AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Struggling For Sleep: ರಾತ್ರಿ ಸರಿಯಾಗಿ ನಿದ್ರೆ ಬರುತ್ತಿಲ್ಲವೇ? ಈ ಅಭ್ಯಾಸಗಳನ್ನು ತಪ್ಪಿಸಲೇಬೇಕು

ನಿದ್ರೆ ಬಾರದೇ ಇರುವುದು, ಅರೆ ನಿದ್ರೆ, ನಿದ್ರೆಯ ಮಧ್ಯೆ ಎಚ್ಚರವಾಗುವುದು, ನಿತ್ಯವೂ ಕೆಟ್ಟ ಕನಸು ಬಿದ್ದು ಎಚ್ಚರವಾಗುವುದು ಇವೆಲ್ಲದರಿಂದ ನಿದ್ರೆ ಹಾಳಾಗುತ್ತದೆ.

Struggling For Sleep: ರಾತ್ರಿ ಸರಿಯಾಗಿ ನಿದ್ರೆ ಬರುತ್ತಿಲ್ಲವೇ? ಈ ಅಭ್ಯಾಸಗಳನ್ನು ತಪ್ಪಿಸಲೇಬೇಕು
SleepImage Credit source: Healthshots.com
Follow us
TV9 Web
| Updated By: ನಯನಾ ರಾಜೀವ್

Updated on: Dec 05, 2022 | 4:30 PM

ನಿದ್ರೆ ಬಾರದೇ ಇರುವುದು, ಅರೆ ನಿದ್ರೆ, ನಿದ್ರೆಯ ಮಧ್ಯೆ ಎಚ್ಚರವಾಗುವುದು, ನಿತ್ಯವೂ ಕೆಟ್ಟ ಕನಸು ಬಿದ್ದು ಎಚ್ಚರವಾಗುವುದು ಇವೆಲ್ಲದರಿಂದ ನಿದ್ರೆ ಹಾಳಾಗುತ್ತದೆ. ಸಂಡ್ ಸ್ಲೀಪ್ ಬಾರದೇ ಇದ್ದಾಗ, ನಿಮ್ಮ ಇಡೀ ದಿನವು ಆಯಾಸದಿಂದ ಕೂಡಿರುತ್ತದೆ. ಕಚೇರಿಯ ಟೆನ್ಷನ್​ಗಳು, ಮಕ್ಕಳ ಕಾಳಜಿ, ಭವಿಷ್ಯದ ಯೋಚನೆ, ಇನ್ನೂ ಕೆಲವು ಕಷ್ಟದ ಸಂದರ್ಭಗಳು ಕೂಡ ನಿದ್ರೆ ಬಾರದೇ ಇರುವುದಕ್ಕೆ ಪ್ರಮುಖ ಕಾರಣಗಳಾಗಿವೆ.

1. ರಾತ್ರಿ ಗಡಿಯಾರವನ್ನು ವೀಕ್ಷಿಸಬೇಡಿ ಮಧ್ಯರಾತ್ರಿಯಲ್ಲಿ ಗಡಿಯಾರವನ್ನು ಪದೇ ಪದೇ ನೋಡುತ್ತಿರಬೇಡಿ. ಆಗ ಅಯ್ಯೋ ಇಷ್ಟು ಹೊತ್ತಾಗಿಬಿಡ್ತಾ ನಿದ್ರೆ ಮಾಡದೆ ಎಂದೆನಿಸಿಬಿಡುತ್ತದೆ. ಆಗ ಒತ್ತಡದಲ್ಲಿ ನಿದ್ರೆ ಬರುವುದಿಲ್ಲ. ಹಾಗಾಗಿ ರೂಮಿನಲ್ಲಿ ಗಡಿಯಾರವಿಡುವುದು ಬೇಡ.

