AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vidura Niti: ನಿಮ್ಮ ಬದುಕಿನ ಈ ಗುಟ್ಟುಗಳು ಎಂದಿಗೂ ರಟ್ಟಾಗದಿರಲಿ

ವಿದುರನು ತನ್ನ ನೀತಿಯಲ್ಲಿ ಜೀವನಕ್ಕೆ ಅಗತ್ಯವಾದ ಸಲಹೆಗಳನ್ನು ನೀಡಿದ್ದಾನೆ. ಈ ವೇಳೆಯಲ್ಲಿ ಏಳು ವಿಷಯಗಳನ್ನು ಉಲ್ಲೇಖಿಸಿದ್ದು, ಇದನ್ನು ರಹಸ್ಯವಾಗಿಟ್ಟರೆ ಮಾತ್ರ ವ್ಯಕ್ತಿಯು ಯಾವಾಗಲೂ ಸಂತೋಷಯಾಗಿರಲು ಸಾಧ್ಯವಂತೆ. ಆಗ ಮಾತ್ರ ಆತನು ಜೀವನದಲ್ಲಿ ಯಶಸ್ವಿಯಾಗುತ್ತಾನೆ ಹಾಗೂ ಹಣದ ಕೊರತೆಯು ಕಾಡುವುದಿಲ್ಲ. ಹೀಗಾಗಿ ನಿಮ್ಮ ಆತ್ಮೀಯರೆನಿಸಿಕೊಂಡವರ ಬಳಿ ಈ ಏಳು ವಿಷಯಗಳನ್ನು ಅಪ್ಪಿ ತಪ್ಪಿಯೂ ಬಾಯಿಬಿಡಲೇಬೇಡಿ ಎಂದಿದ್ದಾನೆ. ಹಾಗಾದ್ರೆ ಈ ವಿಷಯಗಳೇನು ಎನ್ನುವ ಕುತೂಹಲಕಾರಿ ಮಾಹಿತಿ ಇಲ್ಲಿದೆ.

Vidura Niti: ನಿಮ್ಮ ಬದುಕಿನ ಈ ಗುಟ್ಟುಗಳು ಎಂದಿಗೂ ರಟ್ಟಾಗದಿರಲಿ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Jan 02, 2025 | 12:32 PM

Share

ಪ್ರತಿಯೊಬ್ಬರ ಬದುಕಿನಲ್ಲಿ ಕೆಲವು ವೈಯುಕ್ತಿಕ ಹಾಗೂ ಯಾರ ಬಳಿಯೂ ಹಂಚಿಕೊಳ್ಳದ ವಿಷಯಗಳಿರುತ್ತದೆ. ಆದರೆ ಕೆಲವೊಮ್ಮೆ ಬಾಯಿತಪ್ಪಿ ಕೆಲವು ರಹಸ್ಯಕಾರಿ ವಿಷಯಗಳು ಹೊರ ಬಂದು ಬಿಡುತ್ತದೆ. ಆದರೆ ಈ ಎಲ್ಲಾ ವಿಚಾರಗಳನ್ನು ಎಲ್ಲರ ಹತ್ತಿರ ಹೇಳಿಕೊಳ್ಳುವುದಕ್ಕಿಂತ ಕೆಲವೊಂದು ವಿಷಯಗಳು ನಮ್ಮ ಬಳಿಯೇ ಗುಟ್ಟಾಗಿ ಇಟ್ಟುಕೊಳ್ಳುವುದು ಉತ್ತಮ. ವಿದುರನು ತನ್ನ ನೀತಿಯಲ್ಲಿ ಅಪ್ಪಿ ತಪ್ಪಿಯೂ ಈ ವಿಷಯಗಳ ಬಗ್ಗೆ ಯಾರ ಬಳಿಯೂ ಬಾಯಿ ಬಿಡಬೇಡಿ. ಈ ರಹಸ್ಯಗಳು ಸಮಸ್ಯೆಯಿಂದ ಪಾರು ಮಾಡುವುದಲ್ಲದೇ, ಯಶಸ್ವಿ ಜೀವನ ನಡೆಸಲು ಕಾರಣವಾಗುತ್ತದೆ.

