ಹದಿಹರೆಯದ ಮಕ್ಳು ಪ್ರೀತಿ-ಪ್ರೇಮ ಅಂತೆಲ್ಲಾ ದಾರಿ ತಪ್ಬಾರ್ದು ಎಂದ್ರೆ ಪೋಷಕರು ಏನು ಮಾಡ್ಬೇಕು

ಹದಿಹರೆಯದ ವಯಸ್ಸಿನಲ್ಲಿ ಮಕ್ಕಳು ಪ್ರೀತಿ, ಪ್ರೇಮದ ಆಕರ್ಷಣೆಗೊಳಗಾಗುವುದು ಸಹಜ. ಆದರೆ ಈ ಆಕರ್ಷಣೆ ತಪ್ಪು ದಿಕ್ಕಿನಲ್ಲಿ ಹೋದರೆ, ಅದು ಅವರ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಇದೇ ಕಾರಣದಿಂದ ಹದಿಹರೆಯದ ಮಕ್ಕಳ ಪೋಷಕರ ಮನಸ್ಸಿನಲ್ಲೂ ಮಕ್ಕಳು ಪ್ರೀತಿಯಲ್ಲಿ ಬಿದ್ರೆ ಏನ್‌ ಕಥೆ ಎಂಬ ಭಯ ಇದ್ದೇ ಇರುತ್ತದೆ. ಹಾಗಾಗಿ ಮಕ್ಕಳು ಪ್ರೀತಿ ಪ್ರೇಮ ಅಂತೆಲ್ಲಾ ದಾರಿ ತಪ್ಪಬಾರದು ಎಂದ್ರೆ ಪೋಷಕರು ತಮ್ಮ ಮಕ್ಕಳಿಗೆ ಸರಿಯಾದ ಮಾರ್ಗದರ್ಶನವನ್ನು ನೀಡುವುದು ಅತೀ ಅವಶ್ಯಕ.

ಹದಿಹರೆಯದ ಮಕ್ಳು ಪ್ರೀತಿ-ಪ್ರೇಮ ಅಂತೆಲ್ಲಾ ದಾರಿ ತಪ್ಬಾರ್ದು ಎಂದ್ರೆ ಪೋಷಕರು ಏನು ಮಾಡ್ಬೇಕು
ಸಾಂದರ್ಭಿಕ ಚಿತ್ರ
Image Credit source: Getty Images

Updated on: Jun 16, 2025 | 5:26 PM

ಹದಿಹರೆಯದ (teenage) ವಯಸ್ಸು ಅನ್ನೋದು ಮಕ್ಕಳ ಜೀವನದಲ್ಲಿ ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಒಂದಷ್ಟು ಬದಲಾವಣೆಗಳಾಗುವ ಒಂದು ಹಂತವಾಗಿದೆ. ದೈಹಿಕ ಬದಲಾವಣೆಯ ಜೊತೆಗೆ ಹಾರ್ಮೋನುಗಳ ಕಾರಣದಿಂದಾಗಿ ಮನಸ್ಸಿನ ಭಾವನೆಗಳಲ್ಲಿಯೂ ಸಹ ಒಂದಷ್ಟು ಬದಲಾವಣೆಗಳು ಉಂಟಾಗುತ್ತದೆ. ಈ ಹಂತದಲ್ಲಿ ಮಕ್ಕಳು ಪ್ರೀತಿ ಪ್ರೇಮ ಅಂತೆಲ್ಲಾ ಆಕರ್ಷಣೆಗೆ ಒಳಗಾಗುತ್ತಾರೆ. ಅದರಲ್ಲೂ ಕೆಲವು ಮಕ್ಕಳು ಪ್ರೀತಿಯ ವಿಷಯದಲ್ಲಿ ದಾರಿ ತಪ್ಪಿ ತಮ್ಮ ಓದು ಮತ್ತು ಉತ್ತಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಹೀಗಿರುವಾಗ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪೋಷಕರು (Parenting Tips) ತಮ್ಮ ಹದಿಹರೆಯದ ಮಕ್ಕಳಿಗೆ ಒಂದಷ್ಟು ಮಾರ್ಗದರ್ಶನಗಳನ್ನು ನೀಡುವುದು ಅತೀ ಅವಶ್ಯಕವಾಗಿದೆ.

ಮಕ್ಕಳು ಪ್ರೀತಿಯಲ್ಲಿ ಬೀಳಬಾರದೆಂದರೆ ಪೋಷಕರು ಏನು ಮಾಡಬೇಕು?

ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಿ: ನೀವು ಮಕ್ಕಳೊಂದಿಗೆ ಕಟ್ಟುನಿಟ್ಟಾಗಿರುವ ಬದಲು ಅವರೊಂದಿಗೆ ಮುಕ್ತವಾಗಿ ಮಾತನಾಡಿ. ಪ್ರತಿದಿನ ಶಾಲಾಕಾಲೇಜುಗಳಲ್ಲಿ ಏನೆಲ್ಲಾ ಆಯ್ತು ಅಂತೆಲ್ಲಾ ಫ್ರೆಂಡ್ಲಿಯಾಗಿ ಕೇಳಿ. ಆಗ ಮಕ್ಕಳು ಕೂಡ ನಿಮ್ಮೊಂದಿಗೆ ಮುಕ್ತವಾಗಿ ಮಾತನಾಡುತ್ತಾರೆ. ಒಂದು ವೇಳೆ ಅವರು ಪ್ರೀತಿ-ಪ್ರೇಮದ ಕಡೆಗೆ ಆಕರ್ಷಿತರಾಗಿದ್ದಾರೆ ಎಂದಾದ್ರೆ ಗದರುವ ಬದಲು ಒಳ್ಳೆಯ ರೀತಿಯಲ್ಲಿ ಮಾರ್ಗದರ್ಶನ  ನೀಡುವ ಮೂಲಕ ಮಕ್ಕಳ ಮನಸ್ಸನ್ನು ಬದಲಾಯಿಸಿ.

