಪೊಸೆಸಿವ್‌ ಯಾರು ಇಲ್ವಂತೆ;  ಗಂಡನ ಮೇಲೆ ಎಷ್ಟು ಅಸೂಯೆ ಅಭದ್ರತೆಯಿದೆ ಗೊತ್ತಾ ಈಕೆಗೆ
ಸ್ವೀವ್‌, ಡೆಬ್ಬಿ ವುಡ್‌ ದಂಪತಿ
Image Credit source: Tv9

Updated on: Jul 29, 2025 | 7:43 PM

ಸಂಬಂಧದಲ್ಲಿ ಪ್ರೀತಿ, ಮುನಿಸು ಇರುವ ಹಾಗೆ ಸಂಗಾತಿಗಳ ನಡುವೆ ಒಂದಿಷ್ಟು ಅಸೂಯೆ, ಪೊಸೆಸಿವ್‌ನೆಸ್‌  (Possessiveness) ಕೂಡಾ ಇದ್ದೇ ಇರುತ್ತದೆ. ನನ್ನ ಸಂಗಾತಿ ನನಗೆ ಮಾತ್ರ ಸ್ವಂತ ಆಕೆ ಅಥವಾ ಆತ ಯಾರೊಂದಿಗೂ ಸೇರಬಾರದು ಅಂತೆಲ್ಲಾ ಅಂದುಕೊಳ್ಳುತ್ತಾರೆ. ಅದರಲ್ಲೂ ಈ ಹೆಣ್ಣುಮಕ್ಕಳಿಗೆ ಪೊಸೆಸಿವ್‌ನೆಸ್‌ ಸ್ವಲ್ಪ ಜಾಸ್ತಿಯೇ ಇದೆ. ಹೌದು ಅವರು ತಮ್ಮ ಸಂಗಾತಿ ಬೇರೆ ಹೆಣ್ಣಿನ ಜೊತೆ ಮಾತನಾಡಿದ್ರೂ ಕೂಡಾ ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ಳುತ್ತಾರೆ. ಇದನ್ನೆಲ್ಲಾ ಸಾಮಾನ್ಯವಾಗಿ ನೀವು ಕೂಡಾ ನೋಡಿರುತ್ತೀರಿ ಅಲ್ವಾ. ಆದ್ರೆ ಇಲ್ಲೊಬ್ಬಳು ಮಹಿಳೆಗೆ ಎಷ್ಟು ಪೊಸೆಸಿವ್‌ನೆಸ್‌ ಅಂದ್ರೆ ಆಕೆ ಪ್ರತಿನಿತ್ಯ ತನ್ನ ಗಂಡನನ್ನು ಲೈ ಡಿಟೆಕ್ಟರ್‌ ಅಂದ್ರೆ ಸುಳ್ಳು ಪತ್ತೆ ಹಚ್ಚುವ ಮಷಿನ್‌ನಿಂದ ಪರೀಕ್ಷಿಸುತ್ತಾಳಂತೆ. ಡಬ್ಬಿ ವುಡ್‌ ಎಂಬ ಹೆಸರಿನ ಈ ಮಹಿಳೆ ವಿಶ್ವದಲ್ಲೇ ಅತಿ (World’s Most Jealous Woman) ಹೆಚ್ಚು ಅಸೂಯೆ ಪಡುವ ಮಹಿಳೆಯೆಂದೆ ಗುರುತಿಸಿಕೊಂಡಿದ್ದಾಳೆ.

ಈ ಮಹಿಳೆಗೆ ಸಿಕ್ಕಾಪಟ್ಟೆ ಅಸೂಯೆಯಂತೆ:

