Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test : ನಿಮ್ಮ ಉಗುರು ಯಾವ ಆಕಾರದಲ್ಲಿದೆ? ರಿವೀಲ್ ಮಾಡುತ್ತೆ ರಹಸ್ಯಮಯ ವ್ಯಕ್ತಿತ್ವ

ನಮ್ಮ ದೇಹದ ಒಂದೊಂದು ಭಾಗವೂ ಒಂದೊಂದು ರೀತಿ ಇರುತ್ತದೆ. ಆದರೆ ಈ ದೇಹದ ಭಾಗಗಳ ಆಕಾರವು ನಮ್ಮ ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತದೆ. ಈಗಾಗಲೇ ನಿಮ್ಮ ಕಣ್ಣು, ಕಿವಿ, ಮೂಗು, ನಾಲಗೆ, ಹಣೆ, ತುಟಿ ಹೀಗೆ ದೇಹದ ಅಂಗಗಳ ಆಧಾರದ ಮೇಲೆ ಗುಣಸ್ವಭಾವ ತಿಳಿಯಬಹುದು ಎನ್ನುವುದು ತಿಳಿದೇ ಇದೆ. ಅದೇ ರೀತಿ ವ್ಯಕ್ತಿಯ ವ್ಯಕ್ತಿತ್ವವನ್ನು ಉಗುರಿನ ಆಕಾರದಿಂದಲೂ ತಿಳಿಯಬಹುದಂತೆ. ಹಾಗಾದ್ರೆ ಆ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

Personality Test : ನಿಮ್ಮ ಉಗುರು ಯಾವ ಆಕಾರದಲ್ಲಿದೆ? ರಿವೀಲ್ ಮಾಡುತ್ತೆ ರಹಸ್ಯಮಯ ವ್ಯಕ್ತಿತ್ವ
Personality Test
Follow us
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ

Updated on: Feb 02, 2025 | 12:34 PM

ಪ್ರತಿಯೊಬ್ಬರ ದೇಹದ ಅಂಗಗಳು ಕೂಡ ಒಂದೊಂದು ಆಕಾರವನ್ನು ಹೊಂದಿರುತ್ತವೆ. ಅದರಲ್ಲಿಯೂ ಕೈ ಬೆರಳುಗಳು ಒಂದೇ ನೇರ ಇರುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಅದರಂತೆ ಉಗುರುಗಳು ಬೇರೆ ಬೇರೆ ಆಕಾರದಲ್ಲಿರುತ್ತದೆ. ಕೆಲವರದ್ದು ಉಗುರು ಲಂಬವಾಗಿದ್ದರೆ, ಇನ್ನು ಕೆಲವರ ಉಗುರು ಅಗಲವಾಗಿರುತ್ತದೆ. ಕೆಲವರದ್ದು ಚೌಕಕಾರ ಅಥವಾ ಅಂಡಾಕಾರದಲ್ಲಿರುತ್ತದೆ. ಆದರೆ, ನಿಮ್ಮ ಉಗುರುಗಳ ಆಕಾರವು ನಿಮ್ಮ ವ್ಯಕ್ತಿತ್ವದ ಲಕ್ಷಣಗಳನ್ನು ಬಹಿರಂಗಪಡಿಸಬಹುದು.

ಲಂಬ ಆಕಾರದ ಉಗುರು:

ಕೆಲವರ ಉಗುರು ಲಂಬಾಕಾರದಲ್ಲಿದ್ದರೆ ಈ ವ್ಯಕ್ತಿಗಳು ಶಾಂತ, ಸ್ವತಂತ್ರ ಮತ್ತು ಕಲಾತ್ಮಕವಾಗಿರುತ್ತಾರೆ. ಸ್ವತಂತ್ರ ನಿರ್ಧಾರ ಕೈಗೊಳ್ಳುವ ಗುಣ ಇವರಲ್ಲಿರುತ್ತದೆ. ಪ್ರಾಮಾಣಿಕತೆ ಹಾಗೂ ಸ್ವಾಭಿಮಾನದಿಂದ ಬದುಕುವ ವ್ಯಕ್ತಿತ್ವ ಇವರದ್ದು. ಆದರೆ ಯಾವುದೇ ವ್ಯಕ್ತಿಯನ್ನು ಸುಲಭವಾಗಿ ನಂಬಿ ಬಿಡುತ್ತಾರೆ. ಕೆಲವೊಮ್ಮೆ ನಂಬಿದವರಿಂದಲೇ ಮೋಸ ಹೋಗುವ ಸಾಧ್ಯತೆಯೇ ಹೆಚ್ಚು.

