ಕೊರೊನಾದ ಬಳಿಕ ಇಡೀ ಪ್ರಪಂಚವನ್ನೇ ಮತ್ತೊಮ್ಮೆ ಬೆಚ್ಚಿಬೀಳುವಂತೆ ಮಾಡಿದ್ದು ಮಂಕಿಪಾಕ್ಸ್, ಭಾರತದಲ್ಲಿ ಇದುವರೆಗೆ 4 ಪ್ರಕರಣಗಳು ದೃಢಪಟ್ಟಿದ್ದು, ಸುಮಾರು 72 ದೇಶಗಳಲ್ಲಿ 14,533 ಮಂದಿಗೆ ಸೋಂಕು ತಗುಲಿರುವುದು ವರದಿಯಾಗಿದೆ. 5 ಮಂದಿ ಮೃತಪಟ್ಟಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.
ಮಂಕಿಪಾಕ್ಸ್ ವೈರಸ್ ಶರೀರದ ಪರಸ್ಪರ ಸಂಪರ್ಕದಿಂದ ಹರಡುತ್ತದೆ, ಇಲಿ, ಹೆಗ್ಗಣ, ಮಂಗ ಮುಂತಾದ ಪ್ರಾಣಿಗಳು ಈ ವೈರಸ್ ವಾಹಕಗಳಾಗಿವೆ.
ಮಂಕಿಪಾಕ್ಸ್ ಕಾಯಿಲೆಯಿಂದ ಬಳಲುವ ಪ್ರಾಣಿಗಳ ಮೃತದೇಹದಿಂದಲೂ ವೈರಸ್ ಹರಡಬಲ್ಲದು. ಈ ಪ್ರಾಣಿಗಳ ಜತೆಗೆ ಸಂಪರ್ಕಕ್ಕೆ ಬರುವ ವ್ಯಕ್ತಿಗಳು ಮಂಕಿಪಾಕ್ಸ್ ಅನ್ನು ತಮ್ಮ ಸಂಪರ್ಕಕ್ಕೆ ಬರುವ ಇತರರಿಗೆ ಹರಡುತ್ತಾರೆ.
ಮಂಕಿಪಾಕ್ಸ್ ಎಂದು ಹೆಸರು ಬರಲು ಕಾರಣವೇನು?
ಮನುಷ್ಯರ ಹೊರತಾಗಿ, ಕೋತಿಗಳು ಸಹ ಮಾರಣಾಂತಿಕ ವೈರಸ್‌ಗೆ ತುತ್ತಾಗುತ್ತಿದ್ದವು ಹಾಗಾಗಿ ಅದಕ್ಕೆ ಮಂಕಿಪಾಕ್ಸ್ ಎಂದು ಹೆಸರಿಡಲಾಯಿತು.
1958ರಲ್ಲಿ ಮೊದಲ ಬಾರಿಗೆ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿತ್ತು, ಸಂಶೋಧನೆಗಾಗಿ ಇರಿಸಿಕೊಂಡಿದ್ದ ಎರಡು ಮಂಗಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಹಾಗಾಗಿ ಮೊದಲು ಮಂಗಳಗಳಲ್ಲಿ ಕಾಣಿಸಿಕೊಂಡಿರುವ ಕಾಯಿಲೆಯಾದ್ದರಿಂದ ಮಂಕಿಪಾಕ್ಸ್ ಎಂದು ಕರೆಯಲಾಯಿತು.
“ಮಂಕಿಪಾಕ್ಸ್” ಎಂದು ಹೆಸರಿಡಲಾಗಿದ್ದರೂ, ರೋಗದ ಮೂಲ ತಿಳಿದಿಲ್ಲ. ಮನುಷ್ಯರಲ್ಲದ ಜೀವಿಗಳಿಂದಲೂ ಕೂಡ ಸೋಂಕು ತಗುಲಬಹುದು ಎಂದು ಆಫ್ರಿಕಾದಲ್ಲಿ ನಡೆದ ಸಂಶೋಧನೆ ತಿಳಿಸಿತ್ತು.
1970 ರಲ್ಲಿ ಮಾನವರಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಯಿತು. 2022 ರ ಮೊದಲು ಹಲವು ಮಧ್ಯ ಮತ್ತು ಪಶ್ಚಿಮ ಆಫ್ರಿಕನ್ ದೇಶಗಳ ಜನರಲ್ಲಿ ಮಂಕಿಪಾಕ್ಸ್ ಪ್ರಕರಣ ವರದಿಯಾಗಿತ್ತು.
ಮಂಕಿಪಾಕ್ಸ್: ಲಕ್ಷಣಗಳು, ಚಿಕಿತ್ಸೆ
2-4 ವಾರಗಳ ಕಾಲ ಉಳಿಯುವ ವೈರಸ್‌ನ ಸಾಮಾನ್ಯ ಲಕ್ಷಣಗಳು:-
ತಲೆನೋವು
ಬೆನ್ನು ನೋವು
ಜ್ವರ
ಚರ್ಮದ ಗಾಯ
ಊದಿಕೊಂಡ ಗ್ರಂಥಿಗಳು
ಆಯಾಸ
ಚಿಕಿತ್ಸೆ/ತಡೆಗಟ್ಟುವಿಕೆ
ಸ್ಮಾಲ್ಪಾಕ್ಸ್ಗೆ ನೀಡುವ ಚುಚ್ಚುಮದ್ದನ್ನು ನೀಡಲಾಗುತ್ತಿದೆ
ಮುಂಜಾಗ್ರತಾ ಕ್ರಮಗಳು
-ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಆಗಾಗ್ಗೆ ತೊಳೆಯಿರಿ.
-ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ಬಳಸಿ.
-ಸೋಂಕಿತ ಜನರೊಂದಿಗೆ ನಿಕಟ ಸಂಪರ್ಕ ಬೇಡ , ಚರ್ಮದಿಂದ ಚರ್ಮದ ಸಂಪರ್ಕವನ್ನು ತಪ್ಪಿಸಿ
-ಸೋಂಕಿತ ವ್ಯಕ್ತಿಯ ದದ್ದು ಅಥವಾ ಹುರುಪುಗಳನ್ನು ಮುಟ್ಟಬೇಡಿ.
-ಸೋಂಕಿತ ವ್ಯಕ್ತಿಯೊಂದಿಗೆ ಚುಂಬಿಸಬೇಡಿ, ತಬ್ಬಿಕೊಳ್ಳಬೇಡಿ, ಮುದ್ದಾಡಬೇಡಿ ಅಥವಾ ದೈಹಿಕ ಸಂಬಂಧವನ್ನು ಹೊಂದಿರಬೇಡಿ.
-ಸೋಂಕಿತ ವ್ಯಕ್ತಿಯೊಂದಿಗೆ ಆಹಾರ, ಪಾತ್ರೆಗಳು ಅಥವಾ ಕಪ್‌ಗಳನ್ನು ಹಂಚಿಕೊಳ್ಳಬೇಡಿ.
-ಮಂಕಿಪಾಕ್ಸ್ ಹೊಂದಿರುವ ವ್ಯಕ್ತಿಯ ಹಾಸಿಗೆ, ಟವೆಲ್ ಅಥವಾ ಬಟ್ಟೆಗಳನ್ನು ನಿಭಾಯಿಸಬೇಡಿ ಅಥವಾ ಮುಟ್ಟಬೇಡಿ.
Published On - 6:12 pm, Mon, 25 July 22