Sign In

By signing in or creating an account, you agree with Associated Broadcasting Company's Terms & Conditions and Privacy Policy.

Belly Fat: ಹೊಟ್ಟೆಯ ಕೊಬ್ಬು ಕರಗಿಸಿ, ತೂಕ ಇಳಿಸುವ 7 ಅಚ್ಚರಿಯ ಆಹಾರಗಳಿವು

ತಮ್ಮ ಫಿಟ್‌ನೆಸ್‌ ಬಗ್ಗೆ ಯಾರಿಗೆ ತಾನೇ ಇಷ್ಟವಿರುವುದಿಲ್ಲ? ಪ್ರಪಂಚದಾದ್ಯಂತ ಇರುವ ಹೆಚ್ಚಿನ ಸಂಖ್ಯೆಯ ಜನರು ಸಮತೋಲಿತ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿದ್ದಾರೆ. ಫಿಟ್ ಆಗಿರಲು ಕಡಿಮೆ ಕಾರ್ಬ್ ಹೊಂದಿರುವ ಆಹಾರದ ಸೇವನೆ ಅತ್ಯಗತ್ಯ. ಹೃದಯಾಘಾತ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಜೀವನಶೈಲಿಯ ಸಮಸ್ಯೆಗಳನ್ನು ನಿವಾರಿಸುವುದರ ಜೊತೆಗೆ, ಕಡಿಮೆ ಕಾರ್ಬ್ ಆಹಾರವು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ.

Belly Fat: ಹೊಟ್ಟೆಯ ಕೊಬ್ಬು ಕರಗಿಸಿ, ತೂಕ ಇಳಿಸುವ 7 ಅಚ್ಚರಿಯ ಆಹಾರಗಳಿವು
ಸಾಂದರ್ಭಿಕ ಚಿತ್ರ Image Credit source: iStock
Follow us
ಸುಷ್ಮಾ ಚಕ್ರೆ
|

Updated on: Mar 07, 2024 | 6:30 PM

ಕಡಿಮೆ ಕಾರ್ಬ್ ಹೊಂದಿರುವ ಆಹಾರವು ಹೆಚ್ಚುವರಿ ಕ್ಯಾಲೊರಿಗಳನ್ನು ಹೊರಹಾಕಲು ಮತ್ತು ಅನಾರೋಗ್ಯಕರ ಆಹಾರ ಪದ್ಧತಿಗಳನ್ನು ತ್ಯಜಿಸಲು ಉತ್ತಮ ಮಾರ್ಗವಾಗಿದೆ. ಜಂಕ್ ಫುಡ್ ಮತ್ತು ಕಾರ್ಬೊನೇಟೆಡ್ ಆಹಾರದ ಸೇವನೆಯನ್ನು ಕಡಿಮೆ ಮಾಡಬೇಕು. ಕಡಿಮೆ ಕಾರ್ಬ್ ಆಹಾರಗಳು ಜನರಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಏಕೆಂದರೆ, ಇವುಗಳಲ್ಲಿ ಪ್ರೋಟೀನ್‌ ಸಮೃದ್ಧವಾಗಿವೆ. ಇವು ಚಯಾಪಚಯವನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿವೆ.

ಹೆಚ್ಚುವರಿ ಕಿಲೋಗಳನ್ನು ಹೊರಹಾಕಲು ಮತ್ತು ಹೊಟ್ಟೆಯ ಕೊಬ್ಬನ್ನು ಕತ್ತರಿಸಲು ಸಹಾಯ ಮಾಡುವ ಕೆಲವು ಆಹಾರ ಪದಾರ್ಥಗಳು ಇಲ್ಲಿವೆ:

ಮೊಟ್ಟೆಗಳು:

ಮೊಟ್ಟೆಗಳು ಕಡಿಮೆ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತವೆ. ಅವುಗಳಲ್ಲಿ ಪ್ರೋಟೀನ್‌ಗಳು ಮತ್ತು ಆರೋಗ್ಯಕರ ಕೊಬ್ಬು ಸಮೃದ್ಧವಾಗಿವೆ. ಮೊಟ್ಟೆಯೊಂದಿಗೆ ದಿನವನ್ನು ಪ್ರಾರಂಭಿಸುವುದರಿಂದ ಆ ದಿನಪೂರ್ತಿ ಶಕ್ತಿಯನ್ನು ಕ್ರೋಢೀಕರಿಸಿಕೊಳ್ಳಬಹುದು.

ಇದನ್ನೂ ಓದಿ: Weight Loss: ತೂಕ ಇಳಿಸುವವರು ರಾಗಿ ಮುದ್ದೆ ತಿನ್ನಬಹುದಾ?

ಬೆರಿ ಹಣ್ಣುಗಳು:

ನೆಲ್ಲಿಕಾಯಿ, ಬ್ಲ್ಯಾಕ್‌ಬೆರಿ, ಬ್ಲೂ ಬೆರಿ ಮತ್ತು ಸ್ಟ್ರಾಬೆರಿಗಳಂತಹ ಹಣ್ಣುಗಳಲ್ಲಿ ಕಡಿಮೆ ಕಾರ್ಬ್ ಇರುತ್ತದೆ. ಈ ಆಹಾರವನ್ನು ಸೇವಿಸುವುದರಿಂದ ತೂಕ ಇಳಿಸಲು ಮತ್ತು ಒಟ್ಟಾರೆ ಯೋಗಕ್ಷೇಮಕ್ಕೆ ಪ್ರಯೋಜನಕಾರಿಯಾಗಿದೆ. ಪಾಲಿಫಿನಾಲ್‌ಗಳಲ್ಲಿ ಸಮೃದ್ಧವಾಗಿರುವ ಈ ಬೆರಿ ಹಣ್ಣುಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಅಲರ್ಜಿಗಳು, ರೋಗಗಳು ಮತ್ತು ಕೆಲವು ಕಾಯಿಲೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ.

