Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಪ್ಪಗಿನ ಹುಬ್ಬುಗಳನ್ನು ಪಡೆಯಲು ಯಾವ ಎಣ್ಣೆಯನ್ನು ಉಪಯೋಗಿಸಿದರೆ ಸೂಕ್ತ? ಮಾಹಿತಿ ಇಲ್ಲಿದೆ

ಮುಖದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಕಣ್ಣಿನ ರೆಪ್ಪೆಗಳು ಹಾಗೂ ಹುಬ್ಬುಗಳು ಪ್ರಮುಖ ಪಾತ್ರವಹಿಸುತ್ತದೆ. ತೆಳುವಾದ ಹುಬ್ಬುಗಳಿದ್ದರೆ ಮುಖವು ಅಷ್ಟೊಂದು ಚೆನ್ನಾಗಿ ಕಾಣಿಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಗಾಢವಾದ ಹುಬ್ಬುಗಳನ್ನು ಪಡೆಯಲು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಉತ್ಪನ್ನಗಳನ್ನು ಬಳಸುತ್ತಿದ್ದೀರಾ? ಇದರ ಬಳಕೆಯಿಂದ ಯಾವುದೇ ಉತ್ತಮ ಫಲಿತಾಂಶ ನಿಮಗೆ ದೊರೆತಿಲ್ಲವಾ? ಹಾಗಿದ್ದರೆ ಈ ಕೆಲವೊಂದು ಎಣ್ಣೆಗಳನ್ನು ಹುಬ್ಬುಗಳಿಗೆ ಹಚ್ಚುವ ಮೂಲಕ ದಪ್ಪಗಿನ ಹಾಗೂ ಕಪ್ಪುಬಣ್ಣದ ಹುಬ್ಬನ್ನು ನೀವು ಶೀಘ್ರದಲ್ಲಿ ಪಡೆಯಬಹುದು.

ದಪ್ಪಗಿನ ಹುಬ್ಬುಗಳನ್ನು ಪಡೆಯಲು ಯಾವ ಎಣ್ಣೆಯನ್ನು ಉಪಯೋಗಿಸಿದರೆ ಸೂಕ್ತ? ಮಾಹಿತಿ  ಇಲ್ಲಿದೆ
Thick Eyebrow
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on:Aug 17, 2023 | 6:28 PM

ಮುಖದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಹುಬ್ಬುಗಳು ಪ್ರಮುಖ ಪಾತ್ರ ವಹಿಸುತ್ತದೆ. ದಟ್ಟವಾದ ತಲೆಗೂದಲು ನಮ್ಮ ಸೌಂದರ್ಯವನ್ನು ಹೇಗೆ ಹೆಚ್ಚಿಸುತ್ತದೆಯೋ, ಅದೇ ರೀತಿ ದಪ್ಪ ಹುಬ್ಬುಗಳು ಕೂಡಾ ನಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಕೆಲವು ಮಹಿಳೆಯರು ಕೂದಲು ಉದುರುತ್ತಿವೆ ಎಂಬ ಚಿಂತೆಯಲ್ಲಿದ್ದರೆ, ಇನ್ನೂ ಕೆಲವು ಮಹಿಳೆಯರು ತಮಗೆ ದಪ್ಪಗಿನ ಹುಬ್ಬುಗಳಿಲ್ಲವಲ್ಲ ಎಂದು ಚಿಂತಿತರಾಗಿದ್ದಾರೆ. ಹೆಚ್ಚಿನವರು ತೆಳ್ಳಗಿನ ಹುಬ್ಬುಗಳನ್ನು ಹೊಂದಿರುವುದರಿಂದ ದಪ್ಪಗಿನ ಹುಬ್ಬುಗಳನ್ನು ಪಡೆಯಬೇಕೆಂದು ಮಾರುಕಟ್ಟೆಯಲ್ಲಿ ಸಿಗುವ ರಾಸಯನಿಕ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಇದರಿಂದ ಯಾವುದೇ ಉತ್ತಮ ಫಲಿತಾಂಶಗಳು ಲಭಿಸುವುದಿಲ್ಲ. ಅದರ ಬದಲಿಗೆ ಈ ಕೆಲವೊಂದು ಎಣ್ಣೆಗಳನ್ನು ಹುಬ್ಬುಗಳಿಗೆ ಹಚ್ಚುವ ಮೂಲಕ ನೈಸರ್ಗಿಕವಾಗಿ ದಪ್ಪಗಿನ ಹುಬ್ಬುಗಳನ್ನು ಪಡೆಯಬಹುದು.

