World Soil Day 2022: ಮಣ್ಣಿನ ಆರೋಗ್ಯ/ ಫಲವತ್ತತೆಯನ್ನು ಕಾಪಾಡಿಕೊಳ್ಳುವುದು ಮತ್ತು ಮುಂಜಾಗ್ರತಾ ಕ್ರಮ ಹೇಗೆ?
ಹೀಗಿರುವಾಗ ಮಣ್ಣಿನ ಫಲವತ್ತತೆ ಅಥವಾ ಆರೋಗ್ಯ ಉಳಿಸಿಕೊಳ್ಳುವುದು ಹೇಗೆ ? ಅಧಿಕ ಇಳುವರಿ ಪಡೆಯುವುದು ಹೇಗೆ? ಇಲ್ಲಿದೆ ಕೆಲವು ಸಲಹೆಗಳು
International Soil Day Conservation Day: ಇತ್ತೀಚಿಗೆ ರೈತರು ಮಣ್ಣಿನ ಫಲವತ್ತತೆ ಕುರಿತು ಸಾಕಷ್ಟು ಚಿಂತಾಕ್ರಾಂತನಾಗಿದ್ದಾರೆ. ಮಣ್ಣನ್ನು ಫಲವತ್ತಾಗಿಸಿಕೊಳ್ಳಲು, ಇದರಿಂದ ಉತ್ತಮ ಬೆಳೆ ಬೆಳೆಯಲು ಸಾಕಷ್ಟು ಪರಿಶ್ರಮ ಪಡುತ್ತಾರೆ. ಹಾಗೇ ಇತ್ತೀಚಿನ ದಿನಗಳಲ್ಲಿ ಅತಿಯಾದ ಮಳೆಯಿಂದ ಫಲವತ್ತಾತ ಮೇಲ್ಮೈ ಮಣ್ಣು ಕೊಚ್ಚಿಕೊಂಡು ಹೋಗುತ್ತಿದೆ. ಇದರಿಂದ ರೈತರು ತಾವು ಅಂದುಕೊಂಡಷ್ಟು ಇಳುವರಿಯನ್ನು ತೆಗೆಯುವುದು ಕಷ್ಟವಾಗಿದೆ.
ಹೀಗಿರುವಾಗ ಮಣ್ಣಿನ ಫಲವತ್ತತೆ ಅಥವಾ ಆರೋಗ್ಯ ಉಳಿಸಿಕೊಳ್ಳುವುದು ಹೇಗೆ ? ಅಧಿಕ ಇಳುವರಿ ಪಡೆಯುವುದು ಹೇಗೆ? ಇಲ್ಲಿದೆ ಕೆಲವು ಸಲಹೆಗಳು
ಮಣ್ಣಿನ ಆರೋಗ್ಯ ಅಂದರೆ ಅದು ಕೇವಲ ರಾಸಾಯನಿಕ ಅಂಶಗಳನ್ನು ಒಳಗೊಂಡಿರುವುದಲ್ಲ. ಕಾರಣ ಮಣ್ಣಿಗು ಕೂಡ ಜೀವ ಇರೋದರಿಂದ, ನಾವು ಬೆಳೆ ಬೆಳೆಯುವುದಕ್ಕಿಂತ ಮೊದಲು ಮಣ್ಣಿನ ರಚನೆ ತಿಳಿದುಕೊಳ್ಳಬೇಕಾದದ್ದು ಬಹು ಮುಖ್ಯ ಅಂಶ.
ಮಣ್ಣಿನ ರಚನೆ
1. ಯಾವುದೇ ವಿಧವಾದ ಮಣ್ಣಿನಲ್ಲಿ ಮರಳಿನ ಅಂಶ, ಕೂಡು ಕಣಗಳು, ಜೇಡಿ ಕಣಗಳು ಎಷ್ಟಿದೆ ಮತ್ತು ಅವೆಲ್ಲವು ಸಂಯೋಜನೆ ಗೊಂಡಿವೆಯಾ ಎಂಬುವುದನ್ನು ಎಂದು ತಿಳಿದುಕೊಳ್ಳಬೇಕಾದ ಮಣ್ಣಿನ ರಚನೆಯ ಮೊದಲ ಅಂಶ.
