ಸಾಂದರ್ಭಿಕ ಚಿತ್ರ
ಅಡುಗೆ ಮನೆಯಲ್ಲಿ (Kitchen) ಅನುಭವಿಸುವ ಕೆಲವೊಂದು ಸಮಸ್ಯೆಗಳು ದೊಡ್ಡ ಸಮಸ್ಯೆಗಳಾಗಿ ಕಾಣದೆ ಇರಬಹುದು. ಆದರೆ ಅದನ್ನು ಸರಿ ಮಾಡುವ ತನಕ ನೆಮ್ಮದಿ ಇರುವುದಿಲ್ಲ. ಅದರಲ್ಲೂ ಮನೆ ಹೆಣ್ಮಕ್ಕಳ ಕಿರಿಕಿರಿ ಯಾರಿಗೆ ಬೇಕು. ಬಹುಶಃ ಪ್ರತಿ ಮನೆಯಲ್ಲೂ ಕಾಡುವ ದೊಡ್ಡ ಸಮಸ್ಯೆ ಎಂದರೆ ಅದು ಅಡುಗೆ ಮನೆಯ ಸಿಂಕ್ (Kitchen Sink) ಅದರದ್ದು ದಿನಕ್ಕೊಂದು ಸಮಸ್ಯೆ. ಪ್ರತಿದಿನ ಒಂದಲ್ಲ ಒಂದು ಸಮಸ್ಯೆ ಬಂದೆ ಬರುತ್ತದೆ. ಇನ್ನು ಅದನ್ನು ಸರಿ ಮಾಡಲು ರಿಪೇರಿಯವರನ್ನು ಕರೆಯುವಂತಿಲ್ಲ ಡಬಲ್ ರೆಟ್ ಹೇಳುತ್ತದೆ. ಕೆಲವರಿಗೆ ಇನ್ನು ಡಿಮ್ಯಾಂಡ್, ಹೀಗಿರುವಾಗ ಈ ಸಮಸ್ಯೆಗಳನ್ನು ಪರಿಹಾರ ಮಾಡುವುದು ಹೇಗೆ? ಇಂತಹ ಚಿಕ್ಕ ಚಿಕ್ಕ ಕೆಲಸಕ್ಕೆ ದೊಡ್ಡ ಮಟ್ಟದಲ್ಲಿ ಹಣ ಖರ್ಚು ಮಾಡುವುದು ಸರಿಯಲ್ಲ. ಅದಕ್ಕೆ ಮನೆಯಲ್ಲಿ ನಾವೇ ಅದನ್ನು ರಿಪೇರಿ ಮಾಡಬಹುದು ಅದು ಹೇಗೆ? ಅಡುಗೆಮನೆಯ ಸಿಂಕ್ ಡ್ರೈನ್ ಅನ್ನು ಹೇಗೆ ಸರಿಪಡಿಸುವುದು ಎಂಬುದರಿಂದ ಹಿಡಿದು ಸೋರುವ ಟ್ಯಾಪ್‌ಗಳನ್ನು ನಿಭಾಯಿಸುವವರಿಗಿನ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
- ಮುಚ್ಚಿಹೋಗಿರುವ ಡ್ರೈನ್: ಅಡುಗೆಮನೆಯ ಸಿಂಕ್ ಡ್ರೈನ್ ಮುಚ್ಚಿ ಹೋದ್ರೆ ದೊಡ್ಡ ಕಿರಿಕಿರಿ, ಇದರಲ್ಲಿ ಸೊಪ್ಪಿನ ನಾರುಗಳು ಅಥವಾ ಪಾತ್ರೆ ತೊಳೆಯುವಾಗ ಅದರ ಕಸ ಸಿಕ್ಕಿಕೊಂಡರೆ ಡ್ರೈನ್ ಮುಚ್ಚಿ ಹೋಗುತ್ತದೆ. ಇದಕ್ಕೆ ಹೀಗೆ ಮಾಡಿ, ಮೊದಲು ಒಂದು ಕೆಟಲ್ ಕುದಿಯುವ ನೀರನ್ನು ನೇರವಾಗಿ ಡ್ರೈನ್‌ಗೆ ಸುರಿಯಬೇಕು. ಆಗಾ ಅದು ಡ್ರೈನ್ನಲ್ಲಿರುವ ಗ್ರೀಸ್ಗಳನ್ನು ಸಡಿಲಗೊಳಿಸುತ್ತದೆ. ಇದರ ಜತೆಗೆ ಅರ್ಧ ಕಪ್ ಅಡಿಗೆ ಸೋಡಾ ಮತ್ತು ಅರ್ಧ ಕಪ್ ವಿನೆಗರ್ ಸೇರಿಸಿ. 10 ರಿಂದ 15 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ಅದನ್ನು ಮತ್ತೆ ಹೆಚ್ಚು ಬಿಸಿ ನೀರಿನಿಂದ ತೊಳೆಯಿರಿ. ನಂತರ ನೋಡಿ ಮ್ಯಾಜಿಕ್, ಮುಚ್ಚಿಹೋಗಿರುವ ಡ್ರೈನ್ ಓಪನ್ ಆಗಿ ನೀರು ಸರಾಗವಾಗಿ ಹೋಗುತ್ತದೆ.