ಕ್ಯಾಪ್ಸಿಕಂ:

ಕ್ಯಾಪ್ಸಿಕಂ ವಿಟಮಿನ್ ಸಿ ದೈನಂದಿನ ಮೌಲ್ಯದ ಶೇ. 137ರಷ್ಟು ಮತ್ತು ಕೇವಲ 5.5 ಗ್ರಾಂ ಕಾರ್ಬೋಹೈಡ್ರೇಟ್​ಗಳನ್ನು ಹೊಂದಿರುತ್ತದೆ. ಇದು ಕಬ್ಬಿಣದ ಸಮೃದ್ಧ ಮೂಲವಾಗಿದೆ ಮತ್ತು ರಕ್ತಹೀನತೆಯನ್ನು ತಡೆಯುತ್ತದೆ. ಇದು ಅತಿಯಾಗಿ ತಿನ್ನುವುದನ್ನು ಕಂಟ್ರೋಲ್ ಮಾಡಲು ಸಹಾಯ ಮಾಡುತ್ತದೆ.

ಆರೋಗ್ಯಕರ ಕೊಬ್ಬುಗಳು:

ನಟ್ಸ್, ಚಿಯಾ ಸೀಡ್ಸ್ ಮತ್ತು ಆಲಿವ್ ಎಣ್ಣೆಯಂತಹ ಆರೋಗ್ಯಕರ ಕೊಬ್ಬಿನ ಸೇವನೆಯು ಚಯಾಪಚಯವನ್ನು ಹೆಚ್ಚಿಸುತ್ತದೆ, ಹೆಚ್ಚಿದ ಕೊಬ್ಬು ಸುಡುವಿಕೆಯನ್ನು ಉತ್ತೇಜಿಸುತ್ತದೆ.

ತೆಂಗಿನಕಾಯಿ:

ತೆಂಗಿನಕಾಯಿ ಹೆಚ್ಚಿನ ಫೈಬರ್ ಅಂಶವಿರುವ ಆಹಾರವಾಗಿದ್ದು, ಇದನ್ನು ಸೇವಿಸಿದರೆ ದೇಹವು ಹೆಚ್ಚುವರಿ ಕೆಜಿಗಳನ್ನು ಪಡೆಯುವುದಿಲ್ಲ. ಇದು ತೂಕವನ್ನು ನಿಯಂತ್ರಣದಲ್ಲಿಡುತ್ತದೆ. ಇದರ ಮಧ್ಯಮ ಸರಪಳಿ ಕೊಬ್ಬಿನಾಮ್ಲಗಳು ತೂಕ ಇಳಿಸಲು ಕಾರಣವಾಗುವ ಚಯಾಪಚಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: Weight Loss: ಋತುಬಂಧದ ಬಳಿಕ ಮಹಿಳೆಯರ ತೂಕ ಇಳಿಸುವುದು ಹೇಗೆ?

ನೇರ ಪ್ರೋಟೀನ್​ಗಳು:

ಮೊಸರು, ತೋಫು, ಬೀನ್ಸ್ ಮತ್ತು ಮಸೂರಗಳಂತಹ ಆಹಾರಗಳು ಪೂರ್ಣತೆಯ ಭಾವನೆಯನ್ನು ಉಂಟುಮಾಡುವುದು ಮಾತ್ರವಲ್ಲದೆ ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಧನಾತ್ಮಕವಾಗಿ ಪ್ರಭಾವಿಸುತ್ತದೆ. ಈ ಪ್ರೋಟೀನ್ ಮೂಲಗಳು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಗ್ಲೂಕೋಸ್ ಮಟ್ಟವನ್ನು ನಿರ್ವಹಿಸುತ್ತದೆ ಮತ್ತು ಹೆಚ್ಚಿನ ಫೈಬರ್ ಅಂಶವನ್ನು ನೀಡುತ್ತದೆ,

ಚಿಯಾ ಸೀಡ್ಸ್:

ಇವು ಕಡಿಮೆ ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತವೆ ಮತ್ತು ಗ್ಲುಟನ್ ಮುಕ್ತವಾಗಿರುತ್ತವೆ. ಇವು ಪ್ರೋಟೀನ್‌ಗಳು, ಕ್ಯಾಲ್ಸಿಯಂನಿಂದ ಕೂಡಿರುತ್ತವೆ ಮತ್ತು ಆರೋಗ್ಯಕರ ಚಯಾಪಚಯ ಕ್ರಿಯೆಯನ್ನು ಬೆಂಬಲಿಸುತ್ತವೆ.

ಇವುಗಳ ಜೊತೆಗೆ, ಬಿಳಿ ಮಾಂಸ ಮತ್ತು ಸಮುದ್ರಾಹಾರವನ್ನು ಕಡಿಮೆ ಕಾರ್ಬ್ ಆಹಾರಗಳು ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ, ಏಪ್ರಿಕಾಟ್‌ಗಳಂತಹ ಹಣ್ಣುಗಳ ಜೊತೆಗೆ ಅಣಬೆಗಳು, ಕೋಸುಗಡ್ಡೆ ಮತ್ತು ಬಿಳಿ ಬದನೆಗಳಂತಹ ತರಕಾರಿಗಳು ಕೂಡ ಕಡಿಮೆ ಕಾರ್ಬ್ಸ್ ಅನ್ನು ಹೊಂದಿರುತ್ತವೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