AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Photography Day 2023: ವಿಶ್ವ ಛಾಯಾಗ್ರಹಣ ದಿನ ಯಾವಾಗ? ಈ ವಿಶೇಷ ದಿನದ ಇತಿಹಾಸ ಏನು?

ಛಾಯಾಗ್ರಹಣವು ಒಂದು ಕಲಾ ಪ್ರಕಾರವಾಗಿದ್ದು, ಇದು ದೃಶ್ಯ ರೂಪದಲ್ಲಿ ಕ್ಷಣಗಳು ಮತ್ತು ಭಾವನೆಗಳನ್ನು ಸೆರೆಹಿಡಿಯುವ ಒಂದು ಅದ್ಭುತವಾಗಿದೆ. ಈ ಕಲಾ ಪ್ರಕಾರವು 19 ನೇ ಶತಮಾನದ ಆರಂಭದಲ್ಲಿ ಪ್ರಾರಂಭವಾದಾಗಿನಿಂದಲೂ ಗಮನಾರ್ಹವಾಗಿ ವಿಕಸನಗೊಂಡಿದೆ ಮತ್ತು ತಂತ್ರಜ್ಞಾನವು ಮುಂದುವರದಂತೆ ವಿಕಸನಗೊಳ್ಳುತ್ತಲೇ ಇದೆ. ಛಾಯಾಗ್ರಹಣದ ಹಿಂದಿನ ಕಲೆ, ವಿಜ್ಞಾನ ಮತ್ತು ಇತಿಹಾಸವನ್ನು ಸ್ಮರಿಸಲು ಪ್ರಪಂಚದಾದ್ಯಂತ ಆಗಸ್ಟ್ 19ರಂದು ವಿಶ್ವ ಛಾಯಾಗ್ರಹಣ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಹಿಂದಿನ ಇತಿಹಾಸ ಏನೆಂಬುದನ್ನು ನೋಡೋಣ.

World Photography Day 2023: ವಿಶ್ವ ಛಾಯಾಗ್ರಹಣ ದಿನ ಯಾವಾಗ? ಈ ವಿಶೇಷ ದಿನದ ಇತಿಹಾಸ ಏನು?
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on:Aug 18, 2023 | 12:54 PM

Share

ಛಾಯಾಗ್ರಹಣವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಇದು ದೃಶ್ಯ ರೂಪದಲ್ಲಿ ಕ್ಷಣಗಳು ಮತ್ತು ಭಾವನೆಗಳನ್ನು ಸೆರೆಹಿಡಿಯುತ್ತದೆ. ಛಾಯಾಗ್ರಹಣವು ಕಲೆಯ ಒಂದು ರೂಪವಾಗಿದ್ದು, ಸಮಯ, ಬೆಳಕು, ನೆನಪುಗಳು, ಭಾವನೆಗಳು, ಸಂಸ್ಕೃತಿ, ಇತಿಹಾಸ ಮತ್ತು ಹೆಚ್ಚಿನವುಗಳ ಸತ್ಯಾಸತ್ಯತೆಯನ್ನು ಸುಂದರವಾಗಿ ಸೆರೆಹಿಡಿಯುವ ಮೂಲಕ ನೆನಪುಗಳ ಕಥೆ ಹೇಳುವ ಅತ್ಯುತ್ತಮ ಮಾಧ್ಯಮವಾಗಿದೆ. ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಒಬ್ಬ ಛಾಯಾಗ್ರಹಕ ಅಡಗಿದ್ದಾನೆ. ಮತ್ತು ನಾವೆಲ್ಲರೂ ಅದರೊಂದಿಗೆ ಸಂಬಂಧ ಹೊಂದಿದ್ದೇವೆ. ನಾವುಗಳು ಮೊಬೈಲ್ ಕ್ಯಾಮೆರಾದ ಮೂಲಕ ನಮ್ಮ ಪ್ರತಿಯೊಂದು ಸುಂದರ ಕ್ಷಣಗಳನ್ನು ಸೆರೆಹಿಡಿಯುತ್ತೇವೆ. ಅದೇ ರೀತಿ ಅದೆಷ್ಟೋ ವೃತ್ತಿಪರ, ಹವ್ಯಾಸಿ ಛಾಯಾಗ್ರಾಹಕರಿದ್ದಾರೆ. ಅವರೆಲ್ಲರನ್ನು ಪ್ರೋತ್ಸಾಹಿಸಲು ಮತ್ತು ಗೌರವಿಸಲು ಪ್ರತಿವರ್ಷ ಆಗಸ್ಟ್ 19 ರಂದು ವಿಶ್ವ ಛಾಯಾಗ್ರಹಣ ದಿನವನ್ನು ಆಚರಿಸಲಾಗುತ್ತದೆ. ಆಗಸ್ಟ್ 19 ರಂದು ಈ ವಿಶೇಷ ದಿನವನ್ನು ಏಕೆ ಆಚರಿಸಲಾಗುತ್ತದೆ? ಈ ದಿನದ ಇತಿಹಾಸ ಏನೆಂಬುದನ್ನು ತಿಳಿಯೋಣ.