- ಸೋರುವ ಟ್ಯಾಪ್‌ಗಳು; ಅಡುಗೆ ಮನೆಯಲ್ಲಿ ನಲ್ಲಿ ಸಮಸ್ಯೆ ಬಂದ್ರೆ, ಅದಕ್ಕಿಂತ ದೊಡ್ಡ ತಲೆನೋವು ಬೇರೆ ಇಲ್ಲ. ಅದನ್ನು ರಿಪೇರಿ ಮಾಡುವುದೇ ಒಂದು ಸಾಹಸ. ಒಂದು ಕಡೆ ಕಿರಿಕಿರಿಯಾದರೆ ಇನ್ನೊಂದು ಕಡೆ ನೀರು ವ್ಯರ್ಥವಾಗುತ್ತಿದೆ ಎಂಬ ಸಂಕಷ್ಟ. ಸಿಂಕ್ನಲ್ಲಿರುವ ಸೋರುವ ನಲ್ಲಿಯಲ್ಲಿ ಸಾಮಾನ್ಯವಾಗಿ ವಾಷರ್ ಅಥವಾ ಕಾರ್ಟ್ರಿಡ್ಜ್‌ನಂತಹ ಒಳಗಿನ ಏನೋ ಸವೆದುಹೋಗಿದೆ ಎಂಬ ಸೂಚನೆ ಆಗಿರುತ್ತದೆ. ಒಂದು ವೇಳೆ ಈ ರೀತಿಯ ಸಮಸ್ಯೆ ಬಂದರೆ ನೀವೇ ರಿಪೇರಿ ಮಾಡಬಹುದು. ಅದು ಹೇಗೆ? ಇಲ್ಲಿದೆ ನೋಡಿ. ಮೊದಲು ನೀರು ಎಲ್ಲಿಂದ ಬರುತ್ತಿದೆ. ಅದರ ಮೈನ್ ನೀರು ಸರಬರಾಜ ಮಾಡುವ ಗೇಟ್ನ್ನು ಬಂದ್ ಮಾಡಿ. ನಂತರ ಸ್ಕ್ರೂಡ್ರೈವರ್ ಬಳಸಿ ಟ್ಯಾಪ್ನ್ನು ಪೈಪ್ನಿಂದ ಬೇರೆ ಮಾಡಿ. ಅದರಲ್ಲಿ ಎಲ್ಲಿ ಬ್ಲಾಕ್ ಆಗಿದೆ ನೋಡಿ. ಒಂದು ವೇಳೆ ಟ್ಯಾಪ್ ಸರಿ ಇಲ್ಲ ಎಂದರೆ ಬದಲಾಯಿಸಿ. ಹತ್ತಿರದ ಹಾರ್ಡ್‌ವೇರ್ ಅಂಗಡಿಯಲ್ಲಿ ಇದು ಸಿಗುತ್ತದೆ.
