Relationship Tips: ಮದುವೆಯ ಪ್ರಮಾಣ ಮಾಡುವ ಮೊದಲು ಜೋಡಿ ಪರಸ್ಪರ ಈ ವಿಚಾರಗಳ ಬಗ್ಗೆ ತಿಳಿಯಿರಿ
ಪ್ರೀತಿಯಲ್ಲಿದ್ದಾಗ ಅಥವಾ ಮದುವೆಯಾಗಲು ಬಯಸಿರುವ ಸಂದರ್ಭದಲ್ಲಿ ಜೋಡಿಗಳು ಪರಸ್ಪರ ಕೆಲವು ವಿಚಾರಗಳನ್ನು ತಿಳಿಯಲು ಇಷ್ಟಪಡುತ್ತಾರೆ.
ಪ್ರೀತಿಯಲ್ಲಿದ್ದಾಗ ಅಥವಾ ಮದುವೆಯಾಗಲು ಬಯಸಿರುವ ಸಂದರ್ಭದಲ್ಲಿ ಜೋಡಿಗಳು ಪರಸ್ಪರ ಕೆಲವು ವಿಚಾರಗಳನ್ನು ತಿಳಿಯಲು ಇಷ್ಟಪಡುತ್ತಾರೆ. ಆ ವಿಚಾರಗಳ ಬಗ್ಗೆ ತಿಳಿದ ಬಳಿಕವೇ ತಮ್ಮ ಭವಿಷ್ಯದ ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕೆಂದುಕೊಳ್ಳುತ್ತಾರೆ. ಮೊದಲು ನಿಮ್ಮ ಆಸಕ್ತಿಯ ಕ್ಷೇತ್ರಗಳು, ಆಸಕ್ತಿಕರ ವಿಚಾರಗಳು, ಇಷ್ಟವಾದ ಫುಡ್, ಇಷ್ಟವಾದ ಸಾಂಗ್, ಇಷ್ಟವಾದ ಬಣ್ಣಗಳ ಬಗ್ಗೆ ತಿಳಿದುಕೊಳ್ಳುವ ಆಸೆ ಇರುತ್ತದೆ.
ಇದೆಲ್ಲವನ್ನೂ ಹೊರತುಪಡಿಸಿ ಇನ್ನೂ ಕೆಲವು ಗಂಭೀರ ವಿಚಾರಗಳಿರುತ್ತವೆ.
ಚೈಲ್ಡುಡ್ ಹಿಸ್ಟರಿ: ಕುಟುಂಬದ ಹಿನ್ನೆಲೆ ಆಕೆ/ಆತ ಬೆಳೆದು ಬಂದ ರೀತಿ ಇದೆಲ್ಲವೂ ಇಬ್ಬರಿಗೂ ಮುಖ್ಯವಾಗಿರುತ್ತದೆ. ಜೀವನ ಪೂರ್ತಿ ಜತೆಯಾಗಿರುವೆ ಎಂದು ಪ್ರಮಾಣ ಮಾಡುವಾಗ ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ರಿಲೇಷನ್ಶಿಪ್ ಹಿಸ್ಟರಿ: ದಂಪತಿ ಪರಸ್ಪರ ಸಂಬಂಧದ ಇತಿಹಾಸದ ಬಗ್ಗೆ ತಿಳಿದಿರಬೇಕು, ಯಾರನ್ನೋ ಪ್ರೀತಿ ಮಾಡಿದ್ದಾಗಿರಲಿ, ಅಥವಾ ಲೈಂಗಿಕ ಸಂಪರ್ಕ ಹೊಂದಿದ್ದರ ಬಗ್ಗೆ ಮುಕ್ತವಾಗಿ ಮಾತನಾಡಿ. ಮದುವೆಯ ಬಳಿಕ ಈ ವಿಚಾರಗಳು ನಿಮ್ಮನ್ನು ಕಾಡಬಾರದು ಆ ರೀತಿ ನೋಡಿಕೊಳ್ಳಿ.
ಹಳೆಯ ಪ್ರೀತಿ ಬಗ್ಗೆ ತಿಳಿದುಕೊಳ್ಳಿ : ಆಕೆ/ಆತ ಯಾರನ್ನಾದರೂ ಈ ಹಿಂದೆ ಪ್ರೀತಿಸಿದ್ದರೆ, ಅಥವಾ ಪ್ರೀತಿಯಿಂದ ಮೋಸಹೋಗಿದ್ದರೆ ಆ ವಿಚಾರವನ್ನು ಕೂಡ ಸ್ಪಷ್ಟಪಡಿಸಿಬಿಡಿ.
ಪ್ರತಿಯೊಬ್ಬರೂ ಹೇಗೆ ಪ್ರೀತಿಯನ್ನು ನೀಡಲು ಮತ್ತು ಸ್ವೀಕರಿಸಲು ಇಷ್ಟಪಡುತ್ತಾರೆ ಎಂಬುದಕ್ಕೆ ವಿವಿಧ ಆದ್ಯತೆಗಳನ್ನು ಹೊಂದಿರುತ್ತಾರೆ. ಮತ್ತು ಪ್ರೀತಿಯ ಭಾಷೆಯಂತಹ ವಿಶಾಲ ವರ್ಗಗಳನ್ನು ಬಳಸಬೇಡಿ. ನಿಮ್ಮ ನಿಕಟತೆಯ ಆದ್ಯತೆಗಳನ್ನು ವ್ಯಾಖ್ಯಾನಿಸುವ ಪದಗಳು, ಕ್ರಿಯೆಗಳು ಮತ್ತು ನೀವು ಹಂಬಲಿಸುವ ಅನುಭವಗಳನ್ನು ಸ್ಪಷ್ಟವಾಗಿ ತಿಳಿಸಿ. ಮತ್ತು ಈ ಆದ್ಯತೆಗಳು ಸಂದರ್ಭ, ದಿನದ ಸಮಯ ಮತ್ತು ಹೆಚ್ಚಿನದನ್ನು ಅವಲಂಬಿಸಿ ಬದಲಾಗಬಹುದು ಎಂಬುದನ್ನು ನೆನಪಿನಲ್ಲಿಡಿ. ಈ ಮಾಹಿತಿಯು ಅಗತ್ಯಗಳನ್ನು ನಿರೀಕ್ಷಿಸುವುದು ಮತ್ತು ಕಾಳಜಿಯನ್ನು ಒದಗಿಸುವುದು ಎಂದರ್ಥ.
ಭಾವನೆಗಳನ್ನು ಹಂಚಿಕೊಳ್ಳಿ ನಿಮ್ಮ ಭಾವನೆಗಳು ಹಾಗೂ ನೀವು ಅವರ ಬಗ್ಗೆ ಏನು ಆಲೋಚನೆ ಮಾಡುತ್ತೀರ, ಎಂಬುದನ್ನು ತಿಳಿಸಿ.
ಕನಸುಗಳು ಹಾಗೂ ಗುರಿಗಳು ನೀವು ಮುಂದೆ ಭವಿಷ್ಯದಲ್ಲಿ ಎಂತಹ ಕನಸುಗಳು ಹಾಗೂ ಗುರಿಗಳನ್ನು ಹೊಂದಿದ್ದೀರ ಎಂಬುದನ್ನು ನಿಮ್ಮ ಸಂಗಾತಿಗೆ ತಿಳಿಸಲೇಬೇಕು. ಆಗ ಭವಿಷ್ಯದಲ್ಲಿ ಇಬ್ಬರೂ ಒಂದಾಗಿ ತಮ್ಮ ಕನಸುಗಳನ್ನು ಸಾಕಾರಗೊಳಿಸುವತ್ತ ಗಮನಹರಿಸಬಹುದು. 5,10,15,20 ವರ್ಷದ ಯೋಜನೆಯನ್ನು ರೂಪಿಸಿ.
ಲೈಂಗಿಕ ಬಯಕೆಗಳು ಲೈಂಗಿಕ ಬಯಕೆಗಳ ಬಗ್ಗೆಯೂ ಕೂಡ ಮನಸ್ಸಿನಲ್ಲಿ ಏನೂ ಮುಚ್ಚಿಡದೆ ನಿಮ್ಮ ಸಂಗಾತಿಯ ಬಳಿ ಹೇಳಿಕೊಳ್ಳಿ.