ಛಾಯಾಗ್ರಹಣ ದಿನದ ಇತಿಹಾಸ:

ಛಾಯಾಗ್ರಹಣ ದಿನದ ಆಚರಣೆಯು ಜನವರಿ 9, 1839 ರಂದು ಫ್ರಾನ್ಸ್​​​ನಲ್ಲಿ ಪ್ರಾರಂಭವಾಯಿತು. ಇದರ ಹಿಂದಿನ ಕಥೆಯೆಂದರೆ, 1839 ರ ಸಮಯದಲ್ಲಿ ಛಾಯಾಗ್ರಹಣ ಪ್ರಕ್ರಿಯೆಯನ್ನು ಆರಂಭಿಸಲಾಯಿತು. ಇದನ್ನು ಡಾಗ್ರೋಟೈಪ್ ಪ್ರಕ್ರಿಯೆ ಎಂದು ಕರೆಯಲಾಯಿತು. ಮತ್ತು ಈ ಪ್ರಕ್ರಿಯೆಯನ್ನು ವಿಶ್ವದ ಮೊದಲ ಛಾಯಾಗ್ರಹಣ ಪ್ರಕ್ರಿಯೆ ಎಂದು ಪರಿಗಣಿಸಲಾಗಿದೆ. ಇದನ್ನು ಫ್ರಾನ್ಸ್ ನ ಜೋಸೆಫ್ ನೈಸ್ ಫೋರ್ ಮತ್ತು ಲೂಯಿಸ್ ಡಾಗೆರೆ ಕಂಡುಹಿಡಿದರು. ಇದರ ನಂತರ ಆಗಸ್ಟ್ 19, 1839 ರಂದು ಫ್ರೆಂಚ್ ಸರ್ಕಾರವು ಈ ಛಾಯಾಗ್ರಹಣ ಆವಿಷ್ಕಾರವನ್ನು ಘೋಷಿಸಿ ಅದರ ಪೇಟೆಂಟ್ ನ್ನು ಪಡೆದುಕೊಂಡಿತು. ಇದರ ನೆನಪಿಗಾಗಿ ಪ್ರತಿವರ್ಷ ಆಗಸ್ಟ್ 19 ರಂದು ವಿಶ್ವ ಛಾಯಾಗ್ರಹಣ ದಿನವನ್ನು ಆಚರಿಸಲಾಗುತ್ತಿದೆ.

ಅನೇಕ ಜನರಿಗೆ ಛಾಯಾಗ್ರಹಣವು ಅವರ ಹವ್ಯಾಸವಾಗಿದೆ. 19 ನೇ ಶತಮಾನದ ಆರಂಭದಿಂದಲೂ ಛಾಯಾಗ್ರಹಣದ ಉದ್ಯಮವು ಪ್ರಗತಿಯಲ್ಲಿದೆ ಮತ್ತು ಈ ಉದ್ಯಮವು ಮೈಲಿಗಲ್ಲನ್ನು ಸಾಧಿಸುತ್ತಿದೆ. ಕ್ಯಾಮೆರಾ ತಂತ್ರಜ್ಞಾನದಲ್ಲಿನ ಪ್ರಗತಿಗಳು ಇಂದು ಡಿಜಿಟಲ್ ಫೋಟೋಗ್ರಫಿಗೆ ಕಾರಣಾಗಿದೆ. ಅಲ್ಲದೆ ಇಂದು ಫೋಟೋಗ್ರಫಿ ಒಂದು ಫ್ಯಾಷನ್ ಆಗಿ ಬದಲಾಗಿದೆ. ಇಂದು ಅದೆಷ್ಟೋ ಛಾಯಾಗ್ರಾಹರು ಈ ಕ್ಷೇತ್ರವನ್ನು ತಮ್ಮ ಉದ್ಯಮವನ್ನಾಗಿ ಮಾಡಿಕೊಂಡು ಹೆಸರುಗಳಿಸಿದ್ದಾರೆ. ಅಂತಹ ಛಾಯಾಗ್ರಹಕರನ್ನು ಗೌರವಿಸಲು ಮತ್ತು ಛಾಯಾಗ್ರಹಣದಲ್ಲಿ ಆಸಕ್ತಿ ಹೊಂದಿದವರನ್ನು ಪ್ರೋತ್ಸಾಹಿಸಲು ಪ್ರತಿವರ್ಷ ಆಗಸ್ಟ್ 19 ರಂದು ವಿಶ್ವ ಛಾಯಾಗ್ರಹಣ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ಇಂದು ವಿಶ್ವ ಛಾಯಗ್ರಹಣ ದಿನ, ಇತಿಹಾಸ, ಮಹತ್ವ, ಥೀಮ್ ಇಲ್ಲಿದೆ

ವಿಶ್ವ ಛಾಯಾಗ್ರಹಣ ದಿನದ ಪ್ರಾಮುಖ್ಯತೆ:

ವಿಶ್ವ ಛಾಯಾಗ್ರಹಣ ದಿನವನ್ನು ಛಾಯಾಗ್ರಹಣ ಕ್ಷೇತ್ರದಲ್ಲಿ ಗಮನಾರ್ಹ ಕೊಡುಗೆ ನೀಡಿದ ಜನರನ್ನು ಗೌರವಿಸಲು ಮತ್ತು ಅವರ ಸಾಧನೆಯನ್ನು ನೆನಪಿಸಲು ಆಚರಿಸಲಾಗುತ್ತದೆ. ಅಲ್ಲದೆ ಇದು ಜನರನ್ನು ಛಾಯಾಗ್ರಹಣ ಕ್ಷೇತ್ರಕ್ಕೆ ಬರುವಂತೆ ಪ್ರೋತ್ಸಾಹಿಸುತ್ತದೆ ಮತ್ತು ಅವರ ಕೌಶಲ್ಯವನ್ನು ತೋರಿಸಲು ಪ್ರೇರೇಪಿಸುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:14 pm, Thu, 17 August 23

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!