ಚೌಕಕಾರದ ಉಗುರು :

ಕೈ ಬೆರಳಿನ ಉಗುರು ಚೌಕಕಾರವಾಗಿದ್ದರೆ ಈ ಜನರು ಸ್ವಂತವಾದ ಆಲೋಚನೆಯೊಂದಿಗೆ ಜೀವನ ನಡೆಸುತ್ತಾರೆ. ಇತರರ ಬಳಿ ಸಲಹೆಯನ್ನು ಪಡೆಯಲು ಇಷ್ಟ ಪಡುವುದಿಲ್ಲ. ಜವಾಬ್ದಾರಿಯನ್ನು ತೆಗೆದುಕೊಂಡು ಎಲ್ಲವನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುವ ವ್ಯಕ್ತಿತ್ವ ಇವರದ್ದಾಗಿರುತ್ತದೆ. ಸಹಾಯಮಯ ಪ್ರವೃತ್ತಿ ಹೊಂದಿರುತ್ತಾರೆ, ಈ ಜನರು ಯಾವುದೇ ಸಮಸ್ಯೆಗಳಿರಲಿ ಸುಲಭವಾಗಿ ಪರಿಹಾರ ಕಂಡುಕೊಳ್ಳುತ್ತಾರೆ. ಜನರು ಧೈರ್ಯವಂತರು. ಹೀಗಾಗಿ ತನ್ನ ಸುತ್ತಮುತ್ತಲಿನವರಿಗೆ ತಮ್ಮ ಮಾತಿನಿಂದಲೇ ಇತರರಿಗೆ ಧೈರ್ಯ ತುಂಬುತ್ತಾರೆ.

ಅಗಲವಾದ ಆಕಾರದ ಉಗುರು:

ಆಯತಾಕಾರದ ಉಗುರುಗಳನ್ನು ಹೊಂದಿರುವ ವ್ಯಕ್ತಿಗಳು ನೇರವಾಗಿ ಮಾತನಾಡುತ್ತಾರೆ. ಮುಕ್ತ ಮನಸ್ಸಿನ ಕೂಡಿದ್ದು ವಿಶ್ವಾಸಾರ್ಹಕ್ಕೆ ಪಾತ್ರರಾಗುತ್ತಾರೆ. ಜವಾಬ್ದಾರಿಯುತರಾಗಿದ್ದು, ಎಲ್ಲಾ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಾರೆ. ಆತ್ಮವಿಶ್ವಾಸವು ಹೆಚ್ಚಿದ್ದು, ಎಲ್ಲಾ ಮಾತಿಗೂ ಕಿವಿಯಾಗುತ್ತೀರಿ. ಹೊಸ ಆಲೋಚನೆಗಳಿಂದ ಕಾರ್ಯ ಪ್ರವೃತ್ತರಾಗುವ ಗುಣ ಇವರದ್ದಾಗಿದ್ದು ಸಮತೋಲನ ಜೀವನ ನಡೆಸುತ್ತಾರೆ.

ಇದನ್ನೂ ಓದಿ: ನೀವು ಪೆನ್ನು ಹಿಡಿಯುವ ಶೈಲಿಯೇ ನಿಮ್ಮ ವ್ಯಕ್ತಿತ್ವ ತಿಳಿಸುತ್ತೆ

ಅಂಡಾಕಾರದ ಉಗುರು:

ಕೆಲವು ವ್ಯಕ್ತಿಗಳ ಉಗುರಿನ ಆಕಾರವು ದುಂಡಗೆ ಇರುತ್ತದೆ. ಉಗುರಿನ ಆಕಾರವು ಈ ರೀತಿಯಿದ್ದರೆ ಇಂತಹ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಭಯ ಪಡುವುದಿಲ್ಲ. ಎಂತಹ ಸಂದರ್ಭ ಎದುರಾದರೂ ಗೊಂದಲಕ್ಕೆ ಒಳಗಾಗದೇ, ಸನ್ನಿವೇಶವನ್ನು ಸಮಾಧಾನದಿಂದ ನಿಭಾಯಿಸುತ್ತಾರೆ. ನೀವು ವಿಷಯಗಳನ್ನು ನಿಧಾನವಾಗಿ ತೆಗೆದುಕೊಳ್ಳಲು ಒಲವು ತೋರುತ್ತೀರಿ. ಜೊತೆಗೆ ಅಧಿಕ ಒತ್ತಡವನ್ನು ನಿಭಾಯಿಸುವ ಶಕ್ತಿ ನಿಮಗಿದೆ ಎಂಬ ವ್ಯಕ್ತಿತ್ವವನ್ನು ತೋರಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಯಚೂರು: ಅನೈತಿಕ ಚಟುವಟಿಕೆಗಳ ತಾಣವಾದಸರ್ಕಾರಿ ಆಸ್ಪತ್ರೆ
ರಾಯಚೂರು: ಅನೈತಿಕ ಚಟುವಟಿಕೆಗಳ ತಾಣವಾದಸರ್ಕಾರಿ ಆಸ್ಪತ್ರೆ
ಕೆಲ ಕಾಂಗ್ರೆಸ್ ನಾಯಕರು ಹೈಕಮಾಂಡ್ ಮಾತಿಗೆ ಕಿವಿಗೊಡುವದಿಲ್ಲವೇ?
ಕೆಲ ಕಾಂಗ್ರೆಸ್ ನಾಯಕರು ಹೈಕಮಾಂಡ್ ಮಾತಿಗೆ ಕಿವಿಗೊಡುವದಿಲ್ಲವೇ?
ಸಾವಿಗೆ ಮುನ್ನ ಚೇತನ್ ಯುಎಸ್​ನಲ್ಲಿರುವ ಸಹೋದರಗೆ ಫೋನ್ ಮಾಡಿದ್ದರು: ಪೊಲೀಸ್
ಸಾವಿಗೆ ಮುನ್ನ ಚೇತನ್ ಯುಎಸ್​ನಲ್ಲಿರುವ ಸಹೋದರಗೆ ಫೋನ್ ಮಾಡಿದ್ದರು: ಪೊಲೀಸ್
ಮಂಗಳೂರು: ಫುಟ್​ಬಾಲ್ ಟೂರ್ನ್​ಮೆಂಟ್ ವೇಳೆ ಪ್ರೇಕ್ಷಕರ ಗ್ಯಾಲರಿ ಕುಸಿತ
ಮಂಗಳೂರು: ಫುಟ್​ಬಾಲ್ ಟೂರ್ನ್​ಮೆಂಟ್ ವೇಳೆ ಪ್ರೇಕ್ಷಕರ ಗ್ಯಾಲರಿ ಕುಸಿತ
ಡಾಲಿ ಧನಂಜಯ ಮದುವೆ: ಬಂಗಾರದ ಸರ ಗಿಫ್ಟ್ ನೀಡಿದ ವಸಿಷ್ಠ ಸಿಂಹ
ಡಾಲಿ ಧನಂಜಯ ಮದುವೆ: ಬಂಗಾರದ ಸರ ಗಿಫ್ಟ್ ನೀಡಿದ ವಸಿಷ್ಠ ಸಿಂಹ
ಸತ್ತ ನಾಲ್ವರಲ್ಲಿ ಒಬ್ಬ 15-ವರ್ಷ ವಯಸ್ಸಿನ ಅಪ್ರಾಪ್ತ, ಸಾಲವೇ ಸಾವಿಗೆ ಕಾರಣ?
ಸತ್ತ ನಾಲ್ವರಲ್ಲಿ ಒಬ್ಬ 15-ವರ್ಷ ವಯಸ್ಸಿನ ಅಪ್ರಾಪ್ತ, ಸಾಲವೇ ಸಾವಿಗೆ ಕಾರಣ?
Daily Devotional: ಸತ್ಯನಾರಾಯಣ ವ್ರತದ ಮಹತ್ವ ಹಾಗೂ ಫಲ ತಿಳಿಯಿರಿ
Daily Devotional: ಸತ್ಯನಾರಾಯಣ ವ್ರತದ ಮಹತ್ವ ಹಾಗೂ ಫಲ ತಿಳಿಯಿರಿ
Daily Horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ, ಯಾರಿಗೆ ಶುಭ ಅಶುಭ?
Daily Horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ, ಯಾರಿಗೆ ಶುಭ ಅಶುಭ?
ವಿಶ್ರಾಂತಿ ತ್ಯಜಿಸಿ ಡಾಲಿಯ ಮದುವೆಗೆ ಬಂದ ‘ಟಗರು’ ಶಿವಣ್ಣ
ವಿಶ್ರಾಂತಿ ತ್ಯಜಿಸಿ ಡಾಲಿಯ ಮದುವೆಗೆ ಬಂದ ‘ಟಗರು’ ಶಿವಣ್ಣ
ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್ ವೇ: ಕಾರಿನ ಮೇಲೆ ಹತ್ತಿದ ಮತ್ತೊಂದು ಕಾರು!
ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್ ವೇ: ಕಾರಿನ ಮೇಲೆ ಹತ್ತಿದ ಮತ್ತೊಂದು ಕಾರು!