Travel: ಮನಾಲಿಗೆ ಭೇಟಿ ನೀಡಿದಾಗ ಈ 4 ಸ್ಥಳಗಳಿಗೆ ಹೋಗುವುದನ್ನು ಮರೆಯಬೇಡಿ!

ಈ ಬೇಸಗೆ ರಜೆಯಲ್ಲಿ ಎಲ್ಲಾದರೂ ಪ್ರಯಾಣಿಸಬೇಕು ಎಂದುಕೊಳ್ಳುತ್ತಿದ್ದರೆ, ಮನಾಲಿ ನಿಮಗೆ ಒಳ್ಳೆಯ ಆಯ್ಕೆಯಾಗಿದೆ. ಅಥವಾ ಈ ಮೊದಲೇ ಈ ಪ್ರದೇಶಕ್ಕೆ ಹೋಗಬೇಕು ಎಂದು ಯೋಚಿಸಿದ್ದರೆ ನಿಮ್ಮ ಲಿಸ್ಟ್ ನಲ್ಲಿ ಈ 4 ಪ್ರದೇಶಗಳನ್ನು ಗುರುತು ಮಾಡಿಕೊಳ್ಳಿ. ಯಾವುದು ಈ ಸ್ಥಳ? ಈ ಬಗ್ಗೆ ಇಲ್ಲಿದೆ ಮಾಹಿತಿ.

Travel: ಮನಾಲಿಗೆ ಭೇಟಿ ನೀಡಿದಾಗ ಈ 4 ಸ್ಥಳಗಳಿಗೆ ಹೋಗುವುದನ್ನು ಮರೆಯಬೇಡಿ!
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: May 22, 2023 | 1:32 PM

ಪರ್ವತ ಶ್ರೇಣಿಗಳಿಂದ ಕೂಡಿರುವ ಮನಾಲಿ ಹಲವು ವರ್ಷಗಳಿಂದ ಪ್ರವಾಸಿಗರನ್ನು ಸೆಳೆಯುವ ತಾಣವಾಗಿದೆ. ಹಿಮಾಚಲ ಪ್ರದೇಶದ ಎತ್ತರದ ಪರ್ವತಗಳಲ್ಲಿನ ಈ ವಿಲಕ್ಷಣ ಪಟ್ಟಣವು ಏಕಾಂತ, ಸುಂದರವಾದ ಭೂದೃಶ್ಯಗಳು, ಇಳಿಜಾರು ಪ್ರದೇಶಗಳು, ಹಿತವಾದ ಹವಾಮಾನ ನೀಡುವುದರಿಂದ ಎಲ್ಲಾ ವರ್ಗದ ಜನರಿಗೂ ಈ ಪ್ರದೇಶ ಹೆಚ್ಚು ಆಕರ್ಷಣೀಯವಾಗಿದೆ. ಮನಾಲಿ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿರುವುದರಿಂದ, ಅನ್ವೇಷಿಸಿದಷ್ಟು ಹೊಸ ಹೊಸ ತಾಣಗಳ ಪರಿಚಯವಾಗುತ್ತದೆ. ಹಾಗಾಗಿ ಇನ್ನೂ ಅನೇಕ ಸ್ಥಳಗಳು ಉಳಿದಿವೆ. ನೀವು ಕೂಡಾ ಮನಾಲಿಗೆ ಭೇಟಿ ನೀಡಲು ದಿನಾಂಕ ನಿಗದಿಗಾಗಿ ಕಾಯುತ್ತಿದ್ದರೆ ಅಥವಾ ಅಲ್ಲಿ ಸುಂದರವಾದ ಸ್ಥಳಗಳನ್ನು ಹುಡುಕುತ್ತಿದ್ದರೆ, ನಿಮ್ಮ ಪಟ್ಟಿಗೆ ಸೇರಿಸಲೇ ಬೇಕಾದ ನಾಲ್ಕು ಸ್ಥಳಗಳ ಬಗ್ಗೆ ಇಲ್ಲಿದೆ ಮಾಹಿತಿ.

