Personality Test: ನಿಮ್ಮ ಭಾವನೆ ಎಂತಹದ್ದು ಎಂಬುದನ್ನು ನಿಮ್ಮಿಷ್ಟದ ಬಣ್ಣದ ಉಡುಗೆಯಿಂದ ತಿಳಿಯಿರಿ

ಜ್ಯೋತಿಷ್ಯ ಶಾಸ್ತ್ರ, ಸಂಖ್ಯಾಶಾಸ್ತ್ರಗಳ ಮೂಲಕ ವ್ಯಕ್ತಿಯ ಭವಿಷ್ಯ, ಗುಣ ಸ್ವಭಾವವನ್ನು ಊಹಿಸುವಂತೆ, ವ್ಯಕ್ತಿತ್ವ ಪರೀಕ್ಷೆಯ ಹಲವು ವಿಧಾನಗಳ ಮೂಲಕವೂ ಸಹ ನಮ್ಮ ವ್ಯಕ್ತಿತ್ವವನ್ನು ನಾವೇ ತಿಳಿಯಬಹುದು. ಅಂತಹದ್ದೊಂದು ಚಿತ್ರ ಇದೀಗ ವೈರಲ್‌ ಆಗಿದ್ದು, ಅದರಲ್ಲಿ ನೀವು ನಿಮ್ಮಿಷ್ಟದ ಉಡುಗೆಯನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಭಾವನೆ ಹೇಗಿದೆ ಎಂಬದನ್ನು ತಿಳಿದುಕೊಳ್ಳಿ.

Personality Test: ನಿಮ್ಮ ಭಾವನೆ ಎಂತಹದ್ದು ಎಂಬುದನ್ನು ನಿಮ್ಮಿಷ್ಟದ ಬಣ್ಣದ ಉಡುಗೆಯಿಂದ ತಿಳಿಯಿರಿ
ವ್ಯಕ್ತಿತ್ವ ಪರೀಕ್ಷೆ
Image Credit source: Instagram

Updated on: Jul 20, 2025 | 4:05 PM

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಮಾತ್ರವಲ್ಲದೆ ಕೈ ಬೆರಳು, ಕಾಲ್ಬೆರಳಿನ ಆಕಾರ, ಮೂಗಿನ ಆಕಾರ ಕಿವಿಯ ಆಕಾರ ಸೇರಿದಂತೆ ದೇಹಕಾರದ ಮೂಲಕವೂ ಒಬ್ಬ ವ್ಯಕ್ತಿಯ ವ್ಯಕ್ತಿತ್ವ (Personality Test)  ಹೇಗಿದೆ ಎಂಬುದನ್ನು ತಿಳಿಯಬಹುದು. ಅಷ್ಟೇ ಯಾಕೆ ನೆಚ್ಚಿನ ಬಣ್ಣ, ಕೈ ಬರಹ, ನಡಿಗೆ ಇತ್ಯಾದಿ ಅಂಶಗಳು ಸಹ ವ್ಯಕ್ತಿ ಗುಣ ಸ್ವಭಾವ ಹೇಗಿದೆ ಎಂಬುದನ್ನು ಬಹಿರಂಗಪಡಿಸುತ್ತದೆ. ಇವುಗಳ ಮುಖಾಂತರ ನೀವು ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಟೆಸ್ಟ್‌ ಮಾಡಿರುತ್ತೀರಿ ಅಲ್ವಾ. ಅದೇ ರೀತಿ ನಿಮ್ಮ ನೆಚ್ಚಿನ ಬಣ್ಣದ ಬಟ್ಟೆಯಿಂದಲೂ ನೀವು ನಿಮ್ಮ ಭಾವನೆ ಹೇಗಿದೆ, ನೀವು ಎಂತಹ ವ್ಯಕ್ತಿತ್ವವನ್ನು ಹೊಂದಿದ್ದೀರಿ ಎಂಬುದನ್ನು ತಿಳಿಯಬಹುದು. ಈ ವ್ಯಕ್ತಿತ್ವ ಪರೀಕ್ಷೆಯ ಚಿತ್ರ ಇದೀಗ ವೈರಲ್‌ ಆಗಿದ್ದು, ಅದರಲ್ಲಿ ನಿಮ್ಮಿಷ್ಟದ ಬಣ್ಣದ ಬಟ್ಟೆಯನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಸೀಕ್ರೆಟ್‌ ಗುಣ ಸ್ವಭಾವವನ್ನು ತಿಳಿಯಿರಿ.

