AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Navarathri 2023: ನವರಾತ್ರಿಯ ನಾಲ್ಕನೇ ದಿನ ಕೂಷ್ಮಂಡಾ ದೇವಿಗೆ ಮಾಲ್ಪುರಿ ನೈವೇದ್ಯ ಅರ್ಪಿಸಿ: ಸುಲಭ ಪಾಕವಿಧಾನ ಇಲ್ಲಿದೆ 

ನವರಾತ್ರಿಯ ನಾಲ್ಕನೇ ದಿನದಂದು ಜಗನ್ಮಾತೆಯ ಕೂಷ್ಮಾಂಡ ರೂಪವನ್ನು ಪೂಜಿಸಲಾಗುತ್ತದೆ. ಈ ದಿನ ದೇವಿಗೆ ಮಾಲ್ಪುರಿ ಅಥವಾ ಮಾಲ್ಪುವಾವನ್ನು ನೈವೇದ್ಯ ರೂಪದಲ್ಲಿ ಅರ್ಪಿಸಬಹುದು. ಈ ಮಾಲ್ಪರಿಯನ್ನು ತಯಾರಿಸುವುದು ಹೇಗೆ, ಇದರ ಸುಲಭ ಪಾಕವಿಧಾನದ ಮಾಹಿತಿ ಇಲ್ಲಿದೆ.

Navarathri 2023: ನವರಾತ್ರಿಯ ನಾಲ್ಕನೇ ದಿನ ಕೂಷ್ಮಂಡಾ ದೇವಿಗೆ ಮಾಲ್ಪುರಿ ನೈವೇದ್ಯ ಅರ್ಪಿಸಿ: ಸುಲಭ ಪಾಕವಿಧಾನ ಇಲ್ಲಿದೆ 
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on:Oct 18, 2023 | 10:07 AM

Share

ನವರಾತ್ರಿ (Navarathri) ಹಬ್ಬ ಬಹಳ ಸಂಭ್ರಮದಿಂದ ನಡೆಯುತ್ತಿದೆ.  ನವರಾತ್ರಿಯ 9 ದಿನಗಳಲ್ಲಿ ಜಗನ್ಮಾತೆ ದೇವಿಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ಮತ್ತು ದೇವಿಯನ್ನು ಪೂಜಿಸುವಾಗ ಪ್ರತಿನಿತ್ಯ ಒಂದೊಂದು ಬಗೆಯ ನೈವೇದ್ಯವನ್ನು ದೇವರಿಗೆ ಅರ್ಪಿಸಲಾಗುತ್ತದೆ. ಹೀಗೆ ನವರಾತ್ರಿಯ ನಾಲ್ಕನೇ ದಿನದಂದು ಜಗನ್ಮಾತೆಯ ಕೂಷ್ಮಾಂಡ ರೂಪವನ್ನು ಪೂಜಿಸಲಾಗುತ್ತದೆ. ಕೂಷ್ಮಾಂಡ ದೇವಿಯನ್ನು ಸೃಷ್ಟಿಯ ಮೂಲವೆಂದು ಹೇಳಲಾಗುತ್ತದೆ. ಕೂಷ್ಮಾಂಡ ದೇವಿಯ ಪ್ರಿಯವಾದ ಬಣ್ಣ ಕೆಂಪು. ಈ ದಿನ ಕೆಂಪು ಬಣ್ಣದ ಉಡುಗೆಯನ್ನು ಧರಿಸಿ ದೇವಿಯನ್ನು ಪೂಜಿಸುವ ಸಂಪ್ರದಾಯವಿದೆ. ಇದರೊಂದಿಗೆ ಕೂಷ್ಮಾಂಡ ದೇವಿಗೆ ನೆಚ್ಚಿನ ಸಿಹಿಯಾಗಿರುವ ಮಾಲ್ಪುರಿಯನ್ನು ನೈವೇದ್ಯ ರೂಪದಲ್ಲಿ ಅರ್ಪಿಸಬೇಕು ಎಂದು ಹೇಳಲಾಗುತ್ತದೆ.  ಈ ಮಾಲ್ಪುರಿಯನ್ನು ಮಾರುಕಟ್ಟೆಯಿಂದ ಖರೀದಿಸುವ ಬದಲು ನೀವು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ, ದೇವರಿಗೆ ನೈವೇದ್ಯ ಅರ್ಪಿಸಬಹುದು. ಹಾಗಾದರೆ ಈ ಮಾಲ್ಪರಿಯನ್ನು ತಯಾರಿಸುವುದು ಹೇಗೆ, ಇದರ ಸುಲಭ ಪಾಕವಿಧಾನದ ಮಾಹಿತಿ ಇಲ್ಲಿದೆ.

