Varamahalakshmi Vrata 2025: ಮನೆಯಲ್ಲಿ ವರಮಹಾಲಕ್ಷ್ಮಿಯನ್ನು ಈ ರೀತಿ ಸರಳವಾಗಿ ಕೂರಿಸಿ ಆರಾಧಿಸಿ

ವರಮಹಾಲಕ್ಷ್ಮಿ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮವು ಎಲ್ಲರ ಮನೆ ಮನಗಳಲ್ಲಿ ಮನೆ ಮಾಡುತ್ತದೆ. ಹೆಂಗಳೆಯರು, ಸುಮಂಗಲಿಯರು ಈಗಾಗಲೇ ಮನೆಯಲ್ಲಿ ಲಕ್ಷ್ಮಿಯನ್ನು ಕೂರಿಸಲು ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆಗಸ್ಟ್ 8 ರಂದು ಆಚರಿಸಲಾಗುವ ವರಮಹಾಲಕ್ಷ್ಮಿ ಹಬ್ಬದಂದು ನಿಮ್ಮ ಮನೆಯಲ್ಲಿ ಆಡಂಬರವಿಲ್ಲದೇ ಸರಳವಾಗಿ ಲಕ್ಷ್ಮಿಯನ್ನು ಈ ರೀತಿ ಕೂರಿಸಬಹುದು.

Varamahalakshmi Vrata 2025: ಮನೆಯಲ್ಲಿ ವರಮಹಾಲಕ್ಷ್ಮಿಯನ್ನು ಈ ರೀತಿ ಸರಳವಾಗಿ ಕೂರಿಸಿ ಆರಾಧಿಸಿ
ಲಕ್ಷ್ಮಿಯನ್ನು ಕೂರಿಸುವ ಸರಳ ವಿಧಾನ

Updated on: Aug 06, 2025 | 4:41 PM

ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಆರಾಧಿಸುವ ದಿನವೇ ವರಮಹಾಲಕ್ಷ್ಮಿ ವ್ರತ (Varamahalakshmi Vrata). ಈ ದಿನ ವಿಶೇಷವಾಗಿ ಮುತ್ತೈದೆಯರು ಈ ಆಚರಣೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಪ್ರತಿ ವರ್ಷ ಶ್ರಾವಣದಲ್ಲಿ ವರಮಹಾಲಕ್ಷ್ಮಿ ಹಬ್ವವನ್ನು ಆಚರಿಸುತ್ತೇವೆ. ಈ ಬಾರಿ ಆಗಸ್ಟ್ 8 ಶುಕ್ರವಾರದಂದು ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಹಬ್ಬ ಎಂದಮೇಲೆ ಆಡಂಬರವೂ ಇದ್ದೆ ಇರುತ್ತದೆ. ಆದರೆ ಕೆಲವರು ಅದ್ದೂರಿಯಾಗಿ ಈ ಹಬ್ಬ ಮಾಡಲು ಇಷ್ಟಪಡುವುದಿಲ್ಲ. ಒಂದು ವೇಳೆ ನಿಮ್ಮ ಮನೆಯಲ್ಲಿ ವರಮಹಾಲಕ್ಷ್ಮಿ ವ್ರತಾಚರಣೆ ಮಾಡಬೇಕೆಂದುಕೊಂಡಿದ್ದರೆ ಈ ಸರಳ ವಿಧಾನದ ಮೂಲಕ ಲಕ್ಷ್ಮಿಯನ್ನು ಕೂರಿಸಿ ಆರಾಧಿಸಿ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬಹುದು. ಹಾಗಾದ್ರೆ ಲಕ್ಷ್ಮಿಯನ್ನು ಕೂರಿಸುವ ಸರಳ ವಿಧಾನದ (simple method) ಕುರಿತಾದ ಮಾಹಿತಿ ಇಲ್ಲಿದೆ.