2. ಮಣ್ಣಿನ ಆರೋಗ್ಯವನ್ನು ತೀರ್ಮಾನ ಮಾಡಬೇಕಾದರೆ ಮೂರು ಪ್ರಮುಖ ಅಂಶಗಳು ಒಳಗೊಂಡಿರಬೇಕು 1. ಸಾವಯವ ಅಂಶ 2. ತೆವಾಂಶ ಜೀವಾಂಶ. 3. ಜೀವಾಂಶ
1. ಸಾವಯವ ಅಂಶ: ಮಣ್ಣಿನಲ್ಲಿ ಸಾವಯವ ಅಂಶ ಇರಲೇಬೇಕು. ಸಾವಯವ ಅಂಶ ಅಂದರೇ ಕಸ, ಕಡ್ಡಿ ಇತ್ಯಾದಿ. ಅಂದರೆ ಮಣ್ಣಿನಲ್ಲಿ ಕೊಳೆತು ಕಡೆಗೆ ಗೋಬ್ಬರ ಆಗುವಂತಹ ಅಂಶಗಳನ್ನು ಸಾವಯವ ಅಂಶ ಎಂದು ಕರೆಯುತ್ತೇವೆ.
2. ತೇವಾಂಶ ಬೇಳೆ: ತೇವಾಂಶ ಬೇಳೆ ಅಂದರೆ ಮಣ್ಣಿನ ನೀರನ ಅಂಶ. ಬೇಳೆಯೊದಕ್ಕೆ ಮಣ್ಣಲಿ ನೀರು ಇರಬೇಕಂತೇನಿಲ್ಲ ಮಣ್ಣು ಸ್ವಲ್ಪ ತಂಪಾಗಿದ್ದರೂ ಸಾಕು ಬೆಳೆ ಬೆಳೆಯಬುಹುದು.
3. ಜೀವಾಂಶ: ಇದನ್ನು ಸಾಯಿಲ್ ಆರ್ಗನೈಜೇಷನ್ನಲ್ಲಿರುವ ಜೀವ ಜಂತುಗಳು, ಜೀವಕಣಗಳು ಜೀವ ಸಂಕುಲಗಳು ಎಂದು ಕರೆಯುತ್ತಾರೆ. ಜೀವ ಜಣತುಗಳು, ಜೀವಕಣಗಳು ಅಂದರೆ ಎರೆಹುಳು. ಯಾವ ಮಣ್ಣಿನಲ್ಲಿ ಎರೆಹುಳುಗಳು ಇರುತ್ತವೆಯೋ, ಅದು ಆರೋಗ್ಯವಂತ ಮಣ್ಣು ಎಂದು ತಿಳಿಯಬಹುದು. ಇನ್ನೂ ಈ ಎರೆಹುಳುಗಳು ಮಣ್ಣಿನ ಆರೋಗ್ಯವನ್ನು ವೃದ್ಧಿ ಮಾಡುತ್ತವೆ.
ಮಣ್ಣಿನ ಆರೋಗ್ಯ ಕಾಪಾಡುವುದು ಹೇಗೆ ಅಥವಾ ಉತ್ತಮ ಬೆಳೆ ತೆಗೆಯೋದು ಹೇಗೆ
ನಾವು ಯಾವುದೇ ಬೆಳೆ ಬೆಳೆಯುವುದಕ್ಕಿಂತ ಮುಂಚೆ ಮಣ್ಣಿನ ಆರೋಗ್ಯದ ಬಗ್ಗೆ ತಿಳಿದುಕೊಳ್ಳಬೇಕು. ಮತ್ತು ಮೇಲ್ಮೈ ಮಣ್ಣು (Surface soil) ಎಷ್ಟು ಫಲವತ್ತಾಗಿದೆ ಎಂಬುವುದನ್ನು ತಿಳಿದುಕೊಳ್ಳಬೇಕು. ಇತ್ತೀಚಿಗೆ ಅತಿಯಾದ ಮಳೆಯಿಂದ ಮೇಲ್ಮೈ ಮಣ್ಣು ಬಹಳ ಅಪಾಯಕಾರಿ ಮಟ್ಟದಲ್ಲಿ ಹೊಲದಿಂದ ಹೊರಗಡೆಗೆ ಸವೆದುಕೊಂಡು ಹೋಗುತ್ತಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಎಷ್ಟು ತರಹದ ಮಣ್ಣು ಇದೆ ? ಇಲ್ಲಿ ಯಾವ ಬೆಳೆ ಸೂಕ್ತ ಇಲ್ಲಿದೆ ಮಾಹಿತಿ
ಮೇಲ್ಮೈ ಮಣ್ಣು ಸವೆತದಿಂದ ಉಂಟಾಗುವ ದುಷ್ಪರಿಣಾಮ ಇಳುವರಿ ಕಡಿಮೆ. ರೈತರು ಅಂದುಕೊಂಡಷ್ಟು ಬೆಳೆ ಕೈಗೆ ದಕ್ಕುವುದಿಲ್ಲ. ಇದರಿಂದ ರೈತರು ಕೈಸುಟ್ಟುಕೊಳ್ಳುತ್ತಾರೆ. ಹಾಗಿದ್ದರೇ ಇಳುವರಿ ಜಾಸ್ತಿ ಮಾಡಿಕೊಳ್ಳಬೇಕಾದರೆ ಮೇಲ್ಮಣ್ಣನ್ನು ಉಳಿಸಿಕೊಳ್ಳಬೇಕು. ಇನ್ನೂ ಈ ಮೇಲ್ಮೈ ಮಣ್ಣಿನ ಫಲವತ್ತತೆ ಬಗ್ಗೆ ತಿಳಿಯೋದು ಹೇಗೆ?
