World Travel and Tourism Festival 2025: ಫೆಬ್ರವರಿ 14 ರಂದು ಖ್ಯಾತ ಗಾಯಕ ಪಾಪೋನ್ ಅವರ ಲೈವ್ ಶೋ, ಈ ಕೂಡಲೇ ಟಿಕೆಟ್ ಬುಕ್ ಮಾಡಿ

ಟಿವಿ9 ನೆಟ್‌ವರ್ಕ್ ಹಾಗೂ ರೆಡ್ ಹ್ಯಾಟ್ ಕಮ್ಯುನಿಕೇಷನ್ಸ್ ಜಂಟಿಯಾಗಿ ವರ್ಲ್ಡ್ ಟ್ರಾವೆಲ್ ಅಂಡ್ ಟೂರಿಸಂ ಫೆಸ್ಟಿವಲ್ 2025 ಆಯೋಜಿಸಿದೆ. ಇದೇ ಫೆಬ್ರವರಿ 14 ರಿಂದ ಪ್ರಾರಂಭವಾಗಿ ಫೆಬ್ರವರಿ 16 ರವರೆಗೆ ದೆಹಲಿಯ ಮೇಜರ್ ಧ್ಯಾನ್ ಚಂದ್ ಸ್ಟೇಡಿಯಂನಲ್ಲಿ ಮೂರು ದಿನಗಳ ಕಾಲ ಈ ಉತ್ಸವವು ನಡೆಯಲಿದೆ. ಆದರೆ ಮೊದಲ ದಿನವೇ ಖ್ಯಾತ ಗಾಯಕ ಪಾಪೋನ್ ಅವರ ಲೈವ್ ಶೋ ಇರಲಿದ್ದು, ಮರೆಯಲಾಗದ ಪ್ರೇಮಿಗಳ ದಿನದ ಸಂಜೆಗಾಗಿ ಆನ್ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದಾಗಿದ್ದು, ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ

World Travel and Tourism Festival 2025: ಫೆಬ್ರವರಿ 14 ರಂದು ಖ್ಯಾತ ಗಾಯಕ ಪಾಪೋನ್ ಅವರ ಲೈವ್ ಶೋ, ಈ ಕೂಡಲೇ ಟಿಕೆಟ್ ಬುಕ್ ಮಾಡಿ
ಖ್ಯಾತ ಗಾಯಕ ಪಾಪೋನ್
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 05, 2025 | 4:07 PM

ಪ್ರವಾಸೋದ್ಯಮವು ವಿಶ್ವದ ಅತಿದೊಡ್ಡ ಉದ್ಯಮಗಳಲ್ಲಿ ಒಂದಾಗಿದ್ದು, ಅದೆಷ್ಟೋ ದೇಶಗಳಿಗೆ ಇದೇ ಆದಾಯದ ಮೂಲವಾಗಿದೆ. ಇದೀಗ ಟಿವಿ9 ನೆಟ್‌ವರ್ಕ್ ಹಾಗೂ ರೆಡ್ ಹ್ಯಾಟ್ ಕಮ್ಯುನಿಕೇಷನ್ ಜಂಟಿಯಾಗಿ ಮೂರು ದಿನಗಳ ಕಾಲ ವರ್ಲ್ಡ್ ಟ್ರಾವೆಲ್ ಅಂಡ್ ಟೂರಿಸಂ ಫೆಸ್ಟಿವಲ್ 2025 ಆಯೋಜಿಸಿದೆ. ಈ ಉತ್ಸವವು ಫೆಬ್ರವರಿ 14 ರಿಂದ 16 ರವರೆಗೆ ನವದೆಹಲಿಯ ಐಕಾನಿಕ್ ಮೇಜರ್ ಧ್ಯಾನ್‌ ಚಂದ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಉತ್ಸವವು ಭಾರತೀಯ ಪ್ರಯಾಣಿಕರು ಜಗತ್ತನ್ನು ಅನ್ವೇಷಿಸುವ ವಿಧಾನವನ್ನು ಮರು ವ್ಯಾಖ್ಯಾನಿಸಲು ಅನುಕೂಲವಾಗಲಿದೆ. ಈ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲು, ಫೆಬ್ರವರಿ 14 ರಂದು ಖ್ಯಾತ ಗಾಯಕ ಪಾಪೋನ್ ಅವರ ಲೈವ್ ಶೋ ಇರಲಿದ್ದು, ಅದ್ಭುತ ಸಂಗೀತ ಸಂಜೆಗೆ ವೇದಿಕೆ ಸಜ್ಜುಗೊಳ್ಳಲಿದೆ.