2 ಮೊಬೈಲ್, ಲ್ಯಾಪ್​ಟಾಪ್, ಟಿವಿಯಿಂದ ದೂರವಿರಿ ಟ್ಯಾಬ್ಲೆಟ್, ಫೋನ್ ಅಥವಾ ಲ್ಯಾಪ್‌ಟಾಪ್‌ನಿಂದ ನೀಲಿ ಬೆಳಕು ನಿಮ್ಮ ಮೆದುಳಿಗೆ ಇದು ಎಚ್ಚರಗೊಳ್ಳುವ ಸಮಯ ಎಂದು ಸಂಕೇತಿಸುತ್ತದೆ. ಮಲಗುವ ಸಮಯಕ್ಕೆ ಒಂದು ಗಂಟೆ ಮೊದಲು ಮೊಬೈಲ್​ನಿಂದ ದೂರವಿರಿ.

3 ಮತ್ತೊಂದು ಕೋಣೆಗೆ ಹೋಗಿ ಮಲಗಿ ನೀವು 20 ನಿಮಿಷಕ್ಕಿಂತ ಹೆಚ್ಚು ನಿಮಿಷಗಳ ಕಾಲ ನಿದ್ರೆ ಬಂದಿಲ್ಲವೆಂದರೆ ಮತ್ತೊಂದು ಕೋಣೆಯಲ್ಲಿ ಹೋಗಿ ಮಲಗಿ. ಸಣ್ಣ ಬಣ್ಣದ ಹಳದಿ ಅಥವಾ ಕೆಂಪು ಬೆಳಕನ್ನು ಮಾತ್ರ ಬೆಳಗಿಸಿ. ದೊಡ್ಡ ದೀಪಗಳನ್ನು ಬಳಸಬೇಡಿ. ಸಾಧ್ಯವಾದರೆ, ಇನ್ನೊಂದು ಕೋಣೆಗೆ ಹೋಗಿ. ಟಿವಿಯನ್ನು ಎಂದಿಗೂ ಆನ್ ಮಾಡಬೇಡಿ.

4. ಹಿಂದಕ್ಕೆ ಎಣಿಸಿ ರಾತ್ರಿ ಎಚ್ಚರವಾದರೆ ನಾವು ಏನನ್ನಾದರೂ ಯೋಚಿಸಲು ಅಥವಾ ನೆನಪಿಸಿಕೊಳ್ಳಲು ಪ್ರಾರಂಭಿಸುತ್ತೇವೆ, ಅಂದರೆ ಹಿಂದೆ ನಡೆದ ಘಟನೆಗಳು ಅಥವಾ ಭವಿಷ್ಯದ ಯೋಜನೆ ಬಗ್ಗೆ ಚಿಂತೆ ಮಾಡುತ್ತೇವೆ. ಆಗ ನೀವು 100ರಿಂದ ಹಿಂದಕ್ಕೆ ಎಣಿಸಿ.

5.ಚಹಾ, ಕಾಫಿ ಅಥವಾ ಸೋಡಾವನ್ನು ಸೇವಿಸಬೇಡಿ ಅದು ಕಾಫಿ, ಟೀ, ಸೋಡಾ, ಎನರ್ಜಿ ಡ್ರಿಂಕ್ಸ್ ಅಥವಾ ಚಾಕೊಲೇಟ್ ಆಗಿರಲಿ, ಕೆಫೀನ್ ನಿಮ್ಮ ಮೆದುಳನ್ನು ಎಚ್ಚರವಾಗಿರಲು ಪ್ರಚೋದಿಸುತ್ತದೆ. ಈ ರೀತಿಯ ನಿದ್ರಾಹೀನತೆ ಹೊಂದಿರುವ ವ್ಯಕ್ತಿಗಳು ಮಧ್ಯಾಹ್ನ 1 ಗಂಟೆಯ ನಂತರ ಯಾವುದೇ ರೀತಿಯ ಕೆಫೀನ್ ಅನ್ನು ತಪ್ಪಿಸಬೇಕು.

6. ಶಬ್ದ ನಾವು ಮಲಗಿದಾಗಲೂ ಮೆದುಳು ಎಚ್ಚರವಾಗಿಯೇ ಇರುತ್ತದೆ. ಅದು ಕೇಳುವ ಶಬ್ದವು ಗಾಢ ನಿದ್ರೆಯಿಂದಲೂ ನಿಮ್ಮನ್ನು ಎಬ್ಬಿಸಬಹುದು. ಮನೆ ಜನನಿಬಿಡ ಪ್ರದೇಶದಲ್ಲಿ ಆಸ್ಪತ್ರೆ ಅಥವಾ ಪೊಲೀಸ್ ಠಾಣೆಯ ಸಮೀಪದಲ್ಲಿದ್ದರೆ, ಆಂಬ್ಯುಲೆನ್ಸ್ ಮತ್ತು/ಅಥವಾ ಪೊಲೀಸ್ ಸೈರನ್‌ಗಳ ಸದ್ದು ನಿದ್ರೆಗೆ ಭಂಗ ತರಬಹುದು. ಈ ಶಬ್ದವನ್ನು ತಪ್ಪಿಸಲು ನೀವು ಕಿವಿ ಪ್ಲಗ್​ಗಳನ್ನು ಬಳಸಬಹುದು.

7. ವೈನ್ ಮಲಗುವ ಮುನ್ನ ಒಂದು ಲೋಟ ಬಿಯರ್ ಅಥವಾ ವೈನ್ ನಿಮಗೆ ನಿದ್ರೆಗೆ ಸಹಾಯ ಮಾಡುತ್ತದೆ ಎಂದು ಸಾಮಾನ್ಯವಾಗಿ ಜನರು ಭಾವಿಸುತ್ತಾರೆ. ಆಲ್ಕೋಹಾಲ್ ನಿಮ್ಮ ದೇಹದಲ್ಲಿ ರಾಸಾಯನಿಕವನ್ನು ಹೆಚ್ಚಿಸುತ್ತದೆ ಅದು ನಿಮಗೆ ನಿದ್ರೆಗೆ ಸಹಾಯ ಮಾಡುತ್ತದೆ. ಆದರೆ ಈ ರಾಸಾಯನಿಕಗಳು ದೇಹದಿಂದ ಬೇಗನೆ ಹೊರಬರುತ್ತವೆ. ಅದರ ನಂತರ ಅದು ನಿದ್ರೆಗೆ ಅಡ್ಡಿಯಾಗುತ್ತದೆ. ಮಧ್ಯರಾತ್ರಿಯಲ್ಲಿ ಏಳಬಹುದು.

8. ಧ್ಯಾನ ಶಾಂತವಾಗಿ ಕುಳಿತುಕೊಳ್ಳಿ ಮತ್ತು ನಿಮ್ಮ ಉಸಿರಾಟದ ಮೇಲೆ ಕೇಂದ್ರೀಕರಿಸಿ.

9. ವೇಳಾಪಟ್ಟಿಗೆ ಅಂಟಿಕೊಳ್ಳಿ ನೀವು ರಾತ್ರಿಯಲ್ಲಿ ತುಂಬಾ ಸಮಯದವರೆಗೆ ಎದ್ದಿದ್ದರೆ, ಮರುದಿನ ಬೆಳಿಗ್ಗೆ ನೀವು ಸುಸ್ತಾಗಿರುತ್ತೀರಿ, ಆದರೆ ಅದನ್ನು ಸರಿದೂಗಿಸಲು ಹಗಲಿನಲ್ಲಿ ಮತ್ತೆ ಮಲಗಲು ಅಥವಾ ನಿದ್ರೆ ಮಾಡಲು ಪ್ರಯತ್ನಿಸಬೇಡಿ. ಪ್ರತಿದಿನ ಒಂದೇ ಸಮಯದಲ್ಲಿ ಮಲಗುವುದು ಮತ್ತು ಏಳುವುದು ಮುಖ್ಯ. ಇದು ನಿದ್ರೆಯ ಸಮಯಕ್ಕೆ ವಿರುದ್ಧವಾಗಿ ಏಳುವ ಸಮಯವನ್ನು ತಿಳಿಯಲು ದೇಹಕ್ಕೆ ತರಬೇತಿ ನೀಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್