ಮಾಲ್ಪುರಿ ಮಾಡಲು ಬೇಕಾಗುವ ಪದಾರ್ಥಗಳು:

• ಗೋಧಿ ಹಿಟ್ಟು – 1 ಕಪ್

• ರವೆ – ½ ಕಪ್

• ಖೋವಾ – 3 ಟೀಸ್ಪೂನ್

• ಹಾಲು – 1 ಕಪ್

• ಏಲಕ್ಕಿ ಪುಡಿ – 1 ಟೀಸ್ಪೂನ್

• ಪಿಸ್ತಾ ಚೂರುಗಳು – 1 ಟೀಸ್ಪೂನ್

• ಸಕ್ಕರೆ – 1 ಕಪ್

• ಗೋಡಂಬಿ ಚೂರುಗಳು – 1 ಚಮಚ

• ಸೋಂಪು ಪುಡಿ – ½ ಟೀಸ್ಪೂನ್ (ಐಚ್ಛಿಕ)

• ತುಪ್ಪ

• ಸ್ವಲ್ಪ ಕೇಸರಿ ದಳ

ಇದನ್ನೂ ಓದಿ: ಹಬ್ಬಕ್ಕೆ ಮನೆಯಲ್ಲಿಯೇ ತಯಾರಿಸಿ ಆರೋಗ್ಯಕರ ಮಖಾನ ಡ್ರೈ ಫ್ರೂಟ್ ಬರ್ಫಿ

ಮಾಲ್ಪುರಿ ಮಾಡುವ ವಿಧಾನ:

• ಒಂದು ದೊಡ್ಡ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಗೋದಿಹಿಟ್ಟ ಮತ್ತು ರವೆಯನ್ನು ಹಾಕಿಕೊಂಡು  ಸಮಾನವಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಅದಕ್ಕೆ ಸ್ವಲ್ಪ ಸಕ್ಕರೆ, ಏಲಕ್ಕಿ  ಪುಡಿ ಮತ್ತು ಸೋಂಪು ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.

• ಈಗ ಈ ಮಿಶ್ರಣಕ್ಕೆ ಖೋವಾ ಸೇರಿಸಿ ಮತ್ತೊಮ್ಮೆ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ, ನಂತರ ಸ್ವಲ್ಪ ಸ್ವಲ್ಪ ಹಾಲು ಸೇರಿಸಿ ಹಿಟ್ಟನ್ನು ತಯಾರಿಸಿಕೊಳ್ಳಿ, ಹಿಟ್ಟು ಹದವಾಗಿರಲಿ.  ತೀರಾ ದಪ್ಪ ಅಥವಾ ತೀರಾ ತೆಳುವಾಗಿರಬಾರದೆಂದು ನೆನಪಿನಲ್ಲಿಡಿ.  ಹಿಟ್ಟು ತಯಾರಾದ ಬಳಿಕ ಅದನ್ನು ಸ್ವಲ್ಪ ಹೊತ್ತು ಹಾಗೇನೇ ಬಿಟ್ಟುಬಿಡಿ.