ಭಾರತೀಯ ಖ್ಯಾತ ಹಿನ್ನೆಲೆ ಗಾಯಕ, ಸಂಯೋಜಕ ಮತ್ತು ಸಂಗೀತಗಾರ ಪಾಪೋನ್ ಅವರ ಲೈವ್ ಶೋ ಫೆಬ್ರವರಿ 14, 2025 ರಂದು ನವದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸಂಜೆ 7 ಗಂಟೆಗೆ ಪ್ರಾರಂಭವಾಗಲಿದೆ. ಸಂಗೀತ, ಸಾಂಸ್ಕೃತಿಕ ಪ್ರದರ್ಶನಗಳು ಹಾಗೂ ರುಚಿಕರವಾದ ಆಹಾರದಿಂದ ಕೂಡಿದ ರೋಮಾಂಚಕಾರಿ ಸಂಜೆಯಲ್ಲಿ ಭಾಗಿಯಾಗಬಹುದು. ಪ್ರೇಮಿಗಳ ದಿನವನ್ನು ಆಚರಿಸಲು ಇದು ಸೂಕ್ತ ಮಾರ್ಗವಾಗಿದ್ದು, ನಿಮ್ಮ ಸಂಗಾತಿಯೊಂದಿಗೆ ಸಂಗೀತ ಸಂಜೆಯಲ್ಲಿ ಭಾಗಿಯಾಗಿ ಸ್ಮರಣೀಯ ಅನುಭವ ಪಡೆಯಬಹುದು.

ಇದನ್ನೂ ಓದಿ: ನೀವು ಮೊದಲ ಬಾರಿಗೆ ಸೀರೆ ಉಡ್ತಾ ಇದ್ದೀರಾ? ಹಾಗಾದ್ರೆ ಅಂದವಾಗಿ ಕಾಣಲು ಇಲ್ಲಿದೆ ಸಿಂಪಲ್ ಟಿಪ್ಸ್

ಟಿಕೆಟ್ ಬುಕ್ ಮಾಡುವುದು ಹೇಗೆ?

* ಪಾಪೋನ್ ಲೈವ್ ಶೋ ನಲ್ಲಿ ಭಾಗಿಯಾಗಲು ಆನ್ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಿ ಈ ಸಂಗೀತ ಸಂಜೆಯಲ್ಲಿ ಭಾಗಿಯಾಗಬಹುದು.

* ಮೊದಲಿಗೆ BookMyShow.com ಗೆ ಭೇಟಿ ನೀಡಿದರೆ ವೆಬ್ಸೈಟ್ ತೆರೆದು ಕೊಳ್ಳುತ್ತದೆ.

* ನಂತರದಲ್ಲಿ ನಿಮ್ಮ ಟಿಕೆಟ್‌ಗಳನ್ನು ಆಯ್ಕೆ ಮಾಡಿಕೊಳ್ಳಿ. ಟಿಕೆಟ್ ದರಗಳು 499 ರೂ ರಿಂದ ಪ್ರಾರಂಭವಾಗುತ್ತವೆ.

* ನಿಮ್ಮ ಇ-ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳಿ, ಈ ಮರೆಯಲಾಗದ ಸಂಗೀತ ಸಂಜೆಗೆ ಸಾಕ್ಷಿಯಾಗಬಹುದು.