ಮೇಲ್ಮೈ ಮಣ್ಣಿನಲ್ಲಿ ಯಾವ ಯಾವ ಮಣ್ಣಿನ ಕಣಗಳು ಇವೆ ಎಂಬುವುದನ್ನು ಮೊದಲು ತಿಳಿದುಕೊಳ್ಳಬೇಕು. ಮಣ್ಣಿನ ಕಣಗಳು: ಮರಳು ಮಣ್ಣು, ಬೋರ್ಮಣ್ಣು, ಜೇಡಿ ಮಣ್ಣು. ಈ ಕಣಗಳು ಮಣ್ಣಿನಲ್ಲಿ ಇದ್ದರೇ, ಆ ಮಣ್ಣನ್ನು ಕಳಿತ ಮಣ್ಣು ಎಂದು ಕರೆಯುತ್ತಾರೆ. ಯಾವ ಮಣ್ಣು ಕಳಿತ ಮಣ್ಣಾಗಿರುತ್ತದೆಯೋ ಅದು ಫಲವತ್ತಾದ ಮಣ್ಣು ಎಂದು ತಿಳಿಯಬಹದು.
ಇನ್ನೂ ಮಣ್ಣಿನಲ್ಲಿ ಮೂರು ಕಣಗಳು ಎಷ್ಟಿರಬೇಕೆಂದರೇ, ರೈತರ ಪ್ರಕಾರ ಮಣ್ಣಲ್ಲಿ, 40 ಭಾಗ ಮರಳು ಮಣ್ಣು 40 ಭಾಗ ಬೋರ್ಮಣ್ಣು, ಇನ್ನು 20 ಭಾಗ ಜೇಡಿ ಮಣ್ಣು ಇರಬೇಕು. ಮಣ್ಣಿನ ಫಲವತ್ತತೆಯನ್ನು ತಿಳಿಯಲು ಇನ್ನೊಂದು ಸರಳ ಮಾರ್ಗವು ಇದೆ.
ಅದು ಮಣ್ಣಿನ ಬಣ್ಣ ಚೆನ್ನಾಗಿರಬೇಕು, ವಾಸನೆ ಇರಬೇಕು, ಕೈಯಲ್ಲಿ ಹಿಡಿದಾಗ ತಂಪಾಗಿರಬೇಕು ಮೇಲಿಂದ ಕೆಳಗೆ ಹಾಕಿದಾಗ ಧೂಳು ಬರಬಾರದು ಕಣಕಣಗಳು ಹಾಗೆ ಉದುರಬೇಕು. ಮಣ್ಣಿನಲ್ಲಿ ಕಸ ಕಡ್ಡಿಗಳು ಜಾಸ್ತಿ ಇರಬೇಕು, ಜೀವ ಜಂತುಗಳು ಇರಬೇಕು. ಮಳೆ ನೀರನ್ನು ಹೀರಿಕೊಳ್ಳುವ ಸಾಮರ್ಥ್ಯ. ಕೆಲವು ಬಗೆಯ ಹೊಲಗಳನ್ನು ನೀರಿನಲ್ಲಿ ಉಳಿಮೆ ಮಾಡಬಹುದು ಇನ್ನೂ ಕೆಲವು ಹೊಲಗಳು ಗಟ್ಟಿಯಾಗಿರೋದರಿಂದ ಟ್ಯಾಕ್ಟರ್ ಬಳಸಬೇಕಾಗುತ್ತದೆ ಇವೆಲ್ಲವೂ ಕೂಡ ಮಣ್ಣಿನ ಆರೋಗ್ಯದ ಸ್ಥಿತಿಗತಿ ಅಥವಾ ಫಲವತ್ತತೆ ತಿಳಿಯಲು ಸಹಾಯಕವಾಗುತ್ತವೆ.
