ಬಿಸಿಬೇಳೆ ಬಾತ್, ಚಿತ್ರಾನ್ನ, ಮದ್ದೂರು ವಡೆ ಇತರೆ ಖಾದ್ಯಗಳ ಮಾಡಿ ಕನ್ನಡಿಗರ ಹೃದಯ ಗೆದ್ದ ಲಂಡನ್ ಬಾಣಸಿಗ
ಮಸಾಲೆ ದೋಸೆ, ಚಿತ್ರಾನ್ನ, ಬಿಸಿಬೇಳೆ ಬಾತ್, ಇಡ್ಲಿ, ಚೌಚೌ ಬಾತ್.. ಬಾಯಲ್ಲಿ ನೀರೂರದೇ ಇರದು.. ಇದೆಲ್ಲವೂ ಕರ್ನಾಟಕ ಅಥವಾ ದೇಶದ ಯಾವುದೇ ಮೂಲದಲ್ಲಿ ಸಿದ್ಧಗೊಂಡರೆ ಆಶ್ಚರ್ಯವೇನಿಲ್ಲ, ಆದರೆ ಇದೆಲ್ಲವೂ ಸಿದ್ಧಪಡಿಸಿದ್ದು, ಲಂಡನ್ನ ಬಾಣಸಿಗರೊಬ್ಬರು, ಹಾಗಾಗಿ ತುಸು ಆಶ್ಚರ್ಯ.
ಮಸಾಲೆ ದೋಸೆ, ಚಿತ್ರಾನ್ನ, ಬಿಸಿಬೇಳೆ ಬಾತ್, ಇಡ್ಲಿ, ಚೌಚೌ ಬಾತ್.. ಬಾಯಲ್ಲಿ ನೀರೂರದೇ ಇರದು.. ಇದೆಲ್ಲವೂ ಕರ್ನಾಟಕ ಅಥವಾ ದೇಶದ ಯಾವುದೇ ಮೂಲದಲ್ಲಿ ಸಿದ್ಧಗೊಂಡರೆ ಆಶ್ಚರ್ಯವೇನಿಲ್ಲ, ಆದರೆ ಇದೆಲ್ಲವೂ ಸಿದ್ಧಪಡಿಸಿದ್ದು, ಲಂಡನ್ನ ಬಾಣಸಿಗರೊಬ್ಬರು, ಹಾಗಾಗಿ ತುಸು ಆಶ್ಚರ್ಯ. ಲಂಡನ್ ಮೂಲದ ಬಾಣಸಿಗರೊಬ್ಬರು ಪ್ರತಿ ವಾರ ಒಂದರಂತೆ ಭಾರತದ ವಿವಿಧ ರಾಜ್ಯಗಳ ಪಾಕ ವಿಧಾನದ ಸರಣಿಯನ್ನು ಆರಂಭಿಸಿ ಎಲ್ಲೆಡೆ ಮನೆಮಾತಾಗುತ್ತಿದ್ದಾರೆ.
ಜೇಕ್ ಡ್ರೈಯಾನ್ ಎಂಬುವವರು ತಮ್ಮ ಇನ್ಸ್ಟಾಗ್ರಾಂ ಹಂಚಿಕೊಂಡಿರುವ ವಿಡಿಯೋವನ್ನು ನೋಡಿದರೆ ನಿಮ್ಮ ಬಾಯಲ್ಲಿ ನೀರೂರುವುದಂತೂ ಸತ್ಯ. ಆಹಾರ ಉತ್ಸಾಹಿಗಳು ಆಗಸ್ಟ್‌ನಲ್ಲಿ ಪ್ರತಿ ಭಾರತೀಯ ರಾಜ್ಯವನ್ನು ಒಳಗೊಂಡ ವಾರದ ಸರಣಿಯನ್ನು ಪ್ರಾರಂಭಿಸಿದರು ಮತ್ತು ಐದು ದಿನಗಳ ಹಿಂದೆ ಕರ್ನಾಟಕದ ಖಾದ್ಯಗಳನ್ನು ಶುರು ಮಾಡಿದ್ದಾರೆ.
View this post on Instagram
ಇದುವರೆಗೆ ಗುಜರಾತಿ, ಪಂಜಾಬಿ, ರಾಜಸ್ಥಾನಿ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳದ ಖಾದ್ಯಗಳನ್ನು ಕವರ್ ಮಾಡಿದ್ದಾರೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ, ಅವರು ಗೊಡ್ಡು ಸಾರು, ನಂತರ ಮಂಡ್ಯ ಜಿಲ್ಲೆಯ ಮದ್ದೂರಿನ ಪ್ರಸಿದ್ಧ ತಿಂಡಿಯಾದ ಮದ್ದೂರು ವಡೆ ಮತ್ತು ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿ ಪಫ್ಡ್ ರೈಸ್ ಬಳಸಿ ಮಾಡಿದ ತಿಂಡಿ ಗಿರ್ಮಿಟ್ ಸಿದ್ಧಪಡಿಸಿದ್ದಾರೆ.
ಲಂಡನ್ ಮೂಲದ ಬಾಣಸಿಗ ಜೇಕ್ ಡ್ರೈಯಾನ್ ಅವರು ಗಿರ್ಮಿಟ್ ತಯಾರಿಸಿ ಅದನ್ನು ಸವಿಯುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನಂತರ 4ನೇ ದಿನ ಚಿತ್ರಾನ್ನ – ಲೆಮನ್ ರೈಸ್ – ಮತ್ತು ಮೈಸೂರು ಬೋಂಡ ತಯಾರಿಸಿ ಮರುದಿನ ಬಿಸಿಬೇಳೆ ಬಾತ್ ಮಾಡಿದ್ದಾರೆ.
ಗೋಡಂಬಿಗಳಿಂದ ಅದನ್ನು ಅಲಂಕಾರ ಮಾಡಿದ್ದು, ನಿಜಕ್ಕೂ ಸವಿಯಬೇಕು ಎನ್ನುವ ಹಂಬಲ ತರುವಂತಿತ್ತು. ಇವೆಲ್ಲವನ್ನೂ ಹುಬ್ಬಳ್ಳಿ ಧಾರವಾಡ ಎನ್ನುವ ಇನ್ಸ್ಟಾ ಪೇಜ್ ಒಂದು ಶೇರ್ ಮಾಡಿದೆ. ಡ್ರ್ಯಾನ್ಗೆ ಸುಮಾರು 486,000 ಫಾಲೋವರ್ಸ್ ಇದ್ದಾರೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:47 pm, Mon, 5 December 22