Self Care Tips: ನೀವು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕಾದ ಸ್ವಯಂ ಆರೈಕೆಯ ಸಲಹೆಗಳು

ಸ್ವಯಂ ಆರೈಕೆಯು ನಿಮ್ಮ ದೈನಂದಿನ ಜೀವನದಲ್ಲಿ ನೀವು ಅಳವಡಿಸಿಕೊಳ್ಳಬೇಕಾದ ಪ್ರಮುಖ ಸ್ವಯಂ ಪ್ರೀತಿಯ ದಿನಚರಿಗಳಲ್ಲಿ ಒಂದಾಗಿದೆ. ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ನಿಮ್ಮ ಸ್ವಯಂ ಆರೈಕೆ(Self Care) ಯ ಸಲಹೆಗಳು ಇಲ್ಲಿವೆ.

Self Care Tips: ನೀವು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕಾದ ಸ್ವಯಂ   ಆರೈಕೆಯ ಸಲಹೆಗಳು
ಸ್ವಯಂ ಆರೈಕೆImage Credit source: Momspresso
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Apr 02, 2023 | 12:49 PM

ಸ್ವಯಂ ಆರೈಕೆಯು ನಿಮ್ಮ ದೈನಂದಿನ ಜೀವನದಲ್ಲಿ ನೀವು ಅಳವಡಿಸಿಕೊಳ್ಳಬೇಕಾದ ಪ್ರಮುಖ ಸ್ವಯಂ ಪ್ರೀತಿಯ ದಿನಚರಿಗಳಲ್ಲಿ ಒಂದಾಗಿದೆ. ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ನಿಮ್ಮ ಸ್ವಯಂ ಆರೈಕೆ(Self Care) ಯ ಸಲಹೆಗಳು ಇಲ್ಲಿವೆ. ನೀವು ಬೇರೆಯವರ ಬಗ್ಗೆ ಪ್ರೀತಿ ಕಾಳಜಿ ತೋರಿಸುವ ಹಾಗೆ, ನಿಮ್ಮ ಬಗ್ಗೆಯು ನೀವು ಕಾಳಜಿ ಪ್ರೀತಿಯನ್ನು ತೋರಿಸಬೇಕು. ಸ್ವಯಂ ಪ್ರೀತಿ ಎನ್ನುವಂತಹದ್ದು ತುಂಬಾ ಮುಖ್ಯ. ಇದು ನಿಮ್ಮ ಬಗ್ಗೆ ನಿಮಗೆ ಧನಾತ್ಮಕತೆಯ ಭಾವನೆಯನ್ನು ಮೂಡಿಸುತ್ತದೆ. ಸ್ವಯಂ ಆರೈಕೆಯನ್ನು ಮಾಡುವ ಮೂಲಕ ಸ್ವ ಪ್ರೀತಿಯನ್ನು ಬೆಳೆಸಿಕೊಳ್ಳಬಹುದು. ಇದು ದೈನಂದಿನ ಜೀವನಕ್ಕೆ ಅಗತ್ಯವಾದ ಅಂಶವಾಗಿದೆ. ನಿಮ್ಮನ್ನು ನೀವು ಪ್ರೀತಿಸುವ ಭಾವನೆಯನ್ನು ಮೂಡಿಸಬೇಕೆಂದರೆ, ನೀವು ನಿಮ್ಮ ಬಗ್ಗೆ ಸ್ವಯಂ ಆರೈಕೆಯನ್ನು ಮಾಡಬೇಕು. ಸ್ವಯಂ ಆರೈಕೆಯು ನಿಮ್ಮ ಮೊದಲ ಆದ್ಯತೆ ಆಗಿರಬೇಕು.

ಸ್ವಯಂ ಆರೈಕೆಗೆ ಆದ್ಯತೆ ನೀಡುವುದು. ನೀವು ಎಲ್ಲಕ್ಕಿಂತ ಮೊದಲು ನಿಮ್ಮನ್ನು ನಾವು ಪ್ರೀತಿಸಬೇಕು ಮತ್ತು ನಿಮ್ಮ ಬಗ್ಗೆ ನೀವು ಕಾಳಜಿ ವಹಿಸಬೇಕು. ಪ್ರತಿನಿತ್ಯ ಸ್ವಯಂ ಆರೈಕೆ ಮಾಡುವುದನ್ನು ನಿಮ್ಮ ಮೊದಲ ಅದ್ಯತೆಯಾಗಿರಬೇಕು. ಪೌಷ್ಟಿಕ ಹಾಗೂ ಆರೋಗ್ಯಕರ ಆಹಾರ ಸೇವನೆಯಿಂದ ಹಿಡಿದು ಧ್ಯಾನ, ವ್ಯಾಯಾಮವನ್ನು ದಿನನಿತ್ಯ ಮಾಡುವ ಮೂಲಕ, ನಮ್ಮ ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದನ್ನು ನೀವು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು.

ಇದನ್ನೂ ಓದಿ: ಸೋಪ್ ಬಳಸದೆಯೇ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಇಲ್ಲಿದೆ ಸಿಂಪಲ್​​​ ಟಿಪ್ಸ್

ನಿಮ್ಮ ಬಗ್ಗೆ ನೀವು ಹೆಚ್ಚಾಗಿ ತಿಳಿದುಕೊಳ್ಳುವುದು ಹಾಗೂ ಯಾವಾಗಲೂ ಸಾವಧಾನತೆಯಿಂದ ಇರಲು ಅಭ್ಯಾಸ ಮಾಡುವುದು ಹಾಗೂ ಹಿಂದೆ ಆಗಿ ಹೋದ ವಿಷಯಗಳ ಬಗ್ಗೆ ಚಿಂತೆ ಮಾಡದೆ ವರ್ತಮಾನದಲ್ಲಿ ಜೀವಿಸುವುದರಿಂದ ನೀವು ಯಾವಾಗಲೂ ಸಂತೋಷದಿಂದ ಮತ್ತು ಆರೋಗ್ಯಕರ ಮನಸ್ಥಿತಿಯನ್ನು ಪಡೆಯಬಹುದು. ಯಾವುದಾದರೂ ಒಳ್ಳೆಯ ಹವ್ಯಾಸಗಳನ್ನು ಅಭ್ಯಾಸ ಮಾಡುವುದು ಅಥವಾ ನಿಮಗೆ ಖುಷಿ ನೀಡುವ ಕೆಲಸಗಳಲ್ಲಿ ತೊಡಗಿಕೊಳ್ಳುವುದು ಸಂತೋಷವಾಗಿರಲು ಮತ್ತು ಸ್ವಯಂ ಪ್ರೀತಿಯನ್ನು ಅಭ್ಯಾಸ ಮಾಡಲು ಸಹಾಯ ಮಾಡುತ್ತದೆ. ನಿಮ್ಮಂತೆಯೆ ಸಮಾನ ಮನಸ್ಥಿತಿಯನ್ನು ಹೊಂದಿರುವ ಜನರೊಂದಿಗೆ ಸಾಮಾಜಿಕ ಸಂಪರ್ಕವನ್ನು ಹೊಂದುವುದರ ಮೂಲಕ ನೀವು ಆರೋಗ್ಯಕರ ಮನಸ್ಥಿತಿಯನ್ನು ಹೊಂದಬಹುದು ಮತ್ತು ಸಂತೋಷವಾಗಿರಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 12:49 pm, Sun, 2 April 23

ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