ಒಂದು ತಿಂಗಳ ಕಾಲ ಚಹಾ ಸೇವಿಸದಿದ್ದರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳನ್ನು ಸಂಭವಿಸುತ್ತವೆ?

ಚಹಾ ಅತ್ಯಂತ ಜನಪ್ರಿಯ ಪಾನೀಯವಾಗಿದ್ದು, ನಮ್ಮಲ್ಲಿ ಅನೇಕರಿಕೆ ಚಹಾ ಎಂದ್ರೆ ಸಖತ್‌ ಇಷ್ಟ. ಬಹುತೇಕರಿಗೆ ಟೀ ಇಲ್ಲದೆ ತಮ್ಮ ದಿನವನ್ನು ಪ್ರಾರಂಭಿಸಲು ಸಾಧ್ಯವೇ ಇಲ್ಲ. ಇನ್ನೂ ಕೆಲವರಂತೂ ದಿನದ ಮೂರು ಹೊತ್ತು ಟೀ ಕುಡಿಯಲು ಇಷ್ಟಪಡುತ್ತಾರೆ. ಟೀ ಕುಡಿಯುವುದರಿಂದ ತಕ್ಷಣಕ್ಕೆ ದೇಹಕ್ಕೆ ಎನರ್ಜಿ ಸಿಗುತ್ತದೆ ನಿಜ. ಆದರೆ ಒಂದು ತಿಂಗಳ ಕಾಲದ ಚಹಾವನ್ನು ಸೇವನೆ ಮಾಡದಿದ್ದರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳನ್ನು ಸಂಭವಿಸುತ್ತವೆ ಗೊತ್ತಾ? ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ಒಂದು ತಿಂಗಳ ಕಾಲ ಚಹಾ ಸೇವಿಸದಿದ್ದರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳನ್ನು ಸಂಭವಿಸುತ್ತವೆ?
ಸಾಂದರ್ಭಿಕ ಚಿತ್ರ
Image Credit source: Getty Images

Updated on: Jun 28, 2026 | 6:00 PM

ಮುಖ್ಯಾಂಶಗಳು

  • ಚಹಾ ಸೇವಿಸುವುದನ್ನು ನಿಲ್ಲಿಸಿದರೆ ದೇಹದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುತ್ತವೆ
  • ಚಹಾ ಸೇವಿಸುವುದನ್ನು ನಿಲ್ಲಿಸಿದರೆ ನಿದ್ರೆ ಗುಣಮಟ್ಟ ಸುಧಾರಿಸುತ್ತದೆ
  • ಹೊಟ್ಟೆ ಸಂಬಂಧಿ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ

ಚಹಾವನ್ನು (tea) ಬಹುತೇಕ ಎಲ್ಲರೂ ಇಷ್ಟಪಟ್ಟು ಸೇವನೆ ಮಾಡುತ್ತಾರೆ. ಅದರಲ್ಲೂ ಹೆಚ್ಚಿನ ಭಾರತೀಯರ ದಿನ ಆರಂಭವಾಗುವುದೇ ಒಂದು ಕಪ್‌ ಬಿಸಿ ಬಿಸಿ ಚಹಾದೊಂದಿದೆ. ಕೆಲವರಂತೂ ಬೆಳಗ್ಗೆ, ಕೆಲಸದಲ್ಲಿ ವಿರಾಮದ ಸಮಯದಲ್ಲಿ, ಸಂಜೆ ಹೊತ್ತು ಸೇರಿ ದಿನಕ್ಕೆ 5 ರಿಂದ 6 ಬಾರಿ ಚಹಾ ಸೇವಿಸುತ್ತಾರೆ. ಇದು ದೇಹಕ್ಕೆ ಎನರ್ಜಿ ನೀಡುವುದೇನೋ ನಿಜ ಆದರೆ ಈ ರೀತಿ ಅತಿಯಾಗಿ ಟೀ ಕುಡಿಯುವುದು ಒಳ್ಳೆಯದಲ್ಲ. ಚಹಾದಲ್ಲಿರುವ ಕೆಫೀನ್ ಮತ್ತು ಸಕ್ಕರೆ ಅತಿಯಾಗಿ ಸೇವಿಸಿದರೆ ನಿದ್ರೆ, ಜೀರ್ಣಕ್ರಿಯೆ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಿರುವಾಗ ನೀವು ಒಂದು ತಿಂಗಳ ಕಾಲ ಚಹಾ ಸೇವಿಸುವುದನ್ನು ನಿಲ್ಲಿಸಿದರೆ ದೇಹದಲ್ಲಿ ಸಕಾರಾತ್ಮಕ ಬದಲಾವಣೆಗಳು ಉಂಟಾಗುತ್ತವೆ ಅಲ್ಲದೆ ಇದರಿಂದ ಆರೋಗ್ಯ ಪ್ರಯೋಜನಗಳೂ ಲಭಿಸುತ್ತದೆ. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಒಂದು ತಿಂಗಳು ಚಹಾ ಕುಡಿಯುವುದನ್ನು ನಿಲ್ಲಿಸಿದರೆ ಏನಾಗುತ್ತದೆ?

