ರಾತ್ರಿ ತಡವಾಗಿ ಮಲಗುವವರಿಗೆ ಮಧುಮೇಹದ ಅಪಾಯ ಹೆಚ್ಚು ಏಕೆ, ವೈದ್ಯರು ಏನಂತಾರೆ?
ರಾತ್ರಿ ತಡವಾಗಿ ಮಲಗುವವರಿಗೆ ಮಧುಮೇಹದ ಅಪಾಯ ಹೆಚ್ಚಿರುತ್ತದೆ, ಭಾರತದಲ್ಲಿ ಟೈಪ್-2 ಡಯಾಬಿಟಿಸ್ ಅತಿ ಹೆಚ್ಚು ಜನರನ್ನು ಕಾಡುವ ಸಾಂಕ್ರಾಮವಲ್ಲದ ಕಾಯಿಲೆಯಾಗಿದೆ. ವಿಶೇಷವಾಗಿ ತಪ್ಪು ಆಹಾರ ಪದ್ಧತಿ, ಅನಾರೋಗ್ಯಕರ ಜೀವನಶೈಲಿ, ಒತ್ತಡ ಇತ್ಯಾದಿ. ಬಹಳ ಮುಖ್ಯವಾದ ಅಧ್ಯಯನವೊಂದು ಹೊರಬಿದ್ದಿದ್ದು, ರಾತ್ರಿ ತಡವಾಗಿ ಎಚ್ಚರವಾಗಿರುವುದು ಮತ್ತು ಬೆಳಗ್ಗೆ ತಡವಾಗಿ ಏಳುವ ಅಭ್ಯಾಸವು ಮಧುಮೇಹಿಗಳ ಹೆಚ್ಚಳಕ್ಕೆ ಕಾರಣವಾಗಿದೆ.
ಭಾರತದಲ್ಲಿ ಟೈಪ್-2 ಡಯಾಬಿಟಿಸ್ ಅತಿ ಹೆಚ್ಚು ಜನರನ್ನು ಕಾಡುವ ಸಾಂಕ್ರಾಮವಲ್ಲದ ಕಾಯಿಲೆಯಾಗಿದೆ. ವಿಶೇಷವಾಗಿ ತಪ್ಪು ಆಹಾರ ಪದ್ಧತಿ, ಅನಾರೋಗ್ಯಕರ ಜೀವನಶೈಲಿ, ಒತ್ತಡ ಇತ್ಯಾದಿ. ಬಹಳ ಮುಖ್ಯವಾದ ಅಧ್ಯಯನವೊಂದು ಹೊರಬಿದ್ದಿದ್ದು, ರಾತ್ರಿ ತಡವಾಗಿ ಎಚ್ಚರವಾಗಿರುವುದು ಮತ್ತು ಬೆಳಗ್ಗೆ ತಡವಾಗಿ ಏಳುವ ಅಭ್ಯಾಸವು ಮಧುಮೇಹ ಹೆಚ್ಚಳಕ್ಕೆ ಕಾರಣವಾಗಿದೆ.
ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಜನರು ತಡರಾತ್ರಿಯಲ್ಲಿ ಮಲಗುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಆದರೆ ಅವರ ನಡುವೆ ರಾತ್ರಿ ತಡವಾಗಿ ಮಲಗಿ ಬೆಳಗ್ಗೆ ಬೇಗನೆ ಎದ್ದು ಕಚೇರಿಗೆ ಹೋಗುತ್ತಾರೆ, ಇದರಿಂದಾಗಿ ಅವರ ನಿದ್ರೆ ಅಪೂರ್ಣವಾಗಿರುತ್ತದೆ. ನಿದ್ರೆಯ ಕೊರತೆಯಿಂದಾಗಿ, ಅವರು ಮಧುಮೇಹ ಸೇರಿದಂತೆ ಅನೇಕ ಇತರ ಕಾಯಿಲೆಗಳ ಅಪಾಯ ಹೆಚ್ಚಿರುತ್ತದೆ.
ಈ ಕುರಿತು ವೈದ್ಯರಾಗಿರುವ ಮುಜಮ್ಮಿಲ್ ಮಾತನಾಡಿ, ತಡರಾತ್ರಿಯಲ್ಲಿ ಎಚ್ಚರವಾಗಿರುವ ಜನರಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಳವಾಗುವ ಕುರಿತು ಕೆಲವು ಎಚ್ಚೆರಿಕೆ ನೀಡಿದ್ದಾರೆ. ನಿದ್ರೆಯ ಸಮಯ, ದೇಹದ ಕೊಬ್ಬು ಮತ್ತು ಮಧುಮೇಹದ ಅಪಾಯದ ನಡುವಿನ ಸಂಬಂಧವನ್ನು ಕೇಂದ್ರೀಕರಿಸಿದೆ.
ಮತ್ತಷ್ಟು ಓದಿ: Health Tips: ಉತ್ತಮ ನಿದ್ರೆ ಬರಲು ಈ ಹಣ್ಣು ಸೇವನೆ ಮಾಡುವುದು ಒಳ್ಳೆಯದೇ?
