ಆಫೀಸ್​ ಅಲ್ಲಿ ಕೆಲಸದ ಮಧ್ಯೆ ಹಸಿವಾದರೆ ಈ ಆರೋಗ್ಯಕರ ಆಹಾರಗಳನ್ನು ಸೇವಿಸಿ

ಪದೇ ಪದೇ ಆಹಾರವನ್ನು ಸೇವಿಸುವುದರಿಂದ ನಿಮ್ಮ ತೂಕ ಹೆಚ್ಚಳವಾಗುವುದಿಲ್ಲ, ನೀವು ಯಾವ ರೀತಿಯ ಆಹಾರವನ್ನು ಸೇವಿಸುತ್ತೀರಿ ಎಂಬುದು ಮುಖ್ಯವಾಗುತ್ತದೆ.

ಆಫೀಸ್​ ಅಲ್ಲಿ ಕೆಲಸದ ಮಧ್ಯೆ ಹಸಿವಾದರೆ ಈ ಆರೋಗ್ಯಕರ ಆಹಾರಗಳನ್ನು ಸೇವಿಸಿ
Food
Follow us
TV9 Web
| Updated By: ನಯನಾ ರಾಜೀವ್

Updated on: Aug 25, 2022 | 10:21 AM

ಪದೇ ಪದೇ ಆಹಾರವನ್ನು ಸೇವಿಸುವುದರಿಂದ ನಿಮ್ಮ ತೂಕ ಹೆಚ್ಚಳವಾಗುವುದಿಲ್ಲ, ನೀವು ಯಾವ ರೀತಿಯ ಆಹಾರವನ್ನು ಸೇವಿಸುತ್ತೀರಿ ಎಂಬುದು ಮುಖ್ಯವಾಗುತ್ತದೆ. ನೀವು ಕಚೇರಿಯಲ್ಲಿದ್ದಾಗ ಕೆಲಸದ ಮಧ್ಯೆ ಹಸಿವಾದಾಗ ಎಲ್ಲೋ ಹೋಗಿ ತಿಂಡಿ ತಿಂದು ಬರಲು ಸಾಧ್ಯವಿಲ್ಲ, ಹೀಗಾಗಿ ಈ ತಿನಿಸುಗಳು ನಿಮ್ಮ ಹೊಟ್ಟೆಯನ್ನು ತುಂಬಿಸುವುದರ ಜತೆಗೆ ನಿಮ್ಮ ತೂಕವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತವೆ.

ಈ ಆಹಾರವನ್ನು ಸೇವಿಸಿ ಬಾದಾಮಿ: ನೀವು ನಿಮ್ಮ ಡಯೆಟ್​ನಲ್ಲಿ ಬಾದಾಮಿಯನ್ನು ಸೇರಿಸಿಕೊಳ್ಳಬಹುದು, ಇದರಲ್ಲಿ ಸಾಕಷ್ಟು ಪೋಷಕಾಂಶಗಳು ಇರುತ್ತವೆ. ಅಷ್ಟೇ ಅಲ್ಲದೆ ಫೈಬರ್, ಪ್ರೋಟೀನ್, ಆರೋಗ್ಯಕರ ಕೊಬ್ಬು, ವಿಟಮಿನ್ ಈ ಹಾಗೂ ಆ್ಯಂಡಿಆಕ್ಸಿಡೆಂಟ್ಸ್​ಗಳು ಇರುತ್ತವೆ. ಪ್ರೋಟೀನ್ ಹಾಗೂ ಫೈಬರ್​ನಿಂದಾಗಿ ನೀವು ಸಾಕಷ್ಟು ಸಮಯಗಳ ಕಾಲ ಹೊಟ್ಟೆ ತುಂಬಿದ ಅನುಭವವಾಗುವುದು.

ಪಾಪ್​ಕಾರ್ನ್​: ಪಾಪ್​ಕಾರ್ನ್​ನಲ್ಲಿ ಫೈಬರ್ ಅಂಶ ಉತ್ತಮವಾಗಿರಲಿದೆ. ಪಾಪ್​ಕಾರ್ನ್​ ನಿಮ್ಮನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇದು ಕೂಡ ನಿಮ್ಮ ಹೊಟ್ಟೆಯನ್ನು ತುಂಬಿದಂತಿಡಲು ನೆರವಾಗುತ್ತದೆ. ನೀವು ಪಾಪ್​ಕಾರ್ನ್ ಅನ್ನು ನಿಮ್ಮ ಡಯೆಟ್​ನಲ್ಲಿ ಸೇರಿಸಬಹುದು.

ಮೊಳಕೆಕಾಳು: ನಿಮ್ಮ ಆಹಾರದಲ್ಲಿ ಮೊಳಕೆಕಅಳುಗಳನ್ನು ಸೇರಿಸಿಕೊಳ್ಳಬಹುದು. ಈ ಮೊಳಕೆಕಾಳುಗಳು ತುಂಬಾ ಆರೋಗ್ಯಕರ ಮತ್ತು ಟೇಸ್ಟಿ. ಇದರಲ್ಲಿ ಫೈಬರ್ ಮತ್ತು ಪ್ರೊಟೀನ್ ಸಮೃದ್ಧವಾಗಿದೆ. ಇದರಿಂದ ನೀವು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದರೊಂದಿಗೆ ನೀವು ಅನಾರೋಗ್ಯಕರ ಆಹಾರವನ್ನು ಸೇವಿಸುವುದಿಲ್ಲ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

ಓಟ್ಸ್:  ನೀವು ಓಟ್ಸ್ ಸೇವಿಸಬಹುದು. ಇದು ತುಂಬಾ ಆರೋಗ್ಯಕರ ಮತ್ತು ರುಚಿಕರವಾಗಿದೆ. ಇದು ಫೈಬರ್ ಅನ್ನು ಹೊಂದಿರುತ್ತದೆ. ಇದನ್ನು ಸೇವಿಸಿದ ನಂತರ, ನೀವು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದಂತಾಗುತ್ತದೆ. ಈ ಕಾರಣದಿಂದಾಗಿ ನೀವು ಹೆಚ್ಚು ಅನಾರೋಗ್ಯಕರ ಆಹಾರವನ್ನು ಸೇವಿಸಲು ಸಾಧ್ಯವಾಗುವುದಿಲ್ಲ.

ಹಣ್ಣು: ನಿಮ್ಮ ಆಹಾರದಲ್ಲಿ ಋತುಮಾನದ ಹಣ್ಣುಗಳನ್ನು ಸೇರಿಸಿಕೊಳ್ಳಬಹುದು. ಅವು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಹಣ್ಣುಗಳಲ್ಲಿ ಹೆಚ್ಚಿನ ನೀರಿನ ಅಂಶವಿದೆ. ಇದರಿಂದ ನೀವು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