ಡೆಬ್ಬಿ ವುಡ್‌ ಎಂಬ ಮಹಿಳೆ ಸಿಕ್ಕಾಪಟ್ಟೆ ಪೊಸೆಸಿವ್‌ನೆಸ್‌ ಅಂತೆ.  ಆಕೆಯನ್ನು ವರ್ಲ್ಡ್ಸ್ ಮೋಸ್ಟ್‌ ಜಲಸ್‌ ವುಮನ್‌ ಎಂದೂ ಕರೆಯುತ್ತಾರೆ. ಡೆಬ್ಬಿ ಎಷ್ಟು ಪೊಸೆಸಿವ್‌ ಮಹಿಳೆ ಅಂದ್ರೆ ಆಕೆ ತನ್ನ ಪತಿ ಸ್ಟೀವ್ ಮೇಲೆ ಕಠಿಣ ನಿಯಮಗಳನ್ನು ಪಾಲಿಸುತ್ತಾಳೆ. ಹೊರಗಡೆಯಿಂದ  ಸ್ಟೀವ್ ಮನೆಗೆ ಬಂದಾಗಲೆಲ್ಲಾ  ಲೈ ಡಿಟೆಕ್ಟಿವ್‌ ಮಷಿನ್‌ ಮೂಲಕ ಪರೀಕ್ಷೆಗೆ ಒಳಪಡಿಸುತ್ತಿದ್ದಳು.  ಸ್ಟೀವ್ ಒಮ್ಮೆ ತಮಾಷೆಯಾಗಿ, ಹೊರಗೆ ಹೋದಾಗ ತಾನು ಯಾವುದೇ ತಪ್ಪು ಮಾಡುತ್ತಿಲ್ಲ ಎಂದು ತೋರಿಸಲು ಸುಳ್ಳು ಪತ್ತೆ ಪರೀಕ್ಷೆಯನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದ. ಡೆಬ್ಬಿ ಆ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಸುಳ್ಳು ಪತ್ತೆ ಹಚ್ಚುವ ಕಿಟ್ ಆರ್ಡರ್ ಮಾಡಿ, ಸ್ವೀವ್ ಮನೆಗೆ ಹಿಂದಿರುಗಿದಾಗಲೆಲ್ಲಾ ಅವನನ್ನು ಪರೀಕ್ಷಿಸಲು ಪ್ರಾರಂಭಿಸಿದಳು.

ಅನುಮಾನ, ಅಸೂಯೆ ಹೇಗೆ ಬೆಳೆಯಿತು:

ಒಂದು ಸಮಯದಲ್ಲಿ ಸ್ಟೀವ್‌ ಮತ್ತು ಡೆಬ್ಬಿ ಬೇರೆ ಬೇರೆ ಊರುಗಳಲ್ಲಿ  ವಾಸಿಸಬೇಕಾದ ಸಂದರ್ಭ ಬರುತ್ತದೆ.  ಈ ಸಮಯದಲ್ಲಿ ಇದು ಸ್ಟೀವ್ ಬೇರೊಬ್ಬ ಮಹಿಳೆಯತ್ತ ಆಕರ್ಷಣೆಗೆ ಒಳಗಾಗಬಹುದು ಎಂದು ಡೆಬ್ಬಿಗೆ ಭಯ ಉಂಟಾಯಿತು. ಡೆಬ್ಬಿ ಮತ್ತು ಸ್ಟೀವ್‌ ಡೇಟಿಂಗ್‌ ಮಾಡುವ ಮೊದಲು ಸ್ವೀವ್‌ ಇನ್ನೊಬ್ಬ ಮಹಿಳೆಯನ್ನು ಭೇಟಿಯಾಗುತ್ತಿದ್ದನು. ಈ ವಿಷಯ ಕೂಡಾ ಆಕೆಗೆ ಸಿಕ್ಕಾಪಟ್ಟೆ ಕೋಪ ಬರುವಂತೆ ಮಾಡಿತ್ತು. ಆಕೆಯ ಅನುಮಾನ ಎಷ್ಟು ಬೆಳೆಯುತೆಂದರೆ ಅವಳು ಸ್ಟೀವ್‌ನ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಮತ್ತು ಫೋನ್ ದಾಖಲೆಗಳನ್ನು ಕೂಡ ಪರಿಶೀಲಿಸುತ್ತಿದ್ದಳು. ಅಷ್ಟೇ ಅಲ್ಲದೆ ಆಕೆ ಸ್ಟೀವ್‌ಗೆ ಹೆಣ್ಣು ಮಕ್ಕಳಿರುವ ಟಿವಿ ಕಾರ್ಯಕ್ರವನ್ನು ಸಹ ನೋಡಲು ಬಿಡುತ್ತಿರಲಿಲ್ಲ.  ಇದೆಲ್ಲಾ ಡೆಬ್ಬಿಯ ಹಿಂದಿನ ಸಂಬಂಧದ ಕಾರಣದಿಂದಾಗಿ ಬಂತು. ಆಕೆಯ ಹಿಂದಿನ ಪ್ರೇಮ ಸಂಬಂಧ ತುಂಬಾನೇ ದುಃಖಕರದಿಂದ ಕೂಡಿತ್ತು. ಅದೇ ರೀತಿ ಸ್ಟೀವ್‌ ಸಹ ತನ್ನನ್ನು ಬಿಟ್ಟು ಹೋಗಬಹುದೆಂದು ಆಕೆ ಸ್ವೀವ್‌ ಮೇಲೆ ಅತಿಯಾಗಿ ಅನುಮಾನ ಪಡುತ್ತಿದ್ದಳು.