ಆದ್ಯತೆಗಳ ಬಗ್ಗೆ ವಿವರಿಸಿ: ಹದಿಹರೆಯದ ಮಕ್ಕಳಿಗೆ ಪೋಷಕರು ಅವರು ಯಾವುದಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂಬುದನ್ನು ತಿಳಿಸಬೇಕು. ಈ ವಯಸ್ಸಿನಲ್ಲಿ ಶಿಕ್ಷಣ ಮತ್ತು ಭವಿಷ್ಯದ ಕಡೆಗೆ ಆದ್ಯತೆ ನೀಡಬೇಕು ಎಂದು ಹೇಳಿ. ಮಕ್ಕಳಿಗೆ ಪ್ರೇರಕ ಕಥೆಗಳನ್ನು ಹೇಳಿ, ಜೊತೆಗೆ ಕಠಿಣ ಪರಿಶ್ರಮ ಮತ್ತು ಗುರಿಗಳನ್ನು ಸಾಧಿಸುವ ಮಹತ್ವವನ್ನು ತಿಳಿಸಿ. ಇದರ ಜೊತೆಗೆ, ಪೋಷಕರು ಮಕ್ಕಳಿಗೆ ಪ್ರೀತಿ ಮತ್ತು ಸ್ನೇಹದ ನಡುವಿನ ವ್ಯತ್ಯಾಸವನ್ನು ವಿವರಿಸಬೇಕು. ಇದಲ್ಲದೆ, ಅವರನ್ನು ಭಾವನಾತ್ಮಕವಾಗಿ ಬಲಶಾಲಿಗಳನ್ನಾಗಿ ಮಾಡಲು ಕ್ರೀಡೆ, ಕಲೆ ಅಥವಾ ಸಾಮಾಜಿಕ ಚಟುವಟಿಕೆಗಳಂತಹ ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ.

ಇದನ್ನೂ ಓದಿ
ವಿಮಾನ ಹಾರಾಟಕ್ಕೂ ಮುನ್ನ ಎಂಜಿನ್‌ಗಳ ಮೇಲೆ ಕೋಳಿಗಳನ್ನು ಎಸೆಯೋದೇಕೆ?
ಮದುವೆಗೂ ಮೊದಲು ಬಾಳ ಸಂಗಾತಿಯ ಜೊತೆ ಈ ವಿಷಯಗಳನ್ನು ಚರ್ಚಿಸಿ
ನಿಮ್ಮ ಲವ್‌ ವಿಚಾರವಾಗಿ ಮನೆಯವರನ್ನು ಹೀಗೆ ಮನವೊಲಿಸಿ
ಮಕ್ಕಳ ಫೋನ್‌ ಚಟ ಬಿಡಿಸಲು ನಿಮ್ಹಾನ್ಸ್‌ ವತಿಯಿಂದ ಉಚಿತ ಕಾರ್ಯಾಗಾರ

ಇದನ್ನೂ ಓದಿ: ಮಕ್ಕಳ ಸ್ಕ್ರೀನ್‌ ಟೈಮ್‌ ಕಮ್ಮಿ ಮಾಡ್ಬೇಕಾ? ಹಾಗಿದ್ರೆ ನಿಮ್ಹಾನ್ಸ್‌ನ ಫ್ರೀ ಪೇರೆಂಟ್ಸ್‌ ಗ್ರೂಪ್‌ ಸೆಷನ್‌ನಲ್ಲಿ ಭಾಗವಹಿಸಿ

ಪೋಷಕರು ಮಾರ್ಗದರ್ಶಕರಾಗಿರಬೇಕು: ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಸ್ನೇಹಿತ ಮತ್ತು ಮಾರ್ಗದರ್ಶಕರಾಗಬೇಕು. ಸರಿಯಾದ ಮಾರ್ಗದರ್ಶನ ಮತ್ತು ಸ್ನೇಹಪರತೆಯಿಂದ ಮಕ್ಕಳೊಂದಿಗೆ ನಡೆದುಕೊಳ್ಳುವ ಮೂಲಕ ಅವರು ಪ್ರೀತಿ-ಪ್ರೇಮದ ವಿಚಾರದಲ್ಲಿ ದಾರಿ ತಪ್ಪುವುದನ್ನು ತಡೆಯಬಹುದು. ಗದರಿ ಬುದ್ಧಿ ಹೇಳುವ ಬದಲು ಮಕ್ಕಳೊಂದಿಗೆ ಸ್ನೇಹಿತರಂತಿದ್ದು, ಅವರಿಗೆ ಭವಿಷ್ಯದ ಬಗ್ಗೆ ಅರಿವು ಮೂಡಿಸುವಂತಹ ಕೆಲಸ ಮಾಡಿ. ನಿಮ್ಮ ಈ ಮಾರ್ಗದರ್ಶನ ಮಕ್ಕಳು ಪ್ರೀತಿಯಲ್ಲಿ ಬೀಳುವುದನ್ನು ತಡೆಯುತ್ತದೆ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