
ಒಬ್ಬ ವ್ಯಕ್ತಿಯ ನಡವಳಿಕೆಯಿಂದ ಆತನ ವ್ಯಕ್ತಿತ್ವವನ್ನು ಅಳೆಯುವಂತೆ ವ್ಯಕ್ತಿತ್ವ ಪರೀಕ್ಷೆಯ (Personality Test) ವಿಧಾನಗಳ ಮೂಲಕ ನಮ್ಮ ನಿಗೂಢ ವ್ಯಕ್ತಿತ್ವವನ್ನು ನಾವೇ ಅಳೆಯಬಹುದು. ಈ ಪರೀಕ್ಷೆಯು ಒಬ್ಬ ವ್ಯಕ್ತಿಯ ಚಿಂತನೆ, ನಡವಳಿಕೆ ಮತ್ತು ಭಾವನಾತ್ಮಕ ನಿಲುವುಗಳನ್ನು ವಿಶ್ಲೇಷಿಸಲಿರುವ ಒಂದೊಳ್ಳೆ ಮಾರ್ಗವಾಗಿದೆ. ಹೀಗೆ ಆಪ್ಟಿಕಲ್ ಇಲ್ಯೂಷನ್‌ನಂತಹ ವ್ಯಕ್ತಿತ್ವ ಪರೀಕ್ಷೆಗಳ ಮೂಲಕ ನೀವು ಅಂತರ್ಮುಖಿಯೋ, ಬಹಿರ್ಮುಖಿಯೋ, ಶಾಂತ ಸ್ವಭಾವವನ್ನು ಹೊಂದಿರುವವವರೇ ಎಂಬುದನ್ನೆಲ್ಲಾ ಪರೀಕ್ಷೆ ಮಾಡಿರುತ್ತೀರಿ ಅಲ್ವಾ. ಅಂತಹದ್ದೊಂದು ಚಿತ್ರ ಇದೀಗ ವೈರಲ್ ಆಗಿದ್ದು, ಆ ಚಿತ್ರದಲ್ಲಿ ನಿಮಗ್ಯಾವ ಅಂಶ ಕಾಣಿಸಿತು ಎಂಬುದರ ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳು (strengths and weaknesses) ಯಾವುವು ಎಂಬುದನ್ನು ಪರೀಕ್ಷಿಸಿ.
ಈ ನಿರ್ದಿಷ್ಟ ಆಪ್ಟಿಕಲ್ ಇಲ್ಯೂಷನ್ ಪರ್ಸನಾಲಿಟಿ ಟೆಸ್ಟ್ ಚಿತ್ರದಲ್ಲಿ ಮರ, ಗೊರಿಲ್ಲಾ, ಸಿಂಹ, ಮೀನು ಈ ನಾಲ್ಕು ಅಂಶಗಳಿದ್ದು, ಇವುಗಳಲ್ಲಿ ನೀವು ಯಾವುದನ್ನು ಮೊದಲು ಗಮನಿಸುತ್ತೀರಿ ಎಂಬುದರ ಮೇಲೆ ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳು ಯಾವುವು ಎಂಬುದನ್ನು ತಿಳಿಯಿರಿ.
ಮೊದಲು ಮರವನ್ನು ನೋಡಿದರೆ: ನೀವು ಮೊದಲು ಮರವನ್ನು ನೋಡಿದರೆ ವಿಶ್ಲೇಷಣಾತ್ಮಕ, ತಾರ್ಕಿಕ ಸ್ವಭಾವವನ್ನು ಹೊಂದಿರುವ ನೀವು ವಸ್ತುನಿಷ್ಠವಾಗಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದೀರಿ. ನೀವು ಅತಿಯಾಗಿ ತರ್ಕಬದ್ಧವಾಗಿ ಯೋಚಿಸುವುದರಿಂದ ಭಾವನೆಗಳಿಗೆ ಹೆಚ್ಚು ಬೆಲೆ ಕೊಡುವುದಿಲ್ಲ ಮತ್ತು ನೀವು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಕೂಡ ಹಿಂಜರಿಯುತ್ತೀರಿ ಇದು ನಿಮ್ಮ ದೌರ್ಬಲ್ಯವಾಗಿದೆ.
