Optical Illusion: ನಿಮಗೊಂದು ಸವಾಲ್;‌ ಈ ಚಿತ್ರದಲ್ಲಿ ತೋಳ ಎಲ್ಲಿದೆ ಎಂದು ಕಂಡು ಹಿಡಿಯುವಿರಾ?

ನಮ್ಮ ದೃಷ್ಟಿ ತೀಕ್ಷ್ಣತೆ ಮತ್ತು ಬುದ್ಧಿವಂತಿಕೆಗೆ ಸವಾಲು ಹಾಕುವಂತಹ ಆಪ್ಟಿಕಲ್‌ ಇಲ್ಯೂಷನ್‌, ಬ್ರೈನ್‌ ಟೀಸರ್‌ನಂತಹ ಒಗಟಿನ ಆಟಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇಂತಹ ಆಟಗಳು ತಲೆಗೆ ಹುಳ ಬಿಡುವುದಂತೂ ನಿಜ. ಇಲ್ಲೊಂದು ಅಂತಹದ್ದೇ ಚಿತ್ರ ವೈರಲ್‌ ಆಗಿದ್ದು, ಅದರಲ್ಲಿ ನಿಮಗೆ ತೋಳವನ್ನು ಹುಡುಕಲು ಸವಾಲನ್ನು ನೀಡಲಾಗಿದೆ.

Optical Illusion: ನಿಮಗೊಂದು ಸವಾಲ್;‌ ಈ ಚಿತ್ರದಲ್ಲಿ ತೋಳ ಎಲ್ಲಿದೆ ಎಂದು ಕಂಡು ಹಿಡಿಯುವಿರಾ?
ಆಪ್ಟಿಕಲ್‌ ಇಲ್ಯೂಷನ್‌
Image Credit source: Hindustan Times

Updated on: Jul 28, 2025 | 4:19 PM

ಆಪ್ಟಿಕಲ್‌ ಇಲ್ಯೂಷನ್‌ (Optical Illusion), ಬ್ರೈನ್‌ ಟೀಸರ್‌ನಂತಹ ಮೋಜಿನ ಆಟಗಳು ನಮ್ಮ ವೀಕ್ಷಣಾ ಕೌಶಲ್ಯ, ಬುದ್ಧಿವಂತಿಕೆಯನ್ನು ಪರೀಕ್ಷಿಸುವ ಮೋಜಿನ ಆಟವಾಗಿದೆ. ಇದು ಟೈಮ್‌ ಪಾಸ್‌ ಮಾತ್ರವಲ್ಲದೆ ಮೆದುಳಿಗೆ ವ್ಯಾಯಾಮ ನೀಡುವ, ಏಕಾಗ್ರತೆಯನ್ನು ಸುಧಾರಿಸುವ ಉತ್ತಮ ಮಾರ್ಗವಾಗಿದೆ. ದೃಷ್ಟಿ ಭ್ರಮೆಯ ಇಂತಹ ಸಾಕಷ್ಟು ಒಗಟಿನ ಆಟಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ.  ನೀವು ಸಹ ಇಂತಹ ಸವಾಲುಗಳನ್ನು ಸ್ವೀಕರಿಸಿರುತ್ತೀರಿ ಅಲ್ವಾ. ಇಲ್ಲೊಂದು ಅದೇ ರೀತಿಯ ಆಪ್ಟಿಕಲ್‌ ಚಿತ್ರವೊಂದು ವೈರಲ್‌ ಆಗಿದ್ದು, ಅದರಲ್ಲಿ ನಿಮಗೆ ತೋಳವನ್ನು ಹುಡುಕಲು ಸವಾಲನ್ನು ನೀಡಲಾಗಿದೆ. ಬರೀ 7 ಸೆಕೆಂಡುಗಳಲ್ಲಿ ಚಿತ್ರದಲ್ಲಿ ಅಡಗಿರುವ ತೋಳವನ್ನು ಹುಡುಕುವ ಮೂಲಕ ನಿಮ್ಮ ದೃಷ್ಟಿ ತೀಕ್ಷ್ಣತೆ ಎಷ್ಟಿದೆ ಎಂಬುದನ್ನು ಪರೀಕ್ಷಿಸಿ.

ಈ ಚಿತ್ರದಲ್ಲಿ ಅಡಗಿರುವ ತೋಳವನ್ನು ಹುಡುಕಲು ಸಾಧ್ಯವೆ?

