
ಪ್ರೇಮಿಗಳ ದಿನಕ್ಕೆ (Valentine’s Day) ಇನ್ನೇನು ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿವೆ. ಆದರೆ ಫೆಬ್ರವರಿ 7 ರಿಂದ 14 ರವರೆಗೆ ಪ್ರೇಮಿಗಳ ವಾರವನ್ನು ಸಹ ಆಚರಿಸಲಾಗುತ್ತದೆ. ಇದು ಪ್ರೇಮಿಗಳಿಗಾಗಿಯೇ ಮೀಸಲಿಟ್ಟ ವಾರ. ಈ ವ್ಯಾಲೆಂಟೈನ್ ವೀಕ್‌ನಲ್ಲಿ ಮೊದಲ ದಿನದ ಆಚರಣೆಯೇ ರೋಸ್ ಡೇ. ನೀವು ಯಾರನ್ನಾದರೂ ಇಷ್ಟಪಟ್ಟಿದ್ದರೆ ಅಥವಾ ನಿಮ್ಮ ಜೀವನದಲ್ಲಿ ಯಾರಾದರೂ ವಿಶೇಷ ವ್ಯಕ್ತಿ ಇದ್ದರೆ, ರೋಸ್ ಡೇಯಂದು (Rose Day) ಕೆಂಪು ಬಣ್ಣದ ಗುಲಾಬಿ ಹೂವು ನೀಡಿ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು. ಈ ದಿನದ ಆಚರಣೆಗೂ ಮುನ್ನ ಇದರ ಇತಿಹಾಸ, ಮಹತ್ವ ತಿಳಿದುಕೊಳ್ಳಿ.
ವ್ಯಾಲೆಂಟೈನ್ಸ್ ವೀಕ್‌ನ ಮೊದಲ ದಿನವೇ ರೋಸ್ ಡೇ. ಪ್ರೇಮಿಗಳ ವಾರ ಆರಂಭವಾಗುವುದೇ ಈ ಬಣ್ಣ ಬಣ್ಣದ ಗುಲಾಬಿ ಹೂವುಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಮೂಲಕ. ಆದರೆ ಈ ರೋಜ್ ಡೇ ಇತಿಹಾಸದ ಬಗ್ಗೆ ಹೇಳುವುದಾದರೆ ರೋಸ್ ಡೇಗೂ ರೋಮನ್ ಪುರಾಣಗಳಿಗೂ ಸಂಬಂಧವಿದೆ. ಈ ಗುಲಾಬಿ ಹೂವುಗಳು ಪ್ರೀತಿ ಪ್ರೇಮದ ಸಂಕೇತ.
ಅದಲ್ಲದೇ, ಸೌಂದರ್ಯ ಹಾಗೂ ಪ್ರೀತಿಗೆ ಸಂಬಂಧಿಸಿದ ದೇವತೆಯಾದ ಶುಕ್ರಕ್ಕೆ ಗುಲಾಬಿ ಹೂವುಗಳನ್ನು ಬಳಸಲಾಗುತ್ತಿತ್ತು. ಈ ಗುಲಾಬಿ ಹೂವುಗಳು ಏಷ್ಯನ್ ಹಾಗೂ ಅರಬ್ ಸಂಸ್ಕೃತಿಗಳಂತಹ ಪೂರ್ವ ನಾಗರಿಕತೆಯಲ್ಲೂ ಪ್ರೀತಿಯೊಂದಿಗೆ ಸಂಬಂಧ ಹೊಂದಿದೆ. ಇನ್ನು, ವಿಕ್ಟೋರಿಯನ್ನರು ಗುಲಾಬಿ ಹೂವುಗಳನ್ನು ನೀಡುವ ಮೂಲಕ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದರು. ಹೀಗಾಗಿ ಅಂದಿನಿಂದ ಪ್ರತಿ ವರ್ಷ ಫೆಬ್ರವರಿ 7ರಂದು ರೋಸ್ ಡೇ ಯನ್ನಾಗಿ ಆಚರಿಸಲಾಗುತ್ತದೆ. ಹೀಗಾಗಿ ಪ್ರೇಮಿಗಳು ಮಾತ್ರವಲ್ಲ, ಸ್ನೇಹಿತರು ಹಾಗೂ ತಮ್ಮ ಜೀವನದ ವಿಶೇಷ ವ್ಯಕ್ತಿಗಳಿಗೆ ಗುಲಾಬಿ ಹೂವುಗಳನ್ನು ನೀಡಿ ಈ ದಿನವನ್ನು ಆಚರಿಸುತ್ತಾರೆ.
ಇನ್ನಷ್ಟು ಜೀವನ ಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