ಇದನ್ನೂ ಓದಿ
ಯುವಕರೇ… ಬ್ರೇಕಪ್‌ ನಂತರ ಈ ಕೆಲಸ ಮಾಡಿದ್ರೆ ನೀವು ಹ್ಯಾಪಿಯಾಗಿರ್ತೀರಿ
ಇದೇ ಕಾರಣಕ್ಕಂತೆ ವಿವಾಹಿತ ಪುರುಷರು ಅನ್ಯ ಮಹಿಳೆಯ ಮೋಹಕ್ಕೆ ಬೀಳುವುದು
ನೋಡಿ… ಈ ತಪ್ಪುಗಳೇ ಸಂಬಂಧ ಹಾಳಾಗಲು ಮುಖ್ಯ ಕಾರಣ
ಹೆಂಡತಿಯಾದವಳು ಈ ವಿಷಯಗಳನ್ನು ಗಂಡನಿಂದ ಮುಚ್ಚಿಡುತ್ತಾಳಂತೆ

ಇದನ್ನೂ ಓದಿ: ಇದೇ ಕಾರಣಕ್ಕಂತೆ ವಿವಾಹಿತ ಪುರುಷರು ಅನ್ಯ ಮಹಿಳೆಯ ಮೋಹಕ್ಕೆ ಬೀಳುವುದು

ಇದೆಲ್ಲಾ ತನ್ನ ಸಂಬಂಧವನ್ನು ಕಾಪಾಡಿಕೊಳ್ಳುವ ಸಲುವಾಗಿ ನಾನು ಇದೆಲ್ಲಾ ಮಾಡಿದ್ದು ಎಂದು ಡೆಬ್ಬಿ ಹೇಳಿಕೊಳ್ಳುತ್ತಾಳೆ. ಮೊದಲೆಲ್ಲಾ ಡೆಬ್ಬಿ ಪ್ರತಿನಿತ್ಯ ಲೈ ಡಿಟೆಕ್ಟರ್‌ನಲ್ಲಿ ಗಂಡನನ್ನು ಪರೀಕ್ಷೆ ಮಾಡುತ್ತಿದ್ದಳು. ಆದರೆ 2013 ರ ಬಳಿಕ ಸಂಬಂಧವನ್ನು ಸುಧಾರಿಸುವ ಸಲುವಾಗಿ ಡೆಬ್ಬಿ ತನ್ನ ಗಂಡ ಸ್ಟೀವ್‌ ಮೇಲೆ ಅನುಮಾನಪಡುವುದನ್ನು ಕಡಿಮೆ ಮಾಡಿ ಆತನಿಗೆ ಸ್ವಾತಂತ್ರ್ಯ ನೀಡಿದಳು. ಹೀಗಿದ್ದರೂ ಆಕೆ ಇಂದಿಗೂ ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಗಂಡನನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸುತ್ತಾಳೆ. ಸಂಬಂಧದಲ್ಲಿ ಇಷ್ಟೆಲ್ಲಾ ಅನುಮಾನ, ಅಸೂಯೆ ಇದ್ರೂ ಇವರಿಬ್ಬರು ಸುಖ ದಾಂಪತ್ಯವನ್ನು ನಡೆಸುತ್ತಿದ್ದಾರೆ. ಸ್ಟೀವ್‌ನ ಪ್ರಬುದ್ಧತೆಯು ಅವರ ಸಂಬಂಧವನ್ನು ಉಳಿಸುವಲ್ಲಿ ಒಂದು ಪಾತ್ರವನ್ನು ವಹಿಸಿದೆ ಅಂತಾನೇ ಹೇಳಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