ಹೋಮ್ ಸ್ಟೇಸ್ & ವಿಲ್ಲಾಸ್ ಎಂಬ ಟ್ವಿಟರ್ ಖಾತೆಯು ನಾಲ್ಕು ಸ್ಥಳಗಳ ಬಗ್ಗೆ ಮಾಹಿತಿ ನೀಡಿದ್ದು ಅವರ ಪ್ರಕಾರ, ಗಿರಿಧಾಮದ ಈ ನಾಲ್ಕು ಪ್ರದೇಶಗಳು ಶಾಂತಿಯಿಂದ ಕೂಡಿದ್ದು ರಮಣೀಯ ಮತ್ತು ಸಾಹಸಮಯವಾಗಿವೆ. ಹಾಗಾಗಿ ಪ್ರವಾಸಿಗರು ಈ ಪ್ರದೇಶಗಳನ್ನು ಇಷ್ಟ ಪಡುವುದರಲ್ಲಿ ಸಂಶಯವಿಲ್ಲ. ಆ ಸ್ಥಳಗಳ ಬಗ್ಗೆ ಇಲ್ಲಿದೆ ಮಾಹಿತಿ.

ನೊಯ್ ಜಲಪಾತ

ಮನಾಲಿಯಿಂದ 10 ಕಿ.ಮೀ ದೂರದಲ್ಲಿರುವ ಈ ಜಲಪಾತವು ಪ್ರಕೃತಿಯನ್ನೇ ಬೆರಗುಗೊಳಿಸುವಂತಿದೆ. 20 ಅಡಿ ಎತ್ತರದ ಜಲಪಾತ ಗುಹೆಯಂತೆಯೇ ಆಳವಾಗಿದ್ದು ನೋಡಲು ಕಣ್ಣಿಗೆ ಮುದ ನೀಡುವಂತಿದೆ. ಈ ತಾಣವನ್ನು ಪ್ರವಾಸಿಗರು ಖಂಡಿತವಾಗಿಯೂ ಭೇಟಿ ನೀಡಬಹುದು.

ಜೋಗಿನಿ ಜಲಪಾತ

ಜೋಗಿನಿ ಜಲಪಾತವು ನಿಮ್ಮ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣವಾಗಿದ್ದು ಇಲ್ಲಿನ ಮತ್ತೊಂದು ಸುಂದರವಾದ ಪ್ರದೇಶವಾಗಿದೆ. ಚಾರಣ ಮಾಡಲು ಇಷ್ಟಪಡುವ ಸಾಹಸ ಪ್ರಿಯರಿಗೆ ಇದು ಸೂಕ್ತ ಸ್ಥಳವಾಗಿದೆ. ನೀವು ಮನಾಲಿಯಿಂದ ಬೈಕ್ ಬಾಡಿಗೆಗೆ ಪಡೆದು ಜೋಗಿನಿ ಜಲಪಾತಕ್ಕೆ ಹೋಗಬಹುದು. ನಡುವೆ ನಿಮ್ಮನ್ನು ಬೆರಗುಗೊಳಿಸುವ ಪ್ರಯಾಣವನ್ನು ಕೂಡ ಆನಂದಿಸಬಹುದು. ಏಕೆಂದರೆ ಇಲ್ಲಿನ ಸುತ್ತ ಮುತ್ತ ಹಸಿರಾಗಿದ್ದು ನಿಮ್ಮ ಪ್ರವಾಸದ ಹಾದಿಯೂ ಸುಂದರವಾಗಿರುತ್ತದೆ.

