ಕಚೇರಿಯಲ್ಲಿ ಆಲಸ್ಯವೇ?, ನಿದ್ರೆ ಬಂದಂಗೆ ಆಗುತ್ತಾ, ಕಾರಣಗಳು ಇಲ್ಲಿವೆ

Nayana Rajeev

Nayana Rajeev |

Updated on: Jan 22, 2023 | 1:22 PM

ಕಚೇರಿಯಲ್ಲಿ ಕೆಲಸ ಮಾಡುತ್ತಿರುವಾಗ ಮಧ್ಯಾಹ್ನ ಆಗುತ್ತಿದ್ದಂತೆ ಆಲಸ್ಯ ಶುರುವಾಗುತ್ತಾ, ನಿದ್ರೆ ಬಂದಂಗೆ ಅನ್ನಿಸುತ್ತಾ. ಊಟದ ನಂತರದ ಆಯಾಸ ಮತ್ತು ನಿದ್ರೆಯನ್ನು ತಪ್ಪಿಸಲು ಏನು ಮಾಡಬೇಕು.

ಕಚೇರಿಯಲ್ಲಿ ಆಲಸ್ಯವೇ?, ನಿದ್ರೆ ಬಂದಂಗೆ ಆಗುತ್ತಾ, ಕಾರಣಗಳು ಇಲ್ಲಿವೆ
ನಿದ್ರೆ

ಕಚೇರಿಯಲ್ಲಿ ಕೆಲಸ ಮಾಡುತ್ತಿರುವಾಗ ಮಧ್ಯಾಹ್ನ ಆಗುತ್ತಿದ್ದಂತೆ ಆಲಸ್ಯ ಶುರುವಾಗುತ್ತಾ, ನಿದ್ರೆ ಬಂದಂಗೆ ಅನ್ನಿಸುತ್ತಾ. ಊಟದ ನಂತರದ ಆಯಾಸ ಮತ್ತು ನಿದ್ರೆಯನ್ನು ತಪ್ಪಿಸಲು ಏನು ಮಾಡಬೇಕು. ಆದರೆ ಸಾಮಾನ್ಯವಾಗಿ ಜನರು ತಮ್ಮ ಸುಸ್ತು ಮತ್ತು ಆಲಸ್ಯಕ್ಕೆ ನಿಜವಾದ ಕಾರಣ ಅವರು ಆಹಾರವನ್ನು ಸೇವಿಸುವ ಸಮಯ ಎಂದು ತಿಳಿದಿರುವುದಿಲ್ಲ. ಇದು ತುಂಬಾ ಆಶ್ಚರ್ಯ ಎನಿಸಿದರೂ ಇದು ಸತ್ಯ. ವಾಸ್ತವವಾಗಿ, ದಿನವಿಡೀ ಕಚೇರಿಯಲ್ಲಿ ಕೆಲಸ ಮಾಡುವವರು ಹೆಚ್ಚು ಕ್ರಿಯಾಶೀಲರಾಗಿರುವ ಸಮಯವಿರುತ್ತದೆ, ಆದರೆ ಅವರು ಆಯಾಸವನ್ನು ಅನುಭವಿಸುವ ಸಮಯವೂ ಇರುತ್ತದೆ. ಒಂದು ಸಮೀಕ್ಷೆಯ ಪ್ರಕಾರ, ಕಚೇರಿಯಲ್ಲಿ ಜನರು ಬೆಳಗ್ಗೆ 10.22 ರ ನಡುವೆ ಹೆಚ್ಚು ಕೆಲಸ ಮಾಡುತ್ತಿರುತ್ತಾರೆ. ಆದರೆ ಮಧ್ಯಾಹ್ನ 1.27 ಅವರು ಸುಸ್ತಾಗುವ ಮತ್ತು ನಿದ್ದೆ ಬರುವ ಸಮಯ.

ಈ ಸಮೀಕ್ಷೆಯನ್ನು ಬ್ರಿಟನ್‌ನ ಬಾಡಿಗೆ ಏಜೆನ್ಸಿ ಕಂಪನಿ ಆಫೀಸ್ ಫ್ರೀಡಮ್ ಮಾಡಿದೆ. 2 ಸಾವಿರ ಜನರ ಮೇಲೆ ಸಮೀಕ್ಷೆ ನಡೆಸಿದೆ.

ತಾಜಾ ಸುದ್ದಿ

ಆಲಸ್ಯ ಯಾವಾಗ ಪ್ರಾರಂಭವಾಗುತ್ತದೆ? ಮಧ್ಯಾಹ್ನ 1.27 ಆದ ಬಳಿಕ ಹಸಿವು ಹಾಗೂ ಆಲಸ್ಯ ಎರಡೂ ಶುರುವಾಗುತ್ತದೆ. ಮತ್ತು ಅದು ಸುಮಾರು 2.06 ರವರೆಗೆ ಮುಂದುವರಿಯುತ್ತದೆ. ಜೊತೆಗೆ, 60 ಪ್ರತಿಶತ ಉದ್ಯೋಗಿಗಳು ಉತ್ಪಾದಕತೆಯ ಸಮಯದಲ್ಲಿ ಹೆಚ್ಚಿನ ಮತ್ತು ಕಡಿಮೆ ಹಂತಗಳನ್ನು ಅನುಭವಿಸದೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ.

ತಿನ್ನುವುದನ್ನು ಹೊರತುಪಡಿಸಿ, ಆಲಸ್ಯಕ್ಕೆ ಇತರ ಕಾರಣಗಳು ಯಾವುವು?

ಕಂಪ್ಯೂಟರ್ ಮುಂದೆ ಹೆಚ್ಚು ಸಮಯ ಕಳೆಯುವುದು, ಕೆಲಸದ ಸಮಯದಲ್ಲಿ ಬಿಡುವು ತೆಗೆದುಕೊಳ್ಳದಿರುವುದು, ಯಾರೊಂದಿಗೂ ಮಾತನಾಡದೆ ಸುಮ್ಮನೆ ಕುಳಿತುಕೊಂಡಿರುವುದು ಕೂಡ ಆಲಸ್ಯಕ್ಕೆ ಕಾರಣವಾಗಿರಬಹುದು. ಈ ಕಾರಣದಿಂದಾಗಿ, ಒಬ್ಬ ವ್ಯಕ್ತಿಯು ಕೆಲಸದ ಮೇಲೆ ಕೇಂದ್ರೀಕರಿಸಲು ಸಾಧ್ಯವಿಲ್ಲ.

ಭಾಗವಹಿಸುವವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಮನೆಯಿಂದಲೇ ಕೆಲಸ ಮಾಡುವುದಕ್ಕಿಂತ ಕಚೇರಿಯಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ. 10 ರಲ್ಲಿ 4 ಭಾಗವಹಿಸುವವರು ಕಚೇರಿಯಲ್ಲಿ ತಮ್ಮ ಉತ್ಪಾದಕತೆ ಹೆಚ್ಚಾಗಿದೆ ಎಂದು ಒಪ್ಪಿಕೊಂಡಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada