AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test : ನೀವು ಯಾವ ಭಂಗಿಯಲ್ಲಿ ಮಲಗ್ತೀರಾ? ನಿದ್ರಿಸುವ ಭಂಗಿಯೂ ರಿವೀಲ್ ಮಾಡುತ್ತೆ ನಿಮ್ಮ ವ್ಯಕ್ತಿತ್ವ

ಪ್ರತಿಯೊಬ್ಬ ವ್ಯಕ್ತಿಗೂ ನಿದ್ರೆ ಅತ್ಯವಶ್ಯಕ. ಹೀಗಾಗಿ ದಿನಕ್ಕೆ ಇಂತಿಷ್ಟು ಗಂಟೆ ನಿದ್ರಿಸುವ ಮೂಲಕ ದೇಹಕ್ಕೆ ವಿಶ್ರಾಂತಿ ಪಡೆಯಬಹುದು. ಅದರಲ್ಲಿ ಹೆಚ್ಚಿನವರು ಕೆಲಸ ಮಾಡಿ ಸುಸ್ತು ಆಯ್ತು ಎಂದರೆ ಬೇಗನೇ ನಿದ್ದೆಗೆ ಜಾರುತ್ತಾರೆ. ಆದರೆ ನಿದ್ರಿಸುವ ಭಂಗಿಯು ಒಬ್ಬರಿಗಿಂತ ಮತ್ತೊಬ್ಬರದ್ದು ಭಿನ್ನವಾಗಿರುತ್ತದೆ. ಕೆಲವರಿಗೆ ಒಂದೇ ರೀತಿಯ ಭಂಗಿಯಲ್ಲಿ ಮಲಗಿದರೆ ಮಾತ್ರ ನಿದ್ದೆ ಬರುತ್ತದೆ. ಆದರೆ ಈ ನಿದ್ರಿಸುವ ರೀತಿಯು ಕೂಡ ನಿಮ್ಮ ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತದೆ. ಹಾಗಾದ್ರೆ ನೀವು ಮಲಗುವ ಭಂಗಿ ಯಾವುದು ಎನ್ನುವುದರ ಮೇಲೆ ನಿಮ್ಮ ವ್ಯಕ್ತಿತ್ವ ನಿರ್ಣಯಿಸಬಹುದು . ಹಾಗಾದ್ರೆ ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Personality Test : ನೀವು ಯಾವ ಭಂಗಿಯಲ್ಲಿ ಮಲಗ್ತೀರಾ? ನಿದ್ರಿಸುವ ಭಂಗಿಯೂ ರಿವೀಲ್ ಮಾಡುತ್ತೆ ನಿಮ್ಮ ವ್ಯಕ್ತಿತ್ವ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Feb 05, 2025 | 12:46 PM

Share

ಇತ್ತೀಚೆಗಿನ ದಿನಗಳಲ್ಲಿ ವ್ಯಕ್ತಿತ್ವ ಪರೀಕ್ಷೆಯ ಕುರಿತಾದ ಸಾಕಷ್ಟು ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಎಲ್ಲರಿಗೂ ತಿಳಿದಿರುವಂತೆ ಅಂಗೈ ನೋಡಿ ವ್ಯಕ್ತಿಯ ಗುಣಸ್ವಭಾವ ಹೇಳಬಹುದು. ಅದಲ್ಲದೇ, ಕಣ್ಣು, ಮೂಗು, ಕಿವಿ, ಹಣೆ ಹಾಗೂ ಬೆರಳುಗಳ ಆಕಾರದಿಂದ ವ್ಯಕ್ತಿತ್ವವನ್ನು ನಿರ್ಣಯಿಸಬಹುದು. ಆದರೆ ನಿದ್ರಿಸುವ ಭಂಗಿಯಿಂದಲೇ ಈ ವ್ಯಕ್ತಿಯು ಹೀಗೆಯೇ ಎಂದು ಹೇಳಬಹುದಂತೆ. ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಹೋಲಿಕೆ ಮಾಡಿದರೆ ಆತನು ಮಲಗುವ ರೀತಿಯೇ ಭಿನ್ನವಾಗಿರುತ್ತದೆ. ನೀವು ಮಲಗುವ ಭಂಗಿ ಯಾವುದು ಎನ್ನುವ ಆಧಾರದ ಮೇಲೆ ವ್ಯಕ್ತಿತ್ವವನ್ನು ಕಂಡುಕೊಳ್ಳಬಹುದು.

  • ಬೆನ್ನಿನ ಮೇಲೆ ಮಲಗುವುದು : ಕೆಲವರಿಗೆ ಬೆನ್ನಿನ ಮೇಲೆ ಮಲಗುವ ಅಭ್ಯಾಸವಿರುತ್ತದೆ. ಈ ವ್ಯಕ್ತಿಗಳು ಸದಾ ಉತ್ಸಾಹಿಗಳಾಗಿದ್ದು, ಎಲ್ಲಾ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ. ಈ ಭಂಗಿಯೂ ಬಲವಾದ ಇಚ್ಛಾ ಶಕ್ತಿಯುಳ್ಳ ವ್ಯಕ್ತಿಯೆಂದು ಬಹಿರಂಗ ಪಡಿಸುತ್ತದೆ. ಅನಗತ್ಯ ಜಗಳ ಮನಸ್ತಾಪದಿಂದ ದೂರವಿರಲು ಇಷ್ಟ ಪಡುವ ವ್ಯಕ್ತಿಗಳಾಗಿರುತ್ತಾರೆ. ಸತ್ಯ ಮಾತನಾಡುವುದು ಈ ಜನರಿಗೆ ಸ್ವಾಭಾವಿಕವಾಗಿ ಬಂದಿರುತ್ತದೆ. ಬೇರೆಯವರಿಗೆ ಮೋಸ ಮಾಡುವುದನ್ನು ಕನಸಿನಲ್ಲಿಯೂ ಯೋಚನೆ ಮಾಡುವುದಿಲ್ಲ. ಎಲ್ಲರೊಂದಿಗೆ ಪ್ರಾಮಾಣಿಕರಾಗಿ ಇರಲು ಇಷ್ಟ ಪಡುವ ವ್ಯಕ್ತಿಗಳಾಗಿರುತ್ತಾರೆ. ತನ್ನಿಂದ ಮಾತ್ರವಲ್ಲದೇ ಆಪ್ತರಿಂದ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳುತ್ತಾರೆ. ಹೀಗಾಗಿ ಕೆಲವೊಮ್ಮೆ ಈ ವ್ಯಕ್ತಿಗಳಿಗೆ ನಿರಾಸೆ ಆಗೋದೇ ಹೆಚ್ಚು. ತಮ್ಮ ಆಲೋಚನೆಗಳನ್ನು ಕಾಪಾಡಿಕೊಳ್ಳುವ ವ್ಯಕ್ತಿಯಾಗಿದ್ದು,ಕೆಲವು ಸಂದರ್ಭದಲ್ಲಿ ಹಠಾತ್ತನೇ ಪ್ರತಿಕ್ರಿಯೆ ನೀಡುವ ಸ್ವಭಾವ ಹೊಂದಿರುತ್ತಾರೆ. ನಾಯಕತ್ವ ಗುಣ ಅಧಿಕವಾಗಿದ್ದು, ಇತರರಿಗೆ ಮಾದರಿಯಾಗುತ್ತಾರೆ.
  • ಒಂದೇ ಮಗ್ಗಲಿನಲ್ಲಿ ಮಲಗುವುದು : ಒಂದೇ ಮಗ್ಗಲಿನಲ್ಲಿ ಎರಡೂ ಕೈಗಳನ್ನು ಒಟ್ಟಿಗೆ ಇಟ್ಟು ಮಲಗುವ (ಲಾಗ್ ಸ್ಲೀಪರ್) ವ್ಯಕ್ತಿಗಳು ಸ್ನೇಹ ಜೀವಿಗಳಾಗಿರುತ್ತಾರೆ. ಈ ವ್ಯಕ್ತಿಗಳು ನಿರಾಳ, ಸಾಮಾಜಿಕ ಹಾಗೂ ವರ್ಚಿಸ್ಸಿನ ವ್ಯಕ್ತಿಗಳೆಂದು ಬಹಿರಂಗ ಪಡಿಸುತ್ತದೆ. ಅಪರಿಚಿತ ವ್ಯಕ್ತಿಗಳೊಂದಿಗೆ ಸಲೀಸಾಗಿ ಸಂಭಾಷಣೆ ನಡೆಸುವ ಗುಣ ಹೊಂದಿರುತ್ತಾರೆ. ನಂಬಿಕೆ ಹಾಗೂ ವಿಶ್ವಾಸಕ್ಕೆ ಅರ್ಹರಾಗಿದ್ದು, ತಮ್ಮ ಸ್ನೇಹಿತರ ಗುಂಪಿನಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿಕೊಂಡಿರುತ್ತಾರೆ. ಹೆಚ್ಚು ಹೆಚ್ಚು ಸ್ನೇಹಿತರನ್ನು ಸಂಪಾದಿಸುವ ಗುಣವನ್ನು ಹೊಂದಿರುತ್ತಾರೆ. ಆದರೆ ಆತ್ಮ ಸ್ನೇಹಿತರೊಂದಿಗೆ ಮಾತ್ರ ಎಲ್ಲವನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಬೆರೆಯುತ್ತಾರೆ. ಪ್ರತಿಯೊಂದು ನಿರ್ಧಾರವನ್ನು ಬಹಳ ಎಚ್ಚರಿಕೆ ತೆಗೆದುಕೊಳ್ಳುವ ಗುಣ ಇವರಲ್ಲಿ ಇರುತ್ತದೆ. ಲೆಕ್ಕಾಚಾರದ ಮನಸ್ಥಿತಿಯನ್ನು ಹೊಂದಿರುತ್ತಾರೆ