ಚಹಾ ಪ್ರಿಯರಿಗೆ, ಚಹಾವನ್ನು ತ್ಯಜಿಸುವುದು ಆರಂಭದಲ್ಲಿ ಸ್ವಲ್ಪ ಸವಾಲಿನದ್ದಾಗಿರಬಹುದು. ಮೊದಲ 1-2 ವಾರಗಳಲ್ಲಿ, ನೀವು ತಲೆನೋವು, ಆಯಾಸ ಮತ್ತು ನಿದ್ರಾಹೀನತೆ, ಕಿರಿಕಿರಿ ಅಥವಾ ಕೋಪ, ಏಕಾಗ್ರತೆ ಕೊರತೆ ಉಂಟಾಗಬಹುದು, ಆದರೆ ಕ್ರಮೇಣ ದೇಹದಲ್ಲಿ ಸಕಾರಾತ್ಮಕ ಬದಲಾವಣೆಗಳು ಉಂಟಾಗುತ್ತವೆ. ಒಂದೇ ಬಾರಿಗೆ ಚಹಾ ಬಿಡಲು ಸಾಧ್ಯವಾಗಿದ್ದರೆ ಹಾಲಿನ ಚಹಾದ ಬದಲಿಗೆ, ಶುಂಠಿ, ತುಳಸಿ ಮತ್ತು ನಿಂಬೆ ಚಹಾದಂತಹ ಗಿಡಮೂಲಿಕೆ ಚಹಾಗಳನ್ನು ಕುಡಿಯಿರಿ.

ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ: ಚಹಾದಲ್ಲಿರುವ ಕೆಫೀನ್ ಉತ್ತೇಜಕವಾಗಿ ಕಾರ್ಯನಿರ್ವಹಿಸುತ್ತದೆ, ಇದು ಮೆದುಳನ್ನು ಸಕ್ರಿಯವಾಗಿರಿಸುತ್ತದೆ ಮತ್ತು ನಿದ್ರಿಸುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ನೀವು ಚಹಾ ಕುಡಿಯುವುದನ್ನು ನಿಲ್ಲಿಸಿದಾಗ, ದೇಹದಲ್ಲಿ ಕೆಫೀನ್ ಪರಿಣಾಮವು ಕ್ರಮೇಣ ಕಡಿಮೆಯಾಗುತ್ತದೆ. ಇದು ಬೇಗನೆ ನಿದ್ರಿಸಲು ಸಹಾಯ ಮಾಡುತ್ತದೆ ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.

ಹೊಟ್ಟೆ ಸಂಬಂಧಿ ಸಮಸ್ಯೆಗಳು ಕಡಿಮೆಯಾಗುತ್ತವೆ: ಹೆಚ್ಚು ಚಹಾ ಕುಡಿಯುವುದರಿಂದ ಹೊಟ್ಟೆಯಲ್ಲಿ ಆಮ್ಲ ಉತ್ಪಾದನೆ ಹೆಚ್ಚಾಗುತ್ತದೆ, ಇದು ಆಮ್ಲೀಯತೆ, ಎದೆಯುರಿ ಮತ್ತು ಅನಿಲ ಸಮಸ್ಯೆಗಳಿಗೆ ಕಾರಣವಾಗಬಹುದು. ವಿಶೇಷವಾಗಿ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ನೀವು ಚಹಾವನ್ನು ತ್ಯಜಿಸಿದಾಗ, ಹೊಟ್ಟೆಯ ಆಮ್ಲ ಸಮತೋಲನವು ಸುಧಾರಿಸುತ್ತದೆ ಮತ್ತು ಜೀರ್ಣಕ್ರಿಯೆಯ ಪ್ರಕ್ರಿಯೆಯು ಕ್ರಮೇಣ ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ಇದು ಹೊಟ್ಟೆಯನ್ನು ಹಗುರ ಮತ್ತು ಆರಾಮದಾಯಕವಾಗಿಸುತ್ತದೆ.

