Positive Thinking: ನಿಮ್ಮ ನಗು ಎಲ್ಲ ಸಮಸ್ಯೆಗೂ ಪರಿಹಾರ, ನಗು positive ಚಿಂತನೆ ಬೆಳೆಸುತ್ತದೆ

ನಿಮ್ಮ ನಗುವಿನಿಂದ ಅನೇಕರಿಗೆ ಸ್ಫೂರ್ತಿ ತುಂಬುತ್ತದೆ ಎಂದರೆ ಖಂಡಿತ ನಿಮ್ಮ ನಗುವಿನಲ್ಲಿ positive ಶಕ್ತಿ ಇದೆ. ನಿಮ್ಮ ನಗು ಇನ್ನೊಬ್ಬರಿಗೆ ಶಕ್ತಿಯಾಗಬೇಕೇ ಹೊರತು ಅದು ಕಷ್ಟವಾಗಬಾರದು, ಅಪಹಾಸ್ಯವಾಗಿರಬಾರದು, ನಿಮ್ಮ ನಗುವಿನಲ್ಲಿ ಒಂದು ಗೆಲುವಿನ ಹಾದಿ ಇರಬೇಕು.

Positive Thinking: ನಿಮ್ಮ ನಗು ಎಲ್ಲ ಸಮಸ್ಯೆಗೂ ಪರಿಹಾರ, ನಗು positive ಚಿಂತನೆ ಬೆಳೆಸುತ್ತದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 29, 2022 | 7:38 AM

ನಗು ನಿಮ್ಮ ಜೀವನದ ದೊಡ್ಡ ಶಕ್ತಿ, ಅದು ಯಾವತ್ತೂ ನಿಮ್ಮನ್ನು ಸೋಲಲು ಬಿಡುವುದಿಲ್ಲ, ನಗು ನಿಮ್ಮಲ್ಲಿ ಒಂದು ದೊಡ್ಡ ಶಕ್ತಿಯನ್ನು ತುಂಬುತ್ತದೆ. ಮಾತ್ರವಲ್ಲದೆ ನಿಮ್ಮಲ್ಲಿ positive ಯೋಚನೆಗಳನ್ನು ಸೃಷ್ಟಿ ಮಾಡುತ್ತದೆ. ನಿಮ್ಮ ಚಿಕ್ಕ ಮುಗುಳು ನಗೆಯಿಂದ ಎಲ್ಲರನ್ನೂ ಗೆಲ್ಲಬಹುದು. ಈ ನಗು ನಿಮ್ಮಲ್ಲಿ ಧನತ್ಮಾಕ ಚಿಂತನೆಯನ್ನು ಬೆಳೆಸಿಕೊಳ್ಳಲು ಸಹಾಯಕವಾಗಿರುತ್ತದೆ. ಪ್ರತಿ ಕ್ಷಣ, ಪ್ರತಿ ನಿಮಿಷವೂ ನಿಮ್ಮ ಮುಖ ನಗುವಿನಿಂದ ಇರಲಿ. ಇದು ನಿಮ್ಮಲ್ಲಿರುವ ಒತ್ತಡವನ್ನು ಕಡಿಮೆ ಮಾಡುತ್ತದೆ.

ನಿಮ್ಮ ನಗುವಿನಿಂದ ಅನೇಕರಿಗೆ ಸ್ಫೂರ್ತಿ ತುಂಬುತ್ತದೆ ಎಂದರೆ ಖಂಡಿತ ನಿಮ್ಮ ನಗುವಿನಲ್ಲಿ positive ಶಕ್ತಿ ಇದೆ. ನಿಮ್ಮ ನಗು ಇನ್ನೊಬ್ಬರಿಗೆ ಶಕ್ತಿಯಾಗಬೇಕೇ ಹೊರತು ಅದು ಕಷ್ಟವಾಗಬಾರದು, ಅಪಹಾಸ್ಯವಾಗಿರಬಾರದು, ನಿಮ್ಮ ನಗುವಿನಲ್ಲಿ ಒಂದು ಗೆಲುವಿನ ಹಾದಿ ಇರಬೇಕು. ಆ ನಗು ನಿಮ್ಮ ಎಲ್ಲ ಕಷ್ಟಗಳನ್ನು ಪರಿಹಾರ ಮಾಡಬೇಕು. ಒಂದು ಶಕ್ತಿಯನ್ನು ತುಂಬಾ ಚಿಲುಮೆಯಾಗಬೇಕು. ಇವುಗಳು ನಿಮ್ಮಲ್ಲಿ positive ಕಲ್ಪನೆಗಳನ್ನು ಬೆಳೆಸುತ್ತದೆ.

ಇದನ್ನು ಓದಿ:  ನೀವು ಮಾಡುವ ಕೆಲಸದಲ್ಲಿ positive ವಿಚಾರಗಳನ್ನು ಬೆಳೆಸಿಕೊಳ್ಳುವುದು ಹೇಗೆ?

ಮನಸ್ಸಿನಲ್ಲಿ ನೋವಿದರು ನಗುವುದನ್ನು ಬಿಟ್ಟು ಬಿಡಿ, ಏಕೆಂದರೆ ಮನಸ್ಸಿನಿಂದ ಬರುವ ಮುಗುಳು ನಗು ಅದು ಯಾವತ್ತೂ ಅನಂತ, ಅದಕ್ಕಾಗಿ ಪ್ರತಿಯೊಂದು ಸಮಸ್ಯೆಗೂ ನಗುವಿನ ಮೂಲಕ ಉತ್ತರ ನೀಡಿ, ನಿಮ್ಮ ನಗು ನಿಮ್ಮಲ್ಲಿ ಸದಾಕಾಲ positive ಚಿಂತನೆಯನ್ನು ನೀಡುತ್ತದೆ. ಅದಕ್ಕಾಗಿ positive ಯೋಚನೆಗಳು ಬರಬೇಕಾದರೆ ನಗುವು ಮುಖ್ಯ, ಎಲ್ಲ ಕೋಪಕ್ಕೂ ನಗು ಪರಿಹಾರ, ನಗುವಿನಿಂದ ಒಬ್ಬ ವ್ಯಕ್ತಿಯನ್ನು ಗೆಲ್ಲಬಹುದು, ನಂಬಿಕೆಯನ್ನು ಉಳಿಸಿಕೊಳ್ಳಬಹುದು. ಪ್ರೀತಿ ಗಳಿಸಬಹುದು. ನಗು ನಿಮ್ಮ ಆತ್ಮಶಕ್ತಿ, ಅದಕ್ಕಾಗಿ ನಗುವಿನಿಂದ positive ಯೋಚನೆ ಮಾಡಿ, ಎಲ್ಲ ಕೆಲಸವನ್ನು ನಗು ಮುಖದಿಂದ, ನಗು ಮನಸ್ಸಿನಿಂದ ಮಾಡಿ, ಯಾವುದಕ್ಕೂ ಯೋಚನೆ ಮಾಡದೇ positive ಚಿಂತನೆಯಿಂದಲ್ಲೇ ನಗುವುದನ್ನು ಕಲಿಯಿರಿ.