ಮೇಲಿನ ಚಿತ್ರದಲ್ಲಿ ನೀವು ಪೊದೆಯನ್ನು ಕಾಣಬಹುದು. ಮೇಲ್ನೋಟಕ್ಕೆ ಬರೀ ಪೊದೆ ಕಾಣಿಸಿದರೂ, ಅದರೊಳಗೊಂದು ತೋಳ ಅಡಗಿ ಕುಳಿತಿದೆ. ನೀವು 7 ಸೆಕೆಂಡುಗಳಲ್ಲಿ ಆ ತೋಳವನ್ನು ಹುಡುಕುವ ಮೂಲಕ ನಿಮ್ಮ ದೃಷ್ಟಿ ತೀಕ್ಷ್ಣತೆ ಎಷ್ಟಿದೆ ಎಂಬುದನ್ನು ಪರೀಕ್ಷಿಸಿ. ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು crafty-cow9480 ಹೆಸರಿನ ರೆಡ್ಡಿಟ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ.

ಪೋಸ್ಟ್ ಇಲ್ಲಿದೆ ನೋಡಿ:

Find the coyote
byu/Crafty-Cow9480 inFindTheSniper

ಇದನ್ನೂ ಓದಿ
ಈ ಚಿತ್ರದಲ್ಲಿರುವ ಕಲ್ಲುಗಳ ಮಧ್ಯೆ ಅಡಗಿರುವ ಕಪ್ಪೆಯನ್ನು ಹುಡುಕಲು ಸಾಧ್ಯವೆ?
ಈ ಚಿತ್ರದಲ್ಲಿ ಅಡಗಿರುವ ಮೊಲವನ್ನು ಹುಡುಕಬಲ್ಲಿರಾ?
ಈ ಜೇನುನೊಣದ ಸರಿಯಾದ ನೆರಳು ಯಾವುದೆಂದು ಹೇಳಬಲ್ಲಿರಾ?
ಕಾಡಿನಲ್ಲಿ ಅಡಗಿ ಕುಳಿತಿರುವ ನಾಯಿಯನ್ನು ಹುಡುಕಬಲ್ಲಿರಾ?

ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೀರಾ?

ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ನಿಮಗೆ ಮೆಲ್ನೋಟಕ್ಕೆ ಬರೀ ಹಸರಿ ಬಣ್ಣದ ಪೊದೆ, ಎಲೆಗಳೇ ಕಾಣಿಸಬಹುದು. ಆದರೆ ನೀವು ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಎಲೆಗಳ ನಡುವೆ ಒಂದು ತೊಳ ಅಡಗಿ ಕುಳಿತಿರುವುದು ಗಮನಕ್ಕೆ ಬರಬಹುದು. ಈ ಸವಾಲನ್ನು ಪೂರೈಸಲು ದೃಷ್ಟಿ ತೀಕ್ಷ್ಣತೆಯ ಜೊತೆಗೆ ಏಕಾಗ್ರತೆಯೂ ತುಂಬಾನೇ ಮುಖ್ಯವಾಗಿದೆ.

ಇದನ್ನೂ ಓದಿ: ಈ ಚಿತ್ರದಲ್ಲಿರುವ ಕಲ್ಲುಗಳ ಮಧ್ಯೆ ಅಡಗಿರುವ ಕಪ್ಪೆಯನ್ನು ಹುಡುಕಲು ಸಾಧ್ಯವೆ?

ಇಲ್ಲಿದೆ ಉತ್ತರ:

ಎಲೆಗಳ ನಡುವೆ ಅಡಗಿರುವ ತೋಳವನ್ನು ಹುಡುಕುವಲ್ಲಿ ಯಶಸ್ವಿಯಾದವರಿಗೆ ಅಭಿನಂದನೆಗಳು. ನೀವು ಅತ್ಯುತ್ತಮ ವೀಕ್ಷಣಾ ಕೌಶಲ್ಯವನ್ನು ಹೊಂದಿದ್ದೀರಿ ಎಂದರ್ಥ. ಒಂದು ವೇಳೆ ನೀವೇನಾದರೂ ಈ ಸವಾಲನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ನಿಮಗಾಗಿ ಇಲ್ಲಿದೆ ಉತ್ತರ.

ನೀವು ಚಿತ್ರ ಎಡ ಭಾಗದಲ್ಲಿ ಕಣ್ಣು ಹಾಯಿಸಿದರೆ, ಮುರಿದು ಬಿದ್ದ ಮೇಜಿನ ಪಕ್ಕ ಹಸಿರು ಎಳೆಗಳ ಮಧ್ಯೆ ತೊಳವೊಂದು ಅಡಗಿ ಕುಳಿತಿರುವುದು ನಿಮ್ಮ ಗಮನಕ್ಕೆ ಬರಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