ಮೊದಲು ಗೊರಿಲ್ಲಾವನ್ನು ನೋಡಿದರೆ: ನೀವು ಮೊದಲು ಗೊರಿಲ್ಲಾವನ್ನು ನೋಡಿದರೆ, ಜ್ಞಾನದ ಹಸಿವನ್ನು ಹೊಂದಿರುವುದು, ನಿಮ್ಮ ಆಸಕ್ತಿಯನ್ನು ಸೆಳೆಯುವ ವಿಷಯಗಳತ್ತ ಹೆಚ್ಚು ಆಕರ್ಷಿತರಾಗುವುದು ನಿಮ್ಮ ಸಾಮರ್ಥ್ಯವಾಗಿದೆ. ನಿಮ್ಮ ದೌರ್ಬಲ್ಯ ಏನೆಂದರೆ, ಕೆಲವೊಮ್ಮೆನಿಮ್ಮ ಹೆಮ್ಮೆಯ ಅಂಶ ದುರಹಂಕಾರವಾಗಿ ರೂಪಾಂತರಗೊಳ್ಳುತ್ತದೆ. ಈ ದುರಹಂಕಾರದ ಭಾವನೆ ಅಷ್ಟು ಒಳ್ಳೆಯದಲ್ಲ.
ಮೊದಲು ಸಿಂಹವನ್ನು ನೋಡಿದರೆ: ನೀವು ಸಿಂಹವನ್ನು ಮೊದಲು ನೋಡಿದರೆ, ಧೈರ್ಯ, ಸಾಹಸ, ಜೀವನದ ಮೇಲಿನ ಉತ್ಸಾಹ ಇವೆಲ್ಲವೂ ನಿಮ್ಮ ಸಾಮರ್ಥ್ಯಗಳಾಗಿವೆ. ನಿಮ್ಮ ಅತಿಯಾದ ಸ್ವಾತಂತ್ರ್ಯದ ಕಾರಣದಿಂದ ನೀವು ಇತರರ ಭಾವನೆಗಳನ್ನು ಕಡೆಗಣಿಸುತ್ತೀರಿ, ಇದು ನಿಮ್ಮ ದೌರ್ಬಲ್ಯ ಅಂತಾನೇ ಹೇಳಬಹುದು.
ಇದನ್ನೂ ಓದಿ: ಈ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸುವ ಅಂಶ ನೀವು ಶ್ರಮ ಜೀವಿಯೇ ಎಂಬುದನ್ನು ತಿಳಿಸುತ್ತೆ
ಮೊದಲು ಮೀನು ನೋಡಿದರೆ: ನೀವು ಮೊದಲು ಮೀನು ನೋಡಿದರೆ ನೀವು ಎಲ್ಲರೊಂದಿಗೆ ಬಹು ಬೇಗನೆ ಹೊಂದಿಕೊಳ್ಳುವವರಾಗಿರುತ್ತೀರಿ. ಈ ಹೊಂದಿಕೊಳ್ಳುವ ಹಾಗೂ ಇತರರರೊಂದಿಗೆ ಬೆರೆಯುವ ಗುಣ ನಿಮ್ಮ ಬಹು ದೊಡ್ಡ ಸಾಮರ್ಥ್ಯವಾಗಿದೆ. ಎಲ್ಲರನ್ನೂ ಮೆಚ್ಚಿಸಬೇಕೆಂಬ ನಿಮ್ಮ ಬಯಕೆಯು ನಿಮ್ಮನ್ನು ಭಾವನಾತ್ಮಕವಾಗಿ ಕುಗ್ಗಿಸುತ್ತದೆ ಮತ್ತು ಕೆಲವರು ನಿಮ್ಮ ದಯಾ ಗುಣವನ್ನು ಹಗುರವಾಗಿ ಕಾಣುತ್ತಾರೆ. ಈ ಎರಡು ಅಂಶ ನಿಮ್ಮ ದೌರ್ಬಲ್ಯವಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