• ಈಗ ಸಕ್ಕರೆ ಪಾಕವನ್ನು ತಯಾರಿಸಿಕೊಳ್ಳಿ, ಅದಕ್ಕಾಗಿ ಒಂದು ಪಾತ್ರೆಯಲ್ಲಿ ಒಂದು ಕಪ್ ಸಕ್ಕರೆ ಮತ್ತು ಅರ್ಧ ಕಪ್ ನೀರನ್ನು ಸೇರಿಸಿ, ನಯವಾದ ಸಕ್ಕರೆ ಪಾಕವನ್ನು ತಯಾರಿಸಿ,  ಮತ್ತು ಅದಕ್ಕೆ ಕೇಸರಿ ದಳಗಳನ್ನು ಸೇರಿಸಿ ಪಕ್ಕಕ್ಕೆ ಇಡಿ.

• ನಂತರ ಬಾಣಲೆಯಲ್ಲಿ ತುಪ್ಪವನ್ನು ಬಿಸಿ  ಮಾಡಿ, ತಯಾರಿಸಿಟ್ಟ ಹಿಟ್ಟಿನಿಂದ ಮಾಲ್ಪರಿಯನ್ನು ತಯಾರಿಸಿ, ಮಾಲ್ಪುರಿಯ ಎರಡು ಬದಿಗಳನ್ನು  ಚೆನ್ನಾಗಿ ಹುರಿದು ಅದನ್ನು ಸಕ್ಕರೆ ಪಾಕದಲ್ಲಿ ಅದ್ದಿ, ಬಳಿಕ ಅನ್ನು ಒಂದು ತಟ್ಟೆಗೆ ವರ್ಗಾಯಿಸಿ.  ಎಲ್ಲಾ ಮಾಲ್ಪುರಿಯನ್ನು ತಯಾರಿಸದ ಬಳಿಕ ಅದನ್ನು ಮೇಲೆ ಗೋಡಂಬಿ ತುಂಡುಗಳು ಹಾಗೂ ಪಿಸ್ತಾ ಚೂರುಗಳಿಂದ ಅಲಂಕರಿಸಿ, ದೇವರಿಗೆ ನೈವೇದ್ಯ ರೂಪದಲ್ಲಿ ಅರ್ಪಿಸಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:48 am, Wed, 18 October 23

ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
BBL 2026: ರಣರೋಚಕ ಪಂದ್ಯದಲ್ಲಿ ರೋಚಕ ಜಯ..!
BBL 2026: ರಣರೋಚಕ ಪಂದ್ಯದಲ್ಲಿ ರೋಚಕ ಜಯ..!
ಬಣದ ಹುಣ್ಣಿಮೆಗೆ ಜನಸಾಗರ, ಬೆಳಗಾವಿಯಲ್ಲಿ ಬಸ್ ಕೊರತೆಯಿಂದ ಭಕ್ತರ ಪರದಾಟ
ಬಣದ ಹುಣ್ಣಿಮೆಗೆ ಜನಸಾಗರ, ಬೆಳಗಾವಿಯಲ್ಲಿ ಬಸ್ ಕೊರತೆಯಿಂದ ಭಕ್ತರ ಪರದಾಟ
ಬಿಗ್ ಬಾಸ್​​ನಲ್ಲಿ ಸುದೀಪ್ ಚರ್ಚೆ ಮಾಡಬೇಕಿರುವ ವಿಷಯಗಳ ಪಟ್ಟಿ ದೊಡ್ಡದಿದೆ
ಬಿಗ್ ಬಾಸ್​​ನಲ್ಲಿ ಸುದೀಪ್ ಚರ್ಚೆ ಮಾಡಬೇಕಿರುವ ವಿಷಯಗಳ ಪಟ್ಟಿ ದೊಡ್ಡದಿದೆ
ಸರ್ಕಾರದ ಗ್ಯಾರಂಟಿ ಯೋಜನೆ ವಿರುದ್ಧ ಗುಡುಗಿದ ಹೆಚ್​​ಡಿ ದೇವೇಗೌಡ
ಸರ್ಕಾರದ ಗ್ಯಾರಂಟಿ ಯೋಜನೆ ವಿರುದ್ಧ ಗುಡುಗಿದ ಹೆಚ್​​ಡಿ ದೇವೇಗೌಡ