ನಿಮ್ಮ ಹೊಲದಲ್ಲಿ ಯಾವ ಬೆಳೆ ಬರುತ್ತದೆ ಎಂದು ತಿಳಿಯುವುದು ಹೇಗೆ?
ಮೊದಲ ಮಳೆಯಾದ ನಂತರ ಉಳಿಮೆ ಮಾಡುವ ಮುಂಚೆ ಹೊಲಕ್ಕೆ ಮೊದಲು ಈ ಕ್ರಮವನ್ನು ಅನುಸರಿಸಿ. ಸುಮಾರು ಐದು ಕೆಜಿ ಅಷ್ಟು ಮಿಶ್ರಿತ ಸಿರಿಧಾನ್ಯಗಳು ಅಂದರೆ 5 ಕೆಜಿ ರಾಗಿ ಸಾಮಿ ನವಣೆ ಕಾಳು ಬೆಳೆಗಳು ತೊಗರಿ, ಅವರೆ, ಅಲ್ಸಂದೆ, ಹೆಸರು, ಕಡಲೆ, ಉದ್ದು, ಹುರುಳಿ. 5 ಕೆಜಿ ಎಣ್ಣೆ ಕಾಳುಗಳು (ನೆಲಗಡಲೆ ಸೂರ್ಯಪಾನ ಸಾಸಿವೆ ಹರಳು ಎಣ್ಣೆಕಾಳುಗಳು) 5 ಕೆಜಿ ಮಸಾಲೆ ಪದಾರ್ಥಗಳು ಕೆಲವು ಬಗೆಯ ಸೊಪ್ಪುಗಳು, ಕೆಲವು ಬಗೆಯ ತರಕಾರಿಗಳು. ಒಟ್ಟು ಸುಮಾರು 20 ರಿಂದ 25 ಕೆಜಿಯಷ್ಟು ಚೆನ್ನಾಗಿ ಮಿಶ್ರಣ ಮಾಡಿ ಉಳುಮೆ ಮಾಡೋದಕ್ಕೂ ಮೊದಲು ಇದನ್ನು ಹೊಲದಲ್ಲಿ ಒಂದು ಎಕರೆ, ಎರಚಿ ಬಿಟ್ಟು ನಂತರ ಉಳಿಮೆ ಮಾಡಬೇಕು.
ಎರಚಿದ ನಂತರ ಒಂದು ತಿಂಗಳ ಅವದಿಯಲ್ಲಿ ಗಮನಿಸಿದಾಗ ಅವುಗಳಲ್ಲಿ ಕೆಲವು ಬೆಳೆದಿರುವುತ್ತವೆ. ಇನ್ನು ಕೆಲವು ಬೆಳೆಯುತ್ತಿರುತ್ತವೆ. ಆಗ ಮಣ್ಣೇ ಹೇಳುತ್ತದೆ ಈ ಮಣ್ಣಿನಲ್ಲಿ ಯಾವ ಬೆಳೆ ಚೆನ್ನಾಗಿ ಬರುತ್ತದೆ ಎಂದು. ಇದನ್ನು ಅರ್ಥ ಮಾಡಿಕೊಂಡು ಉಳಿಮೆ ಮಾಡಿದರೇ ಉತ್ತಮ ಬೆಳೆ ತೆಗೆಯಬಹುದಾಗಿ. ಇದನ್ನು ಮಣ್ಣಿನ ಭಾಷೆಯನ್ನು ಅರ್ಥ ಮಾಡಿಕೊಳ್ಳುವುದು ಅಂತ ಕರೆಯುತ್ತಾರೆ.
ಇನ್ನೂ ಚಿಗುರೊಡೆದ 30 ತರಾವರಿ ಗಿಡಗಳನ್ನು ಸುಮಾರು 40 ದಿನಗಳಲ್ಲಿ ಮರು ಉಳುಮೆ ಮಾಡಿದರೆ ಮಣ್ಣಿಗೆ ಅವೆಲ್ಲವೂ ಕೂಡ ಸಂಪಾಗಿ ಮಣ್ಣಲ್ಲಿ ಸೇರುತ್ತವೆ ಅವಾಗ ಮಣ್ಣಲ್ಲಿ ಒಂದು ರೀತಿಯ ತಾಕತ್ತು ಬರುತ್ತದೆ.
ನಾವು ಮಿಶ್ರಣ ಮಾಡಿ ಎರಚಿದ ಸೊಪ್ಪು ಮಣ್ಣಲ್ಲಿರುವ ಜೀವ-ಜಂತುಗಳಿಗೆ ಆಹಾರಾಗುತ್ತದೆ. ಇದರಿಂದ ಸುಮಾರು ಎರಡೂವರೆಯಿಂದ ಮೂರು ಟನ್ನ ಹಸಿರು ಗೊಬ್ಬರ ಮಣ್ಣಿಗೆ ಸೇರುತ್ತದೆ. ಯಾವಾಗ ಸೊಪ್ಪು ಮಣ್ಣಿನ ಒಳಗಡೆ ಹೋಗುತ್ತೋ ಮಣ್ಣು ತಾನಾಗಿಯೇ ಸುಧಾರಣೆ ಆಗುತ್ತದೆ. ಮಣ್ಣಿನ ಕಣಗಳು ಸೇರುತ್ತವೆ ಮಣ್ಣಗೆ ಒಳ್ಳೆ ಬಣ್ಣ ಬರುತ್ತದೆ. ಮಣ್ಣಿನಲ್ಲಿ ಗಾಳಿ ಆಡುತ್ತದೆ, ಮಣ್ಣಿನಲ್ಲಿ ಜೀವಿಜಂತುಗಳು ಓಡಾಡುತ್ತವೆ. ಈ ಸೊಪ್ಪುಗಳು ಕ್ರಮೇಣ ಮಣ್ಣಲ್ಲೇ ಕರಗಿ ಕೊಳೆತು ಕಳಿತು ಅಲ್ಲೇ ಗೊಬ್ಬರ ಆಗುತ್ತದೆ. ಅಲ್ಲೇ ಈ ಜೀವ ಜಂತುಗಳ ಸಹಾಯದಿಂದ ಪೋಷಕಾಂಶಗಳಾಗಿ ಪರಿವರ್ತನೆಯಾಗುತ್ತವೆ. ಇವುಗಳನ್ನು ಬೆಳೆಯ ಬೇರುಗಳು ಹೀರಿಕೊಂಡು ಉತ್ತಮವಾಗಿ ಬೆಳೆಯುತ್ತವೆ. ಹೀಗಾಗಿ ಮಣ್ಣಿನ ಆರೋಗ್ಯದಲ್ಲಿ ಇದು ಬಹಳ ಮುಖ್ಯ ಪಾತ್ರವಹಿಸುತ್ತದೆ.
ಮಣ್ಣಿ ಫಲವತ್ತತೆ ಜಾಸ್ತಿ ಮಾಡಬೇಕಾದರೇ ಘನವಾದಂತಹ ಗೊಬ್ಬರ ಕೊಡಲೇಬೇಕು. ಅದು ಶಗಣಿ ಗೊಬ್ಬರ (ಕಾಂಪೋಸ್ಟ್). ರೈತರಿಗೆ ತಮ್ಮ ಸುತ್ತಮುತ್ತ ಸಿಗುವ ಜೈವಿಕ ಅಂಶಗಳನ್ನು ಬಳಸಿಕೊಂಡೇ ಗೊಬ್ಬರವನ್ನು ಮಾಡಬೇಕು ಹೊರತು ಯಾವುದನ್ನು ಹೊರಗಡೆಯಿಂದ ತರಬಾರದು.
ಕಾಂಪೋಸ್ಟ್ ತಯಾರಿಕೆಯಲ್ಲಿ 20 ದಿನಗಳಲ್ಲೇ 25 ಅತ್ಯುನ್ನತ ಗುಣಮಟ್ಟದ ಕಾಂಪೋಸ್ಟ್ಗಳನ್ನು ತಯಾರು ಮಾಡುವಂತಹ ವಿಧಾನ ಇವೆ. ಅವುಗಳ ಮೂಲಕ ಮಣ್ಣಿನ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದು. ಬಿತ್ತನೆಯಾದ ನಂತರ ಪ್ರತಿ 20 ದಿವಸಕ್ಕೊಂದು ಸಾರಿ ಯಾವುದಾದರೂ ಒಂದು ದ್ರವ ರೀತಿಯ ಗೊಬ್ಬರಗಳನ್ನು ಸಗಣಿ ಮತ್ತು ಗಂಜಲ ಹಾಕಿ ಗೊಬ್ಬರ ಮಾಡುತ್ತಾರೆ ನೀರು ಬೆರೆಸಿಬಿಟ್ಟೆ ಹಾಕ್ತಾರೆ ಇನ್ನು ಕೆಲವರು ಪಂಚಗವ್ಯ ಅಂತ ಹೇಳ್ತಾರೆ ಇನ್ನು ಕೆಲವರು ಜೀವಾಮೃತ ಎಂದು ಹೇಳುತ್ತಾರೆ. ಇದಲ್ಲದೇ ಕಳೆ ಗಿಡಿಗಳ ಮೂಲಕ ಕೂಡ ಗೊಬ್ಬರ ಮಾಡಿಕೊಳ್ಳಬಹುದು.
ಮಣ್ಣಿನ ಆರೋಗ್ಯ ವೃದ್ಧಿಗೆ ಇನ್ನೊಂದು ಪ್ರಮುಖ ಅಂಶವೆಂದರೇ ಏಕ ಬೆಳೆಯನ್ನು ಮಾಡರಬಾರದು. ಕನಿಷ್ಠ 8 ರಿಂದ 10 ಬೇರೆ ಬೇರೆ ರೀತಿಯ ಬೆಳೆಗಳನ್ನು ಬೆಳೆಯಲೇಬೇಕು. ಅಂದರೇ ನೀವು ಆರ್ಥಿಕ ಆದಾಯಕ್ಕೆ ಒಂದು ಬೆಳೆ ಬೆಳೆದರೇ, ಅದರ ಜೊತೆಗೆ ಕಾಳು ಬೆಳೆಗಳು, ಎಣ್ಣೆಕಾಳು ಬೆಳೆಗಳು, ಮಸಾಲೆ ಬೆಳೆಗಳು, ಕೆಲವು ಬಗೆಯ ಹೂ ಬೆಳೆಗಳು ಬೆಳೆದಾಗ ಮಣ್ಣಿನ ಆರೋಗ್ಯ ಚೆನ್ನಾಗಿರುತ್ತದೆ.
ಇನ್ನೂ ಜೂನ್ ತಿಂಗಳಲ್ಲಿ ನೀವು ಈ ಬೆಳಗಳನ್ನು ಉಳಿ ಮಾಡಿದರೆ ಕೆಲವು 3, 4, 5 ಇನ್ನೂ ಕೆಲವು 8 ತಿಂಗಳಿಗೆ ಕಟಾವಿಗೆ ಬರುತ್ತವೆ. ಇದರಿಂದ ನಿಮ್ಮ ಹೊಲದಲ್ಲಿ ಬೆಳಗಳು 8 ರಿಂದ 9 ತಿಂಗಳ ಕಾಲದವರೆಗೆ ಉಳಿದುಕೊಂಡಿರುತ್ತದೆ. ಇದು ಮಣ್ಣಿನ ಮೇಲೆ ನೇರವಾಗಿ ಬಿಸಿಲು ಬೀಳುವುದನ್ನು ತಡೆಯುತ್ತದೆ, ಮಳೆಯಾದಾಗ ಮಣ್ಣಿನ ಸವಕಳಿಯನ್ನು ತಡೆಯುತ್ತದೆ. ಬೆಳೆಗಳ ಎಲೆಗಳು ಅಲ್ಲಿಯೇ ಬಿದ್ದು, ಕೊಳೆತು ಗೊಬ್ಬರವಾಗುವುದರಿಂದ ಮಣ್ಣಿನ ಆರೋಗ್ಯ ಅಥವಾ ಫಲವತ್ತತೆ ಹೆಚ್ಚಿಸಿಕೊಳ್ಳಬಹುದು.
ಲೇಖನ: Soilವಾಸು (ಮಣ್ಣಿನ ತಜ್ಞರು)
Published On - 7:44 am, Tue, 6 December 22