ಲಕ್ಷ್ಮಿ ದೇವಿಯನ್ನು ಕೂರಿಸುವ ಸರಳ ವಿಧಾನ

ಇದನ್ನೂ ಓದಿ
ವರಮಹಾಲಕ್ಷ್ಮಿ ವ್ರತಾಚರಣೆಯನ್ನು ವಿಧವೆಯವರು ಮಾಡಬಹುದೇ?
ವರಮಹಾಲಕ್ಷ್ಮಿ ವ್ರತದಂದು ಮಾಡಲೇಬಾರದ ತಪ್ಪುಗಳು ಇವೆ ನೋಡಿ
ನಾಗನಿಗೆ ಹಿಂಗಾರ ಹೂವು ಏಕೆ ಪ್ರಿಯ
ನಾಗದರ್ಶನ ಹಾಗೂ ನಾಗ ಮಂಡಲದ ನಡುವಿನ ವ್ಯತ್ಯಾಸವೇನು? ಏನಿದರ ವಿಶೇಷತೆ?
  • ಕಲಶ ತಯಾರಿಸಿಕೊಳ್ಳಿ: ಸರಳವಾಗಿ ಮನೆಯಲ್ಲಿ ಲಕ್ಷ್ಮಿಯನ್ನು ಕೂರಿಸಿ ಪೂಜೆ ಮಾಡಬೇಕೆಂದುಕೊಂಡಿದ್ದರೆ ಕಲಶ ಅತ್ಯಗತ್ಯ. ಹೀಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಬೆಳ್ಳಿ ಅಥವಾ ತ್ರಾಮದ ಕಲಶವನ್ನು ಖರೀದಿಸಿ. ಮೊದಲಿಗೆ ಒಂದು ತಾಮ್ರದ ಅಥವಾ ಬೆಳ್ಳಿಯ ಕಲಶವನ್ನು ತೆಗೆದುಕೊಂಡು, ಅದಕ್ಕೆ ಅರಿಶಿನ, ಕುಂಕುಮ ಹಚ್ಚಿಕೊಳ್ಳಿ.
  •  ಕಲಶದಲ್ಲಿ ಈ ವಸ್ತುಗಳನ್ನು ತುಂಬಿಸಿ : ಕಲಶವನ್ನು ಯಾವುದೇ ಕಾರಣಕ್ಕೂ ಖಾಲಿ ಇಡಬಾರದು. ಹೀಗಾಗಿ ಕಲಶಕ್ಕೆ ನೀರು ಇಲ್ಲವಾದರೆ ಅಕ್ಕಿಯನ್ನು ತುಂಬಿಸಿಕೊಳ್ಳಿ. ಅಕ್ಕಿ ಸಮೃದ್ಧಿಯ ಸೂಚಕವಾಗಿದ್ದು, ಹೆಚ್ಚಿನವರು ಅಕ್ಕಿಯನ್ನೇ ಬಳಸುತ್ತಾರೆ.
  • ಕಲಶದ ಮೇಲೆ ಮಾವಿನ ಎಲೆಗಳಿರಲಿ: ಯಾವುದೇ ಹಬ್ಬ ಹರಿದಿನಗಳಲ್ಲಿ ಮಾವಿನ ಎಲೆಗಳಿಂದ ತೋರಣಗಳನ್ನು ಕಟ್ಟುತ್ತಾರೆ. ನಕಾರಾತ್ಮಕ ಶಕ್ತಿಯನ್ನು ತಡೆಯುತ್ತದೆ ಎನ್ನಲಾಗಿದೆ. ಹೀಗಾಗಿ ಐದು ಮಾವಿನ ಎಲೆಗಳನ್ನು ತೆಗೆದುಕೊಂಡು ಕಲಶದ ಮೇಲ್ಭಾಗದಲ್ಲಿ ಇರಿಸಿ.

ವಿಡಿಯೋ ಇಲ್ಲಿದೆ

  •  ತೆಂಗಿನ ಕಾಯಿ ಇರಿಸಿ: ಕಲಶದ ಮೇಲ್ಭಾಗದಲ್ಲಿ ತೆಂಗಿನಕಾಯಿ ಇರಿಸಿಕೊಳ್ಳಿ, ಅರಶಿನ ಹಾಗೂ ಕುಂಕುಮವನ್ನು ಬಳಸಿ ತೆಂಗಿನಕಾಯಿಯ ಮೇಲೆ ಲಕ್ಷ್ಮಿದೇವಿಯ ಮುಖವನ್ನು ಬಿಡಿಸಬಹುದು.
  • ವಸ್ತ್ರಾಲಂಕಾರ ಮಾಡಿ: ಕಲಶಕ್ಕೆ ನೆರಿಗೆ ಬರುವಂತೆ ಸೀರೆ ಉಡಿಸಿ. ಮಾಂಗಲ್ಯ ಸೇರಿದಂತೆ ಆಭರಣಗಳು ಬಳೆಗಳಿಂದ ಸುಂದರವಾಗಿ ಅಲಂಕರಿಸಿಕೊಳ್ಳಿ.
  • ಹೂವುಗಳ ಅಲಂಕಾರ : ಯಾವುದೇ ಹಬ್ಬ ಹರಿದಿನಗಳಿರಲಿ ಹೂವುಗಳಿಲ್ಲದೇ ಹಬ್ಬಗಳು ಅಪೂರ್ಣ. ಹೀಗಾಗಿ ಲಕ್ಷ್ಮಿಯನ್ನು ಹೂವುಗಳಿಂದ ಅಲಂಕರಿಸಿಕೊಳ್ಳಿ. ದೇವಿಯ ಕೂರಿಸುವ ಮರದ ಕುರ್ಚಿಯ ಸುತ್ತಲೂ ಹೂವಿನ ಅಲಂಕಾರವಿರಲಿ.

ಇದನ್ನೂ ಓದಿ: Varamahalakshmi Vrata 2025: ವರಮಹಾಲಕ್ಷ್ಮಿ ವ್ರತದಂದು ಮಾಡಲೇಬಾರದ ತಪ್ಪುಗಳು ಇವೆ ನೋಡಿ

  • ದೀಪ ಹಚ್ಚಿ ನೈವೇದ್ಯವಿಟ್ಟು ದೇವಿಯನ್ನು ಪೂಜಿಸಿ : ಈ ಮೇಲಿನ ಕೆಲಸವೆಲ್ಲಾ ಆದ ಬಳಿಕ ಕಲಶದ ಬಳಿ ದೀಪ ಹಚ್ಚಿ. ಅಕ್ಷತೆಯನ್ನು ದೇವಿಗೆ ಹಾಕಿ. ಹಣ್ಣು, ಹೂವು, ಸಿಹಿತಿಂಡಿಗಳನ್ನು ದೇವಿಗೆ ನೈವೇದ್ಯವಾಗಿಟ್ಟು ಶ್ರದ್ಧಾ ಭಕ್ತಿಯಿಂದ ದೇವಿಯನ್ನು ಪೂಜಿಸಿ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:40 pm, Wed, 6 August 25