  • ದಿಂಬನ್ನು ತಬ್ಬಿಕೊಂಡು ಮಲಗುವುದು : ಕೆಲವರಿಗೆ ದಿಂಬನ್ನು ಹಿಡಿದುಕೊಂಡು ಮಲಗುವ ಅಭ್ಯಾಸವಿರುತ್ತದೆ. ಈ ವ್ಯಕ್ತಿಗಳು ತಮ್ಮ ಜೀವನದಲ್ಲಿ ಸಂಬಂಧಕ್ಕೆ ಹೆಚ್ಚು ಬೆಲೆ ಕೊಡುತ್ತಾರೆ. ಸಹಾಯ ಮಾಡುವ ಗುಣವಿರುವ ಕಾರಣ, ಪ್ರೀತಿಸುವ ವ್ಯಕ್ತಿಗಳಿಗೆ ಜೀವ ಕೊಡಲು ಸಿದ್ಧವಿರುವ ವ್ಯಕ್ತಿತ್ವ ಇವರದ್ದಾಗಿರುತ್ತದೆ. ಕುಟುಂಬ ಹಾಗೂ ಆತ್ಮೀಯ ಸ್ನೇಹಿತರಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಪ್ರೀತಿ, ಕಾಳಜಿ ಹಾಗೂ ಭಾವನಾತ್ಮಕ ಬೆಂಬಲ ನೀಡುವ ಮೂಲಕ ಸಂಬಂಧಗಳಲ್ಲಿ ತೃಪ್ತಿ ಕಾಣುತ್ತಾರೆ
  • ಹೊಟ್ಟೆಯ ಮೇಲೆ ಮಲಗುವುದು : ಹೊಟ್ಟೆಯ ಮೇಲೆ ಮಲಗುವ ವ್ಯಕ್ತಿಗಳು ವಿನೋದ ಪ್ರಿಯರಾಗಿದ್ದು, ಮೋಜಿನ, ತಮಾಷೆಯ ಮತ್ತು ಮುಕ್ತ ಮನಸ್ಸಿನ ವ್ಯಕ್ತಿಗಳಾಗಿರುತ್ತಾರೆ. ಈ ವ್ಯಕ್ತಿಗಳು ನೇರವಾಗಿ ಮಾತನಾಡುತ್ತಾರೆ.ಪ್ರಾಮಾಣಿಕ ಗುಣವನ್ನು ಹೊಂದಿದ್ದು, ಕೆಲವೊಮ್ಮೆ ಕಠಿಣವಾಗಿ ಹಾಗೂ ಮೊಂಡಾಗಿ ಕಾಣಿಸುತ್ತಾರೆ. ಈ ಜನರು ತಮ್ಮ ಜೀವನದ ಬಗ್ಗೆ ಸ್ಪಷ್ಟವಾದ ದೃಷ್ಟಿಕೋನ ಹೊಂದಿರುತ್ತಾರೆ. ಈ ಗುಣವುಳ್ಳ ವ್ಯಕ್ತಿಗಳು ಎಲ್ಲವನ್ನೂ ಸರಿಯಾಗಿ ನಿರ್ವಹಿಸುತ್ತಾರೆ. ಬಲವಾದ ಇಚ್ಛಾ ಶಕ್ತಿ ಹೊಂದಿದ್ದು, ಸಾಹಸಮಯ ಪ್ರವೃತ್ತಿ ಇವರಲ್ಲಿ ಕಾಣಬಹುದು. ಹೀಗಾಗಿ ಅಪಾಯಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಾರೆ. ಹೊಸ ಅನುಭವಗಳಿಗೆ ತೆರೆದುಕೊಳ್ಳಲು ಸಿದ್ಧವಿರುತ್ತಾರೆ. ಆದರೆ ನಕಾರಾತ್ಮಕ ಭಾವನೆಗಳನ್ನು ಬಚ್ಚಿಡುವ ಗುಣ ಹೊಂದಿದ್ದು, ದಿಟ್ಟತನ ಹಾಗೂ ದೃಢ ನಿಶ್ಚಯವು ಇವರ ದಾರಿಗೆ ಅಡ್ಡಿಯಾಗುವುದಿಲ್ಲ. ಜವಾಬ್ದಾರಿಗಳನ್ನು ತೆಗೆದುಕೊಂಡು ಗುರಿ ಸಾಧಿಸುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