  • ಹಣಕಾಸಿನ ಸ್ಥಿತಿ ಹಾಗೂ ನಷ್ಟ: ವಿದುರನು ಹೇಳುವಂತೆ ಸಂಪತ್ತು, ಆದಾಯ ಮತ್ತು ವೆಚ್ಚದ ಬಗ್ಗೆ ಯಾರೊಂದಿಗೂ ಹಂಚಿಕೊಳ್ಳಬಾರದಂತೆ. ನಿಮ್ಮ ಹಣಕಾಸಿನ ಸ್ಥಿತಿಯೂ ಉತ್ತಮವಾಗಿರುವುದೇ ನಿಮ್ಮ ಎದುರಿಗಿರುವ ವ್ಯಕ್ತಿಯ ಅಸೂಯೆ ಹಾಗೂ ದ್ವೇಷ ಭಾವನೆ ಹುಟ್ಟಿಕೊಳ್ಳಲು ಕಾರಣವಾಗುತ್ತದೆ. ಹಣಕಾಸಿನ ನಷ್ಟದ ಬಗ್ಗೆ ಹೇಳದೇ ಇರುವುದೇ ಉತ್ತಮ. ಒಂದು ವೇಳೆ ಹೇಳಿದರೆ ಜನರು ನಿಮ್ಮಿಂದ ದೂರ ಹೋಗಬಹುದು. ಆರ್ಥಿಕ ಸ್ಥಿತಿಯೂ ಸರಿಯಿಲ್ಲವೆಂದಾಗ ಯಾರು ಕೂಡ ಸಹಾಯ ಮಾಡಲು ಬರುವುದಿಲ್ಲವಂತೆ. ಹೀಗಾಗಿ ಸಾಧ್ಯವಾದಷ್ಟು ಹಣದ ವಿಚಾರದ ಬಗ್ಗೆ ರಹಸ್ಯವನ್ನು ಕಾಪಾಡಿಕೊಳ್ಳಬೇಕಂತೆ.
  • ಕುಟುಂಬದ ವೈಯಕ್ತಿಕ ವಿಷಯಗಳು: ನಿಮ್ಮ ಕುಟುಂಬದೊಳಗಿನ ಸಮಸ್ಯೆಗಳು, ಮನಸ್ತಾಪಗಳು ಮನೆಯೊಳಗೆ ಇರಲಿ. ಇದನ್ನು ಆತ್ಮೀಯರಿಗೆ ಹಂಚಿಕೊಳ್ಳುವುದರಿಂದ ಕುಟುಂಬದ ಪ್ರತಿಷ್ಠೆ ಹಾಳಾಗುತ್ತದೆ. ಇದು ಮನೆಯ ಸದಸ್ಯರ ನಂಬಿಕೆಯನ್ನು ಕಡಿಮೆ ಮಾಡುವುದಲ್ಲದೆ, ಈ ವಿಷಯ ತಿಳಿದ ಮೇಲೆ ಆತ್ಮೀಯ ವ್ಯಕ್ತಿಗಳೇ ಆಡಿಕೊಂಡು ನಗಲು ಬಹುದು ಎನ್ನುತ್ತಾನೆ ವಿದುರ.
  • ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಚರಣೆಗಳು : ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳು ವೈಯಕ್ತಿಕವಾದದ್ದು. ಕೆಲವರು ಧಾರ್ಮಿಕ ಆಚರಣೆಹಾಗೂ ದೇವರ ಮೇಲೆ ಅತಿಯಾದ ಭಕ್ತಿಯನ್ನು ಇಟ್ಟುಕೊಂಡಿರುತ್ತಾರೆ. ಇದು ವೈಯುಕ್ತಿಕವಾದ ಕಾರಣ ಈ ಬಗ್ಗೆ ಎಲ್ಲರೊಂದಿಗೆ ಹಂಚಿಕೊಳ್ಳುವುದು ಅವುಗಳ ಪ್ರಾಮುಖ್ಯತೆಯನ್ನು ಕಡಿಮೆ ಮಾಡುತ್ತದೆ. ಅದಲ್ಲದೇ ಕೆಲವರು ನಿಮ್ಮ ಆಚರಣೆಗಳ ಬಗ್ಗೆ ಇಲ್ಲಸಲ್ಲದ ರೀತಿ ಮಾತನಾಡಬಹುದು.
  • ವೈಯುಕ್ತಿಕ ಜೀವನದ ಸಮಸ್ಯೆಗಳು : ಯಾರು ಎಷ್ಟೇ ಆತ್ಮೀಯ ವ್ಯಕ್ತಿಯಾಗಿರಲಿ, ತಮ್ಮ ವೈಯಕ್ತಿಕ ಸಮಸ್ಯೆಗಳು ಮತ್ತು ದುಃಖವನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ನಿಮ್ಮ ಜೊತೆಗೆ ಇರುವ ವ್ಯಕ್ತಿಗಳು ಪ್ರಾರಂಭದಲ್ಲಿ ನಿಮ್ಮ ಸಮಸ್ಯೆಗಳು ಹಾಗೂ ದುಃಖವನ್ನು ಕೇಳಿಸಿಕೊಳ್ಳಬಹುದು. ಆದರೆ ಬೆನ್ನ ಹಿಂದೆಯೇ ಆಡಿಕೊಂಡು ನಗುವುದು ಮಾತ್ರವಲ್ಲ, ಲಾಭಕ್ಕಾಗಿ ಬಳಸಿಕೊಳ್ಳುತ್ತಾರೆ.
