Teachers Day 2024: ಶಿಕ್ಷಕರ ದಿನಕ್ಕೆ ವಾಟ್ಸಾಪ್ ಸ್ಟೇಟಸ್ ಹಾಕಲು ಈ ವಿಡಿಯೋಗಳು ಬೆಸ್ಟ್
ಕಲ್ಲನ್ನು ಶಿಲ್ಪಿಯೂ ಕೆತ್ತನೆ ಮಾಡಿ ಮೂರ್ತಿಯಾಗಿಸುವಂತೆ ಮಕ್ಕಳ ಭವಿಷ್ಯಕ್ಕೆ ಸುಂದರ ರೂಪ ನೀಡುವವರೇ ಈ ಶಿಕ್ಷಕರು. ಹೀಗಾಗಿ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಶಿಕ್ಷಕರ ಪಾತ್ರವು ಅಗಾಧವಾಗಿದೆ. ಹೀಗಾಗಿ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಕ್ಕೆ ನೀವು ನಿಮ್ಮ ನೆಚ್ಚಿನ ಶಿಕ್ಷಕರಿಗೆ ಕೃತಜ್ಞತೆ ತಿಳಿಸಲು ಹಾಗೂ ಧನ್ಯವಾದ ತಿಳಿಸಲು ಒಂದೊಳ್ಳೆ ದಿನವಾಗಿದೆ. ಈ ವಿಶೇಷವಾದ ದಿನದಂದು ನಿಮ್ಮ ನೆಚ್ಚಿನ ಶಿಕ್ಷಕರಿಗೆ ಈ ಸ್ಫೂರ್ತಿದಾಯಕ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅವರ ಮನಸ್ಸನ್ನು ಗೆಲ್ಲಬಹುದು.
ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವಲ್ಲಿ ಹಾಗೂ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ಕೊಡುಗೆಯಾಗಿ ನೀಡುವಲ್ಲಿ ಶಿಕ್ಷಕರ ಪಾತ್ರ ಬಹಳ ದೊಡ್ಡದು. ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ದೇಶದಾದ್ಯಂತ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಶಿಕ್ಷಕರಿಗೆ ಮೀಸಲಾಗಿರುವ ಈ ದಿನವನ್ನು ವಿಶೇಷವಾಗಿ 1888 ರಲ್ಲಿ ಇದೇ ದಿನಾಂಕದಂದು ಜನಿಸಿದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಗೌರವಾರ್ಥವಾಗಿ ಆಚರಿಸಲಾಗುತ್ತದೆ. ಈ ದಿನದಂದು ನಿಮ್ಮ ನೆಚ್ಚಿನ ಶಿಕ್ಷಕರಿಗೆ ಶುಭಾಶಯ ಕೋರಲು ಈ ವಿಡಿಯೋಗಳನ್ನು ಶೇರ್ ಮಾಡಬಹುದಾಗಿದೆ. ಅದಲ್ಲದೇ ವಾಟ್ಸಾಪ್ ಸ್ಟೇಟಸ್ ಹಾಕುವ ಮೂಲಕ ವಿಶೇಷವಾದ ರೀತಿಯಲ್ಲಿ ಶುಭಾಶಯಗಳನ್ನು ಕೋರಬಹುದು.
- ಶಿಕ್ಷಕರ ದಿನಕ್ಕೆ ಆನ್ಲೈನ್ ನಲ್ಲಿ ಲಭ್ಯವಿರುವ ಭಾವನಾತ್ಮಕ ವಿಡಿಯೋವನ್ನು ಸ್ಟೇಟಸ್ ಹಾಕುವ ಮೂಲಕ ನೆಚ್ಚಿನ ಶಿಕ್ಷಕರಿಗೆ ಶುಭಾಶಯಗಳನ್ನು ತಿಳಿಸಬಹುದು. ವಿಶೇಷ ದಿನಕ್ಕೆ ಇದೊಂದು ಸೃಜನಶೀಲ ಮಾರ್ಗವಾಗಿದೆ. ಈ ಸೃಜನಾತ್ಮಕ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಶುಭಾಶಯಗಳನ್ನು ತಿಳಿಸುವುದರಿಂದ ಶಿಕ್ಷಕರ ಮನಸ್ಸಿನಲ್ಲಿ ಆತ್ಮೀಯ ಭಾವವನ್ನು ಮೂಡಿಸುತ್ತದೆ.
- ಪ್ರೀತಿಪೂರ್ವಕವಾಗಿ ಧನ್ಯವಾದಗಳನ್ನು ತಿಳಿಸಲು ವಾಟ್ಸಪ್ ಸ್ಟೇಟಸ್ ವಿಡಿಯೋಗಳನ್ನು ಶೇರ್ ಮಾಡುವುದು ಉತ್ತಮ ಮಾರ್ಗವಾಗಿದೆ. ಅದಲ್ಲದೆ ಈ ವಿಡಿಯೋಗಳು ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವಿನ ಬಾಂಧವ್ಯವನ್ನು ಹೆಚ್ಚಿಸುವುದಲ್ಲದೆ, ಶಿಕ್ಷಕರಿಗೆ ಈ ರೀತಿ ಗೌರವವನ್ನು ಸಲ್ಲಿಸಬಹುದು.
- ಶಿಕ್ಷಕರ ದಿನಕ್ಕೆ ಶುಭಾಶಯ ಕೋರಲು ನೀವೇ ಬರೆದ ಕವನ ಸಾಲುಗಳೊಂದಿಗೆ ಮ್ಯೂಸಿಕ್ ಹಾಕಿ ವಿಡಿಯೋವನ್ನು ಎಡಿಟ್ ಮಾಡಿದರೆ ಇನ್ನಷ್ಟು ಆಕರ್ಷಕವಾಗಿರುತ್ತದೆ. ಈ ದಿನಕ್ಕಾಗಿ ಒಂದೆರಡು ಸರಳವಾದ ಸಾಲುಗಳನ್ನೊಳಗೊಂಡ ಅರ್ಥಪೂರ್ಣ ವಿಡಿಯೋ, ಅನಿಮೇಟೆಡ್ ವಿಡಿಯೋಗಳನ್ನು ವಾಟ್ಸಾಪ್ ಸ್ಟೇಟಸ್ ಗೆ ಅಥವಾ ಪ್ರೀತಿಯ ಶಿಕ್ಷಕರಿಗೆ ಕಳುಹಿಸುವ ಮೂಲಕ ಈ ದಿನವನ್ನು ವಿಶೇಷವಾಗಿ ಆಚರಿಸಿಕೊಳ್ಳಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