- ಚರಂಡಿಯಿಂದ ಬರುವ ಕೆಟ್ಟ ವಾಸನೆ: ಅಡುಗೆ ಮನೆಗೆ ತುಂಬಾ ಹತ್ತಿರವಾಗಿರುವುದು ಚರಂಡಿ, ಮನೆಯ ತ್ಯಾಜ್ಯಗಳೆಲ್ಲವು ಅಲ್ಲಿ ಹೋಗಿ ಸೇರುತ್ತದೆ. ಒಂದು ವೇಳೆ ಅಡುಗೆ ಮನೆಯ ಸಿಂಕ್ನಿಂದ ಕೆಟ್ಟ ವಾಸನೆ ಬಂದರೆ ಅದಕ್ಕೆ ಚರಂಡಿ ಕಾರಣ. ಡ್ರೈನ್ ಪೈಪ್ನಲ್ಲಿ ಈ ತ್ಯಾಜ್ಯ ಆಹಾರಗಳು ಕೊಳೆತು ಸಂಗ್ರಹವಾಗಿರುತ್ತದೆ. ಇದನ್ನು ಸರಿ ಮಾಡಲು ಅರ್ಧ ಕಪ್ ಅಡಿಗೆ ಸೋಡಾ ಮತ್ತು ಅರ್ಧ ಕಪ್ ವಿನೆಗರ್ ಸೇರಿಸಿ.ಅದನ್ನು ಸ್ವಲ್ಪ ಹೊತ್ತು ಹಾಗೆಯೇ ಬಿಡಿ, ನಂತರ ಬಿಸಿ ನೀರಿನಿಂದ ತೊಳೆಯಿರಿ. ಇದರ ಜತೆಗೆ ಪರಿಮಳಕ್ಕೆ ನಿಂಬೆ ಅಥವಾ ಕಿತ್ತಳೆ ಸಿಪ್ಪೆಗಳನ್ನು ಸೇರಿಸಿ. ಇದರಿಂದ ಸಿಂಕ್ ಸ್ವಚ್ಛಗೊಳುತ್ತದೆ. ಹಾಗೂ ವಾಸನೆ ಹೋಗುತ್ತದೆ.
- ನೀರು ಸ್ಪೀಡ್ ಆಗಿ ಬರುತ್ತಿಲ್ಲ: ಅಡುಗೆ ಮನೆಯಲ್ಲಿರುವ ಸಿಂಕ್ನಲ್ಲಿರುವ ನಲ್ಲಿಯಲ್ಲಿ ನೀರು ಕಡಿಮೆ ಬರಲು ನಲ್ಲಿಯ ತಲೆಯಲ್ಲಿ ಸುಣ್ಣದ ಪದರದ ಶೇಖರಣೆಯಿಂದ ಉಂಟಾಗುತ್ತದೆ. ನಲ್ಲಿಯ ಏರೇಟರ್ ಅನ್ನು ಬಿಚ್ಚಿ ಸುಮಾರು 30 ನಿಮಿಷಗಳ ಕಾಲ ಬಿಳಿ ವಿನೆಗರ್‌ನಲ್ಲಿ ನೆನೆಸಿಡುವ ಮೂಲಕ ನೀವು ಇದನ್ನು ಸರಿಪಡಿಸಬಹುದು. ನೀರಿನ ಒತ್ತಡ ಮತ್ತೆ ಹೆಚ್ಚಾಗುತ್ತದೆ. ನಂತರ ಸ್ವಚ್ಛಗೊಳಿಸಿ ಮತ್ತು ಮತ್ತೆ ಜೋಡಿಸಿ.
- ಸಿಂಕ್ ಅಡಿಯಲ್ಲಿ ಪೈಪ್‌ಗಳು ಸೋರುವುದು: ಸಿಂಕ್ ಅಡಿಯಲ್ಲಿರುವ ಪೈಪ್ ಸೋರಿಕೆ ಕಂಡರೆ ಏನು ಮಾಡಬೇಕು? ಈ ಸಮಸ್ಯೆಗಳು ಸವೆದ ಪೈಪ್‌ಗಳು ಅಥವಾ ಸಡಿಲವಾದ ಫಿಟ್ಟಿಂಗ್‌ಗಳಿಂದ ಬರುತ್ತವೆ. ಇದನ್ನು ಸರಿ ಮಾಡುವ ಮೊದಲು ಮೈನ್ ನೀರು ಸರಬರಾಜ ಮಾಡುವ ಗೇಟ್ನ್ನು ಆಫ್ ಮಾಡಿ. ನಂತರ ಸಿಂಕ್ ಅಡಿಯಲ್ಲಿ ನೋಡಿ, ಅಲ್ಲಿ ಯಾವ ಭಾಗದಲ್ಲಿ ಸೋರಿಕೆ ಆಗುತ್ತಿದೆ ಎಂದು ಪತ್ತೆ ಮಾಡಿ. ಸೋರಿಕೆ ಆಗುತ್ತಿರುವ ಸುತ್ತಲೂ ಪ್ಲಂಬಿಂಗ್ ಟೇಪ್ ಹಾಕಿ. ಒಂದು ವೇಳೆ ದೊಡ್ಡ ಮಟ್ಟದ ಡ್ಯಾಮೆಜ್ ಆಗಿದ್ರೆ ಪೈಪ್ ಅನ್ನು ಬದಲಾಯಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