ಕೊಕ್ಸಾರ್ ಗ್ರಾಮ

ಕೊಕ್ಸರ್ ಎಂಬುದು ಲೇಹ್-ಮನಾಲಿ ಹೆದ್ದಾರಿಯಲ್ಲಿರುವ ಹಿಮಾಚಲ ಪ್ರದೇಶದ ಸಮೀಪವಿರುವ ಒಂದು ಹಳ್ಳಿಯಾಗಿದೆ. ಇದು ಲಾಹೌಲ್-ಸ್ಪಿಟಿ ಜಿಲ್ಲೆಯ ಅತ್ಯಂತ ಶೀತ ಪ್ರದೇಶದ ಹಳ್ಳಿಗಳಲ್ಲಿ ಒಂದಾಗಿದೆ. ಈ ಭಾಗ ಚಳಿಗಾಲದಲ್ಲಿ ಹಿಮದಿಂದ ಆವೃತವಾಗಿರುತ್ತದೆ. ಸ್ಥಳೀಯ ದೃಶ್ಯ ವೀಕ್ಷಣೆ ಮತ್ತು ಅಲ್ಲಿನ ಪಾಕ ಪದ್ಧತಿಯನ್ನು ಹಳ್ಳಿಯ ಸುಂದರವಾದ ಭೂದೃಶ್ಯದ ಜೊತೆ ಆನಂದಿಸಬಹುದಾಗಿದೆ. ಪ್ರಕೃತಿ ಪ್ರಿಯರಿಗೆ ಈ ಜಾಗ ಇಷ್ಟ ವಾಗುವುದರಲ್ಲಿ ಸಂಶಯವಿಲ್ಲ.

ಸಜ್ಲಾ ಜಲಪಾತ

ಮನಾಲಿಯಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಮತ್ತು ಬಿಯಾಸ್ ನದಿಯ ಎಡ ದಂಡೆಯಲ್ಲಿರುವ ಸಜ್ಲಾ ಜಲಪಾತವು ಇಲ್ಲಿನ ಸಜ್ಲಾ ಗ್ರಾಮದಲ್ಲಿ ನೋಡ ಬಹುದಾದ ಸುಂದರವಾದ ತಾಣವಾಗಿದೆ. ಈ ಪ್ರದೇಶವು ದೇವದಾರು ಮರಗಳು, ಪೈನ್ ಮರಗಳು, ಸೇಬು ಹಣ್ಣಿನ ತೋಟಗಳು ಮತ್ತು ಹಿಮದಿಂದ ಆವೃತವಾದ ಪರ್ವತ ಶಿಖರಗಳಿಂದ ಸುತ್ತುವರೆದಿದೆ. ಹಾಗಾಗಿ ಈ ಭಾಗ ಪ್ರವಾಸಿಗರಿಗೆ ಕಣ್ ಮನ ತಣಿಸುವುದರಲ್ಲಿ ಯಾವುದೇ ಮಾತಿಲ್ಲ.

ಇದನ್ನೂ ಓದಿ:Travel Scams: ಆನ್​ಲೈನ್​ನಲ್ಲಿ ಟಿಕೆಟ್, ಹೋಟೆಲ್ ಬುಕ್ ಮಾಡುತ್ತೀರಾ? ಸ್ಕ್ಯಾಮ್​ಗಳಿಗೆ ಬಲಿಯಾಗದಿರಿ ಜೋಕೆ; ನೀವು ಎಚ್ಚರ ವಹಿಸಬೇಕಾದ ಸಂಗತಿಗಳನ್ನು ತಿಳಿದಿರಿ

ಇದರ ಜೊತೆ ನೀವು ಬೇರೆ ಬೇರೆ ಸ್ಥಳಗಳಿಗೂ ಭೇಟಿ ನೀಡಬಹುದಾಗಿದ್ದು ನೀವು ಕ್ರಮಿಸುವ ದೂರ, ಮತ್ತು ಸ್ಥಳಗಳ ಬಗ್ಗೆ ಮೊದಲೇ ತಿಳಿದುಕೊಂಡು ಯಾವ ಜಾಗವನ್ನು ಮೊದಲು ನೋಡಬೇಕು ಎಂದು ನಿರ್ಧರಿಸಿಕೊಳ್ಳಿ. ಆಗ ನಿಮಗೆ ಹತ್ತಿರದ ಹೆಚ್ಚು ಪ್ರದೇಶಗಳನ್ನು ನೋಡಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಸಮಯ ವ್ಯರ್ಥವಾಗುತ್ತದೆ. ಹಾಗಾಗಿ ಮೊದಲೇ ಸಿದ್ಧತೆ ಮಾಡಿಕೊಳ್ಳುವುದು ಮುಖ್ಯವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: