Sapota Fruits Benefits: ಬೇಸಿಗೆಯಲ್ಲಿ ಚಿಕ್ಕು ಹಣ್ಣು ಸೇವನೆ ದೇಹಕ್ಕೆ ತುಂಬಾ ಒಳ್ಳೆಯದು

ಬೇಸಿಗೆ ಕಾಲ ಆರಂಭವಾಗುತ್ತಿದೆ. ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ದಿನಗಳಲ್ಲಿ ನಮಗೆ ಸಿಗುವ ಹಣ್ಣುಗಳಲ್ಲಿ ಚಿಕ್ಕು ಹಣ್ಣು ಕೂಡ ಒಂದು.

Sapota Fruits Benefits: ಬೇಸಿಗೆಯಲ್ಲಿ ಚಿಕ್ಕು ಹಣ್ಣು ಸೇವನೆ ದೇಹಕ್ಕೆ ತುಂಬಾ ಒಳ್ಳೆಯದು
ಪ್ರಾತಿನಿಧಿಕ ಚಿತ್ರImage Credit source: herzindagi.com
Follow us
ಗಂಗಾಧರ​ ಬ. ಸಾಬೋಜಿ
|

Updated on: Mar 05, 2023 | 7:00 AM

ಬೇಸಿಗೆ ಕಾಲ ಆರಂಭವಾಗುತ್ತಿದೆ. ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ದಿನಗಳಲ್ಲಿ ನಮಗೆ ಸಿಗುವ ಹಣ್ಣುಗಳಲ್ಲಿ ಚಿಕ್ಕು ಹಣ್ಣು (sapota fruits) ಕೂಡ ಒಂದು. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಾವು ಮತ್ತು ಪಪ್ಪಾಯಿಯಂತೆಯೇ, ಸಪೋಟವು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿದೆ. ಸಪೋಟ ತಿನ್ನಲು ತುಂಬಾ ರುಚಿಯಾಗಿರುವುದರಿಂದ ಮಿಲ್ಕ್ ಶೇಕ್ ಮಾಡಲು ಇದನ್ನು ಹೆಚ್ಚಾಗಿ ಬಳಸುತ್ತಾರೆ. ಈ ಹಣ್ಣಿನಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಸಮೃದ್ಧವಾಗಿದೆ. ವಿಟಮಿನ್ ಸಿ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸಪೋಟವು ತಾಮ್ರ, ಕಬ್ಬಿಣ, ರಂಜಕ, ಕ್ಯಾಲ್ಸಿಯಂ ಮತ್ತು ನಿಯಾಸಿಕ್‌ನಂತಹ ಖನಿಜಗಳಿಂದ ಸಮೃದ್ಧವಾಗಿದೆ. ಸಪೋಟ ಕಣ್ಣಿನ ದೃಷ್ಟಿಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Holi 2023: ಹೋಳಿ ಹಬ್ಬದ ವಿಶೇಷ ಮೃದುವಾದ ಮಲ್ಪುರಿ ಮನೆಯಲ್ಲಿಯೇ ತಯಾರಿಸಿ, ರೆಸಿಪಿ ಇಲ್ಲಿದೆ

ಬೇಸಿಗೆಯಲ್ಲಿ ಸಪೋಟ ಸೇವನೆಯ ಪ್ರಯೋಜನಗಳು ಹೀಗಿವೆ

  1. ಸಪೋಟ ಹಣ್ಣಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದ್ದು, ಇದು ಮೂಳೆಗಳ ಆರೋಗ್ಯಕ್ಕೆ ಪ್ರಮುಖವಾಗಿದೆ.
  2. ದಿನಕ್ಕೆ ಕನಿಷ್ಠ ಎರಡು ಅಥವಾ ಮೂರು ಸಪೋಟ ತಿನ್ನುವುದರಿಂದ ಮಕ್ಕಳಿಗೆ ಮತ್ತು ದೊಡ್ಡವರಿಗೆ ಅನೇಕ ಪೋಷಕಾಂಶಗಳು ದೊರೆಯುತ್ತವೆ. ಅದರಲ್ಲೂ ಕೆಲಸಕ್ಕೆಂದು ಹೊರಗೆ ಹೋಗುವವರಲ್ಲಿ, ಟೆನ್ಷನ್​ ಮಾಡಿಕೊಳ್ಳುವವರು ಸಪೋಟ ತಿಂದರೆ ತಕ್ಷಣ ಆಯಾಸ ಕಡಿಮೆಯಾಗಿ ಹೊಸ ಉತ್ಸಾಹ ಬರುತ್ತದೆ.
  3. ನಿತ್ಯವೂ ಸಪೋಟ ಹಣ್ಣನ್ನು ಸೇವಿಸುವುದರಿಂದ ದೃಷ್ಟಿ ದೋಷ ನಿವಾರಣೆಯಾಗುತ್ತದೆ. ನೀವು ದಿನಕ್ಕೆ ಒಂದು ಹಣ್ಣನ್ನು ಸೇವಿಸಿದರೆ, ಅದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಶ್ವಾಸಕೋಶಕ್ಕೆ ಬಹಳಷ್ಟು ಒಳ್ಳೆಯದು.
  4. ಸಪೋಟ ದೇಹಕ್ಕೆ ಅಗತ್ಯವಾದ ಜೀವಸತ್ವಗಳು, ಖನಿಜಗಳು ಮತ್ತು ಫೈಬರ್​ನ್ನು ಒದಗಿಸುತ್ತದೆ. ಇದು ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಪ್ರೋಟೀನ್ಗಳು, ಕಾರ್ಬೋಹೈಡ್ರೇಟ್ಗಳು ಮತ್ತು ರಂಜಕಗಳಿಂದ ಸಮೃದ್ಧವಾಗಿದೆ.
  5. ಸಪೋಟದಲ್ಲಿ ಉರಿಯೂತ ನಿವಾರಕದಂತಹ ಇತರ ಹಲವು ಔಷಧೀಯ ಗುಣಗಳಿವೆ. ಇದಲ್ಲದೆ, ಅವು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ ಮತ್ತು ಈ ಹಣ್ಣಿನಲ್ಲಿರುವ ಕೆಲವು ರಾಸಾಯನಿಕಗಳು ಕರುಳಿನ ತುದಿಯಲ್ಲಿರುವ ತೆಳುವಾದ ಲೋಳೆಯ ಪೊರೆಯು ಹಾನಿಯಾಗದಂತೆ ರಕ್ಷಿಸುತ್ತದೆ.
  6. ರಕ್ತಹೀನತೆ ಇರುವವರು, ಗರ್ಭಿಣಿಯರು, ವಯೋವೃದ್ಧರು ಸಪೋಟ ಹಣ್ಣುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ದೇಹಕ್ಕೆ ಬೇಕಾದ ಕಬ್ಬಿಣಾಂಶ ದೊರೆಯುತ್ತದೆ.
  7. ಸಪೋಟ ಹಣ್ಣಿನಲ್ಲಿ ಚರ್ಮ ಮತ್ತು ಕೂದಲಿನ ಸಮಸ್ಯೆಗಳನ್ನು ತಡೆಯುವ ಮತ್ತು ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುವ ಗುಣವಿದೆ. ಇದರ ಪೋಷಕಾಂಶಗಳು ದೇಹದಿಂದ ಹಾನಿಕಾರಕ ವಸ್ತುಗಳನ್ನು ತೆಗೆದುಹಾಕುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಜೊತೆಗೆ ಚರ್ಮದ ಮೇಲೆ ಸುಕ್ಕುಗಳು ಉಂಟಾಗುವುದನ್ನು ತಡೆಯುತ್ತದೆ.
  8. ನೇರವಾಗಿ ಸಪೋಟವನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ.
  9. ಸಪೋಟದಲ್ಲಿರುವ ಫ್ರಕ್ಟೋಸ್ ದೇಹಕ್ಕೆ ತಕ್ಷಣದ ಶಕ್ತಿಯನ್ನು ನೀಡುತ್ತದೆ. ಸಪೋಟ ಹಾನಿಕಾರಕ ಸ್ವತಂತ್ರ ರಾಡಿಕಲ್‌ಗಳನ್ನು ತಡೆಯುತ್ತದೆ. ಬೇಸಿಗೆಯಲ್ಲಿ ಈ ಸಪೋಟ ಜೂಸ್​ ನಿಯಮಿತವಾಗಿ ಸೇವಿಸುವುದರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ.

ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Daily Devotional: ಮಕ್ಕಳು ಹಠ ಮಾಡ್ತಿದ್ರೆ ಇಲ್ಲಿದೆ ಸುಲಭ ಉಪಾಯ
Daily Devotional: ಮಕ್ಕಳು ಹಠ ಮಾಡ್ತಿದ್ರೆ ಇಲ್ಲಿದೆ ಸುಲಭ ಉಪಾಯ
Daily Horoscope: ಈ ರಾಶಿಯವರಿಗೆ ಐದು ಗ್ರಹಗಳ ಶುಭವಾಗಲಿದೆ
Daily Horoscope: ಈ ರಾಶಿಯವರಿಗೆ ಐದು ಗ್ರಹಗಳ ಶುಭವಾಗಲಿದೆ
ಇಂದಿರಾ ಕ್ಯಾಂಟೀನದ್ದು ಎಂದು ಸಚಿವಗೆ ಹೋಟೆಲ್​ ಊಟ ತಿನ್ನಿಸಿದ ಅಧಿಕಾರಿಗಳು!
ಇಂದಿರಾ ಕ್ಯಾಂಟೀನದ್ದು ಎಂದು ಸಚಿವಗೆ ಹೋಟೆಲ್​ ಊಟ ತಿನ್ನಿಸಿದ ಅಧಿಕಾರಿಗಳು!
ನಿಜಾಮನ ರಜಾಕರು ಮುಸಲ್ಮಾನರಲ್ಲ ಅಂತ ಪ್ರಿಯಾಂಕ್ ಹೇಳುತ್ತಾರೆ: ಯತ್ನಾಳ್
ನಿಜಾಮನ ರಜಾಕರು ಮುಸಲ್ಮಾನರಲ್ಲ ಅಂತ ಪ್ರಿಯಾಂಕ್ ಹೇಳುತ್ತಾರೆ: ಯತ್ನಾಳ್
‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ
‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ
ಜೆಡಿಎಸ್ ಕೇವಲ ಒಂದು ಕುಟುಂಬದ ಪಕ್ಷವಾಗಿ ಉಳಿದುಬಿಟ್ಟಿದೆ: ಯೋಗೇಶ್ವರ್
ಜೆಡಿಎಸ್ ಕೇವಲ ಒಂದು ಕುಟುಂಬದ ಪಕ್ಷವಾಗಿ ಉಳಿದುಬಿಟ್ಟಿದೆ: ಯೋಗೇಶ್ವರ್
ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು