AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ನೀವು ಪೆನ್ನು ಹಿಡಿಯುವ ಶೈಲಿಯೇ ನಿಮ್ಮ ವ್ಯಕ್ತಿತ್ವ ತಿಳಿಸುತ್ತೆ

ತಿನ್ನುವುದು, ಕುಡಿಯುವುದು, ನಡೆಯುವುದು ಅಥವಾ ಕುಳಿತುಕೊಳ್ಳುವುದು ಕೂಡ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ತಾವು ಮಾಡುವ ಕೆಲಸ ಕಾರ್ಯದಲ್ಲಿ ತಮ್ಮದೇ ಆದ ಶೈಲಿಯನ್ನು ಹೊಂದಿರುತ್ತಾರೆ. ಅದಲ್ಲದೇ ಪೆನ್ನು ಹಿಡಿದು ಬರೆದು ಬರೆಯುವ ವಿಧಾನದಲ್ಲಿ ವ್ಯತ್ಯಾಸವನ್ನು ಕಾಣಬಹುದು. ಆದರೆ ಈ ಪೆನ್ನು ಹಿಡಿದು ಬರೆಯುವ ರೀತಿ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ. ಹಾಗಾದ್ರೆ ನೀವು ಪೆನ್ನು ಹಿಡಿಯುವ ರೀತಿಯಿಂದಲೇ ನಿಮ್ಮ ನಿಗೂಢ ವ್ಯಕ್ತಿತ್ವವನ್ನು ತಿಳಿಯಬಹುದಾಗಿದ್ದು, ಕುರಿತಾದ ಮಾಹಿತಿ ಇಲ್ಲಿದೆ.

Personality Test: ನೀವು ಪೆನ್ನು ಹಿಡಿಯುವ ಶೈಲಿಯೇ ನಿಮ್ಮ ವ್ಯಕ್ತಿತ್ವ ತಿಳಿಸುತ್ತೆ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Jan 30, 2025 | 12:03 PM

Share

ಇತ್ತೀಚೆಗಿನ ದಿನಗಳಲ್ಲಿ ವ್ಯಕ್ತಿತ್ವಕ್ಕೆ ಸಂಬಂಧ ಪಟ್ಟ ಪರೀಕ್ಷೆಗಳು ಸಹಜವಾಗಿ ಎಲ್ಲರ ಗಮನ ಸೆಳೆಯುತ್ತದೆ. ಕಣ್ಣು, ಕಿವಿ, ಮೂಗು, ನಾಲಿಗೆ, ಹಣೆಯ ಆಕಾರದ ಆಧಾರದ ಮೇಲೆ ಗುಣಸ್ವಭಾವವನ್ನು ತಿಳಿದುಕೊಳ್ಳಬಹುದು. ಆದರೆ ಪೆನ್ನು ಹಿಡಿಯುವ ರೀತಿಯೂ ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತದೆಯಂತೆ. ಹೌದು, ನೀವು ಯಾರಿಗಾದರೂ ಪೆನ್ನು ನೀಡಿದರೆ, ಆ ವ್ಯಕ್ತಿಯು ಅದನ್ನು ತನ್ನದೇ ಆದ ಶೈಲಿಯಲ್ಲಿ ಹಿಡಿದಿಟ್ಟುಕೊಳ್ಳುತ್ತಾನೆ. ಕೆಲವರು ಪೆನ್ನನ್ನು ಎರಡು ಬೆರಳುಗಳ ಸಹಾಯದಿಂದ ಹಿಡಿದಿಟ್ಟುಕೊಂಡರೆ, ಕೆಲ ಜನರು ಪೂರ್ಣ ಪ್ರಮಾಣದಲ್ಲಿ ಒತ್ತಡ ಹಾಕುತ್ತಾರೆ. ಹಾಗಾದ್ರೆ ನೀವು ಯಾವ ರೀತಿ ಪೆನ್ನು ಹಿಡಿಯುತ್ತೀರಿ ಎಂದು ಗಮನಿಸಿ, ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಕಂಡುಕೊಳ್ಳಿ.