ಹುಬ್ಬುಗಳು ದಟ್ಟವಾಗಿರಲು ಯಾವ ಎಣ್ಣೆ ಉತ್ತಮ?

ಹರಳೆಣ್ಣೆ:

ಕೂದಲಿನ ಬೆಳವಣಿಗೆಗೆ ಹರಳೆಣ್ಣೆ (ಕ್ಯಾಸ್ಟರ್ ಆಯಿಲ್) ಯನ್ನು ಅತ್ಯುತ್ತಮ ಆಯ್ಕೆ ಎಂದು ಪರಿಗಣಿಸಲಾಗಿದೆ. ಈ ಎಣ್ಣೆಯು ಉರಿಯೂತದ ವಿರೋಧಿ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದಲ್ಲದೆ, ವಿಟಮಿನ್ ಇ, ಒಮೆಗಾ-6 ಕೊಬ್ಬಿನಾಮ್ಲಗಳಂತಹ ಅನೇಕ ಪೋಷಕಾಂಶಗಳು ಹರಳೆಣ್ಣೆಯಲ್ಲಿ ಕಂಡುಬರುತ್ತವೆ. ಈ ಎಲ್ಲಾ ಪೋಷಕಾಂಶಗಳು ಕೂದಲಿನ ಬೆಳವಣಿಗೆಗೆ ಪರಿಣಾಮಕಾರಿ ಎಂದು ಸಾಬಿತಾಗಿದೆ. ಹೀಗಿರುವಾಗ ಹುಬ್ಬುಗಳಿಗೆ ಹರಳೆಣ್ಣೆಯನ್ನು ಪ್ರತಿದಿನ ಹಚ್ಚುವುದರಿಂದ ಕೂದಲಿನ ಕಿರುಚೀಲಗಳನ್ನು ಅದು ಪೋಷಿಸುತ್ತದೆ ಮತ್ತು ಅವುಗಳನ್ನು ಬಲಪಡಿಸುತ್ತದೆ. ಅಲ್ಲದೆ ಇದರಿಂದ ಹುಬ್ಬುಗಳು ದಪ್ಪವಾಗುತ್ತವೆ. ಆದ್ದರಿಂದ ಹುಬ್ಬುಗಳ ಬೆಳವಣಿಗೆಗೆ ಹರಳೆಣ್ಣೆಯನ್ನು ಬಳಸಲು ಮೊದಲಿಗೆ ಹರಳೆಣ್ಣೆಯಲ್ಲಿ ಹತ್ತಿ ಉಂಡೆಯನ್ನು ನೆನೆಸಿ ರಾತ್ರಿ ಮಲಗುವ ಅದನ್ನು ನಿಮ್ಮ ಹುಬ್ಬುಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಅನ್ವಯಿಸಿ. ನಿಯಮಿತವಾಗಿ ಹೀಗೆ ಮಾಡುವುದರಿಂದ ನೀವು ವ್ಯತ್ಯಾಸವನ್ನು ಗಮನಿಸಬಹುದು.

ತೆಂಗಿನ ಎಣ್ಣೆ:

ಕೊಬ್ಬರಿ ಎಣ್ಣೆಯನ್ನು ಹುಬ್ಬುಗಳ ಮೇಲೆ ಹಚ್ಚುವುದರಿಂದ ಅವುಗಳ ಬೆಳವಣಿಗೆ ಸುಧಾರಿಸುತ್ತದೆ. ನೀವು ಮಾಡಬೇಕಾಗಿರುವುದು ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಅದನ್ನು ನಿಮ್ಮ ಹುಬ್ಬುಗಳಿಗೆ ಪ್ರತಿರಾತ್ರಿ ಹಚ್ಚಿ. ಸ್ವಲ್ಪ ಹೊತ್ತು ಹಗುರವಾಗಿ ಕೈಯಿಂದ ಮಸಾಜ್ ಮಾಡುವುದರಿಂದ ರಕ್ತಪರಿಚಲನೆ ವೇಗವಾಗುತ್ತದೆ. ಮತ್ತು ಇದರಿಂದ ಕೂದಲಿನ ಬೆಳವಣಿಗೆ ಹೆಚ್ಚಾಗುತ್ತದೆ. ಇದಲ್ಲದೆ ಇದರಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಬಯೋಟಿನ್ ಅಂಶವಿದ್ದು, ಇದರಿಂದಾಗಿ ಹುಬ್ಬುಗಳ ಬೆಳವಣಿಗೆಯು ವೇಗವಾಗಿ ಹೆಚ್ಚಾಗುತ್ತದೆ.

ಇದನ್ನೂ ಓದಿ: ಒತ್ತಡವೆಂಬ ಸಂಕೋಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದೀರಾ ಈ ಸಲಹೆಗಳು ನಿಮಗೆ ನೆರವಾಗಬಹುದು

ವಿಟಮಿನ್ ಇ ಆಯಿಲ್:

ಹುಬ್ಬುಗಳಿಗೆ ವಿಟಮಿನ್ ಇ ಎಣ್ಣೆಯನ್ನು ಅನ್ವಯಿಸುವುದರಿಂದ ಹುಬ್ಬುಗಳನ್ನು ಕಪ್ಪಾಗಿಸಲು ಮತ್ತು ದಪ್ಪವಾಗಿಸಲು ಸಹಾಯ ಮಾಡುತ್ತದೆ. ನೀವು ಮಾಡಬೇಕಾಗಿರುವುದು ಒಂದು ವಿಟಮಿನ್ ಇ ಕ್ಯಾಪ್ಸೂಲ್ (ಮಾತ್ರೆ) ನ್ನು ಬಾದಾಮಿ ಎಣ್ಣೆಯಲ್ಲಿ ಬೆರೆಸಿ ನಂತರ ಅದನ್ನು ನಿಮ್ಮ ಹುಬ್ಬುಗಳ ಮೇಲೆ ದಿನಕ್ಕೆ 2 ರಿಂದ 3 ಬಾರಿ ಅನ್ವಯಿಸಿ. ಇದರಿಂದ ನೀವು ಗಾಢವಾದ ಮತ್ತು ದಪ್ಪಗಿನ ಹುಬ್ಬುಗಳನ್ನು ಪಡೆಯಬಹುದು.

ಆಲಿವ್ ಎಣ್ಣೆ:

ತೆಳುಯವಾದ ಹುಬ್ಬುಗಳನ್ನು ನೀವು ಹೊಂದಿದ್ದರೆ, ಪ್ರತಿದಿನ ರಾತ್ರಿ ಮಲಗುವ ಮುನ್ನ ಹುಬ್ಬುಗಳಿಗೆ ಆಲಿವ್ ಎಣ್ಣೆ ಹಚ್ಚಿ ಮತ್ತು 5 ರಿಂದ 10 ನಿಮಿಷಗಳ ಕಾಲ ಮಸಾಜ್ ಮಾಡಿ. ಈ ಎಣ್ಣೆಯ ಮಸಾಜ್ ನಿಮ್ಮ ನಿಮ್ಮ ಹುಬ್ಬುಗಳ ಬೆಳವಣಿಗೆಯನ್ನು ಹೆಚ್ಚಿಸಲು ಸಹಕಾರಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ:

Published On - 6:21 pm, Thu, 17 August 23

ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಆಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಆಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!