ಖ್ಯಾತ ಗಾಯಕ ಪಾಪೋನ್ ಅವರ ಲೈವ್ ಶೋ ವೀಕ್ಷಿಸಲು, ಉತ್ಸಾಹಭರಿತ ಸಂಗೀತವನ್ನು ಅನುಭವಿಸಲು ಇದೊಂದು ಸುವರ್ಣವಕಾಶವಾಗಿದೆ. ಬಹುಮುಖ ಪ್ರತಿಭೆಗೆ ಹೆಸರುವಾಸಿಯಾದ ಪಾಪೋನ್ ಸಾಂಪ್ರದಾಯಿಕ ಭಾರತೀಯ ಸಂಗೀತವನ್ನು ಸಮಕಾಲೀನ ಶೈಲಿಗಳೊಂದಿಗೆ ಸರಾಗವಾಗಿ ಬೆರೆಸಿ ಲಕ್ಷಾಂತರ ಜನರ ಹೃದಯಗಳನ್ನು ಗೆದ್ದಿದ್ದಾರೆ. ಮರೆಯಲಾಗದ ಸಂಗೀತ, ಉತ್ಸಾಹಭರಿತ ಶೋ ಮತ್ತು ಜಗಮಗಿಸುವ ವಿದ್ಯುತ್ ದೀಪಾಲಂಕಾರದ ಮಾಂತ್ರಿಕ ಸಂಜೆಯಲ್ಲಿ ಭಾಗಿಯಾಗಿ ಹೊಸ ಅನುಭವವನ್ನು ಪಡೆಯಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿಮಾನ ನಿಲ್ದಾಣದಲ್ಲಿ ಮೋದಿಯನ್ನು ತಬ್ಬಿ ಬೀಳ್ಕೊಟ್ಟ ಫ್ರಾನ್ಸ್​ ಅಧ್ಯಕ್ಷ
ವಿಮಾನ ನಿಲ್ದಾಣದಲ್ಲಿ ಮೋದಿಯನ್ನು ತಬ್ಬಿ ಬೀಳ್ಕೊಟ್ಟ ಫ್ರಾನ್ಸ್​ ಅಧ್ಯಕ್ಷ
ಬಾಗಪ್ಪ ಹರಿಜನ್ ಅಂತ್ಯಕ್ರಿಯೆಯಲ್ಲಿ ನೂರಾರು ಜನ ಭಾಗಿ
ಬಾಗಪ್ಪ ಹರಿಜನ್ ಅಂತ್ಯಕ್ರಿಯೆಯಲ್ಲಿ ನೂರಾರು ಜನ ಭಾಗಿ
ಬಾಗಪ್ಪನನ್ನು ಪ್ರೀತಿಸಿ ವರಿಸಿದ ಮಹಿಳೆ ಸರ್ಕಾರೀ ವಕೀಲೆಯಾಗಿದ್ದರು: ಮಹಾಂತೇಶ
ಬಾಗಪ್ಪನನ್ನು ಪ್ರೀತಿಸಿ ವರಿಸಿದ ಮಹಿಳೆ ಸರ್ಕಾರೀ ವಕೀಲೆಯಾಗಿದ್ದರು: ಮಹಾಂತೇಶ
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ತನಿಖೆ ಪದದ ವ್ಯಾಖ್ಯಾನ ಬದಲಾದಂತಿದೆ!
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ತನಿಖೆ ಪದದ ವ್ಯಾಖ್ಯಾನ ಬದಲಾದಂತಿದೆ!
ಉಡುಪಿಗೆ ಬಂದು ದೈವಕ್ಕೆ ಕೈ ಮುಗಿದ ತಮಿಳು ನಟ ವಿಶಾಲ್
ಉಡುಪಿಗೆ ಬಂದು ದೈವಕ್ಕೆ ಕೈ ಮುಗಿದ ತಮಿಳು ನಟ ವಿಶಾಲ್
ಮಾರ್ಸಿಲ್ಲೆಯಲ್ಲಿ ಭಾರತೀಯ ಕಾನ್ಸುಲೇಟ್ ಉದ್ಘಾಟನೆ; ಮೋದಿ, ಮೋದಿ ಘೋಷಣೆ
ಮಾರ್ಸಿಲ್ಲೆಯಲ್ಲಿ ಭಾರತೀಯ ಕಾನ್ಸುಲೇಟ್ ಉದ್ಘಾಟನೆ; ಮೋದಿ, ಮೋದಿ ಘೋಷಣೆ
ಜನರಿಂದ ಬಡ್ಡಿ ಪೀಕಿ ಪೀಕಿಯೇ ಯಲ್ಲಪ್ಪ ಮಿಸ್ಕಿನ್,  ಬಡ್ಡಿ ಯಲ್ಲಪ್ಪನಾದ!
ಜನರಿಂದ ಬಡ್ಡಿ ಪೀಕಿ ಪೀಕಿಯೇ ಯಲ್ಲಪ್ಪ ಮಿಸ್ಕಿನ್,  ಬಡ್ಡಿ ಯಲ್ಲಪ್ಪನಾದ!
ಪತ್ನಿಗೆ ಸಿಲ್ಕ್​ ಸೀರೆ ಖರೀದಿಸಿದ ಡಿಕೆ ಶಿವಕುಮಾರ್: ಬೆಲೆ ಎಷ್ಟು ಗೊತ್ತಾ?
ಪತ್ನಿಗೆ ಸಿಲ್ಕ್​ ಸೀರೆ ಖರೀದಿಸಿದ ಡಿಕೆ ಶಿವಕುಮಾರ್: ಬೆಲೆ ಎಷ್ಟು ಗೊತ್ತಾ?
ಫ್ರಾನ್ಸ್​ ಮಹಾಯುದ್ಧದಲ್ಲಿ ಹುತಾತ್ಮರಾದ ಸೈನಿಕರಿಗೆ ಪ್ರಧಾನಿ ಮೋದಿ ನಮನ
ಫ್ರಾನ್ಸ್​ ಮಹಾಯುದ್ಧದಲ್ಲಿ ಹುತಾತ್ಮರಾದ ಸೈನಿಕರಿಗೆ ಪ್ರಧಾನಿ ಮೋದಿ ನಮನ
ದುಷ್ಕೃತ್ಯ ನಿಲ್ಲಿಸಿ ಮುಖ್ಯವಾಹಿನಿಗೆ ಬರುವ ಪ್ರಯತ್ನದಲ್ಲಿದ್ದ ಬಾಗಪ್ಪ
ದುಷ್ಕೃತ್ಯ ನಿಲ್ಲಿಸಿ ಮುಖ್ಯವಾಹಿನಿಗೆ ಬರುವ ಪ್ರಯತ್ನದಲ್ಲಿದ್ದ ಬಾಗಪ್ಪ