  • ಹೆಬ್ಬೆರಳು, ತೋರುಬೆರಳು ಮತ್ತು ಮಧ್ಯದ ಬೆರಳಿನ ನಡುವೆ ಪೆನ್ನು ಹಿಡಿಯುವ ಶೈಲಿ : ಹೆಬ್ಬೆರಳು, ತೋರುಬೆರಳು ಮತ್ತು ಮಧ್ಯದ ಬೆರಳಿನ ನಡುವೆ ಪೆನ್ನು ಹಿಡಿದುಕೊಳ್ಳುವ ಜನರು ದ್ವಿಗುಣ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಈ ಜನರು ಕೆಲವು ವಿಷಯಗಳು ಹಾಗೂ ವ್ಯಕ್ತಿಗಳ ಬಗ್ಗೆ ವಿಮರ್ಶಾತ್ಮಕವಾಗಿ ಯೋಚಿಸುತ್ತಾರೆ. ಈ ಜನರು ತುಂಬಾ ಕರುಣಾಮಯಿಯಾಗಿದ್ದು, ಸದಾ ಸಂತೋಷವಾಗಿರಲು ಇಷ್ಟ ಪಡುತ್ತಾರೆ. ತಪ್ಪು ಮಾಡಲು ಇಷ್ಟಪಡುವುದಿಲ್ಲ. ಕೆಲವೊಮ್ಮೆ ತಪ್ಪುಗಳು ಸಂಭವಿಸಿದಾಗ ವಿಶ್ಲೇಷಿಸಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ. ಪರಿಸ್ಥಿತಿಗೆ ಅನುಗುಣವಾಗಿ ಭಾವನಾತ್ಮಕ ಹಾಗೂ ವಿಶ್ಲೇಷಣಾತ್ಮಕ ವ್ಯಕ್ತಿಗಳು ಎನ್ನಬಹುದು.
  • ತೋರುಬೆರಳು ಮತ್ತು ಮಧ್ಯದ ಬೆರಳಿನ ನಡುವೆ ಪೆನ್ನು ಹಿಡಿಯುವ ಶೈಲಿ : ತೋರುಬೆರಳು ಮತ್ತು ಮಧ್ಯದ ಬೆರಳಿನ ನಡುವೆ ಪೆನ್ನು ಹಿಡಿದು ಬರೆಯುತ್ತಿದ್ದರೆ ಈ ವ್ಯಕ್ತಿಗಳು ಪೂರ್ಣವಾಗಿ ಬದುಕಲು ಇಷ್ಟಪಡುತ್ತಾರೆ. ನಿಮ್ಮ ಆತ್ಮೀಯರು ಮಾಡಿದ ತಪ್ಪನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಕ್ಷಮಿಸುವ ಗುಣ ಇವರಲ್ಲಿ ಅಧಿಕವಾಗಿರುತ್ತದೆ. ಸೇಡು ತೀರಿಸಿಕೊಳ್ಳುವ ಅಥವಾ ಗಾಸಿಪ್ ಮಾಡಲು ಇಷ್ಟಪಡದ ಎಲ್ಲಾ ನಕಾರಾತ್ಮಕ ವಿಷಯಗಳಿಂದ ದೂರ ಇರುವ ವ್ಯಕ್ತಿಗಳಿವರು. ಎಲ್ಲರ ಬಗ್ಗೆ ಕಾಳಜಿವಹಿಸುವ ಹಾಗೂ ಗೌರವದಿಂದ ಕಾಣಲು ಇಷ್ಟ ಪಡುತ್ತಾರೆ.
  • ಪೆನ್ನು ಹಿಡಿಯಲು ಹೆಬ್ಬೆರಳನ್ನು ಅತಿಕ್ರಮಿಸುತ್ತಿರುವ ಬೆರಳುಗಳು : ಈ ರೀತಿ ಪೆನ್ನು ಹಿಡಿಯುವ ವ್ಯಕ್ತಿಗಳು ಹೆಚ್ಚು ಮಹತ್ವಾಕಾಂಕ್ಷೆ ಹೊಂದಿರುತ್ತಾರೆ. ಭಾವನೆಗಳಿಂದ ಪ್ರಭಾವಿತವಾಗುವ ಕಾರಣ ಈ ವ್ಯಕ್ತಿಗಳು ತೊಂದರೆ ಅನುಭವಿಸುವುದೇ ಹೆಚ್ಚು. ಅತಿಯಾದ ಆಲೋಚನೆಗಳು ಹಾಗೂ ಭಾವನೆಗಳನ್ನು ಹೊಂದಿರುತ್ತಾರೆ. ಒತ್ತಡದ ಸಂದರ್ಭಗಳಲ್ಲಿ ಆತಂಕಕ್ಕೆ ಒಳಗಾಗುವುದೇ ಹೆಚ್ಚು. ಸಹಾಯ ಮಾಡಿದ ವ್ಯಕ್ತಿಯನ್ನು ಯಾವತ್ತೂ ಮರೆಯುವುದಿಲ್ಲ. ಕೆಲವು ವಿಷಯಗಳು ಸುಲಭವಾಗಿ ನಿಮ್ಮನ್ನು ನೋಯಿಸುತ್ತದೆ. ವಿಶ್ವಾಸಾರ್ಹ ವ್ಯಕ್ತಿತ್ವವನ್ನು ಹೊಂದಿದ್ದು, ಸ್ನೇಹಿತರು ಮತ್ತು ಕುಟುಂಬಕ್ಕೆ ಈ ಜನರು ಅಗತ್ಯವಾಗಿರುತ್ತಾರೆ.
  • ತೋರುಬೆರಳು ಮತ್ತು ಹೆಬ್ಬೆರಳಿನ ನಡುವೆ ಪೆನ್ನು ಹಿಡಿಯುವ ಶೈಲಿ : ಈ ರೀತಿ ಪೆನ್ನು ಹಿಡಿಯುವ ಜನರು ನಿಗೂಢ ವ್ಯಕ್ತಿಗಳಾಗಿರುತ್ತಾರೆ. ತಾವು ಮಾಡುವ ಕೆಲಸದ ಬಗ್ಗೆ ಬಹಿರಂಗ ಪಡಿಸುವುದಿಲ್ಲ. ಬಹಿರ್ಮುಖಿಗಳಾಗಿದ್ದು, ಎಲ್ಲರನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಆಸಕ್ತಿ ಈ ಜನರಲ್ಲಿ ಹೆಚ್ಚಿರುತ್ತದೆ. ಭಾವನೆಗಳನ್ನು ತೋರ್ಪಡಿಸಲು ಹಿಂದೇಟು ಹಾಕುವ ಸ್ವಭಾವ ಇವರಾದ್ದಾಗಿದ್ದು, ನೋವಾದಾಗ ಮೌನ ವಹಿಸುತ್ತಾರೆ. ಅತಿಯಾದ ಉತ್ಸಾಹವು ಎಲ್ಲರೂ ಈ ವ್ಯಕ್ತಿಗಳತ್ತ ಆಕರ್ಷಿತರಾಗಲು ಕಾರಣವಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