ಮನೆಯಲ್ಲಿ ಇಲಿಗಳ ಕಾಟ ಹೆಚ್ಚಾಗಿದೆಯೇ? ಇಲಿಗಳನ್ನು ಓಡಿಸಲು ಮನೆಮದ್ದು ಇಲ್ಲಿದೆ

ಮನೆಯಲ್ಲಿ ಇಲಿಗಳಿದ್ದರೆ ನಿಮ್ಮ ಒಂದೊಂದೇ ವಸ್ತುಗಳನ್ನು ಹಾಳು ಮಾಡುತ್ತಾ ಬರುತ್ತದೆ. ಅವು ಎಲ್ಲೆಡೆ ಓಡಾಡುವುದರಿಂದ ನಿಮ್ಮ ಆಹಾರವು ಕೂಡ ಕಲುಷಿತವಾಗಬಹುದು.

ಮನೆಯಲ್ಲಿ ಇಲಿಗಳ ಕಾಟ ಹೆಚ್ಚಾಗಿದೆಯೇ? ಇಲಿಗಳನ್ನು ಓಡಿಸಲು ಮನೆಮದ್ದು ಇಲ್ಲಿದೆ
Rats
Follow us
TV9 Web
| Updated By: ನಯನಾ ರಾಜೀವ್

Updated on: Aug 27, 2022 | 2:26 PM

ಮನೆಯಲ್ಲಿ ಇಲಿಗಳಿದ್ದರೆ ನಿಮ್ಮ ಒಂದೊಂದೇ ವಸ್ತುಗಳನ್ನು ಹಾಳು ಮಾಡುತ್ತಾ ಬರುತ್ತದೆ. ಅವು ಎಲ್ಲೆಡೆ ಓಡಾಡುವುದರಿಂದ ನಿಮ್ಮ ಆಹಾರವು ಕೂಡ ಕಲುಷಿತವಾಗಬಹುದು ಆದರೆ ನೀವು ಚಿಂತಿಸಬೇಕಾಗಿಲ್ಲ ಏಕೆಂದರೆ ಕೆಲವು ಮನೆಮದ್ದುಗಳ ಸಹಾಯದಿಂದ ನೀವು ಇಲಿಗಳನ್ನು ಓಡಿಸಬಹುದು.

ಇಲಿಗಳನ್ನು ಓಡಿಸಲು ಈ ಮನೆಮದ್ದುಗಳು ತುಂಬಾ ಪರಿಣಾಮಕಾರಿ. ಇಲಿಗಳು ನಿಮ್ಮ ಅಡುಗೆಮನೆಯಲ್ಲಿ ಗಲೀಜು ಮಾಡಿದರೆ ಅಥವಾ ವಿದ್ಯುತ್ ತಂತಿಗಳು ಮತ್ತು ಬಟ್ಟೆಗಳನ್ನು ಕತ್ತರಿಸಿದರೆ, ನೀವು ಇನ್ನು ಮುಂದೆ ಚಿಂತಿಸಬೇಕಾಗಿಲ್ಲ. ಮನೆಮದ್ದುಗಳೊಂದಿಗೆ, ನೀವು ಮನೆಯಿಂದ ಇಲಿಗಳನ್ನು ಓಡಿಸಬಹುದು.

ಇಲಿಗಳನ್ನು ಓಡಿಸುವುದು ಹೇಗೆ?

ಸ್ಪಟಿಕದಿಂದ ಸಾಧ್ಯ ಮನೆಯಿಂದ ಇಲಿಗಳನ್ನು ಓಡಿಸಲು ಸ್ಪಟಿಕ ನಿಮಗೆ ಬಹಳಷ್ಟು ಸಹಾಯ ಮಾಡುತ್ತದೆ. ಮೊದಲು ಸ್ಪಟಿಕವನ್ನು ಇಟ್ಟುಕೊಳ್ಳಿ, ನಂತರ ಯಾವುದಾದರೂ ಹಿಟ್ಟಿಗೆ ನೀರು ಸೇರಿಸಿ ಸ್ಪಟಿಕ ಬೆರೆಸಿಕೊಳ್ಳಿ, ಈಗ ಸ್ಪಟಿಕ ಬೆರೆಸಿದ ಈ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿ ಇಲಿಗಳು ಬರುವ ಸ್ಥಳಗಳಲ್ಲಿ ಇಡಿ. ಈ ಮಾತ್ರೆಗಳನ್ನು ತಿನ್ನುವುದರಿಂದ ಇಲಿಗಳು ಸಾಯುತ್ತವೆ ಅಥವಾ ಮನೆಯಿಂದ ಓಡಿಹೋಗುತ್ತವೆ.

ನ್ಯಾಫ್ತಲೀನ್ ಗುಳಿಗೆ ಬಹಳ ಉಪಯುಕ್ತವಾಗಿವೆ ನ್ಯಾಫ್ತಲೀನ್ ಗುಳಿಗೆ ಅಥವಾ ಡಾಂಬರ್ ಗುಳಿಗೆ ವಾಸನೆಯಿಂದ ಇಲಿಗಳು ಓಡಿಹೋಗುತ್ತವೆ. ಹೆಚ್ಚಿನ ನ್ಯಾಫ್ತಲೀನ್ ಗುಳಿಗೆಗಳನ್ನು ಪುಡಿ ಮಾಡಿ, ಬಳಿಕ ಅದನ್ನು ಹಿಟ್ಟಿನಲ್ಲಿ ಮಿಶ್ರಣ ಮಾಡಿ. ಈಗ ನೀರು ಸೇರಿಸಿ ಬೆರೆಸಿಕೊಳ್ಳಿ. ಬಳಿಕ ಆ ಮಿಶ್ರಣವನ್ನು ಮನೆಯ ಎಲ್ಲೆಡೆ ಇಡಿ.

ಅಡುಗೆ ಸೋಡಾ  ಪೆಪ್ಪರ್ಮಿಂಟ್ ಆಯಿಲ್: ಪೆಪ್ಪರ್ಮಿಂಟ್ ಆಯಿಲ್ ಇದು ಅಂಗಡಿಯಲ್ಲಿ ಲಭ್ಯವಾಗುತ್ತದೆ. ಇದನ್ನು ತಂದು ಇದರಲ್ಲಿ ಸುಮಾರು ಹತ್ತಿಯ ಉಂಡೆಗಳನ್ನು ನೆನೆಸಿಡಿ. ನಂತರ ಇಲಿಗಳು ಓಡಾಡುವ ಜಾಗದಲ್ಲಿ ಇಲಿಗಳ ಗೂಡ ಬಳಿ ಇಡುವುದರಿಂದ, ಇದರ ವಾಸನೆಗೆ ಇಲಿಗಳು ಬರೋದೆ ಇಲ್ಲ.

ಬೇಕಿಂಗ್ ಸೋಡಾವನ್ನು ಪೀನಟ್ ಬಟರ್ ನೊಂದಿಗೆ ಬೆರೆಸಿ ಪೇಸ್ಟ್ ಮಾಡಿ ಉಂಡೆ ಮಾಡಿ ಇಲಿಗಳು ಓಡಾಡುವ ಜಾಗದಲ್ಲಿ ಇರಿಸಬೇಕು ಇದನ್ನು ಇಲಿಗಳು ತಿಂದು ಇಲಿಗಳು ಸತ್ತು ಹೋಗುತ್ತದೆ.

ಅಡುಗೆ ಸೋಡಾ: ಅಡುಗೆ ಸೋಡಾ ಇಲಿಗಳು ಮತ್ತು ಇತರ ಕೀಟಗಳನ್ನು ಓಡಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಸಾಕುಪ್ರಾಣಿಗಳು ಮತ್ತು ಶಿಶುಗಳಿರುವ ಜಾಗದಲ್ಲಿ ಬಳಸುವುದು ಸುರಕ್ಷಿತವಾಗಿದೆ. ಇಲಿಗಳು ಹೆಚ್ಚಾಗಿ ಬರುವ ಸ್ಥಳಗಳಲ್ಲಿ ಉತ್ತಮ ಪ್ರಮಾಣದ ಅಡಿಗೆ ಸೋಡಾವನ್ನು ಸಿಂಪಡಿಸಿ ಮತ್ತು ರಾತ್ರಿಯಿಡೀ ಇಡಿ. ಬೆಳಿಗ್ಗೆ, ಪುಡಿಯನ್ನು ಕ್ಲೀನ್ ಮಾಡಲು ಮರೆಯದಿರಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