ನಿಮ್ಮಿಷ್ಟದ ಉಡುಗೆಯನ್ನು ಆಯ್ಕೆ ಮಾಡಿ, ನಿಮ್ಮ ಸ್ವಭಾವ ಹೇಗಿದೆ ತಿಳಿಯಿರಿ:

ಈ ವ್ಯಕ್ತಿತ್ವ ಪರೀಕ್ಷೆಯನ್ನು marina__neuralean ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ. ಇದರಲ್ಲಿ ನಿಮ್ಮಿಷ್ಟದ ಬಣ್ಣದ ಬಟ್ಟೆಯನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಗುಪ್ತ ಭಾವನೆಗಳು ಹೇಗಿವೆ ಎಂಬುದನ್ನು ಪರೀಕ್ಷೆ ಮಾಡಿ.

ಇದನ್ನೂ ಓದಿ
ಈ ಚಿತ್ರದಲ್ಲಿ ಒಂದು ಪಾದರಕ್ಷೆಯನ್ನು ಆಯ್ಕೆ ಮಾಡಿ, ವ್ಯಕ್ತಿತ್ವ ಪರೀಕ್ಷಿಸಿ
ನಿಮ್ಮ ಆಯ್ಕೆಯ ವಜ್ರದುಂಗರ ನಿಮ್ಮ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ
ನಿಮ್ಮ ಕೂದಲು ಸಹ ನಿಮ್ಮ ಗುಣ ಸ್ವಭಾವ ಹೇಗಿದೆ ಎಂಬುದನ್ನು ಬಹಿರಂಗಪಡಿಸುತ್ತದೆ
ಮೂಗಿನ ಆಕಾರವೂ ನಿಮ್ಮ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಹೇಳುತ್ತದೆಯಂತೆ

ವಿಡಿಯೋ ಇಲ್ಲಿದೆ ನೋಡಿ:

ಹಳದಿ ಉಡುಗೆ: ನಿಮಗೆ ಹಳದಿ ಬಣ್ಣದ ಉಡುಗೆ ಇಷ್ಟ ಎಂದಾದರೆ ನೀವು ಮುಕ್ತತೆ, ದಯೆ ಮತ್ತು ಭಾವನಾತ್ಮಕತೆಯನ್ನು ಹೊಂದಿರುವವರೆಂದು ಅರ್ಥ. ಈ ಬಣ್ಣದ ಬಟ್ಟೆಯನ್ನು ಆಯ್ಕೆ ಮಾಡುವವರು ಹೆಚ್ಚಿನ ಸಹಾನುಭೂತಿ, ಸಂಬಂಧಗಳಿಗೆ ಬೆಲೆ ನೀಡುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಅಲ್ಲದೆ ಇವರು ಸಾಕಷ್ಟು ಸಕಾರಾತ್ಮಕತೆಯನ್ನು ಸಹ ಹೊಂದಿರುತ್ತಾರೆ. ಜೊತೆಗೆ ಇವರ ಸಂವಹನ ಕೌಶಲ್ಯ ಇತರರನ್ನು ಆಕರ್ಷಿಸುತ್ತದೆ.

ಹಸಿರು ಉಡುಗೆ: ನೀವು ಈ ಬಣ್ಣದ ಉಡುಗೆಯನ್ನು ಆಯ್ಕೆ ಮಾಡಿಕೊಂಡರೆ, ನೀವು ಅತ್ಯಾಧುನಿಕತೆ, ಬೌದ್ಧಿಕ ನಮ್ಯತೆ ಮತ್ತು ಆತ್ಮವಿಶ್ವಾಸದೊಂದಿದೆ ಸಂಬಂಧವನ್ನು ಹೊಂದಿದ್ದೀರಿ ಎಂದರ್ಥ. ಈ ಬಣ್ಣದ ಬಟ್ಟೆಗಳನ್ನು ಇಷ್ಟಪಡುವವರು ಸಂಪ್ರದಾಯ ಮತ್ತು ಸ್ವತಂತ್ರ ತೀರ್ಪಿನ ನಡುವಿನ ಸಮತೋಲನವನ್ನು ಗೌರವಿಸುತ್ತಾರೆ. ಅಲ್ಲದೆ ಇವರ ವಿಶ್ಲೇಷಣಾತ್ಮಕ ವಿಧಾನ ಮತ್ತು ವರ್ಚಸ್ಸು ಹೆಚ್ಚಾಗಿ ಮೆಚ್ಚುಗೆಯನ್ನು ಗಳಿಸುತ್ತದೆ.

ಕಪ್ಪು ಉಡುಗೆ: ಈ ಬಣ್ಣದ ಉಡುಗೆಯನ್ನು ಆಯ್ಕೆ ಮಾಡಿಕೊಂಡವರು ಸಂಯಮ ಮತ್ತು ಆತ್ಮಾವಲೋಕನ ಪ್ರವೃತ್ತಿಯನ್ನು ಹೊಂದಿದ್ದಾರೆ ಎಂದರ್ಥ. ಈ ಬಣ್ಣದ ಬಟ್ಟೆಯನ್ನು ಆಯ್ಕೆ ಮಾಡಿಕೊಳ್ಳುವವರು ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಬಹಳ ಎಚ್ಚರಿಕೆಯನ್ನು ವಹಿಸುತ್ತಾರೆ.

ಇದನ್ನೂ ಓದಿ: ಈ ಚಿತ್ರದಲ್ಲಿ ಒಂದು ಪಾದರಕ್ಷೆ ಆಯ್ಕೆ ಮಾಡಿ, ನಿಮ್ಮ ವ್ಯಕ್ತಿತ್ವ ಪರೀಕ್ಷಿಸಿ

ಕೆಂಪು ಉಡುಪು: ಈ ಬಣ್ಣದ ಬಟ್ಟೆಯನ್ನು ಆಯ್ಕೆ ಮಾಡಿದವರು ಬಹಿರ್ಮುಖರಾಗಿದ್ದು, ಇವರು ಶಕ್ತಿಯನ್ನು ಸಹ ಹೊಂದಿದ್ದಾರೆ. ನೈಸರ್ಗಿಕ ನಾಯಕತ್ವ ಗುಣವನ್ನು ಹೊಂದಿರುವ ಇವರು, ತುಂಬಾನೇ ಸ್ವಾಭಿಮಾನಿಗಳು. ಅಲ್ಲದೆ ಇವರು ಜೀವನದಲ್ಲಿ ಬರುವ ಎಂತಹದ್ದೇ ಅಡತಡೆಗಳನ್ನು ಸುಲಭವಾಗಿ ಜಯಿಸುತ್ತಾರೆ.

ನೀಲಿ ಉಡುಪು: ಈ ಬಣ್ಣದ ಉಡುಪುಗಳನ್ನು ಆಯ್ಕೆ ಮಾಡಿದವರು ಪ್ರಣಯ, ಕನಸು ಮತ್ತು ಸೂಕ್ಷ್ಮ ಭಾನೆಯನ್ನು ಹೊಂದಿರುವವರಾಗಿರುತ್ತಾರೆ.  ಇವರು ಸೃಜನಶೀಲ ಪ್ರತಿಭೆಯನ್ನು ಹೊಂದಿದವರಾಗಿರುತ್ತಾರೆ. ಜೊತೆಗೆ ಇವರು ಭಾವನಾತ್ಮಕ ಬೆಂಬಲಕ್ಕಾಗಿಯೂ ಹಂಬಲಿಸುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