ಹಲ್ಲಿನ ಆರೋಗ್ಯ ಸುಧಾರಿಸುತ್ತದೆ: ಚಹಾದಲ್ಲಿರುವ ಟ್ಯಾನಿನ್‌ಗಳು ಹಲ್ಲುಗಳ ಮೇಲೆ ಕಲೆಗಳು ಮತ್ತು ಹಳದಿ ಬಣ್ಣಕ್ಕೆ ಕಾರಣವಾಗುತ್ತವೆ. ದೀರ್ಘಕಾಲದವರೆಗೆ ಹೆಚ್ಚು ಚಹಾ ಕುಡಿಯುವುದರಿಂದ ಹಲ್ಲುಗಳ ಹೊಳಪು ಕಡಿಮೆಯಾಗುತ್ತದೆ. ಚಹಾ ಕುಡಿಯುವುದನ್ನು ನಿಲ್ಲಿಸುವುದರಿಂದ ಹಲ್ಲುಗಳ ಮೇಲಿನ ಕಲೆಗಳು ಕಡಿಮೆಯಾಗುತ್ತವೆ ಮತ್ತು ಬಾಯಿಯ ಆರೋಗ್ಯ ಸುಧಾರಿಸುತ್ತದೆ.

ಇದನ್ನೂ ಓದಿ: ಟ್ರೆಕ್ಕಿಂಗ್‌ ಹೋಗುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತದೆ:  ಹೆಚ್ಚಿನ ಪ್ರಮಾಣದಲ್ಲಿ ಕೆಫೀನ್ ಸೇವಿಸುವುದರಿಂದ ದೇಹದಲ್ಲಿ ಒತ್ತಡದ ಹಾರ್ಮೋನುಗಳು ಹೆಚ್ಚಾಗಬಹುದು, ಇದು ಆತಂಕ, ಚಡಪಡಿಕೆ ಮತ್ತು ಹೆದರಿಕೆಯ ಭಾವನೆಗಳಿಗೆ ಕಾರಣವಾಗಬಹುದು. ಚಹಾ ಬಿಟ್ಟ ನಂತರ ಮನಸ್ಸು ಹೆಚ್ಚು ಶಾಂತವಾಗಿರುತ್ತದೆ ಮತ್ತು ಮನಸ್ಥಿತಿಯಲ್ಲಿ ಏರುಪೇರುಗಳು ಕಡಿಮೆಯಾಗುತ್ತವೆ. ಇದು ಮಾನಸಿಕ ಸ್ಥಿರತೆ ಮತ್ತು ಗಮನವನ್ನು ಸುಧಾರಿಸುತ್ತದೆ.

ಚರ್ಮದ  ಆರೋಗ್ಯ ಸುಧಾರಿಸುತ್ತದೆ: ಚಹಾ ಕುಡಿಯುವುದನ್ನು ನಿಲ್ಲಿಸುವುದರಿಂದ ದೇಹಕ್ಕೆ ಉತ್ತಮ ಜಲಸಂಚಯನ ಒದಗುತ್ತದೆ. ಏಕೆಂದರೆ ಟೀ ಬದಲು ನೀರು ಮತ್ತು ಆರೋಗ್ಯಕರ ಪಾನೀಯಗಳನ್ನು ಹೆಚ್ಚು ಸೇವಿಸಿದಾಗ ದೇಹಕ್ಕೆ ಸಾಕಷ್ಟು ಜಲಸಂಚಯನ ಒದಗುತ್ತದೆ.  ಇದು ಚರ್ಮವನ್ನು ಕಾಂತಿಯುತ ಮತ್ತು ತಾಜಾವಾಗಿ ಕಾಣುವಂತೆ ಮಾಡುತ್ತದೆ.  ಶುಷ್ಕತೆ ಮತ್ತು ಮಂದತೆಯಂತಹ ಚರ್ಮದ ಸಮಸ್ಯೆಗಳನ್ನು ಸಹ ಸುಧಾರಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us