  • ಜೀವನದ ಯೋಜನೆಗಳು ಹಾಗೂ ಗುರಿಗಳು : ನಿಮ್ಮ ಜೀವನದ ಬಗ್ಗೆ ನೀವು ಸಾಕಷ್ಟು ಕನಸು ಕಂಡಿರಬಹುದು, ಈಗಾಗಲೇ ಯೋಜನೆಗಳನ್ನು ಹಾಕಿಕೊಂಡಿರಬಹುದು. ಈ ಯೋಜನೆಗಳು ಹಾಗೂ ಗುರಿಗಳು ಗುಟ್ಟಾಗಿರಲಿ. ಈ ಬಗ್ಗೆ ನಿಮ್ಮ ಆತ್ಮೀಯರಿಗೆ ಹೇಳಿಕೊಂಡರೆ ಅವರುಗಳಿಂದಲೇ ಹಾಳಾಗಬಹುದು. ನೀವು ಅಂದುಕೊಂಡದ್ದನ್ನು ಈಡೇರಿಸಲು ಸಾಧ್ಯವಾಗದೇ ಹೋದರೆ ಈ ವ್ಯಕ್ತಿಗಳೇ ನಿಮ್ಮನ್ನು ಗೇಲಿ ಮಾಡಿ ನಗುವ ಸಂದರ್ಭವೇ ಹೆಚ್ಚು. ಹೀಗಾಗಿ ಈ ವಿಷಯಗಳು ಗೌಪ್ಯವಾಗಿಯೇ ಇರಲಿ ಎಂದಿದ್ದಾನೆ ವಿದುರ.
  • ದೌರ್ಬಲ್ಯಗಳು ರಹಸ್ಯವಾಗಿರಲಿ : ವಿದುರ್ ನೀತಿಯಲ್ಲಿ ತಿಳಿಸುವಂತೆ, ನಿಮ್ಮ ವೈಯಕ್ತಿಕ ದೌರ್ಬಲ್ಯ ಹಾಗೂ ನಿಮಗಿರುವ ಭಯದ ಕುರಿತು ಯಾರಿಗೂ ಹೇಳಬೇಡಿ. ಇದನ್ನೇ ಬಂಡವಾಳವನ್ನಾಗಿಸಿಕೊಂಡು ನಿಮ್ಮನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳಬಹುದು. ನಿಮ್ಮ ದೌರ್ಬಲ್ಯವನ್ನು ಬಹಿರಂಗಪಡಿಸಿ ನಿಮ್ಮನ್ನು ನೀವೇ ತೊಂದರೆಗೆ ಸಿಲುಕಿಸಿದ್ದಂತೆ ಆಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾನೆ ವಿದುರ.
  • ಇತರ ರಹಸ್ಯಗಳು ನಿಮ್ಮಲ್ಲಿಯೇ ಇರಲಿ : ಕೆಲವರು ನಿಮ್ಮ ಮೇಲೆ ನಂಬಿಕೆಯಿಟ್ಟು ಅವರ ಜೀವನದ ವಿಷಯಗಳನ್ನು ಹಂಚಿಕೊಂಡಿರುತ್ತಾರೆ. ಹೀಗಾಗಿ ಈ ರಹಸ್ಯಗಳು ನಿಮ್ಮಿಂದನೇ ರಟ್ಟಾಗದಿರಲಿ. ಬೇರೆಯವರು ಹಂಚಿಕೊಂಡ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಒಂದು ವೇಳೆ ಹೇಳಿಕೊಂಡರೆ ನಿಮ್ಮ ಮೇಲೆ ಆ ವ್ಯಕ್ತಿಯು ಇಟ್ಟ ನಂಬಿಕೆ ಹಾಳು ಮಾಡಿದ್ದಂತಾಗುತ್ತದೆ. ಹೀಗಾಗಿ ಆ ತಪ್ಪು ಕೆಲಸವು ಎಂದಿಗೂ ನಿಮ್ಮಿಂದ ಆಗದಿರಲಿ ಎಂದು ತಿಳಿಸಿದ್ದಾನೆ ವಿದುರ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