ಸಾಂದರ್ಭಿಕ ಚಿತ್ರ
2024 ಕ್ಕೆ ವಿದಾಯ ಹೇಳಿ, 2025ನ್ನು ಬರ ಮಾಡಿಕೊಳ್ಳುವ ಸಮಯವೂ ಬಂದೇ ಬಿಟ್ಟಿದೆ. ಇನ್ನೇನು ಒಂದು ತಿಂಗಳಷ್ಟೇ ಇದ್ದು, ಮುಂದಿನ ವರ್ಷ ತನ್ನಲ್ಲಿ ಏನೆಲ್ಲಾ ಬದಲಾವಣೆ ಮಾಡಿಕೊಳ್ಳಬೇಕು ಎಂದು ಕೆಲವರು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಕೆಲವರಂತೂ ಹೊಸ ವರ್ಷದ ಮೊದಲ ದಿನ ಹೊಸ ಮನುಷ್ಯನಾಗಿ ನಾನು ಬದುಕಿಗೆ ಸಿದ್ಧನಾಗಬೇಕು ಎಂದು ಮನಸ್ಸಿನಲ್ಲಿಯೇ ಅಂದುಕೊಂಡಿರುತ್ತಾರೆ. ಈ ಹೊಸ ವರ್ಷವನ್ನು ಪಾರ್ಟಿಯ ಮೂಲಕ, ಗೆಳೆಯರ ಜೊತೆಗೆ, ಮನೆಯವರ ಜತೆಯಲ್ಲಿ ಆಚರಿಸಲು ನೀವು ಯೋಚಿಸಿರಬಹುದು. ಹಾಗಾದ್ರೆ ಈ ಬಾರಿಯ ಹೊಸ ವರ್ಷವನ್ನು ಆಚರಿಸಲು ಈ ಕೆಲವೂ ಟಿಪ್ಸ್ ಗಳು ಇಲ್ಲಿದೆ.
- ಮನೆಯಲ್ಲೇ ಪಾರ್ಟಿ ಆಯೋಜಿಸಿ : ಬಹುತೇಕರ ಮನೆಯಲ್ಲಿ ಹೊಸ ವರ್ಷದ ಹಿಂದಿನ ದಿನದ ಸಂಜೆಯಿಂದಲೇ ಸೆಲೆಬ್ರೇಶನ್ ಗಳು ಶುರುವಾಗುತ್ತದೆ. ಮನೆ ಮಂದಿಯ ಜೊತೆಗೆ ಮನೆಯಲ್ಲಿಯೇ ಹೊಸ ರೀತಿಯಲ್ಲಿ ನ್ಯೂ ಇಯರ್ ಪಾರ್ಟಿ ಮಾಡಬಹುದು. ನಿಮ್ಮ ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಪ್ರೀತಿಪಾತ್ರರನ್ನು ಮನೆಗೆ ಆಹ್ವಾನಿಸಿ. ಹೊಸ ವರ್ಷಕ್ಕೆ ರುಚಿಕರವಾದ ಅಡುಗೆ ಮಾಡಿ ಎಲ್ಲರ ಜೊತೆಗೆ ಸವಿಯಿರಿ. ಇದು ನಿಮ್ಮ ವರ್ಷಕ್ಕೆ ಪ್ರೀತಿಪಾತ್ರರೊಂದಿಗೆ ಹೊಸ ವರ್ಷವನ್ನು ವಿಶೇಷವಾಗಿ ಆಹ್ವಾನಿಸಿದಂತೆ ಆಗುತ್ತದೆ.
- ಹಳೆ ನೆನಪುಗಳನ್ನೊಮ್ಮೆ ಮೆಲುಕು ಹಾಕಿ : ಹಳೆಯ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷ ಸ್ವಾಗತಿಸಲು ಬಯಸಿದರೆ ಹಳೆಯ ಫೋಟೋಗಳನ್ನೊಮ್ಮೆ ನೋಡಿ. ಹೌದು, ಡಿಸೆಂಬರ್ ತಿಂಗಳ ಕೊನೆಯ ದಿನ ಮನೆ ಮಂದಿಯೆಲ್ಲಾ ಒಟ್ಟು ಸೇರಿ ಫೋಟೋಗಳು, ವೀಡಿಯೊಗಳು ನೋಡುತ್ತಾ ಹಳೆಯ ನೆನಪುಗಳನ್ನು ಮೆಲುಕು ಹಾಕಿ. ಇದು ನಿಮಗೆ ಹಾಗೂ ನಿಮ್ಮ ಕುಟುಂಬದವರ ಮನಸ್ಸಿಗೆ ಖುಷಿಯನ್ನು ನೀಡುತ್ತದೆ.