ಇದು ದೀರ್ಘಕಾಲದ ಸ್ಥಿತಿಯಾಗಿದ್ದು, ದೇಹವು ಇನ್ಸುಲಿನ್ (ಮೇದೋಜೀರಕ ಗ್ರಂಥಿಯಲ್ಲಿ ಬಿಡುಗಡೆಯಾಗುವ ಹಾರ್ಮೋನ್) ಅನ್ನು ಸರಿಯಾಗಿ ಬಳಸಲು ಸಾಧ್ಯವಾಗುವುದಿಲ್ಲ, ಇದು ಅಧಿಕ ರಕ್ತದ ಸಕ್ಕರೆಗೆ ಕಾರಣವಾಗಬಹುದು. ಇದು ಸಾಮಾನ್ಯವಾಗಿ ಬೊಜ್ಜು, ದೈಹಿಕ ನಿಷ್ಕ್ರಿಯತೆ ಮತ್ತು ಕಳಪೆ ಆಹಾರದಿಂದಲೂ ಆಗಿರಬಹುದು.
ನೆದರ್‌ಲ್ಯಾಂಡ್ಸ್‌ನ ಲೈಡೆನ್ ಯೂನಿವರ್ಸಿಟಿ ಮೆಡಿಕಲ್ ಸೆಂಟರ್‌ನ ಡಾ. ಜೆರೊಯೆನ್ ವ್ಯಾನ್ ಈ ಕುರಿತು ಮಾಹಿತಿ ನೀಡಿದ್ದಾರೆ. ಜನರಲ್ಲಿ 3 ವಿಧದ ನಿದ್ರೆಯ ಮಾದರಿಗಳಿವೆ.
ಆರಂಭಿಕ ಕ್ರೋನೋಟೈಪ್:ಬೇಗನೆ ಏಳಲು ಮತ್ತು ಸಮಯಕ್ಕೆ ಮಲಗಲು ಇಷ್ಟಪಡುವ ಜನರು. ಮಧ್ಯಂತರ ಕ್ರೋನೋಟೈಪ್: ಸಮತೋಲಿತ ನಿದ್ರೆಯ ವೇಳಾಪಟ್ಟಿಯನ್ನು ಹೊಂದಿರುತ್ತಾರೆ ಅಂದರೆ ಬೇಗವೂ ಮಲಗುವುದಿಲ್ಲ, ತಡವಾಗಿಯೂ ಮಲಗುವುದಿಲ್ಲ. ಲೇಟ್ ಕ್ರೊನೊಟೈಪ್ : ತಡರಾತ್ರಿವರೆಗೆ ಎಚ್ಚರವಾಗಿರುತ್ತಾರೆ ಮತ್ತು ಬೆಳಗ್ಗೆ ತಡವಾಗಿ ಏಳಲು ಇಷ್ಟಪಡುತ್ತಾರೆ.
ನಿದ್ರೆಯ ನಷ್ಟವು ಕಾರ್ಟಿಸೋಲ್‌ನಂತಹ ಒತ್ತಡದ ಹಾರ್ಮೋನುಗಳನ್ನು ಹೆಚ್ಚಿಸುವ ಮೂಲಕ ಈ ಪರಿಣಾಮಗಳನ್ನು ತೀವ್ರಗೊಳಿಸುತ್ತದೆ. ಇದು ಗ್ಲೂಕೋಸ್ ಹೋಮಿಯೋಸ್ಟಾಸಿಸ್ ಅನ್ನು ದುರ್ಬಲಗೊಳಿಸುತ್ತದೆ ಇದು ಮಧುಮೇಹಕ್ಕೆ ಎಡೆ ಮಾಡಿಕೊಡುತ್ತದೆ.
ಸಮತೋಲಿತ ಆಹಾರ ಮತ್ತು ಸ್ಥಿರವಾದ ವ್ಯಾಯಾಮದಿಂದಲೂ ಮಧುಮೇಹ ಬಾರದಂತೆ ನೋಡಿಕೊಳ್ಳಲು ಸಾಧ್ಯ. ಮಧುಮೇಹದ ಅಪಾಯವನ್ನು ನಿಯಂತ್ರಿಸಲು ಮತ್ತು ಆರೋಗ್ಯವನ್ನು ಉತ್ತೇಜಿಸಲು ನಿದ್ರೆ ಬಹಳ ಮುಖ್ಯ ಪಾತ್ರವಹಿಸುತ್ತದೆ. ಹಸಿವೆಂದು ಮಧ್ಯರಾತ್ರಿ ತಿನ್ನುವುದನ್ನು ಕಡಿಮೆ ಮಾಡಿ. ನಿದ್ರೆಯ ವೇಳಾಪಟ್ಟಿಯನ್ನು ಬದಲಾಯಿಸಿ. ಸರಿಯಾದ ಸಮಯಕ್ಕೆ ಮಲಗುವುದನ್ನು ರೂಢಿಸಿಕೊಳ್ಳಿ. ಆಗ ಸರಿಯಾದ ಸಮಯಕ್ಕೆ ನೀವು ಏಳುತ್ತೀರಿ ಆಗ ಮಧುಮೇಹ ಮಾತ್ರವಲ್ಲ ಹಲವು ರೋಗಗಳಿಂದ ದೂರವಿರುತ್ತೀರಿ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