- ಡಿನ್ನರ್ ಆಯೋಜಿಸಿ : ಹೊಸ ವರ್ಷವನ್ನು ವಿಭಿನ್ನವಾಗಿ ಸ್ವಾಗತಿಸಲು ಬಯಸುವವರು ಲೇಟ್ ನೈಟ್ ಡಿನ್ನರ್ ಗೆ ಆಯೋಜಿಸುವುದುಸೂಕ್ತ. ಹೌದು, ನಿಮ್ಮ ಕುಟುಂಬ ಅಥವಾ ಪ್ರೀತಿಪಾತ್ರರ ಜೊತೆಗೆ ಜನಪ್ರಿಯ ರೆಸ್ಟೋರೆಂಟ್ ಗೆ ಡಿನ್ನರ್ ಗೆ ಹೋಗಿ. ಅಲ್ಲಿ ನಿಮಗಿಷ್ಟವಾದ ಭಕ್ಷ್ಯಗಳನ್ನು ಆರ್ಡರ್ ಮಾಡಿ ಸವಿಯಿರಿ. ಈ ರೀತಿ ಹೊರಗಡೆ ಡಿನ್ನರ್ ಗೆ ಹೋಗುವುದರಿಂದ ನಿಮ್ಮವರೊಂದಿಗೆ ನೀವು ಸಮಯ ಕಳೆದಂತಾಗುತ್ತದೆ.
- ರೆಸಾರ್ಟ್ ಗೆ ತೆರಳಿ : ಹೆಚ್ಚಿನವರು ವರ್ಷದ ಕೊನೆಯ ದಿನದಂದು ಕುಟುಂಬ ಅಥವಾ ಪ್ರೀತಿಪಾತ್ರರ ಜೊತೆಗೆ ರೆಸಾರ್ಟ್ ಸೇರಿದಂತೆ ಇನ್ನಿತ್ತರ ಸ್ಥಳಗಳಿಗೆ ತೆರಳುತ್ತಾರೆ. ನೀವು ಕೂಡ ಈ ಬಾರಿಯ ಹೊಸ ವರ್ಷವನ್ನು ವಿಭಿನ್ನವಾಗಿ ಆಚರಿಸಲು ಬಯಸಿದ್ದರೆ ರೆಸಾರ್ಟ್ ಗೆ ಹೋಗಿ ಉತ್ತಮ ಸಮಯವನ್ನು ಕಳೆಯಬಹುದು.
- ಸಿನಿಮಾ ನೋಡಲು ಪ್ಲಾನ್ ಮಾಡಿ : ವಿಭಿನ್ನವಾಗಿ ಹೊಸ ವರ್ಷ ಆಚರಿಸಲು ಮಾರ್ಗವೆಂದರೆ ಸಿನಿಮಾ ನೋಡುವುದಾಗಿದೆ. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ನೆಚ್ಚಿನ ಸಿನಿಮಾ ವೀಕ್ಷಿಸಿ. ಒಂದು ವೇಳೆ ಮೂವಿ ನೈಟ್ ಪ್ಲಾನ್ ಮಾಡಿಕೊಂಡರೆ ಟಿವಿಯ ಸುತ್ತಲಿನ ಜಾಗವನ್ನು ಸುಂದರವಾದ ದೀಪಗಳಿಂದ ಅಲಂಕರಿಸಿ. ಕೆಲವು ಸ್ನ್ಯಾಕ್ಸ್ ನೊಂದಿಗೆ ಸಿನಿಮಾ ವೀಕ್ಷಿಸಿ, ಆ ಬಳಿಕ ಇಷ್ಟವಾದ ಪಾತ್ರ ಹಾಗೂ ದೃಶ್ಯದ ಬಗ್ಗೆ ಮನೆಮಂದಿಯರೊಂದಿಗೆ ಚರ್ಚಿಸಿ.
- ನೈಟ್ ಗೇಮ್ಸ್ ಆಯೋಜಿಸಿ : ಮನೆಯಲ್ಲೇ ನ್ಯೂ ಇಯರ್ ಸ್ವಾಗತಿಸಲು ಬಯಸಿದರೆ ರಾತ್ರಿಯ ವೇಳೆ ಗೇಮ್ಸ್ ಗಳನ್ನು ಆಯೋಜಿಸಿ, ಇದು ನಿಮಗೆ ಸಂತೋಷವನ್ನುಂಟು ಮಾಡುತ್ತದೆ. ಹಳೆಯ ಶೈಲಿಯ ಆಟಗಳಾದ ಚೌಕಾಬಾರ, ಕಾರ್ಡ್‌ಗಳು, ಲೂಡೋಗಳಂತಹ ಆಟಗಳು ನಿಮ್ಮ ಬಾಲ್ಯದ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತದೆ. ಒಂದು ವೇಳೆ ನಿಮ್ಮ ಪ್ರೀತಿಪಾತ್ರರು ನಿಮ್ಮೊಂದಿಗೆ ಇಲ್ಲದಿದ್ದರೆ ಆನ್ಲೈನ್ ನಲ್ಲಿ ಆಟ ಆಡುವ ಮೂಲಕ ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲು ಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